ರೈತರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರವು ರೈತರು ತಮ್ಮ ಜಮೀನಿನಲ್ಲಿ ಬೆಳೆದ ಹಿಂಗಾರು ಮತ್ತು ಮುಂಗಾರು ಬೆಳೆಗಳ ಛಾಯಾಚಿತ್ರ ಸಹಿತ ಅಪ್ಲೋಡು ಮಾಡುವ ಬೆಳೆ ಸಮೀಕ್ಷೆ ನಡೆಸುವ ಕಾರ್ಯ ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡಿದೆ, ಈ ವರ್ಷವು ಕೂಡ ಮುಂಗಾರು ಸಮೀಕ್ಷೆ ಪ್ರಾರಂಭವಾಗಿದೆ.
ಕೃಷಿ ಇಲಾಖೆಯಿಂದ(Agriculture Department) 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರೇ ತಮ್ಮ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯ(Bele Samikshe) ಮಾಹಿತಿಯನ್ನು ಪಹಣಿಯಲ್ಲಿ ದಾಖಲಿಸಲು ಹಾಗೂ ಸರ್ಕಾರದ ವಿವಿಧ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಬೆಳೆ ಸಮೀಕ್ಷೆ(Kharif crop survey-2025)ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ.
ರೈತರು ಈ ಮೊಬೈಲ್ ಅಪ್ಲಿಕೇಶನ್(Bele Samikshe App) ಅನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಮಾಹಿತಿಯನ್ನು(Crop Survey) ಸ್ವಂತ ತಾವೇ ದಾಖಲಿಸಲು ಅವಕಾಶವನ್ನು ಇಲಾಖೆಯಿಂದ ಮಾಡಿಕೊಡಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಇದೊಂದು ಪಕ್ಕಾ ಸಮೀಕ್ಷೆಯಾಗಿದ್ದು, ರೈತರಿಗೆ ಇದು ವರದಾನವಾಗಿದೆ. ರೈತರೇ ಸ್ವತಃ ಬೆಳೆ ಸಮೀಕ್ಷೆ ನಡೆಸಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಫೋಟೋ ಸಹಿತ ಅಪ್‌ಲೋಡ್ ಮಾಡಬಹುದು. ಮೊಬೈಲ್ ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ಮಾಡಲು ಸಾಧ್ಯವಾಗದಿದ್ದರೆ ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಬಳಸಲು ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಬಹುದು, ಕಂದಾಯ ಇಲಾಖೆ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ಕೃಷಿ, ರೇಷ್ಮೆ ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಕೂಡಲೇ ನೀವು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು, ಹಾಗೂ ಸರ್ಕಾರದ ಕಾರ್ಯಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಬೇಕು.ಬೆಳೆ ಸಮೀಕ್ಷೆ ಎಂದರೆ –
ರೈತರು ತಾವು ಹೊಂದಿರುವ ತಮ್ಮ ಜಮೀನಿನ ಸರ್ವೆ ನಂಬರ್, ಹಿಸ್ಸಾ ನಂಬರ್ ವಾರು ಬೆಳೆದ ಎಲ್ಲ ಬೆಳೆಗಳ ಮಾಹಿತಿ ಸಂಗ್ರಹ ಮಾಡಿ ಹಾಗೂ ಅದರ ಎಲ್ಲ ನಿಖರ ದತ್ತಾಂಶದ ಕೊರತೆ ನಿವಾರಿಸಲು ಸರ್ಕಾರವು 2018 ರಲ್ಲಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.
ಇದರಿಂದ ರೈತರು ಬೆಳೆದ ಬೆಳೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ. ಇಲ್ಲಿ ಮುಖ್ಯವಾಗಿ ರೈತರು ತಾವು ಬೆಳೆದ ಬೆಳೆ ಮಾಹಿತಿಯನ್ನು ಛಾಯಾ ಚಿತ್ರ ಸಹಿತ ದಾಖಲಿಸಿ, ಅಪ್ಲೋಡ್ ಮಾಡಲು ಸರ್ಕಾರ ಅನುಮತಿ ನೀಡಿದೆ. ಇದರಿಂದ ರಾಜ್ಯದಲ್ಲಿ ಕೃಷಿ ಹಾಗೂ ಯಾವ ಬೆಳೆ ಹೆಚ್ಚು ಅವಲಂಬಿತವಾಗಿದೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
ಯಾವ ಯಾವ ಬೆಳೆಗಳನ್ನು ಅಪ್ಲೋಡ್ ಮಾಡಬಹುದು ?
ಹಣ್ಣಿನ/ ತೋಟದ, ತರಕಾರಿ, ಹೂವು, ಔಷಧ ಹಾಗೂ ಸಾಂಬಾರು ಪದಾರ್ಥ, ಅಪ್ರಧಾನ ಹಣ್ಣುಗಳು, ಕೃಷಿ ಹಾಗೂ ರೇಷ್ಮೆ ಬೆಳೆಗಳು, ಬದುಗಳಲ್ಲಿನಾಟಿ ಮಾಡಿರುವ ಮರಗಳು – ತೋಟದ, ಅರಣ್ಯ ಜಾತಿಯ ಕನಿಷ್ಠ 5 ಮರಗಳು ಮೇವು ಇತ್ಯಾದಿಗಳ ಫೋಟೋಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ನಿಮ್ಮ ಜಮೀನಿನಲ್ಲಿ ಬೆಳೆದ ಎಲ್ಲ ತರಹದ ಬೆಳೆಗಳನ್ನು ನೀವೆ ಸಮೀಕ್ಷೆ ನಡೆಸಿ ವರದಿ ನೀಡಬಹುದು. ಇದರಿಂದ ರೈತರಿಗೆ ಸರ್ಕಾರದಿಂದ ಹಲವಾರು ಯೋಜನೆಗಳು ಲಭ್ಯವಾಗುತ್ತವೆ.
ಬೆಳೆ ಸಮೀಕ್ಷೆ –
* 2025-26 ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ರೈತರ ಬೆಳ ಸಮೀಕ್ಷೆ Mobile App ನ್ನು ಬಿಡುಗಡೆ ಮಾಡಲಾಗಿರುತ್ತದೆ.
* ರೈತರು ತಮ್ಮ ಮೊಬೈಲ್‌ನಲ್ಲಿ (Google Play Store) ರೈತರ ಬೆಳ ನಮೀಕ್ಷೆ App Install ಮಾಡಿಕೊಂಡು ಬೆಳೆ ಸಮೀಕ್ಷೆ ಮಾಡಿ ಬೆಳೆ ವಿವರಗಳನ್ನು ದಾಖಲಿಸಬಹುದಾಗಿದೆ.
* ಬೆಳೆ ಸಮೀಕ್ಷೆ ದತ್ತಾಂಶವನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಳೆ ಸಾಲ ಮತ್ತು RTC ಯಲ್ಲಿ ದಾಖಲಿಸಲು ಬಳಸುವುದರಿಂದ ನಿಖರವಾದ ಬೆಳೆ ಮಾಹಿತಿಯನ್ನು ಬೆಳೆ ಸಮೀಕ್ಷೆಯಲ್ಲಿ ದಾಖಲಿಸುವ ಅವಶ್ಯಕತೆ ಇರುತ್ತದೆ.
* ಬೆಳೆ ಸಮೀಕ್ಷೆಯಲ್ಲಿ ದಾಖಲಿಸಲಾದ ಬೆಳೆ ಸಮೀಕ್ಷೆ ವಿವರಗಳನ್ನು ಬೆಳೆ ದರ್ಶಕ್ ಮೊಬೈಲ್ App Install ಮಾಡಿಕೊಂಡು ಪರಿಶೀಲಿಸಿ ಮಾಹಿತಿ ತಪ್ಪಾಗಿದ್ದರೆ, ನಿಗದಿತ ದಿನಾಂಕದೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
* ಬೆಳೆ ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗದ/ಬೆಳೆ ಸಮೀಕ್ಷೆ ಮಾಡದ ಇರುವ ರೈತರ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಖಾಸಗಿ ನಿವಾಸಿಗಳ (PR) ಮೂಲಕ ನಡೆಸಲಾಗುತ್ತದೆ.
* ಹೆಚ್ಚಿನ ಮಾಹಿತಿಗಾಗಿ/ಸಹಾಯಕ್ಕಾಗಿ ರೈತರ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.
ಈ ಆಂಡ್ರಾಯ್ಡ್ ಆ್ಯಪ್ ಡೌನ್ಲೋಡ್ ಬಗ್ಗೆ –
• ರೈತರು ಪ್ಲೇ ಸ್ಟೋರ್ ನಲ್ಲಿ ಹೋಗಿ ಬೆಳೆ ಸಮೀಕ್ಷೆ 2022 -23 ಎಂದು ಹುಡುಕಿದರೆ ನಿಮಗೆ ಈ ಅಪ್ಲಿಕೇಶನ್ ಸಿಗುತ್ತದೆ.
• ಡೈರೆಕ್ಟ್ ಆಗಿ ಗೂಗಲ್ ನಲ್ಲಿ ಹೋಗಿ https://play.google.com/store/apps/details?id=com.csk.Khariffarmer22_23.cropsurvey ಎಂದು ಹುಡುಕಿದರೆ ಅಲ್ಲಿ cropsurvey ಎಂದು ಆಯ್ಕೆ ಬಂದಾಗ ಅದರಲ್ಲಿ ಸಮೀಕ್ಷೆ ಮಾಡಬಹುದು.
• ರೈತರೇ ನಿಮಗೆ ಇದರ ಹೆಚ್ಚಿನ ಮಾಹಿತಿಗಾಗಿ ಬೇಕಾದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕಂದಾಯ ಇಲಾಖೆಯನ್ನು ಸಂಪರ್ಕಿಸಬಹುದು. ಅವರು ಈ ಹೊಸ ತಾಂತ್ರಿಕತೆಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ.
ಸಮೀಕ್ಷೆ ಮಾಡುವ ವಿಧಾನ –
ಪ್ರೀಯ ರೈತರೇ ನೀವು ನಿಮ್ಮ ಆಂಡ್ರಾಯ್ಡ್ ನಲ್ಲಿ ಸ್ವತಂತ್ರವಾಗಿ ಅಪ್ಲೋಡು ಮಾಡಲು ಸಾಧ್ಯವಾಗದಿದ್ದಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಬೆಳೆಯನ್ನು ಮಾಡಬಹುದಾಗಿದೆ. ಮೊಬೈಲ್ ಆ್ಯಪ್ ಬಳಸಲು ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯುವುದು.
• ಮೊದಲು ಅಂಡ್ರಾಯ್ಡ್ ಮೊಬೈಲ್ ಮೂಲಕ ಗೂಗಲ್ ಪ್ಲೇ ಸ್ಟೋರ್ ‘ Kharif Farmer Crop 2022-23 Version 1.0.3 ‘ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.• ನಂತರ ಆ್ಯಪ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ನ QR Code ನ್ನು ಸ್ಕ್ಯಾನ್ ಮಾಡಬೇಕು ಅಥವಾ ಆಧಾರ್ ಸಂಖ್ಯೆ ದಾಖಲಿಸಬೇಕು.
• ನಂತರ ನಿಮ್ಮ ಆಧಾರ್ ಲಿಂಕ್ ಇರುವ ಮೊಬೈಲ್ ಗೆ ಬಂದ ಒ.ಟಿ.ಪಿ.ಯನ್ನು ಹಾಕಬೇಕು.
• ಅದಾದಮೇಲೆ ಜಿಲ್ಲೆ ತಾಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್, ಮಾಲೀಕರ ಹೆಸರು ಆಯ್ಕೆ ಮಾಡಿ ಅಲ್ಲಿ ಕೇಳಿದ ಮಾಹಿತಿಯನ್ನು ತುಂಬಬೇಕು.
• ನಂತರ ಕ್ಷೇತ್ರ ನಮೂದಿಸಿ, ಸರ್ವೇ ನಂಬರ್ ನ ಗಡಿ ರೇಖೆಯ ಒಳಗೆ ನಿಂತು ಬೆಳೆಗಳ ವಿವರ ದಾಖಲಿಸಿ ಛಾಯಾಚಿತ್ರ ತೆಗೆದು ಅಪ್ಲೋಡು ಮಾಡಿದಾಗ ಸಮೀಕ್ಷೆ ಪೂರ್ಣಗೊಳ್ಳುವುದು.
ಬೆಳೆ ಸಮೀಕ್ಷೆ ಪ್ರಯೋಜನ –
• ಬೆಳೆ ನಷ್ಟ ಪರಿಹಾರ,
• ಬೆಳೆ ವಿಮೆ,
• ಕನಿಷ್ಠ ಬೆಂಬಲ ಬೆಲೆ
• ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಾತಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಬೆಳೆ ಸಮೀಕ್ಷೆಯ ವಿವರವನ್ನು ಬಳಸಲಾಗುತ್ತದೆ, ಹಾಗೂ ಸರಕಾರದ ನಾನಾ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಬೆಳೆ ಸಮೀಕ್ಷೆ ಬಳಸಲಾಗುತ್ತದೆ.