ರೈತರಿಗೆ ಸರ್ಕಾರದ ಲಾಭ ಪಡೆಯಲು ಯಾವ ದಾಖಲೆಗಳು ಬೇಕು? ಬನ್ನಿ ಯಾವ ಯಾವ ದಾಖಲೆಗಳ ಅಗತ್ಯ ಎಂದು ತಿಳಿಯೋಣ.
ರೈತರಿಗೆ ಫ್ರುಟ್ ಐಡಿ ಏಕೆ ಬೇಕು ಎಂಬುದನ್ನು ತಿಳಿಯೋಣ. ಮುಖ್ಯವಾಗಿ ಫ್ರುಟ್ ಐಡಿ ಇದ್ದರೆ ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಹಾಗೂ ರೈತರು ಎಷ್ಟು ಸರ್ಕಾರದ ಯೋಜನೆ ಹಾಗೂ ಸರ್ಕಾರದ ಕಡೆಯಿಂದ ಯಾವ ಯಾವ ಬೀಜ, ಗೊಬ್ಬರ, ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದನ್ನು ಸುಲಭವಾಗಿ ನೋಡಬಹುದು. ಅದೇ ರೀತಿ ಫ್ರುಟ್ ಐಡಿಯಿಂದ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರವು ಸ್ಕಾಲರ್ಶಿಪ್ ಅನ್ನು ಅಂದರೆ ರೈತ ವಿದ್ಯಾನಿಧಿ ಹಣವನ್ನು ರೈತರ ಮಕ್ಕಳಿಗೆ ಅವರ ಫ್ರುಟ್ ಐಡಿ ಮೂಲಕ ಹಾಕುತ್ತಾರೆ.
ಫ್ರುಟ್ಸ ಐಡಿ/FID ಪಡೆಯಲು ಬೇಕಾಗುವ ದಾಖಲೆಗಳು –
• ಅರ್ಜಿ ಫಾರ್ಮ್
• ಆಧಾರ್ ಕಾರ್ಡ್
• ಉತಾರ (ಪಹಣಿ)
• ಇತ್ತೀಚೆಗೆ ತೆಗೆದುಕೊಂಡ ಭಾವಚಿತ್ರ
• ಬ್ಯಾಂಕ್ ಪಾಸ್ ಬುಕ್
ಮುಖ್ಯವಾಗಿ ಯಾವುದೇ ಸಬ್ಸಿಡಿ ಪಡೆಯಲು ಬೇಕಾಗುವ ದಾಖಲೆಗಳು –
• ಅರ್ಜಿ ಫಾರ್ಮ್
• ಆಧಾರ್ ಕಾರ್ಡ್
• 20 ರೂಪಾಯಿ ಬಾಂಡ್
• ಉತಾರ (ಪಹಣಿ)
• ಇತ್ತೀಚೆಗೆ ತೆಗೆದುಕೊಂಡ ಭಾವಚಿತ್ರ
• ಬ್ಯಾಂಕ್ ಪಾಸ್ ಬುಕ್
• ಎಸಿ ಎಸ್ಟಿ ಸದಸ್ಯರು ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು.
ಹೀಗೆ ರೈತರು ತಾವು ಸರ್ಕಾರದ ಕಡೆಯಿಂದ ಬರುವ ಯಾವುದೇ ಸಬ್ಸಿಡಿ ಪಡೆಯಲು ಎಲ್ಲ ದಾಖಲೆಗಳು ಕಡ್ಡಾಯವಾಗಿ ಹೊಂದಿರಬೇಕು. ರೈತರು ದಾಖಲೆಗಳನ್ನು ತೆಗೆದುಕೊಂಡು ಹತ್ತಿರ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬೇಕು. ರೈತರು ಕೃಷಿಯಲ್ಲಿ ಹೆಚ್ಚಿನ ತಾಂತ್ರಿಕತೆಗೆ ಪ್ರೋತ್ಸಾಹ ನೀಡಿ ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ರೈತರು ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು.
ಕರ್ನಾಟಕ ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಅಭಿವೃದ್ಧಿ ನಿಗಮಗಳ ವಿವಿಧ ಯೋಜನೆಗಳು ಹಾಗೂ ಪ್ರಮುಖವಾಗಿ ಸ್ವಯಂ ಉದ್ಯೋಗ ನೇರ ಸಾಲ ಸೌಲಭ್ಯ ಪಡೆಯಲು, ಅರ್ಜಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು
ದೂರವಾಣಿ ಸಂಖ್ಯೆ: 08375 – 234408 / ಕಲ್ಯಾಣ ಮಿತ್ರ ಸಹಾಯವಾಣಿ ಸಂಪರ್ಕ ಸಂಖ್ಯೆ 9482300400.
ಅದೇ ರೀತಿ ರೈತರು ಸರ್ಕಾರರ ಯೋಜನೆ ಪಡೆದುಕೊಳ್ಳಲು ಕೆಲವು ನಿಯಮಗಳನ್ನು ಸರ್ಕಾರವು ರೂಪಿಸಿದೆ. ಸರ್ಕಾರವು ಕೃಷಿ ಹಾಗೂ ಹಲವಾರು ಯೋಜನೆಗಳನ್ನು ರೂಪಿಸಿದ್ದು ರೈತರ ಆದಾಯ ದ್ವಿಗುಣಗೊಳಿಸಲು ಸಹಕಾರ ಸಂಘಗಳ, ಹಾಗೂ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಅದೇ ರೀತಿ ರೈತರು ಯಾವುದೇ ಸರ್ಕಾರದ ಸೌಲಭ್ಯ ಅಥವಾ ಸರ್ಕಾರದ ಕಡೆಯಿಂದ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಮುಖ್ಯವಾಗಿ ದಾಖಲೆಗಳ ಅವಶ್ಯಕತೆ ಇದೆ.
ಅದೇ ರೀತಿ ಈಗಿನ ಸದ್ಯದ ಕೃಷಿಯಲ್ಲಿ ಅತಿಯಾದ ನೀರಿನ ಬಳಕೆಯಿಂದ ಸವಳು ಜವಳು ಸಮಸ್ಯೆ ಕಾಡುತ್ತದೆ. ಅದೇ ರೀತಿ ಭೂಮಿಯಲ್ಲಿ ನಿರಂತರ ನೀರು ನಿಲ್ಲುವುದರಿಂದ ಮಣ್ಣಿನ ಗುಣಮಟ್ಟ ಪೂರ್ತಿ ಹಾಳಾಗುತ್ತಿದೆ. ಅದಕ್ಕಾಗಿ ರೈತರು ಈಗ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆ ಅಳವಡಿಸಿಕೊಳ್ಳುವುದರಿಂದ ಉತ್ತಮ ಫಲವತ್ತತೆ ಕಾಯ್ದುಕೊಳ್ಳುವುದರ ಜೊತೆಗೆ ಹೆಚ್ಚು ಇಳುವರಿ ಹೊಂದಲು ಸಾಧ್ಯವಿದೆ. ಮಳೆ ನೀರಿನಿಂದ ಮಣ್ಣು ಕೊಚ್ಚಿ ಹೋಗದಂತೆ ರೈತರು ಅಲ್ಲಲ್ಲಿ ಬದುಗಳನ್ನು ನಿರ್ಮಿಸಿಕೊಳ್ಳುವುದು ಬಹಳ ಅವಶ್ಯಕ.