ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಕಲ್ಯಾಣ ಯೋಜನೆಯಾಗಿದೆ. ಮೇ 1, 2016ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿತು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ದೇಶದ ಬಡ ಮಹಿಳೆಯರಿಗೆ, ಅಂದರೆ ಬಿಪಿಎಲ್ ಕುಟುಂಬಗಳಿಗೆ ಎಲ್ ಪಿಜಿ ಸಂಪರ್ಕವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
ಹೌದು,ಭಾರತ ಅತಿ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿದೆ.ಆದರಿಂದ ಗ್ರಾಮೀಣ ವ್ಯಾಪಕವಾಗಿ ಬಳಸಲಾಗುವ ಸೌದೆ ಒಲೆಗಳಂತಹ ಇಂಧನಗಳನ್ನು ಶುದ್ಧ, ಹೆಚ್ಚು ಪರಿಣಾಮಕಾರಿಯಾದ LPG (ದ್ರವೀಕೃತ ಪೆಟ್ರೋಲಿಯಂ ಅನಿಲ) ದಿಂದ ಬದಲಾಯಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
ಈ ಯೋಜನೆಗಾಗಿ ನರೇಂದ್ರ ಮೋದಿ ಸರ್ಕಾರದಿಂದಾಗಿ ಹತ್ತು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್‌ಗಳು ಈಗಾಗಲೇ ಎಲ್ಲರ ಮನೆ ತಲುಪಿಸಿದೆ. ಈ ಯೋಜನೆಯಡಿಯಲ್ಲಿ ನೀವು ಸಬ್ಸಿಡಿ ಸಿಲಿಂಡರ್ ಪಡೆಯಲು ಬಯಸಿದರೆ, ನೀವು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅದು ಹೇಗೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.
ಬಡ ಕುಟುಂಬಗಳಿಗೆ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕಗಳನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ 1, 2016 ರಂದು ಉದ್ಘಾಟಿಸಿದರು. ಈ ಯೋಜನೆಯಡಿಯಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಸೇರಿದ 5 ಕೋಟಿಗೂ ಹೆಚ್ಚು ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲು ಕೇಂದ್ರ ಸರ್ಕಾರ ಈ ಕ್ರಮಗಳನ್ನು ಕೈಗೆ ಎತ್ತಿಗೊಂಡಿತ್ತು.
ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ 300 ರೂ.ಗಳಂತೆ ಸಬ್ಸಿಡಿ ರೂಪದಲ್ಲಿ ಹಣ ಸಿಗುತ್ತದೆ. PMUY ಅಡಿಯಲ್ಲಿ ಫಲಾನುಭವಿಗಳು ಸಾಮಾನ್ಯ ಫಲಾನುಭವಿಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಪ್ರಸ್ತುತ, ಇದರ ಅಡಿಯಲ್ಲಿ ಗ್ಯಾಸ್ ಸಿಲಿಂಡರ್‌ನ ಬೆಲೆ 550 ರೂ. ಮಾರ್ಚ್ 1, 2025 ರ ಹೊತ್ತಿಗೆ, ಭಾರತದ 32.94 ಕೋಟಿ ಎಲ್‌ಪಿಜಿ ಗ್ರಾಹಕರಲ್ಲಿ 10.33 ಕೋಟಿ ಜನರು ಪಿಎಂಯುವೈ ಫಲಾನುಭವಿಗಳಾಗಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಏನು..?
- ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
- SECC-2011 ಡೇಟಾಬೇಸ್‌ನಲ್ಲಿರುವ ಬಿಪಿಎಲ್ ಕುಟುಂಬಗಳ ಮಹಿಳೆಯರು ಅರ್ಹರು
- SC/ST, ಅತ್ಯಂತ ಹಿಂದುಳಿದ ವರ್ಗಗಳು (MBC), ಅರಣ್ಯವಾಸಿಗಳು, ನದಿ ದ್ವೀಪವಾಸಿಗಳು, PMAY (ಗ್ರಾಮೀಣ), ಅಂತ್ಯೋದಯ ಅನ್ನ ಯೋಜನೆ (AAY), ಚಹಾ ತೋಟದ ಕೆಲಸಗಾರರು ಮತ್ತು ಮಾಜಿ ಕಾರ್ಮಿಕರು ಮುಂತಾದ ವರ್ಗಗಳಿಗೆ ಸೇರಿದ ಮಹಿಳೆಯರು ಅರ್ಹರು.
- ಪಡಿತರ ಚೀಟಿ ಹೊಂದಿರಬೇಕಾಗುತ್ತದೆ
- ಆದಾಯ ತೆರಿಗೆಗೆ ಕಟ್ಟುತ್ತಿದ್ದರೆ ನೀವು ಈ ಯೋಜನೆಗೆ ಅನರ್ಹರು
- ಪುರುಷರು ಅರ್ಹರಲ್ಲ. ಅರ್ಜಿದಾರರು ಅನಿಲ ಸಂಪರ್ಕ ಹೊಂದಿರಬಾರದು.
ಅರ್ಜಿ ಸಲ್ಲಿಕೆಗೆ ಯಾವೆಲ್ಲಾ ದಾಖಲೆಗಳು ಬೇಕು..?
- ನೀವು ಆಧಾರ್ ಕಾರ್ಡ್ ಹೊಂದಿರಬೇಕಾಗುತ್ತದೆ.
- ಬ್ಯಾಂಕ್ ಖಾತೆ ಇರಬೇಕು
- ಮೊಬೈಲ್ ಸಂಖ್ಯೆ
- ಪಾಸ್‌ಪೋರ್ಟ್ ಗಾತ್ರದ ಫೋಟೋ ಇರಬೇಕು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ..?
ಈ ಯೋಜನೆಗೆ ನೀವು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ನೀವು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ, ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ. ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ನೀವು http://www.pmuy.gov.in ಗೆ ಲಾಗಿನ್ ಆಗಿ ಅಗತ್ಯ ದಾಖಲೆಗಳೊಂದಿಗೆ PMUY ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು.
ಅದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬೇಕಾಗುತ್ತದೆ.
- ನೀವು ಮೊದಲು ನೋಂದಣಿಗಾಗಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
- ನಂತರ ಅಲ್ಲಿ ಕಾಣಿಸಿಕೊಳ್ಳುವ ಹೊಸ ಉಜ್ವಲ ಸಂಪರ್ಕ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನೀವು ಅದರ ಮೇಲೆ ಕ್ಲಿಕ್ ಮಾಡಿದ ನಂತರ, 3 ಗ್ಯಾಸ್ ಏಜೆನ್ಸಿಗಳ ಹೆಸರುಗಳು ಕಾಣಿಸಿಕೊಳ್ಳುತ್ತವೆ. ನಿಮಗೆ ಯಾವುದು ಬೇಕೋ ಅದನ್ನು ಆರಿಸಿ.
- ಅದಾದ ನಂತರ ನೀವು ಇನ್ನೊಂದು ಹೊಸ ಪುಟಕ್ಕೆ ಹೋಗುತ್ತೀರಿ. ಆ ಪುಟದಲ್ಲಿ, ನಿಮ್ಮ ಹೆಸರು, ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಯ ಹೆಸರು, ಮೊಬೈಲ್ ಸಂಖ್ಯೆ ಮತ್ತು ಪಿನ್ ಕೋಡ್‌ನಂತಹ ಮಾಹಿತಿಯನ್ನು ಭರ್ತಿ ಮಾಡಿ.
- ನಂತರ ಅಲ್ಲಿ ಕೇಳಲಾದ ದಾಖಲೆಗಳ ನಕಲು ಪ್ರತಿಗಳನ್ನು ಅಪ್‌ಲೋಡ್ ಮಾಡಿ. ನಂತರ ಅರ್ಜಿ ನಮೂನೆಯನ್ನು ಸಲ್ಲಿಸಿ.
- ಎಲ್ಲಾ ವಿವರಗಳು ಆದ ನಂತರ, ನಿಮ್ಮ ಅರ್ಜಿ ನಮೂನೆ ಯಶಸ್ವಿಯಾಗಿ ಪೂರ್ಣಗೊಂಡಿರುವುದನ್ನು ನೀವು ನೋಡಬಹುದು.