ರೈತರೇ ರಾಜ್ಯದಲ್ಲಿ ಹಲವು ಬದಲಾವಣೆಗಳನ್ನು ತರಲು ಸರ್ಕಾರವು ಮುಂದಾಗಿದೆ ಆದರೆ ರೈತರು ಸಹ ಇದಕ್ಕೆ ಸ್ಪಂದನೆ ನೀಡಬೇಕಿದೆ. ಮುಖ್ಯವಾಗಿ ಹೇಳಬೇಕೆಂದರೆ ರೈತರಿಗೆ ಸರ್ಕಾರವು ಬರ ಪರಿಹಾರ(drought fund)ಹಣ ಪಡೆಯಲು ಎಫ್ ಐಡಿ (FID) ಕಡ್ಡಾಯವಾಗಿದೆ ಎಂದು ಹೇಳಲಾಗಿದೆ. ಆದರೆ ರೈತರು ಇನ್ನೂ ಹಲವಾರು ಯೋಜನೆಗಳಿಗೆ ಸದುಪಯೋಗ ಪಡೆದುಕೊಳ್ಳದೆ ಇರುವುದಕ್ಕೆ ಈ ಐಡಿ ಮುಖ್ಯ ಕಾರಣವಾಗಿದೆ. ಅದಕ್ಕೆ ರೈತರು ಕೂಡಲೇ ಅರ್ಜಿ ಸಲ್ಲಿಸಿ ಎಫ್ ಐಡಿ (FID) ಪಡೆಯಿರಿ. 8 ಲಕ್ಷ ರೈತರಿಗೆ ಬರ ಪರಿಹಾರ ಸಿಗದೇ ಇರುವುದು ಬಹಳ ತೊಂದರೆ ಉಂಟಾಗಿದೆ. 8 ಲಕ್ಷ ರೈತರಿಗೆ ಬರಪರಿಹಾರ (drought fund)ಹಣ ಬರದೆ ಇರುವುದಕ್ಕೆ ಕಾರಣ ಏನು ಎಂದು ಇಲ್ಲಿದೆ ನೋಡಿ.
ತೀವ್ರ ಬರದಿಂದಾಗಿ ರೈತರು ಮಧ್ಯಂತರ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಅದರೀಗ ಕೆಲ ಕಾನೂನು ತೊಡಕು, ಕೃಷಿ ಭೂಮಿ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಯಾಗಿರುವುದು, ಸರ್ಕಾರ ಭೂಮಿ ಸ್ವಾಧೀನ ಪಡಿಸಿಕೊಂಡಿರುವುದು, ಆಸ್ತಿ ದಾಖಲೆ ಸಮಸ್ಯೆಯಿಂದ ಯಾರಿಗೆ ಪರಿಹಾರ ವಿತರಿಸಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ.
ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್.ಐ.ಡಿ(FID) ಮಾಡಿಸಿಕೊಳ್ಳಬೇಕು, ಹಳ್ಳಿವಾರು ರೈತರ ಎಫ್.ಐ.ಡಿ(FID) ಈಗಾಗಲೇ ಆಗದೇ ಇದ್ದವರ ಲಿಸ್ಟ್(LIST) ಆಯಾ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ನೋಟಿಸ್ ಬೋರ್ಡ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ನೀವು ಸಹ ನಿಮಗೆ ಎಫ್ ಐಡಿ ಆಗದೆ ಇರುವವರ ಲಿಸ್ಟ್ ಸಿಕ್ಕಿದ್ದರೆ ನಿಮ್ಮ ಹೆಸರು ಚೆಕ್ ಮಾಡಿ ಪರಿಶೀಲನೆ ನಡೆಸಿ. ಒಂದು ವೇಳೆ ನಿಮಗೆ ಸಂಬಂದಿಸಿದ ಎಲ್ಲಾ ಸರ್ವೇ ನಂಬರ್ಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಿ, ಜಂಟಿ ಖಾತೆದಾರರಾಗಿದ್ದಲ್ಲಿ ಪ್ರತಿಯೊಬ್ಬ ಖಾತೆದಾರರು ಪ್ರತ್ಯೇಕವಾಗಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು.
8ಲಕ್ಷ ರೈತರಿಗೆ ಪರಿಹಾರ ಹಣ ಬಿಡುಗಡೆ ಸಮಸ್ಯೆಗೆ ಏನು ಕಾರಣ ?(Problem for not releasing drought fund)
ಸಾವಿರಾರು ರೈತ ಕುಟುಂಬದಲ್ಲಿ ಕದನ ಪೂರ್ವಜದ ಹೆಸರಲ್ಲೇ ಆಸ್ತಿ ಉಳಿದಿದೆ. ಆಸ್ತಿ ಹಕ್ಕುದಾರರಿಗಷ್ಟೇ ಪರಿಹಾರ ನೀಡಿಕೆ ಆಸ್ತಿ ಹಂಚಿಕೆಗಾಗಿ ಕುಟುಂಬದಲ್ಲಿ ಗಲಾಟೆ, ಹೀಗಾಗಿ ಹಲವರು ಫೂಟ್ಸ್ ಐಡಿ ಮಾಡಿಲ್ಲ ಪ್ರತಿ ಗ್ರಾಪಂನಲ್ಲಿ ಇಂತಹ ಕನಿಷ್ಠ 30 ಕೇಸ್ ಇವೆ. ಒಬ್ಬರೇ ಹಕ್ಕುದಾರರಿರುವೆಡೆ ಸಮಸ್ಯೆ ಇಲ್ಲ ಇಬ್ಬರಿಗಿಂತ ಹೆಚ್ಚು ಹಕ್ಕುದಾರರಿದ್ದರೆ ಸಮಸ್ಯೆ ಯಾರಿಗೆ ಪರಿಹಾರ ಕೊಡಬೇಕೆಂಬ ಗೊಂದಲ ಸರ್ಕಾರದಲ್ಲಿ ಎದುರಾಗಿದೆ.
ಮುಖ್ಯವಾಗಿ ಹೇಳಬೇಕೆಂದರೆ ಈಗಾಗಲೇ ಕೇಂದ್ರ ಸರ್ಕಾರವು ಸಹ ಬರ ಪರಿಹಾರ ಹಣ ಬಿಡುಗಡೆ ಅನುಮತಿ ನೀಡಿದೆ. ಆದರೆ ಬರ ಪರಿಹಾರ ಪಡೆಯಲು ಮುಂದಾಗಿದ್ದ 8 ಲಕ್ಷ ರೈತರಿಗೆ ಆಘಾತ ಎದುರಾಗಿದೆ. ಫೂಟ್ಸ್ ಐಡಿ (FID)ಹೊಂದದೆ ಇರುವ
ಆಸ್ತಿ ಹಕ್ಕಿನ ತಾಂತ್ರಿಕ ಸಮಸ್ಯೆ ಪರಿಹಾರ ವಿತರಣೆಗೆ ತೊಡಕಾಗಿ ಪರಿಣಮಿಸಿದೆ. ಸರ್ಕಾರವು ಈಗಾಗಲೇ ಎಫ್ ಐಡಿ ಕಡ್ಡಾಯ ಎಂದು ಹೇಳಿತ್ತು. ಆದರೆ ಯಾವ ರೈತರು ಸಹ ಇನ್ನೂ ಎಫ್ ಐಡಿ ಮಾಡಿಸಿಲ್ಲ. ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫೂಟ್ಸ್) ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಲಕ್ಷಾಂತರ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ.
ಯಾವ ಯಾವ ತೊಂದರೆಗೆ ರೈತರು ಸಿಲುಕಿದ್ದಾರೆ?
* ಮುಖ್ಯವಾಗಿ ಹೇಳಬೇಕೆಂದರೆ ರೈತರು ಪೂರ್ವಜರ ಆಸ್ತಿ ತಮ್ಮ ಹೆಸರು ನೊಂದಾಯಿಸದೆ ಇರುವುದು.
* ಹಲವಾರು ರೈತರ ಆಸ್ತಿ ದಾಖಲೆ ಸಮಸ್ಯೆ ಇದೆ.
* ರಾಜ್ಯದಲ್ಲಿ ಭಾರಿ ಮಳೆ ಕೊರತೆ ಉಂಟಾಗಿ. ಬಹುತೇಕ ಕುಟುಂಬಗಳ ಆಸ್ತಿಯ ಮಾಲೀಕರು ಎಂದೋ ಮೃತರಾಗಿದ್ದಾರೆ.
* ಮುಂದಿನ ವಾರಸುದಾರರಿಗೆ ಆಸ್ತಿ ಹಂಚಿಕೆಯಲ್ಲಿ ಎಫ್ ಐಡಿ ಮಾಡಿಸದೇ ಇರುವುದು.
* ಪಹಣಿ (ಉತಾರ್) ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇರುವುದು.
ಬರ ಪರಿಹಾರ ಸ್ಟೇಟಸ್ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ.
http://www.samrakshane.karnataka. gov ಇಲ್ಲಿ ಕ್ಲಿಕ್ ಮಾಡಿ.
• ನಂತರ ಅಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಿ.
• ನಂತರ ಅಲ್ಲಿ ಕೇಳಲಾದ ಕ್ಯಾಪ್ಚ್ಯಾ ಹಾಕಬೇಕು.
• ನಂತರ ಅಲ್ಲಿ ನಿಮ್ಮ ಸಂಪೂರ್ಣ ಬರ ಪರಿಹಾರ ಯಾವ ವರ್ಷದ ಬೇಕಾಗಿದೆ ಅದರ ಮಾಹಿತಿ ದೊರೆಯುತ್ತದೆ.