ಯೂರಿಯಾ ಗೊಬ್ಬರದಲ್ಲಿ ರೈತರಿಗೆ ಮೋಸ.

ಪ್ರೀಯ ರೈತರೇ ಇವತ್ತು ಇಲ್ಲಿ ನಾವು ಒಂದು ರೈತರಿಗೆ ಅನ್ಯಾಯವಾಗುತ್ತಿರುವ ಅಂಶದ ಬಗ್ಗೆ ಚರ್ಚೆ ಮಾಡೋಣ. ಏನೆಂದರೆ ಈಗಾಗಲೇ ಕೇಂದ್ರ ಸರ್ಕಾರದ ಕಡೆಯಿಂದ ರೈತರಿಗೆ ಯೂರಿಯಾ ಗೊಬ್ಬರ ಸಬ್ಸಿಡಿ ರೂಪದಲ್ಲಿ ಕಡಿಮೆ ಹಣದಲ್ಲಿ ರೈತರಿಗೆ ದೊರೆಯುತ್ತಿದೆ. ಆದರೆ ಅದೇ ಯೂರಿಯಾ ಗೊಬ್ಬರ ರೈತರಿಗೆ ದೊರೆಯದೆ ಬೇರೆ ಕಡೆ ಕಳ್ಳ ಸಾಗಣೆ ನಡೆಯುತ್ತಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ ಬನ್ನಿ. ಹೌದು ರಾಜ್ಯದಲ್ಲಿ ‘ಯೂರಿಯಾ ಮಾಫಿಯಾ’ ಎಗ್ಗಿಲ್ಲದೆ ಸಾಗಿದ್ದು, ರೈತರ ಪಾಲಿನ ಸಬ್ಸಿಡಿ ದರದ ಯೂರಿಯಾ ಗೊಬ್ಬರವು ಅನ್ಯ ರಾಜ್ಯದ ಕೈಗಾರಿಕೆಗಳ ಪಾಲಾಗುತ್ತಿದೆ. ಕಾಳಸಂತೆಕೋರರು ರಾತ್ರೋರಾತ್ರಿ ಕದ್ದುಮುಚ್ಚಿ ಕೈಗಾರಿಕೆಗಳಿಗೆ ಯೂರಿಯಾ ಸಾಗಿಸಿ, ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

ಕೃಷಿಯ ಉತ್ಪಾದಕತೆಯನ್ನು ನಿರ್ಧರಿಸುವಲ್ಲಿ ಮಳೆಗೆ ಎಷ್ಟು ಮಹತ್ವವಿದೆಯೋ ರಸಗೊಬ್ಬರಗಳಿಗೂ ಅಷ್ಟೇ ಮಹತ್ವವಿದೆ. ರೈತರ ಆರ್ಥಿಕ ಹೊರೆ ತಗ್ಗಿಸಲು ಹಾಗೂ ಮಣ್ಣಿನ ಅಸಮತೋಲಿತ ಪೋಷಕಾಂಶದ ಸಮಸ್ಯೆ ಪರಿಹರಿಸಲು ಕೇಂದ್ರ ಸರಕಾರ ಯೂರಿಯಾ ಸೇರಿದಂತೆ ಎಲ್ಲಾ ರಸಗೊಬ್ಬರಗಳ ಖರೀದಿಗೂ ಸಹಾಯಧನ (ಸಬ್ಸಿಡಿ) ನೀಡುತ್ತಿದೆ.

ಕೇಂದ್ರವು ಯೂರಿಯಾವನ್ನು ಪೋಷಕಾಂಶ ಆಧಾರಿತ ಸಹಾಯಧನ ಯೋಜನೆ (ಎನ್‌ಬಿಎಸ್) ವ್ಯಾಪ್ತಿಗೆ ಸೇರಿಸಿದೆ. ಬೇವು ಲೇಪಿತ ಯೂರಿಯಾ 45 ಕೆ.ಜಿ. ಚೀಲಕ್ಕೆ ಮಾರುಕಟ್ಟೆ ಬೆಲೆ 1,666 ರೂ. ಇದೆ. ಆದರೆ, ರೈತರಿಗೆ ರಿಯಾಯಿತಿ ದರದಲ್ಲಿ 267 ರೂ.ಗೆ ನೀಡಲಾಗುತ್ತಿದೆ. ಉಳಿದ 1,399 ರೂ.ಗಳನ್ನು ಕೇಂದ್ರ ಸರಕಾರ ಭರಿಸುತ್ತಿದೆ.

ಕೃಷಿಯೇತರ ಚಟುವಟಿಕೆಗೆ ಯೂರಿಯಾ ಬಳಕೆ –
* ಯೂರಿಯಾವನ್ನು ಕರಗಿಸಿ ಪ್ರೈವುಡ್ ಕಾರ್ಖಾನೆಗಳಲ್ಲಿ ಗಮ್ ಆಗಿ ಬಳಸಲಾಗುತ್ತದೆ.
* ಪಶು ಹಾಗೂ ಕೋಳಿ ಆಹಾರದಲ್ಲಿ ಪ್ರೋಟೀನ್ ಬದಲಾಗಿ ಯೂರಿಯಾ ಬಳಕೆ.
* ಹಾಲು ಕಲಬೆರಕೆಗೆ ಯೂರಿಯಾ ಸೇರಿದಂತೆ ಇತರೆ ರಾಸಾಯನಿಕಗಳ ಬಳಕೆ
* ಸಿಗರೇಟ್‌ನಲ್ಲಿ ಪರಿಮಳ ಹೆಚ್ಚಿಸಲು ಯೂರಿಯಾ ಮಿಶ್ರಣ
* ಹೇರ್ ಕಂಡೀಷನರ್, ಬಾತ್‌ರೂಂ ಕ್ಲೀನರ್, ಲೋಷನ್‌ನಲ್ಲೂ ಬಳಕೆ
* ರಾಗಿ ಮತ್ತು ಭತ್ತದ ಹುಲ್ಲಿಗೆ ಶೇ.1ರಷ್ಟು ಯೂರಿಯಾವನ್ನು ನೀರಿನಲ್ಲಿ ಬೆರೆಸಿ, ಆ ಹುಲ್ಲನ್ನು ಪ್ಲಾಸ್ಟಿಕ್ ಚೀಲದಲ್ಲಿ ಮುಚ್ಚಿಟ್ಟರೆ ಸಾರಜನಕ ಪ್ರಮಾಣ ಹೆಚ್ಚುತ್ತದೆ.

ಯೂರಿಯಾ ಬಳಸುವ ವಿಧಾನ –
ಯೂರಿಯಾವನ್ನು ಖಾಲಿಯಾದ ಮಣ್ಣಿನ ಮೇಲ್ಮಗೆ ಅನ್ವಯಿಸಿದರೆ, ಅಮೋನಿಯಂ ಕಾರ್ಬೋನೇಟ್‌ಗೆ ಕ್ಷಿಪ್ರ ಜಲವಿಚ್ಛೇದನೆಯ ಪರಿಣಾಮವಾಗಿ ಗಮನಾರ್ಹ ಪ್ರಮಾಣದ ಅಮೋನಿಯಾವನ್ನು ಕಳೆದುಕೊಳ್ಳಬಹುದು. ಇದನ್ನು ಬಿತ್ತನೆಯ ಸಮಯದಲ್ಲಿ ಮತ್ತು ನಿಂತಿರುವ ಬೆಳೆಗಳಲ್ಲಿ (ಟಾಪ್ ಡ್ರೆಸ್ಸಿಂಗ್) ಅನ್ವಯಿಸಬೇಕು. ಬಿತ್ತನೆಯ ಸಮಯದಲ್ಲಿ ಶಿಫಾರಸು ಮಾಡಿದ ಅಳತೆಯ ಅರ್ಧ ಭಾಗ ಮತ್ತು 30 ದಿನಗಳ ನಂತರ ಉಳಿದ ಅರ್ಧ ಭಾಗವನ್ನು 15 ದಿನಗಳ ಅಂತರದಲ್ಲಿ 2-3 ಸಮಾನ ಭಾಗಗಳಲ್ಲಿ ಅನ್ವಯಿಸಬೇಕು. ಈ ವಸ್ತುವನ್ನು ಹೆಚ್ಚಿನ ಪ್ರಮಾಣದಲ್ಲಿ ಬೀಜದೊಂದಿಗೆ ಅಥವಾ ತುಂಬಾ ಹತ್ತಿರದಲ್ಲಿ ಇರಿಸಿದರೆ. ಮಣ್ಣಿನಲ್ಲಿನ ಯೂರಿಯಾದ ಕ್ಷಿಪ್ರ ಜಲವಿಚ್ಛೇದನವು ಮೊಳಕೆಗೆ ಅಮೋನಿಯಾ ಹಾನಿಯು ಕಾರಣವಾಗಿತ್ತದೆ., ಬೀಜಕ್ಕೆ ಸಂಬಂಧಿಸಿದಂತೆ ಯೂರಿಯಾವನ್ನು ಸರಿಯಾಗಿ ಇಡುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಯೂರಿಯಾವನ್ನು (ರಾಜ್ಯದ ಸಾಮಾನ್ಯ ಶಿಫಾರಸುಗಳ ಪ್ರಕಾರ) ಬೆಳೆಗಳ ಅವಶ್ಯಕತೆ ಮತ್ತು ಮಣ್ಣಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಅನ್ವಯಿಸಬೇಕು.

Spread positive news

Leave a Reply

Your email address will not be published. Required fields are marked *