ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಆಣೆಕಲ್ಲು ಮಳೆಯಾಗಲಿದೆ, ಯಾವ ಜಿಲ್ಲೆಯಲ್ಲಿ ಎಂದು ಕೂಡಲೇ ನೋಡಿ

ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ? ಬನ್ನಿ ಯಾವ ಯಾವ ಜಿಲ್ಲೆಯಲ್ಲಿ ಎಂದು ಸಂಪೂರ್ಣ ಮಾಹಿತಿ ತಿಳಿಯೋಣ. ಕರ್ನಾಟಕ ರಾಜ್ಯದಲ್ಲಿ ಪ್ರಕೃತಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಬೇಸಿಗೆ ಕಾಲ, ಮಳೆಗಾಲ, ಎನ್ನದೆ ಹವಾಮಾನ ನಿರಂತರ ಬದಲಾವಣೆಗಳನ್ನು ಕಂಡಿದೆ. ದಿನಗಳು ಕಳೆದಂತೆ ಹಲವಾರು ನೈಸರ್ಗಿಕ ವಿಕೋಪ ಕಂಡುಬಂದಿದೆ. ಹಾಗಾಗಿ ರೈತರು ಸಹ ಹವಾಮಾನ ಬದಲಾವಣೆಗೆ ತಮ್ಮ ಕೃಷಿ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು.

ಸದ್ಯದಲ್ಲಿ ಉಸ್ತುವಾರಿ ಕೇಂದ್ರವು ಮುಂದಿನ ಎರಡು (2) ರಾಜ್ಯದ ವಿವಿಧ ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ತಿಳಿಸಿದ್ದು, ಈ ಕುರಿತಂತೆ ವಿವರವಾದ ಮಾಹಿತಿಯನ್ನು ಪ್ರಕಟಿಸಿದೆ. ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ? ಮುಂದಿನ ಎರಡು ದಿನಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ ಜಿಲ್ಲೆ, ತುಮಕೂರಿನ ಮಧ್ಯ ಹಾಗೂ ಪೂರ್ವ ಭಾಗದ ತಾಲೂಕುಗಳು, ರಾಮನಗರದ ಮಧ್ಯಭಾಗ, ಕೊಪ್ಪಳದ ಪೂರ್ವ ಭಾಗ, ಇನ್ನೂ ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದ ಜಿಲ್ಲೆಗಳಲ್ಲೂ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇದರೊಂದಿಗೆ ಜಿಲ್ಲಾಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಸಿಡಿಲು ಬಡಿದು ಕೊಪ್ಪಳದಲ್ಲಿ ಎರಡು ಜಾನುವಾರುಗಳು, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ 5 ಜಾನುವಾರುಗಳು, ಬಸವಕಲ್ಯಾಣದಲ್ಲಿ 5 ಜಾನುವಾರುಗಳು ಸಾವನ್ನಪ್ಪಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಉಜಿರೆ, ಧರ್ಮಸ್ಥಳ, ಮುಂಡಾಜೆಯಲ್ಲಿ ಆಲಿಕಲ್ಲು ಬಿದ್ದಿದ್ದು, ಬಳಿಕ ಮಳೆಯಾಗಿದೆ.ಈ ವಾರ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.

ಅದರಲ್ಲಿಯೂ ಹಾಸನದಲ್ಲಿ ಸುರಿದ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ರಾಜ್ಯದ ವಿವಿಧ ಕಡೆ ಶುಕ್ರವಾರ ಸುರಿದ ಗುಡುಗು ಸಹಿತ ಮಳೆ ಅವಾಂತರದಿಂದ ನಾಲ್ವರು ಮೃತಪಟ್ಟಿದ್ದಾರೆ. 13 ಜಾನುವಾರುಗಳು ಸಾವನ್ನಪ್ಪಿವೆ. ರೈತರು ಸ್ವಲ್ಪ ಹವಾಮಾನ ಬದಲಾವಣೆ ಕಡೆ ಗಮನ ಹರಿಸಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹವಾಮಾನ ಬದಲಾವಣೆ ನೋಡಿಕೊಂಡು ಕೆಲಸದಲ್ಲಿ ನಿರತರಾಗಬೇಕು. ಕಟಾವು ಮಾಡಿದ ಬೆಳೆಗಳನ್ನು ಸಂರಕ್ಷಿಸಬೇಕು. ದನಗಳಿಗೆ ಮೇವು ಹಾಗೂ ಇತರೆ ಕೃಷಿ ಚಟುವಟಿಕೆಗಳ ಕಡೆಗೆ ಗಮನ ಹರಿಸಿ ಹವಾಮಾನ ಬದಲಾವಣೆ ವಿಕೋಪದಿಂದ ಪಾರಾಗಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.

Spread positive news

Leave a Reply

Your email address will not be published. Required fields are marked *