ಪ್ರೀಯ ರೈತರೇ ನಿಮ್ಮ ಮಕ್ಕಳಿಗೆ ಗುಡ್ ನ್ಯೂಸ್! ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸ್ವಲ್ಪ ಮಾಹಿತಿ ತಿಳಿಯೋಣ ಬನ್ನಿ. ರೈತರ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರವು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಪರೀಕ್ಷೆ ಹಾಗೂ ರೈತರು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರವು ಮುಂದಾಗಿದೆ. ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ 2024-25ರ ಸ್ನಾತಕ ಪದವಿಗಳ ಪ್ರವೇಶಾತಿಗೆ ಪೂರಕವಾಗಿ ನಡೆಸುವ ಕೃಷಿಕರ ಕೋಟಾದ ಆನ್ ಲೈನ್ ದಾಖಲಾತಿ ಪರಿಶೀಲನೆ ಕುರಿತು.
ಸ್ನಾತಕ ಪದವಿಗಳಿಗೆ ಕೃಷಿಕರ ಕೋಟಾದಡಿಯಲ್ಲಿ (50%) ಪ್ರವೇಶಾತಿ ಸಂಬಂಧಿಸಿದಂತೆ ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಸಲ್ಲಿಸುವ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲನೆ ಕೈಗೊಳ್ಳಲಾಗುವುದು. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸುವಾಗ ಯಾವ ಕೇಂದ್ರದಲ್ಲಿ ದಾಖಲಾತಿ ಪರಿಶೀಲನೆಗೆ ಆಯ್ಕೆ ಮಾಡಲಾಗಿರುತ್ತದೆಯೋ ಅದೇ ಕೇಂದ್ರಗಳಲ್ಲಿ ಸಂಬಂಧಿತ ವಿಶ್ವವಿದ್ಯಾನಿಲಯಗಳಿಂದ ನಿಯೋಜಿಸಿದ ಸಮಿತಿ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತದೆ.
ಆನ್‌ಲೈನ್ ಪರಿಶೀಲನೆಗಾಗಿ ಮೂಲ ದಾಖಲೆಗಳನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಮಾರ್ಗಸೂಚಿಗಳು
ಕೆ.ಇ.ಎ. ಅರ್ಜಿ ನಮೂನೆಯಲ್ಲಿ ವಿದ್ಯಾರ್ಥಿಗಳು ಈ ಮೊದಲು ಅವರುಗಳು ಸೂಚಿಸಿರುವ ಪರೀಕ್ಷಾ ಕೇಂದ್ರವನ್ನು ಅವಲಂಬಿಸಿ, ಅಂತಹ ವಿದ್ಯಾರ್ಥಿಗಳು ಕೆಳಗೆ ತಿಳಿಸಿರುವ ದಾಖಲಾತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ರಾಜ್ಯದ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ ಅಧಿಕೃತ ಜಾಲತಾಣಗಳಲ್ಲಿ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬಹುದು.
I. ಆನ್‌ಲೈನ್ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲಾತಿಗಳು:
1. ಸಿಇಟಿ (ಪ್ರವೇಶ ಚೀಟಿ).
2. ವ್ಯವಸಾಯಗಾರರ / ಕೃಷಿ ಮತ್ತು ಕೃಷಿ ಸಂಬಂಧಿತ ಕೂಲಿ ಕಾರ್ಮಿಕರ ಪ್ರಮಾಣ ಪತ್ರ RD ಸಂಖ್ಯೆಯೊಂದಿಗೆ ಕಂದಾಯ ಇಲಾಖೆಯಲ್ಲಿ ಕೊಡುವ ಪ್ರಮಾಣ ಪತ್ರ ಅಥವಾ ಸ್ವೀಕೃತ ಪತ್ರ RD ಸಂಖ್ಯೆಯೊಂದಿಗೆ.
3. ಅವಿಭಾಜ್ಯ ಕುಟುಂಬವಾದಲ್ಲಿ ಪೂರಕವಾಗಿ ವಂಶವೃಕ್ಷ ಪ್ರಮಾಣ ಪತ್ರ ಕೃಷಿಕರ ಕೋಟಾದಡಿಯಲ್ಲಿ ಅರ್ಜಿಯನ್ನು ಪರಿಗಣಿಸಲು ಕಡ್ಡಾಯವಾಗಿ ಲಗತ್ತಿಸುವುದು RD ಸಂಖ್ಯೆ ಮತ್ತು QR ಕೋಡ್ ನೊಂದಿಗೆ ತಹಶೀಲ್ದಾರ್ ರವರು ಕೊಡುವ ಪ್ರಮಾಣ ಪತ್ರ,
4. ಆದಾಯ ಪ್ರಮಾಣ ಪತ್ರ (ಕೃಷಿಯೂ ಸೇರಿದಂತೆ ಎಲ್ಲಾ ಆದಾಯ) RD ಸಂಖ್ಯೆ ಮತ್ತು QR ಕೋಡ್‌ನೊಂದಿಗೆ ತಹಶೀಲ್ದಾರ್ ರವರು ಕೊಡುವ ಪ್ರಮಾಣ ಪತ್ರ.
5. ಅಫಿಡವಿಟ್ I, (ಕೇವಲ ಕೃಷಿ ಒಂದೇ ಆದಾಯ ಹೊಂದಿದ್ದಲ್ಲಿ ಮಾತ್ರ) ಆದಾಯ ಪ್ರಮಾಣ ಪತ್ರದೊಂದಿಗೆ, ಅಭ್ಯರ್ಥಿ / ಪೋಷಕರು ಕೇವಲ ಕೃಷಿ ಒಂದೇ ಆದಾಯದ ಮೂಲವೆಂದು ಸ್ವಯಂ ಘೋಷಣೆಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕಾಗಿರುತ್ತದೆ.
ಸೂಚನೆ: ಆದಾಯ ಪ್ರಮಾಣ ಪತ್ರದಲ್ಲಿ ನಮೂದಿಸಿರುವ ಮತ್ತು ಅಫಿಡವಿಟ್ ನಲ್ಲಿ ಘೋಷಿಸಿರುವ ಆದಾಯ ಒಂದೇ ಆಗಿರಬೇಕು. ಮೇಲಿನ ಎಲ್ಲಾ ದಾಖಲೆಗಳು ಏಪ್ರಿಲ್ 2023 ರಿಂದ ಮಾರ್ಚ್ 2024 ರವರೆಗೆ ಮಾನ್ಯವಾಗಿರಬೇಕು (ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಐದು ವರ್ಷಗಳವರೆಗೆ ಮಾನ್ಯವಾಗಿದ್ದರೆ, ಆ ಪ್ರಮಾಣ ಪತ್ರಗಳನ್ನು ಮಾನ್ಯ ದಿನಾಂಕದೊಳಗೆ ಮರುಮುದ್ರಣ ಮಾಡಬೇಕು).
ಪ್ರಕ್ರಿಯೆಗೆ ಸಲ್ಲಿಸಬೇಕಾದ ಶುಲ್ಕ:
ಅಭ್ಯರ್ಥಿಗಳು ಆನ್‌ಲೈನ್ ಪರಿಶೀಲನೆಗೆ ಸಲ್ಲಿಸಬೇಕಾದ ರೂ.1000/- (ಸಾಮಾನ್ಯ) ಮತ್ತು ಇತರೆ ರೂ. 500/- (ಪ.ಜಾ/ಪ.ಪ/ ಪ್ರವರ್ಗ-1) ಶುಲ್ಕವನ್ನು ಕೃಷಿ ವಿಶ್ವವಿದ್ಯಾನಿಲಯಗಳ ಅಧಿಕೃತ ಹಾಲತಾಣದಲ್ಲಿ ನೀಡಲಾಗುವ ಆನ್‌ಲೈನ್ ಸೌಲಭ್ಯದ ಮೂಲಕ ತುಂಬಬಹುದು. ಶುಲ್ಕ ತುಂಬಿದ ನಂತರವೇ ಶುಲ್ಕ ರಸೀತಿ ಹಾಗೂ ದಾಖಲಾತಿಗಳನ್ನು ಸಲ್ಲಿಸಿದ ಮಾಹಿತಿಯನ್ನು ಅಭ್ಯರ್ಥಿಗಳು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯ. ಶುಲ್ಕ ತುಂಬದೇ ಇದ್ದ ಪಕ್ಷದಲ್ಲಿ, ಸಮಿತಿಗೆ ದಾಖಲಾತಿಗಳ ಪರಿಶೀಲನೆ ಸಾಧ್ಯವಾಗುವುದಿಲ್ಲ.