ಮಿತ್ರರೇ ಈಗಾಗಲೇ ರಾಜ್ಯದಲ್ಲಿ 2023 ನೇ ಸಾಲಿನ ಮುಂಗಾರಿನ ಹಂಗಾಮಿನ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಬರ ವರ್ಷ ಎಂದು ಘೋಷಣೆ ಆಗಿದ್ದು, ರೈತರಿಗೆ ಬೆಳೆ ಪರಿಹಾರದ ಮೊದಲನೇ ಕಂತಾಗಿ 2000ರೂ. ಸರ್ಕಾರವು ಡಿಬಿಟಿ ಮೂಲಕ ರೈತರ ಖಾತೆಗೆ ಪಾವತಿಸಲಾಗಿದೆ. ಇದೀಗ ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧಾರದಲ್ಲಿ ಫ್ರೂಟ್ಸ್ ಐಡಿ ಹೊಂದಿರುವ ಹಾಗೂ ಪಹಣಿ ಜೋಡಣೆಯಾಗಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಪರಿಹಾರ ಪಾವತಿಸಲಾಗುತ್ತಿದೆ. ಡೈರೆಕ್ಟ್ ಡಿಬಿಟಿ ಮೂಲಕ ರೈತರ ಖಾತೆಗೆ ಜಮಾ ಆಗುವುದರಿಂದ ರೈತರು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದೆ ಎಂದು ಖಚಿತಪಡಿಸಿಕೊಳ್ಳುವುದು ಅವಶ್ಯಕತೆ ಇದೆ.
ಪರಿಹಾರದ ಹಣ ಜಮೆಯಾಗದೆ ಇರಲು ಪ್ರಮುಖ ಕಾರಣಗಳು –
1) ರೈತರು ಮೊದಲು ಜಮೀನಿನ ಪಹಣಿಗೆ ತಮ್ಮ ಎಪ್.ಐ.ಡಿ ( FID ) ಸಂಖ್ಯೆ ಇದೆಯೋ /ಇಲ್ಲಯೋ ಎಂಬುದನ್ನು ಪರಿಶೀಲಿಸುವುದು.
2) ತಮ್ಮ ಬ್ಯಾಂಕ್ ಖಾತೆಗೆ ಎನ್.ಪಿ.ಸಿ.ಆಯ್ ಲಿಂಕ್ ಇದೆಯೋ /ಇಲ್ಲಯೋ ಎಂಬುದನ್ನು ಪರಿಶೀಲಿಸುವುದು.
3) ಎನ್.ಪಿ.ಸಿ.ಆಯ್ ( NPCI ) ಲಿಂಕ್ ಇದ್ದಲ್ಲಿ ಎಫ್.ಐ.ಡಿ ( FID ) ದಲ್ಲಿ ಇರತಕ್ಕಂತ ಬ್ಯಾಂಕ್ ಖಾತೆ ಸಂಖ್ಯೆಗೂ ಎನ್.ಪಿ.ಸಿ.ಆಯ್ ಲಿಂಕ್ ಇರುವ ಸಂಖ್ಯೆಯು ಒಂದೇ ಯಾಗಿರತಕ್ಕದ್ದು.
4) ಎನ್.ಪಿ.ಸಿ.ಆಯ್ ಲಿಂಕ್ ( NPCI ) ಹಾಗೂ ಎಫ್.ಐ.ಡಿ ( FID ) ದಲ್ಲಿ ಇರತಕ್ಕಂತ ಬ್ಯಾಂಕ್ ಖಾತೆ ಸಂಖ್ಯೆ ಬೇರೆ-ಬೇರೆ ಇದ್ದಲ್ಲಿ ಎಫ್.ಐ.ಡಿ ( FID ) ದಲ್ಲಿ ಇರತಕ್ಕಂತ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬದಲಾವಣೆ ಮಾಡಿಸಿಕೊಳ್ಳುವುದು.
5) ಆಧಾರಕಾರ್ಡದಲ್ಲಿ ಇರತ್ತಕ್ಕಂತ ಹೆಸರಿಗೂ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಒಂದೇ ಯಾಗಿರಬೇಕು.
6) ಅಕೌಂಟ್ ಇನ್ ವ್ಯಾಲಿಡ್, ಕ್ಲೋಸ್, ಬ್ಲಾಕ್ ಆಧಾರ ನಾಟ್ ಸಿಡಿಂಗ್ ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳ್ಳುತ್ತಿದ್ದು ಪರಿಶೀಲಿಸಿಕೊಂಡು ಚಾಲ್ತಿ ಮಾಡಿಸಿಕೊಳ್ಳುವುದು.
7) ಆಧಾರಕಾರ್ಡದಲ್ಲಿ ಹಾಗೂ ಪಹಣಿ ಪತ್ರಿಕೆಯಲ್ಲಿ ಹೆಸರು ಒಂದೇ ಯಾಗಿರಬೇಕು.
8) https://parihara.karnataka.gov.in/service92/.
9) ಸರಕಾರದಿಂದ ಇನ್ನು ಹಂತ-ಹಂತವಾಗಿ ಪರಿಹಾರದ ಹಣ ಜಮೆ ಮಾಡಲಾಗುತ್ತಿರುತ್ತದೆ.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಬೆಳೆ ಹಾನಿಗೆ ಪರಿಹಾರವನ್ನು ಜಿಲ್ಲೆಯ 1,13,328 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸರ್ಕಾರದಿಂದ ಜಮೆ ಆಗಿರುತ್ತದೆ. ಈಗಾಗಲೇ ಜಮೆ ಆದ ರೈತ ಫಲಾನುಭವಿಗಳಿಗೆ ಪರಿಹಾರದ ಬಾಕಿ ಮೊತ್ತವನ್ನು ಜಮೆ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಜಿಲ್ಲೆಯಲ್ಲಿ ಯಾವ ರೈತರಿಗೆ ಮೊದಲನೇ ಹಂತದ ಬರ ಪರಿಹಾರದ ಮೊತ್ತವು ಈ ವರೆಗೂ ಜಮೆ ಆಗಿರುವುದಿಲ್ಲವೋ ಅವರು ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ, ತಹಸೀಲ್ದಾರ್ ಕಾರ್ಯಾಲಯಗಳಲ್ಲಿ ತೆರೆಯಲಾದ ಹೆಲ್ಸ್ ಡೆಸ್ಕ್‌ಗೆ ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳೆ ಪರಿಹಾರ ನೀಡಿರುವ ಕುರಿತು ನಾಡ ಕಚೇರಿ, ಗ್ರಾಮ ಪಂಚಾಯಿತಿ ರೈತ ಸಂಪರ್ಕ ಕೇಂದ್ರದ ಸೂಚನಾ ಫಲಕದಲ್ಲಿ ಅಥವಾ ತಹಸೀಲ್ದಾರ್ ಕಾರ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಬೇಕು. ರೈತರು ಬೆಳೆ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆಗೂ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳದ ರೈತರು ನಿಗದಿತ ಅವಧಿಯಲ್ಲಿ ತಮ್ಮ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳುವಂತೆ ಸಲಹೆ ನೀಡುವುದು. ಮತ್ತು ಪ್ರಸ್ತುತ ಅಂತಹ ರೈತರು ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ ಎನ್ನುವುದನ್ನು ತಿಳಿಸುವುದು ಅವರ ಜವಾಬ್ದಾರಿಗಳಾಗಿರುತ್ತದೆ.