ಪ್ರೀತಿಯ ಓದುಗರೇ ಇವತ್ತು ರೈತರಿಗೆ ಸಂತಸ ನೀಡುವ ಸುದ್ದಿಯನ್ನು ತಂದಿದ್ದೇನೆ. ಕೂಡಲೇ ರೈತರು ಈ ವಿಷಯವನ್ನು ಸಂಪೂರ್ಣ ಓದಿ. ರಾಜ್ಯದಲ್ಲಿ ಅರ್ಹರೆಂದು ಗುರುತಿಸಲಾದ 19,82,677 ರೈತರನ್ನು ಒಳಗೊಂಡ 17,84,398 ಸಣ್ಣ, ಅತಿ ಸಣ್ಣ ರೈತ ಕುಟುಂಬಳಿಗೆ ಜೀವನೋಪಾಯ ನಷ್ಟ ಪರಿಹಾರ ವಿತರಣೆ ಪ್ರಕ್ರಿಯೆಗೆ ಚಾಲನೆ ದೊರತಿದೆ. ಸದ್ಯದಲ್ಲೇ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ. ಮಳೆಯಾಶ್ರಿತ ಪ್ರದೇಶದ ಪ್ರತಿ ಹೆಕ್ಟೇರ್‌ಗೆ 8,500 ರೂ. ನೀರಾವರಿಯಾದರೆ 17 ಸಾವಿರ ರೂ., ಬಹುವಾರ್ಷಿಕ ಬೆಳೆಯಾದರೆ 22,500 ರೂ. ನಿಗದಿ ಮಾಡಲಾಗಿದೆ. ಇದರಲ್ಲಿ ಗರಿಷ್ಠ ಎರಡು ಸಾವಿರ ರೂ. ಐದು ಎಕರೆಗೆ ಮಾತ್ರ ಪರಿಹಾರ ನೀಡಲಾಗುತ್ತದೆ.
ಕಳೆದ ವರ್ಷ ತೀವ್ರ ಬರದಿಂದಾಗಿ 223 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಬರದಿಂದ ಆರ್ಥಿಕವಾಗಿ ಹಿಂದುಳಿದ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಆ ಕುಟುಂಬದವರ ಜೀವನೋಪಾಯಕ್ಕೆ ಆರ್ಥಿಕ ನೆರವು ನೀಡಿ ಸಹಾನುಭೂತಿ ಹೇಳುವ ನಿಟ್ಟಿನಲ್ಲಿ ಜೀವನೋಪಾಯ ನಷ್ಟ ಪರಿಹಾರ ಒಟ್ಟು 19,82,677 ರೈತರನ್ನು ಒಳಗೊಂಡ 17,84,398 ಮಳೆಯಾಶ್ರಿತ/ ಒಣಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳನ್ನು ಜೀವನೋಪಾಯ ಪರಿಹಾರ ಪಡೆಯಲು ಗುರುತಿಸಲಾಗಿದೆ. ಪ್ರತಿ ಕುಟುಂಬಕ್ಕೆ ಗರಿಷ್ಠ 2874 ರೂ. ಪಾವತಿಗೆ 512.92 ಕೋಟಿ ರೂ. ಅಗತ್ಯವಿದೆ. ಎನ್‌ಡಿಆರಫ್‌ನಡಿ ಕೇಂದ್ರ 232.40 ಕೋಟಿ ರೂ. ನೀಡಿದೆ. ಪ್ರಸಕ್ತ 2024-25ನೇ ಸಾಲಿನ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಹಂಚಿಕೆಯಾಗಿರುವ 488 ಕೋಟಿ ರೂ. ಪೈಕಿ ಶೇ.50ರಷ್ಟನ್ನು ಅಂದರೆ 244 ಕೋಟಿ ರೂ. ಹಾಗೂ ಉಳಿಕೆ 36.52 ಕೋಟಿ ರೂ.ಗಳನ್ನು ರಾಜ್ಯದಿಂದ ಹೆಚ್ಚುವರಿಯಾಗಿ ಭರಿಸಲಾಗುತ್ತಿದೆ.
ಬರಗಾಲ ಬಾಧಿತ ಪ್ರದೇಶದ ರೈತರಿಗೆ ಮೊದಲ ಕಂತಿನಲ್ಲಿ ತಲಾ ಎರಡು ಸಾವಿರ ರೂ. ಪರಿಹಾರ ವಿತರಣೆಗೆ ತಾಂತ್ರಿಕ ವಿಘ್ನ ಎದುರಾಗಿದ್ದು, ರಾಜ್ಯ ಸರ್ಕಾರ ಸಂದಿಗ್ಧಕ್ಕೆ ಸಿಲುಕಿದೆ.
ರೈತರಿಗೆ ಪರಿಹಾರ ಧನ ಲಭ್ಯವಾಗಿಲ್ಲ. ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಸರ್ಕಾರ ಚುರುಕಾಗಿ ಕ್ರಮ ಕೈಗೊಂಡಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲ ರೈತರಿಗೂ ಪರಿಹಾರ ಧನ ಲಭ್ಯವಾಗುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರ ಮೊದಲ ಕಂತಿನ ರೂಪದಲ್ಲಿ ಡಿಬಿಟಿ ಮೂಲಕ ಗರಿಷ್ಠ 2 ಸಾವಿರ ರೂ.ವರೆಗೆ ನೀಡಲಾಗುತ್ತದೆ. ಅದರ ಜೊತೆಗೆ ಕೇಂದ್ರ ಸರ್ಕಾರದ ಹಣವನ್ನು ಸಹ ಬಿಡುಗಡೆ ಮಾಡಿದ್ದಾರೆ.
ಬರದಿಂದ ಆರ್ಥಿಕವಾಗಿ ಹಿಂದುಳಿದ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಆ ಕುಟುಂಬದವರ ಜೀವನೋಪಾಯಕ್ಕೆ ಆರ್ಥಿಕ ನೆರವು ನೀಡಿ ಸಹಾನುಭೂತಿ ಹೇಳುವ ನಿಟ್ಟಿನಲ್ಲಿ ಜೀವನೋಪಾಯ ನಷ್ಟ ಪರಿಹಾರ ವಿತರಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ. ಅದೇ ರೀತಿ ಈಗ ಜಮೀನಿನ ಮಾಹಿತಿ ಅಪ್ಡೇಟ್ ಮಾಡಲು ರೈತರಿಗೆ ಅವಕಾಶ ನೀಡಲಾಗಿತ್ತು. ಇದೀಗ ಮೊದಲ ಕಂತು ಜಮಾ ಮಾಡಲು ತಯಾರಿ ಮಾಡಿಕೊಳ್ಳುವಂತೆ ಕಂದಾಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದ ಎಷ್ಟು ತಾಲೂಕು ಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದ್ದೀರಿ? ಪರಿಹಾರ ಬಿಡುಗಡೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ರವಿಕುಮಾರ್ ಸಚಿವರು ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಒಟ್ಟು 4 ಸಾವಿರ ಕೋಟಿ ರೂ. ಪರಿಹಾರ ಕೊಡುವುದಕ್ಕೆ ಚಿಂತಿಸುತ್ತಿದ್ದೇವೆ. ಬರ ನಿರ್ವಹಣೆಗೆ ಕೇಂದ್ರ ಸರ್ಕಾರಕ್ಕೆ 18,200 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದೇವೆ. ಕೇಂದ್ರಕ್ಕೆ ಎನ್‌ಡಿಆರ್‌ಎಫ್ ಅಡಿ ಆರ್ಥಿಕ ನೆರವು ನೀಡುವಂತೆ ಕೇಂದ್ರಕ್ಕೆ ಕೋರಿದ್ದೇವೆ. ಹಣ ಬಿಡುಗಡೆಯಾದರೆ ಅನುಕೂಲವಾಗುತ್ತದೆ ಎಂದರು.
ಅದೇ ರೀತಿ ಈಗ ಗಮನಿಸಬೇಕಾದ ಅಂಶವೆಂದರೆ ಬರ ಪರಿಹಾರ ಬಿಡುಗಡೆ ತಡ ಆಗಲು ಕಾರಣ ಏನು?
ಸರ್ಕಾರದ ಸೂಚನೆಯಂತೆ ‘ಫೂಟ್ಸ್ ಆ್ಯಪ್’ನಲ್ಲಿ ರೈತರು ನೋಂದಣಿ ಮಾಡಿಕೊಂಡಿದ್ದು, ಒಂದೇ ಸರ್ವೇ ನಂಬರ್, ಒಂದೇ ಪಹಣಿ ಪತ್ರದಲ್ಲಿ (ಆರ್‌ಟಿಸಿ) ಬಹು ರೈತರ ಹೆಸರುಗಳಿವೆ. ಅಗತ್ಯವಾದ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ ಜೋಡಿಸಿದ್ದರೂ, ಒಂದೇ ಕುಟುಂಬದ ಸದಸ್ಯರು ಬೇರೆ ಬೇರೆಯಾದ ನಂತರ ಆಯಾ ಹೆಸರಿಗೆ ನಿರ್ದಿಷ್ಟ ಜಮೀನಿನ ಮಾಲೀಕತ್ವ ವಿಂಗಡಣೆಯಾಗಿಲ್ಲ.
ಅದೇ ರೀತಿ ಈಗಾಗಲೇ ರಾಜ್ಯದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಅದೇ ರೀತಿ ಈಗ ಸರ್ಕಾರವು ಸಹ ರೈತರು ಹಾಗೂ ಸಾರ್ವಜನಿಕರ ಮನೆ ಬಾಗಿಲಿಗೆ ಬರಲು ತಯಾರಿ ನಡೆಸಿದೆ. ಹೌದು ಏನು ಇವತ್ತಿನ ಈ ಲೇಖನದ ಉದ್ದೇಶ ಎಂದರೆ ಇದನ್ನು ನಿವಾರಿಸಲು ಸರ್ಕಾರ ಪಂಚಮಿತ್ರ ವಾಟ್ಸ್ಆ್ಯಪ್ ಚಾಟ್ ಆರಂಭಿಸಿದೆ. ಈ ಪೋರ್ಟಲ್‌ನಲ್ಲಿ ಬಳಕೆದಾರರು 2,650ಕ್ಕೂ ಹೆಚ್ಚು ಕುಂದು-ಕೊರತೆ ದಾಖಲು ಮಾಡಿದ್ದಾರೆ. ಅನೇಕ ಸವಲತ್ತು, ಸೇವೆಗಳನ್ನು ಪಡೆದುಕೊಂಡಿದ್ದಾರೆ.
ಈಗಾಗಲೇ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ‘ಪಂಚಮಿತ್ರ’ ವಾಟ್ಸ್ಆ್ಯಪ್ ಚಾಟ್‌ಗೆ ಚಾಲನೆ ನೀಡಿದ್ದು, ರಾಜ್ಯದಲ್ಲಿ ಇದರ ಬಗ್ಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ. ಸೇವೆ ಆರಂಭಿಸಿ 70 ದಿನದಲ್ಲಿ 88,000ಕ್ಕೂ ಹೆಚ್ಚು ಜನ ಬಳಕೆದಾರರಾಗಿದ್ದಾರೆ. ಈಗಾಗಲೇ ವಾಟ್ಸಾಪ್ ಮುಖಾಂತರ ಜನರ ಮನೆ ಬಾಗಿಲಿಗೆ ಸರ್ಕಾರವು ಬರಲು ಸಿದ್ಧವಾಗಿದೆ. ಜನರ ತೊಂದರೆಗಳನ್ನು ಮನೇಲ್ಲಿ ಕುಳಿತು ನಿಮ್ಮ ಊರಿನ ತೊಂದರೆಗಳನ್ನು ಹಂಚಿಕೊಳ್ಳುವ ಹಾಗೂ ಪರಿಹಾರ ಕಂಡುಕೊಳ್ಳುವ ಯೋಜನೆ ಇದಾಗಿದೆ.
ಗ್ರಾಮೀಣ ಜನತೆಗೆ ಗ್ರಾಮ ಪಂಚಾಯ್ತಿಯ ಸೇವೆಗಳನ್ನು ಸುಗಮವಾಗಿ ಒದಗಿಸುವ ಸಲುವಾಗಿ ರೂಪಿಸಿದ ವಿನೂತನವಾದ ಪಂಚಮಿತ್ರ ವಾಟ್ಸಾಪ್ ಚಾಟ್ ಯೋಜನೆಗೆ ಅಭೂತಪೂರ್ವ ಸ್ಪಂದನೆ ದೊರಕಿದೆ. ಸಾರ್ವಜನಿಕರು ಪಂಚಮಿತ್ರ ವಾಟ್ಸಾಪ್ ಚಾಟ್ ಬಳಸಿ ತಮ್ಮ ಕುಂದು ಕೊರತೆಗಳನ್ನು ದಾಖಲಿಸಿ ತಾವಿದ್ದ ಜಾಗದಿಂದಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪಂಚಮಿತ್ರ ವಾಟ್ಸಾಪ್ ಚಾಟ್ ಸಂಖ್ಯೆ- 8277506000