ಅಣಬೆ ಕೃಷಿ ಮಾಡಿ ತಿಂಗಳಿಗೆ 50 ರಿಂದ 60 ಸಾವಿರ ಸಂಪಾದನೆ ಮಾಡುತ್ತಿರುವ ಮಹಿಳೆ.

ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ಉದ್ಯೋಗದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. ಹೌದು ನಾವು ಒಬ್ಬ ರೈತ ಮಹಿಳೆಯ ಸಾಧನೆಯ ಬಗ್ಗೆ ಚರ್ಚೆ ಮಾಡೋಣ. ತೂಮಕುರು ಜಿಲ್ಲೆಯ ಮಹಿಳೆ ಅಣಬೆ ಬೇಸಾಯ ಮಾಡಿ ತಿಂಗಳಿಗೆ 50 ರಿಂದ 60 ಸಾವಿರ ಹಣ ಸಂಪಾದನೆ ಮಾಡುತ್ತಿರುವ ಬಗ್ಗೆ ಕೂತೂಹಲ ಮೂಡಿದೆ. ತುಮಕೂರು ಗಂಗಮ್ಮ ಅವರು ಯಾವ ಯಾವ ಪದ್ದತಿ ಬಳಸಿ ಹಾಗೂ ಈ ಬೇಸಾಯ ಮಾಡಲು ಬಳಸುವ ತಂತ್ರಜ್ಞಾನ ಹಾಗೂ ಕೆಲಸದ ಬಗ್ಗೆ ಚರ್ಚೆ ಮಾಡೋಣ.

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಬಳಿಯ ಅಳಕಟ್ಟೆ ಎಲ್.ತಾಂಡಾದ ಗಂಗಲಕ್ಷ್ಮಮ್ಮ ತಮ್ಮ ಮನೆಯಲ್ಲೇ ಅಣಬೆ ಬೆಳೆಯುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಇಳುವರಿ ಸಿಗುವ, ಹೆಚ್ಚಿನ ಶ್ರಮ ಬೇಡದ ಅಣಬೆ ಬೇಸಾಯ ಗಂಗಲಕ್ಷ್ಮಮ್ಮ ಅವರ ಕೈ ಹಿಡಿದಿದೆ. ಗಂಗಲಕ್ಷ್ಮಮ್ಮ ಪ್ರತಿ ದಿನ 7ರಿಂದ 8 ಕೆ.ಜಿ ಅಣಬೆ ಮಾರಾಟ ಮಾಡುತ್ತಿದ್ದಾರೆ. ತಿಂಗಳಿಗೆ 200 ಕೆ.ಜಿಯಿಂದ 250 ಕೆ.ಜಿ ಮಾರಾಟವಾಗುತ್ತಿದೆ. ಪ್ರತಿ ಕೆ.ಜಿಗೆ ₹250 ದರ ನಿಗದಿ ಪಡಿಸಿದ್ದಾರೆ. ಅಣಬೆ ಕೃಷಿಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯಲ್ಲಿದ್ದು, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅಣಬೆ ಬೇಸಾಯ ಮಾಡುವ ಪದ್ದತಿ –
* ಭತ್ತದ ಹುಲ್ಲುನ್ನು 3-4 ಸೆಂ.ಮೀ. ಉದ್ದದ ತುಂಡುಗಳಾಗಿ ಕತ್ತರಿಸಿ, ಸುಮಾರು 8 ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಬೇಕು.
* ನಂತರ ಹುಲ್ಲಿನಲ್ಲಿರುವ ನೀರನ್ನೆಲ್ಲಾ ಚೆನ್ನಾಗಿ ಬಸಿದು, ಪುನಃ ಅರ್ಧ ಗಂಟೆಗಳ ಕಾಲ ಹಂಡೆಯಲ್ಲಿ ಕುದಿಸಬೇಕು.
* ನಂತರ ಕುದಿಯುವ ನೀರಿನಿಂದ ಹುಲ್ಲನ್ನು ತೆಗೆದು ಅದರಲ್ಲಿರುವ ನೀರನ್ನು ಶುಚಿಯಾಗಿರುವ ಜರಡಿ ಮುಖಾಂತರ ಅರ್ಧ ಗಂಟೆ ಕಾಲ ಬಸಿಯಲ್ಲಿಡಬೇಕು ಅಥವಾ ನೀರು ತಣ್ಣಗಾದ ಮೇಲೆ ಭತ್ತದ ಹುಲ್ಲನ್ನು ಹಿಂಡಿ ನೀರನ್ನು ತೆಗೆಯಬಹುದು.
* ಈ ಬೆಂದ ಹುಲ್ಲನ್ನು ಮೇಲೆ ಹೇಳಿದ ಶುಚಿಯಾಗಿರುವ ಪಾಲಿಥೀನ್ ಚೀಲಗಳಿಗೆ (12″x18″) ತುಂಬಬೇಕು. ಪಾಲಿಥೀನ್ ಚೀಲದ ತಳ ಭಾಗದಲ್ಲಿ ನಾಲ್ಕಾರು ಸಣ್ಣ ಸಣ್ಣ ರಂಧ್ರಗಳನ್ನು ಮಾಡಬೇಕು.

* ಪಾಲಿಥೀನ್ ಚೀಲದ ತಳಭಾಗದಲ್ಲಿ ಹುಲ್ಲಿನ ಪದರವು ಸುಮಾರು 3″ ನಷ್ಟಾದಾಗ ಅದುಮಿ ಸಮನಾಗಿ ಮಟ್ಟ ಮಾಡಿ ಅಣಬೆ ಬೀಜವನ್ನು ಒಂದು ಅಂಗುಲ ಸಮಾನಂತರದಲ್ಲಿ ಎಲ್ಲಾ ಕಡೆ ಹರಡಬೇಕು. ಹುಲ್ಲಿನ ಅಂಚಿನ ಸುತ್ತಲೂ ಅಣಬೆ ಬೀಜದ ಮಟ್ಟ ಜಾಸ್ತಿ ಇದ್ದರೆ ಒಳ್ಳೆಯದು. ಹೀಗೆ ಹುಲ್ಲು ಹಾಗೂ ಬೀಜವನ್ನು ಪದರು ಪದರಾಗಿ ತುಂಬಿ ಪಾಲಿಥೀನ್ ಚೀಲದಲ್ಲಿ ತುಂಬಬೇಕು.

* ಪಾಲಿಥೀನ್ ಚೀಲಗಳನ್ನು ತುಂಬಿ ಕಟ್ಟಲು ಅನುಕೂಲವಾಗುವಂತೆ ಚೀಲದ ಕೊನೆಯಲ್ಲಿ ಜಾಗ ಉಳಿಸಿಕೊಳ್ಳಬೇಕು. ನಂತರ ಚೀಲಗಳ ಬಾಯಿಯನ್ನು ಬಿಗಿಯಾಗಿ ದಾರದಿಂದ ಕಟ್ಟಬೇಕು ಅಥವಾ ರಬ್ಬರ್‌ಬ್ಯಾಂಡುಗಳನ್ನು ಹಾಕಬಹುದು.
* ನಂತರ ಈ ಚೀಲಗಳನ್ನು ಅಣಬೆಯ ಶಿಲೀಂಧ್ರ ಕಣಗಳು ಬೆಳೆಯಲು ತಂಪಾದ ಸ್ಥಳಗಳಲ್ಲಿ ಇಡಬೇಕು.
* ಸುಮಾರು 18-19 ದಿನಗಳ ನಂತರ ಪಾಲಿಥೀನ್ ಚೀಲದಲ್ಲಿರುವ ಹುಲ್ಲಿನ ಎಲೆಗಳ ಮೇಲೆಲ್ಲಾ ಬಿಳಿಯ ಹತ್ತಿಯಂತೆ ಶಿಲೀಂಧ್ರ ಕಣಗಳ ಬೆಳ್ಳಗೆ ಹತ್ತಿಯಂತೆ ಸಂಪೂರ್ಣವಾಗಿ ಆವರಿಸಿದಾಗ ಚೀಲದ ಬಾಯಿಯನ್ನು ತೆಗೆದು, ಚೀಲವನ್ನು ಸಂಪೂರ್ಣ ತೆಗೆಯಬಹುದು ಅಥವಾ ಅರ್ಧ ಭಾಗದಷ್ಟು ಹಿಮ್ಮಡಿಸಬಹುದು.
* ಹಾಗೆ ಸಾಲು ಸಾಲಾಗಿ ಅಣಬೆ ಪೆಂಡಿಯ ಸುತ್ತಲೂ ಅಣಬೆ ಪೆಂಡಿಗಳನ್ನು ಇಟ್ಟು ತೇವಾಂಶಕ್ಕೆ ತಕ್ಕಂತೆ ದಿನಕ್ಕೆ 2-3 ಬಾರಿ ನೀರನ್ನು ಚಿಮುಕಿಸುತ್ತಿರಬೇಕು.
ಚೀಲಗಳನ್ನು ತೆರೆದ 4-6 ದಿನಗಳಲ್ಲಿ ಹುಲ್ಲಿನ ಪೆಂಡಿಯ ಸುತ್ತಲೂ ಅಣಬೆಗಳು ಮೂಡುತ್ತವೆ.
* ಹೀಗೆ ಮೂಡಿ ಬೆಳೆದ ಅಣಬೆಗಳನ್ನು 3-4 ದಿನಗಳಿಗೊಮ್ಮೆ 3 ಬಾರಿ ಕೊಯಿಲು ಮಾಡಬೇಕು.


ಅಣಬೆ ಸ್ಪಾನ್ (ಬೀಜ) ದೊರೆಯುವ ಸ್ಥಳಗಳು –
* ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ.
* ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರಘಟ್ಟ, ಬೆಂಗಳೂರು.
* ಕೃಷಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ.
* ಅಣಬೆ ವಿಭಾಗ, ತೋಟಗಾರಿಕೆ ಇಲಾಖೆ, ಹುಳಿಮಾವು, ಬೆಂಗಳೂರು.
* ಅಣಬೆ ವಿಭಾಗ, ಜೈವಿಕ ಕೇಂದ್ರ, ಶಿವಮೊಗ್ಗ.

Spread positive news

Leave a Reply

Your email address will not be published. Required fields are marked *