ರೈತರಿಗೆ 5 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ಯಾವಾಗ ನೀಡಲು ಪ್ರಾರಂಭಿಸುತ್ತದೆ? ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಪ್ರೀಯ ರೈತರೇ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ರೈತರಿಗೆ ಅಲ್ಪಾವಧಿ, ಮಧ್ಯಮಾವಧಿ, ಹಾಗೂ ದೀರ್ಘಾವಧಿ ಸಾಲ ನೀಡಲು ಜುಲೈ 1ರಿಂದ ನೀಡಲು ಮುಂದಾಗಿತ್ತು ಆದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಈ ಯೋಜನೆಯ ಬಗ್ಗೆ ಎಲ್ಲಿಯೂ ಧ್ವನಿ ಎತ್ತಲಿಲ್ಲ ಹೀಗಾಗಿ ಸರ್ಕಾರಕ್ಕೂ ಇದರ ಬಗ್ಗೆ ಗಮನ ಹರಿಸಲು ಸ್ವತಹ ಸಚಿವರು ಮುಂದೆ ಬರಬೇಕಾಗಿದೆ. ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಸಹಕಾರ ಬ್ಯಾಂಕ್ ಗಳಲ್ಲಿ ಕೃಷಿಕರಿಗೆ ದಂತೆ ಶೂನ್ಯ ಬಡ್ಡಿ ದರದಲ್ಲಿ 3 ರಿಂದ 5 ಲಕ್ಷ ರೂ.ವರೆಗೂ ಸಾಲ ನೀಡಲು ಮುಂದಾಗಲಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಅವರು ತಿಳಿಸಿದ್ದಾರೆ.
ಏನಿದು ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ? ಯಾವ ರೈತರಿಗೆ ನೀಡಲಾಗುತ್ತದೆ?
ಮುಖ್ಯವಾಗಿ ಇದು ಒಂದು ಸರ್ಕಾರದ ಮಹತ್ವಾಕಾಂಕ್ಷಿ ನಿರ್ಧಾರ ಆಗಿದೆ. ರೈತರು ಕೃಷಿಯಲ್ಲಿ ಯಾವುದೇ ಆರ್ಥಿಕ ತೊಂದರೆಯಾಗದಂತೆ ಬೆಳೆಸಾಲ ನೀಡಲು ನೂತನ ಕೃಷಿ ಸಚಿವರು ಚೆಲುವನಾರಾಯಣ ಸ್ವಾಮಿ ಅವರು ಹೇಳಿದ್ದಾರೆ. ಅದೇ ರೀತಿ ಸರ್ಕಾರವು ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಲ್ಪಾವಧಿ ಬೆಳೆ ಸಾಲದ ಮೊತ್ತವನ್ನು ಏರಿಕೆ ಮಾಡಿ ರೈತರಿಗೆ ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಕೃಷಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ.ವರೆಗೂ ಸಾಲವನ್ನು ಸಹಕಾರ ಬ್ಯಾಂಕುಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಕೃಷಿ ಅಲ್ವಾವಧಿ ಸಾಲ 5 ಲಕ್ಷ ರೂ., ಮಧ್ಯಮಾವಧಿ ಬಡ್ಡಿ ರಿಯಾಯಿತಿ ಯೋಜನೆಯಡಿ ಗರಿಷ್ಠ ಮಿತಿ 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಕೊಡಗು ಜಿಲ್ಲೆಯ ಖಾಯಂ ನಿವಾಸಿಗಳ ಮಕ್ಕಳು ದೇಶ ಮತ್ತು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಬ್ಯಾಂಕಿನಲ್ಲಿ “ವಿದ್ಯಾ ಸಹಕಾರ”ವೆಂಬ ವಿದ್ಯಾಭ್ಯಾಸ ಸಾಲದ ಯೋಜನೆಯನ್ನು ಗರಿಷ್ಠ 60 ಲಕ್ಷ ರೂ.ವರೆಗೆ ನೀಡಲಾಗುತ್ತಿದೆ ಎಂದರು.
ಕೃಷಿ ಸಾಲಕ್ಕೆ ಬೇಕಾಗುವ ಕಾಗದಪತ್ರಗಳು –
1. ಚಾಲ್ತಿ ಉತಾರ (RTC)
2. ಬ್ಯಾಂಕ ಸೆಟ್’ (ತಲಾಟಿ ಸೆಟ್) ಗ್ರಾಮ ಲೆಕ್ಕಾಧಿಕಾರಿಗಳಿಂದ ( ಖಾತೆ ಉತಾರ, ಹಾಥ ನಕಾಶ, ಪಂಚಮತಿ ಕಿಮ್ಮತ್ತು ಮತ್ತು ಬೇಬಾಕಿ ಪ್ರಮಾಣ ಪತ್ರಗಳು)
3. ಕೈಬರಹ ಉತಾರ 1990-91 ರಿಂದ 2000-01 ರವರೆಗೆ
4. ಕೈಬರಹ ಉತಾರದಲ್ಲಿರುವ ಎಲ್ಲ ಡೈರಿಗಳು
5. ಕಂಪ್ಯೂಟರ ಉತಾರ 2002-03 ರಿಂದ 2022-23 (ಇಲ್ಲಿಯವರೆಗೆ )
6. ಕಂಪ್ಯೂಟರ ಉತಾಗದಲ್ಲಿರುವ ಎಲ್ಲ ಎಮ್.ಆರ್.ಗಳು (M.R) ತಹಶೀಲ್ದಾರ ಆಫೀಸದಿಂದ
7. ಋಣಭಾರ ಪ್ರಮಾಣ ಪತ್ರ E.C (Encumbrance Certificate) 01-04-1990 ರಿಂದ 31-03-2004 ರವರೆಗೆ Sub-Registrar office ಮತ್ತು 01-04-2004 ರಿಂದ 2022-23( ಇಲ್ಲಿಯವರೆಗೆ) ONLINE
8. PKPS ಮತ್ತು ಇತರ ಬ್ಯಾಂಕ್‌ಗಳಿಂದ ಯಾವುದೇ ಬಾಕಿ ಪ್ರಮಾಣಪತ್ರಗಳಿಲ್ಲ.
9, ಖರೀದಿ’ ಪತ್ರ ಮತ್ತು ಅದರ ದೃಢೀಕರಣ ಪತ್ರ (Sale deed and certified copy ) ಅನ್ವಯಿಸಿದರೆ ಮಾತ್ರ
10. Reconveyance deed ಸಾಲ ಫೇಡಿ ಪತ್ರ ಅನ್ವಯಿಸಿದರೆ ಮಾತ್ರ.