ಕರ್ನಾಟಕಕ್ಕೆ 5 ದಿನ ಚಂಡಮಾರುತ ಭೀತಿ: ರಾಜ್ಯದ 23 ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಮಳೆ ಸಾಧ್ಯತೆ

ಪ್ರೀಯ ರೈತರೇ ಇವತ್ತು ನಾವು ದೇಶದ ಹವಾಮಾನದ ಬಗ್ಗೆ ಚರ್ಚಿಸೋಣ. ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ರಾಜ್ಯದ 23 ಜಿಲ್ಲೆಗಳಲ್ಲಿ ಭಾರೀ ಚಂಡಮಾರುತ ಬೀಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕೇರಳ ಮತ್ತು ನೆರೆಹೊರೆಯ ಕರ್ನಾಟಕದ ಜಿಲ್ಲೆಗಳ ಮೇಲೆ ಚಂಡಮಾರುತದ ಪರಿಚಲನೆ ಪ್ರಭಾವ ಬೀರಲಿದೆ ಎಂದು ತಿಳಿಸಿದೆ. ಎಲ್ ನೀನೋ ಎಫೆಕ್ಟ್ ರಾಜ್ಯಕ್ಕೆ ಹೆಚ್ಚಿನ ಬರ ತಂದಿದೆ. ಹಾಗೂ ನೈರುತ್ಯ ಮಾನ್ಸೂನ್ ಮಾರುತಗಳು ಕೇರಳಕ್ಕೆ ಬರದಿರುವುದರದಿಂದ ಈ ವರ್ಷ ಮುಂಗಾರು ಮಳೆ ಹೆಚ್ಚಾಗಿ ಉತ್ತರ ಭಾರತದ ಕಡೆ ಆಗಿದೆ. ದಕ್ಷಿಣ ಭಾರತದಲ್ಲಿ ಮಳೆಯ ಕೊರತೆ ಹೆಚ್ಚಾಗಿದೆ. ಯಾವುದೇ ಮಾರುತಗಳು ಮಳೆ ತರದೆ ಬರಗಾಲ ಎದುರಾಗಿದೆ. ಇದು 2024 ಹವಾಮಾನ ಇಲಾಖೆ ವರದಿ ಸಲ್ಲಿಸಿದೆ.

ಈಗಾಗಲೇ ರಾಜ್ಯದಲ್ಲಿ ಎಲ್ ನೀನೋ ಎಫೇಕ್ಟ್ ಕಾಟ ಕಡಿಮೆ ಆಗಿದ್ದು ಸಮುದ್ರ ತೀರದಲ್ಲಿ ಬಿಸಿಗಾಳಿ ಕಡಿಮೆ ಆಗಿದೆ. ಸಮುದ್ರದ ಮೇಲಿನ ಗಾಳಿ ಒತ್ತಡದ ಮೇಲೆ ಮಳೆಯ ಪ್ರಮಾಣ ಹೆಚ್ಚಾಗುತ್ತದೆ. 2023 ಅನ್ನು ಬರಗಾಲ ಪೀಡಿತ ವರ್ಷ ಎಂದು ಘೋಷಣೆ ಹಿನ್ನೇಲೆ ದೇಶಾದ್ಯಂತ ಬಿಸಿಗಾಳಿ ಹಾಗೂ ‌ಬರಗಾಲ ಪೀಡಿತ ಪ್ರದೇಶಗಳಿಗೆ ಸೂರ್ಯನ ಶಾಖ ಹೆಚ್ಚಿಗೆ ಬಡಿಯುತ್ತಿದೆ. ಮುಂದಿನ ವಾರದಲ್ಲಿ ಪೂರ್ತಿ ಬಿಸಿಲು ಕಡಿಮೆ ಇರುವುದರಿಂದ ಬಿರುಗಾಳಿ ಎದುರಿಸಲು ನಾವು ಸಿದ್ಧರಾಗಬೇಕಿದೆ.ಹಾಗೂ ಅದಕ್ಕೆ ಕೂಡಲೇ ಈ ಬಿರುಗಾಳಿಯಿಂದ ಜಾನುವಾರು ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳ ಕಡೆಗೆ ಗಮನ ವಹಿಸಬೇಕು.

ಅದೇ ರೀತಿ ಮುಂದಿನ 5 ದಿನಗಳಲ್ಲಿ ಚಂಡಮಾರುತ ಎಫೇಕ್ಟ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಂದರೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ (40-50 kmph) ಭಾರೀ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಸನ, ದಾವಣಗೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಬಿರುಗಾಳಿ ಸಹಿತ (40-50 kmph) ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದು ಸ್ವಲ್ಪ ರೈತರಿಗೆ ಸಂತಸದ ವಿಷಯವಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ವಿವಿಧ ಬೆಳೆಗಳ ಸುಧಾರಿತ ತಳಿಗಳ ಬಿತ್ತನೆ ಸಂಗ್ರಹಿಸಿಕೊಳ್ಳಬೇಕು. ಅದೇ ರೀತಿ ಮುಂದಿನ ವಾರದಲ್ಲಿ ಬೀದರ್, ಧಾರವಾಡ, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗದ ಕೆಲವು ಸ್ಥಳಗಳಲ್ಲಿ ಬಿರುಗಾಳಿಯಿಂದ (40-50 kmph) ಹಗುರದಿಂದ ಸಾಧಾರಣ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಹೀಗೆ ಮಳೆ ಹೆಚ್ಚಾಗುವ ಸಾಧ್ಯತೆ ಇದೆ.

ಯಾವ ನಂಬರ್ ಕಾಲ್ ಮಾಡಿದಾಗ ನಮಗೆ ಮಳೆಯ ಮಾಹಿತಿ ಸಿಗುತ್ತದೆ?
ಹೌದು ಟೋಲ್ ಫ್ರೀ ಸಂಖ್ಯೆ ಈಗಾಗಲೇ ಹವಾಮಾನ ಇಲಾಖೆ ತಿಳಿಸಿದೆ. ಅದೇ ರೀತಿ ನೀವು ಮನೇಲಿ ಕುಳಿತು ನಿಮ್ಮ ಸುತ್ತಲಿನ ವಾತಾವರಣದ ಸಂಪೂರ್ಣ ಮಾಹಿತಿ ಪಡೆಯಲು ಇದೊಂದು ಮಹತ್ವದ ಅವಕಾಶವಾಗಿದೆ. ಹಾಗೂ ರೈತರು ನಿರಂತರ ಮುಗಿಲು ನೋಡಿ ಬೆಳೆ ಬೆಳೆಯುತ್ತಾರೆ. ಅದೇ ರೀತಿ ನೀವು ಈಗ ನಿರಂತರವಾಗಿ ಹವಾಮಾನ ಇಲಾಖೆ ಜೊತೆಗೆ ಸಂಪರ್ಕ ಇರುವುದರಿಂದ ನಿಮಗೆ ಮಳೆಯ ಮಾಹಿತಿ ಸಿಗುತ್ತದೆ ಅದಕ್ಕಾಗಿ ಟೋಲ್ ಫ್ರೀ ಸಂಖ್ಯೆ ರೈತರು, ಸಾರ್ವಜನಿಕರು ವರುಣಮಿತ್ರ ಸಹಾಯವಾಣಿ ನಂಬರ್ 9243345433ಗೆ
ಕರೆ ಮಾಡಿದರೆ ಸಾಕು, ಮನೆಯಲ್ಲಿಯೇ ಕುಳಿತು ಹವಾಮಾನದ ಮಾಹಿತಿ ಪಡೆಯಬಹುದು.

Spread positive news

Leave a Reply

Your email address will not be published. Required fields are marked *