ಕಳೆದ ಕೆಲವು ವರ್ಷಗಳಿಂದ ತೆಂಗಿಗೆ ಉತ್ತಮ ದರ ದೊರೆಯುತ್ತಿದೆ. ಆದರೆ ಕೊಬ್ಬರಿ ಬೆಲೆಯಲ್ಲಿ ಏರು ಪೇರುಗಳು ಕೆಲವೊಮ್ಮೆ ಸಂಕಷ್ಟಕ್ಕೀಡು ಮಾಡುತ್ತಿದೆ. ಎಲ್ಲದಕ್ಕೂ ತೆಂಗು ಅಗತ್ಯವಾಗಿರುವುದರಿಂದ ಅದಕ್ಕೆ ಬೇಡಿಕೆಯಂತು ಕಡಿಮೆಯಾಗುವುದಿಲ್ಲ. ಇತ್ತೀಚೆಗೆ ಎಳನೀರಿಗೆ ಬೇಡಿಕೆ ಇರುವ ಕಾರಣ ರೈತರು ಅದರತ್ತ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ.
ಹೀಗಾಗಿ ತೆಂಗಿನ ಕಾಯಿ ಮತ್ತು ಕೊಬ್ಬರಿ ಬಗ್ಗೆ ತಲೆಕೆಡಿಸಿಕೊಳ್ಳದೆ ಎಳನೀರನ್ನು ಪಡೆಯುವಂತಹ ತಳಿಗಳನ್ನು ಬೆಳೆಯುತ್ತಿರುವುದು ಕಂಡು ಬರುತ್ತಿದೆ. ಎಳನೀರಿಗೆ ಎಲ್ಲ ಕಾಲದಲ್ಲಿಯೂ ಬೇಡಿಕೆ ಇರುವ ಕಾರಣ ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಹೊರ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜಾಗುತ್ತಿದೆ.
ಎಳನೀರು ಬೆಳೆಗಾರರಿಗೆ ಹೆಚ್ಚಿನ ಆದಾಯ ತರುತ್ತಿದೆ. ಅದು ಒಂದೆಡೆಯಾದರೆ ಈಗಾಗಲೇ ಬೆಳೆದು ನಿಂತಿರುವ ಗಿಡ, ಮರಗಳನ್ನು ಕಾಪಾಡಿಕೊಳ್ಳುವುದು ಬೆಳೆಗಾರರಿಗೆ ಸವಾಲ್ ಆಗಿ ಪರಿಣಮಿಸಿದೆ. ಕಾರಣ ಮರಗಳಿಗೆ ತಗಲುತ್ತಿರುವ ರೋಗಗಳು ಮತ್ತು ಕೀಟಗಳ ಹಾವಳಿಯಿಂದ ಹತ್ತಾರು ವರ್ಷ ಕಷ್ಟಪಟ್ಟು ಬೆಳೆಸಿದ ಮರಗಳು ಸದ್ದಿಲ್ಲದೆ ಸತ್ತು ಹೋಗುತ್ತಿದೆ. ಹೀಗಾಗಿ ಅವುಗಳನ್ನು ರಕ್ಷಿಸುವ ಕಡೆಗೆ ಗಮನಹರಿಸಬೇಕಾಗಿದೆ.
ತೆಂಗು ಕೃಷಿಯಲ್ಲಿ ಎಚ್ಚರಿಕೆ ಅಗತ್ಯ
ಬೆಳೆಗಾರರು ಗಿಡಗಳನ್ನು ನೆಡುವಲ್ಲಿಂದ ಆರಂಭವಾಗಿ ಮರವಾದ ಮೇಲೂ ಅದರತ್ತ ಹೆಚ್ಚಿನ ಆಸಕ್ತಿ ವಹಿಸಿ ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ. ಬರಗಾಲದಲ್ಲೂ ಗಿಡಗಳು ಸದೃಢವಾಗಿರಲು ತೆಂಗಿನ ಸಸಿಗಳನ್ನು ಎರಡು ಅಡಿಗಿಂತಲೂ ಹೆಚ್ಚು ಆಳದ ಗುಂಡಿಗಳಲ್ಲಿ ನೆಡಬೇಕು. ಇದರಿಂದ ಬೇರುಗಳ ಸಂಖ್ಯೆ ಹೆಚ್ಚಾಗುವುದಲ್ಲದೆ. ಮಣ್ಣಿನಲ್ಲಿ ಆಳಕ್ಕೆ ಇಳಿಯುತ್ತದೆ. ಇದಕ್ಕೆ ತದ್ವಿರುದ್ಧವಾಗಿ ತೇಲಿಸಿ ನೆಟ್ಟು ಸಸಿಗಳಲ್ಲಿ ಬೇರುಗಳು ಸರಿಯಾಗಿ ವೃದ್ಧಿಸದೇ, ಭೂಮಿಯ ಮೇಲ್ಮಟ್ಟದಲ್ಲಿ ಕಾಣಿಸಿಕೊಂಡು ಬಿಸಿಲಿನ ಹೊಡೆತಕ್ಕೆ ಸಿಕ್ಕಿ ಸಾಯುವ ಸಾಧ್ಯತೆ ಇರುತ್ತದೆ.
ಕೆಂಪು ಕಪ್ಪು ಮಿಶ್ರಿತ ರಸ ಸೋರುತ್ತಿದೆಯಾ?
ಗಿಡಗಳಿಗೆ ಗೊಬ್ಬರ ನೀಡುವುದರ ಜತೆಗೆ ಗಿಡವೊಂದಕ್ಕೆ ಇನ್ನೂರೈವತ್ತು ಗ್ರಾಂ ಬೇವಿನ ಹಿಂಡಿ ಕೊಟ್ಟಲ್ಲಿ ಕೀಟಗಳ ಬಾಧೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರ ಜತೆಗೆ ಕೊಂಬಿನ ದುಂಬಿಯ ನಿವಾರಣೆಗೆ ಇಪ್ಪತೈದು ಗ್ರಾಂ ಸೆವೆಡಾಲ್ 8(ಜಿ) ಮತ್ತು ಇನ್ನೂರು ಗ್ರಾಂ ನುಣ್ಣನೆಯ ಮರಳನ್ನು ಮಿಶ್ರ ಮಾಡಿ ಸುಳಿಭಾಗದ ಕಂಕುಳದಲ್ಲಿ ಸುರಿಯಬೇಕು. ಇದೇ ಕೀಟನಾಶಕವನ್ನು ಮಣ್ಣಿಗೆ ಬೆರೆಸಿದರೆ ಗೆದ್ದಲು ನಾಶಗೊಳ್ಳುತ್ತದೆ. ಎಲೆ ಚುಕ್ಕೆ ರೋಗ, ಸುಳಿ ಕೊಳೆಯುವುದು ಮುಂತಾದವುಗಳ ಹತೋಟಿಗೆ ಶೇಕಡಾ 1 ರ ಬೋರ್ಡೊ ಅಥವಾ ಮತ್ತಾವುದಾದರೂ ತಾಮ್ರಯುಕ್ತ ಶಿಲೀಂದ್ರ ನಾಶಕದ ದ್ರಾವಣವನ್ನು ಸಿಂಪಡಿಸುವುದು ಒಳ್ಳೆಯದು.
ಕೆಂಪುಮೂತಿ ಹುಳು –
ಇನ್ನು ರಸ ಸೋರುತ್ತಿರುವ ಅಥವಾ ಹೊಟ್ಟು ಉದುರುತ್ತಿರುವ ರಂಧ್ರಗಳಿಗೆ, ಒಂದು ತಂತಿ ಅಥವಾ ಕಡ್ಡಿ ಇಲ್ಲವೇ ದೊಡ್ಡದಿದ್ದರೆ ಕೈ ಹಾಕಿ, ಒಳಗಿರುವ ಮರಿಹುಳುಗಳು, ಕೋಶಗಳು, ದುಂಬಿಗಳು ಮತ್ತು ಮೂತಿಹುಳುಗಳನ್ನು ಹೊರಗೆ ತೆಗೆದು ನಾಶಪಡಿಸಿ, ರಂಧ್ರವನ್ನು ಸ್ವಚ್ಚಗೊಳಿಸಬೇಕು. ನಂತರ ಆ ರಂಧ್ರಕ್ಕೆ ಫಿಪ್ರೋನಿಲ್ ಹರಳುಗಳನ್ನು 5 ರಿಂದ 10 ಗ್ರಾಂ, ಅಥವಾ ಆ ರಂಧ್ರದ ವಿಸ್ತೀರ್ಣಕ್ಕನುಗುಣವಾಗಿ 25 ರಿಂದ 30 ಗ್ರಾಂಗಳವರೆಗೆ ಹೆಚ್ಚಿಸಿ, ಹಾಕಬೇಕು.
ಒಂದು ವೇಳೆ ಫಿಪ್ರೋನಿಲ್ ಹರಳುಗಳು ದೊರಕದಿದಲ್ಲಿ, ಇಮಿಡಾಕ್ಲೋಪ್ರಿಡ್ 10 ಮಿಲಿ ಅಥವಾ ಸ್ಪೆನೋಸಾಡ್ 10 ಮಿಲಿ ಔಷಧವನ್ನು ಪ್ರತೀ ಲೀ ನೀರಿಗೆ ಬೆರೆಸಿ, ಆ ದ್ರಾವಣವನ್ನು ನೇರವಾಗಿ ಹೋಗುವುದಿದ್ದರೇ ರಂಧ್ರದ ಒಳಗೆ ಸುರಿಯಬೇಕು. ಇಲ್ಲವಾದಲ್ಲಿ ಒಂದು ಹತ್ತಿ ಅಥವಾ ಹತ್ತಿಯ ಬಟ್ಟೆ ಅಥವಾ ಗ್ಯಾರೇಜ್ ವೇಸ್ಟ್ ಬಟ್ಟೆಯಲ್ಲಿ ಅದ್ದಿ, ಅದನ್ನು ಒಳಗೆ ಸೇರಿಸಬೇಕು. ನಂತರ ಆ ರಂಧ್ರವನ್ನು ಹಸಿ ಸಗಣಿಯಿಂದ ಮುಚ್ಚಬೇಕು.
ಕಪ್ಪು ದುಂಬಿ (ಕುರುವಾಯಿ)
ಲಕ್ಷಣಗಳು –
ಈ ಕಿಡುವು ಎಲೆಗಳ ಸುಳಿಗಳ ಹಾಗೂ ಹೊಂಬಾಳೆಯ ಮೃದುವಾದ ಅಂಗಾಂಶಗಳನ್ನು ಕೊರೆದು ತಿಂದು, ನಾರಿನಂತಹ ಪದಾಥವನ್ನು ಹೊರಹಾಕುವುದರಿಂದ ಗಿಡವ ಕುರಿ ಮೊಗ್ಗು, ಚಿಗುರೆಲೆಗಳು ತಿರುಟಿ, ವಿರಾಪಗೊಂಡು, ಗಿಡವು ಗಮನಾರ್ಹ ನಷ್ಟ ಹೊಂದುತ್ತದೆ. ಹಾನಿಗೀಡಾದ ಚಿಗುರೆರೆಗಳು ಆರಳಿದ ಮೇಲೆ, ವಿಶಿಷ್ಟವಾದ ‘V’ ಆಕಾರದಲ್ಲಿ ಬೀಸಣಿಕೆಯಾಗಿ ಕಾಣಿಸಿಕೊಳ್ಳುತ್ತವೆ.
• ಕೊಳೆಯುವ ಮರದ ದಿಮ್ಮಿಗಳು ಮತ್ತು ಕಸಕಡ್ಡಿ ರಾಶಿಯು ಈ ಕೀಟದ ಸಂತಾನಾಭಿವೃದ್ಧಿ ಸ್ಥಳವಾಗಿರುವುದರಿಂದ ಇವುಗಳನ್ನು ದೂರಸಾಗಿಸಿ ತೋರುವನ್ನು ಸಂಭ್ರವಾಗಿಡಬೇಕು. ತೋಕುದಲ್ಲಿ ಈ ಕೀಟದ ಇರುವಿಕೆಯನ್ನು ನಿರಂತರವಾಗಿ ಪರೀಕ್ಷಿಸಿ ಸುಳಿಯೊಳಗೆ ಕಬ್ಬಿಣದ ಕೊಕ್ಕೆಗಳನ್ನು ನೋಡುವುದು.
• ಒಳವರ್ಸುಲದ ಎರಡು ಅಥವ ಮೂರು ಗರಿಗಳ ಬುಡದಲ್ಲಿ 12 ಗ್ರಾಂ ತೂಕದ ಜಿರಳೆ ಗುಳಿಗೆಯನ್ನು ಮರಳನೊಂದಿಗೆ ಹಾಕಿ ಮುಚ್ಚಬೇಕು. ಅಥವ 230 ಗ್ರಾಂ ಕಹಿ ಬೇವಿನ ಹಿಂಡಿ/ ಮರೊಟ್ಟಿ/ಮೊಂಗಮಿಯ ಹಿಡಿಯೊಂದಿಗೆ ಅಷ್ಟೆ ಗಾತ್ರದ ಮರಳನ್ನು ಸೇರಿಸಿ ಮೇ. ಸಪ್ಟೆಂಬರ್ aserte fonos Bo • ಗೊಬ್ಬರದ ಗುಂಡಿ ಮತ್ತು ಸಾವಯವ ಗೊಬ್ಬರದಲ್ಲಿ ಕಾಣುವ ಹುಳುಗಳನ್ನು ನಾಶಮಾಡಲು ಮುಂಬೈಸಿಯಂ ಎರೈಸೋಷ್ಠಿಯ ಎಂಬ ಹಸಿರು ಶೀರೇಂದ್ರವನ್ನು ತೆಂಗಿನ ನೀರು ಅಥವ ಮರಗೆಣಸಿನ ತುಂಡು ಹಾಗೂ ತೇರಿನ ಮಿಶ್ರಣದಲ್ಲಿ ಉಬ್ಬರಿಸಿ 2 ಗ್ರಾಂ. ಶಿಲಿಂದ್ರವನ್ನು ಮಿಶ್ರಣ ಮಾಡಬೇಕು.
ಕೆಂಪು ಮೂತಿ ದುಂಬಿ –
ಈ ಕೇಲವು ತೆಂಗಿನ ಮರದ ಮೃದುವಾದ ಅಂಗಾಂಶ, ಸುಳಿಭಾಗ ಹಾಗೂ ಹತ್ತಿರದ ಕಾಂಡಕ್ಕೆ ದಾಳಿಮಾಡುತ್ತದೆ. ಇದರ ದಾಳಿಯಿಂದಾಗಿ ಜಂಡದಲ್ಲಿ ರಂಧ್ರಗಳು ಕಾಣಿಸಿಕೊಂಡು ಅವುಗಳಿಂದ ಕಂದು ಬಣ್ಣದ ನಾರಿನಂತಹ ಪದಾರ್ಥ ಹೊರಸೂಸುತ್ತದೆ.
ಮರದ ಯಾವುದೇ ಗರಿಗಳನ್ನು ಕತ್ತರಿಸುವಾಗ ಕಾಂಡದಿಂದ 1 ಮೀ. ಉದ್ದ ಬಿಟ್ಟು ಉಳಿದ ಭಾಗ ಕತ್ತರಿಸಿ, ಮೃದುವಾದ ಅಂಗಾಂಶಗಳಿಗೆ ಗಾನುವಾಗದಂತೆ ನೋಡಿಕೊಳ್ಳಬೇಕು ಮತ್ತು ತೋಡಿದ ಸ್ಥತೆಯನ್ನು ಕಾಪಾಡಿಕೊಳ್ಳಬೇಕು.
ಈ ಕೀಟ ಬಾಧೆಯು ಹೆಚ್ಚಿನ ಸಂಖ್ಯೆಯಲ್ಲಿ ಹರಡುವುದನ್ನು ನಿವಾರಿಸಲು ಬಾಧೆಗೊಳಗಾದ ಮರಗಳನ್ನು ಕತ್ತರಿಸಿ, ಅವಗಳನ್ನು ಸುಟ್ಟು ಹಾಕಬೇಕು. ತೆಂಗನ್ನು ಏಕಬೆಳೆಯಾಗಿ ಬೆಳೆದ ತೋಟಕ್ಕಿಂತ, ಬೇರೆ ಬೇರೆ ಹಣ್ಣು ಮತ್ತು ಸಾಂಬಾರು ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆದ ತೋಟದಲ್ಲಿ ಈ ಕೀಟದ ಹಾವಳಿಯು ಕಡಿಮೆಯಾಗಿರುವುದು.