ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ. ಬಡ್ಡಿ ರಹಿತ 3ಲಕ್ಷ ಸಹಾಯಧನ ಕೂಡಲೇ ಅರ್ಜಿ ಸಲ್ಲಿಸಿ.

ಪ್ರೀಯ ರೈತರೇ ಇವತ್ತು ನಾವು ಒಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ತಿಳಿಯೋಣ ಬನ್ನಿ. ಹೌದು ಕೇಂದ್ರ ಸರ್ಕಾರವು ರೈತರ ಪರವಾಗಿ ಹಾಗೂ ಸಾರ್ವಜನಿಕರ ಸಹಕಾರ ನೀಡಲು ಪಿಎಂ ವಿಶ್ವಕರ್ಮ ಯೋಜನೆ ಪ್ರಾರಂಭ ಆಗಿದೆ. ಅದೇ ರೀತಿ ಪಿಎಂ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು ಏನು?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ( PM Vishw karma yojana) ಮೂಲಕ ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆಯಬಹುದು? ಅಕ್ಕಸಾಲಿಗ, ಕಮ್ಮಾರ, ಕ್ಷೌರಿಕ ಮತ್ತು ಚಮ್ಮಾರರಂತಹ ಬೇರೆ ಬೇರೆ ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರು ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು. ಎಂದು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಈ ಯೋಜನೆಯಡಿಯಲ್ಲಿ 3 ಲಕ್ಷದವರೆಗೆ ಯಾವುದೇ ಆಧಾರವಿಲ್ಲದೆ ಸಾಲವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು. ಮತ್ತು ಜನರಿಗೆ ಮೊದಲ ಹಂತದಲ್ಲಿ 1 ಲಕ್ಷದವರೆಗೆ ಮತ್ತು ಎರಡನೇ ಹಂತದಲ್ಲಿ 2 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ ಮತ್ತು ಅದು ಕೂಡ ಕೇವಲ 5 % ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತದೆ.

ಯಾರು ಯಾರು ಈ ಸೌಲಭ್ಯ ಪಡೆಯಬಹುದು? 

ಬಡಗಿ ! ದೋಣಿ ತಯಾರಕ | ಶಸ್ತ್ರತಯಾರಕ । ಕಮ್ಹಾರ| ಬುಟ್ಟಿ/ಚಾಪೆ/ಕಸಬರಿಕೆ/ನಾರು ನೇಯ್ಕೆಕಾರ , ಬೊಂಬೆ ಮತ್ತು ಆಟಿಕೆಗ (ಸಾಂಪ್ರದಾಯಿಕ) 1 ಅಕ್ಕಸಾಲಿಗ ಕುಂಬಾರ | ಚಮ್ಮಾರ/ಶೂ ತಯಾರಕ/ಪಾದರಕ್ಷೆ ಕಲಾಕಾರ ಸುತ್ತಿಗೆ ಮತ್ತು ಉಪಕರಣ ತ ಶಿಲ್ಪಿ (ಕಲ್ಲು ಕಟಿಯುವವ), ಒಡ್ಡರು ಗಾರೆ ಕೆಲಸದವ | ಕ್ಷೌರಿಕ | ಹೂಮಾಲೆ ತಯಾರಕ । ಮಡಿವಾಳ |

ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು?

* ಅರ್ಜಿ ಸಲ್ಲಿಸಲು ಬಯಸುವವರು 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿರಬೇಕು.

* 18 ವರ್ಷ ಮೇಲ್ಪಟ್ಟವರಾಗಿರಬೇಕು.

* ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ನೊಂದಣಿಗೆ ಅರ್ಹರಾಗಿರುತ್ತಾರೆ.

* ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು.

* ಕಳೆದ 5 ವರ್ಷಗಳಲ್ಲಿ ಪಿಎಂ ಇಜಿಪಿ/ಮುದ್ರಾ ಮತ್ತು ಪಿಎಂ-ಸ್ವನಿಧಿ ಸಾಲಗಳನ್ನು ಪಡೆದಿರಬಾರದು.

* ಮುದ್ರಾ ಮತ್ತು ಪಿಎಂ-ಸ್ವನಿಧಿ ಯೋಜನೆಗಳಲ್ಲಿ ಸಾಲ ಪಡೆದು ಪೂರ್ಣ ಮರುಪಾವತಿ ಮಾಡಿದ ಕುಶಲಕರ್ಮಿಗಳು ವಿಶ್ವಕರ್ಮ ಯೋಜನೆಯ‌ ಲಾಭ ಪಡೆಯಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ

* ಆಧಾರ್ ಕಾರ್ಡ್

* ಮತದಾರರ ಗುರುತಿನ ಚೀಟಿ

* ಪಾನ್ ಕಾರ್ಡ್

* ನಿವಾಸದ ಪ್ರಮಾಣ ಪತ್ರ

* ಮೊಬೈಲ್ ನಂಬ‌ರ್ ಮತ್ತು ಇಮೇಲ್ ಐಡಿ

* ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

* ಕೆಲಸಕ್ಕೆ ಸಂಬಂಧಿಸಿದ ದಾಖಲೆಗಳು

* ಆದಾಯ ಮತ್ತು ಜಾತಿ ಪ್ರಮಾಣ ಪತ್ರ

* ಬ್ಯಾಂಕ್ ಖಾತೆ ವಿವರಗಳು

ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಆಧಾರ್‌ ಜೋಡಿತ ಮೊಬೈಲ್‌ ಸಂಖ್ಯೆ, ರೇಷನ್‌ ಕಾರ್ಡ್‌ ಹಾಗೂ ಕುಟುಂಬ ಸದಸ್ಯರ ಆಧಾರ್‌ ಕಾರ್ಡ್‌ ದಾಖಲೆಗಳೊಂದಿಗೆ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿಕೊಂಡು, ಈ ಯೋಜನೆಯಡಿ ನೋಂದಾಯಿತ ಕುಶಲಕರ್ಮಿಗಳಿಗೆ ಸವಲತ್ತು, ಸೌಲಭ್ಯ ಪಡೆಯಬಹುದಾಗಿದೆ.

ಮೊದಲು ಅರ್ಜಿ ಸಲ್ಲಿಸಲು ಪಿಎಂ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ ಸೈಟ್ ( Website) ಆದ https://pmvishwakarma.gov.in ಸೈಟ್ ಗೆ ಭೇಟಿ ನೀಡಿ. ನಂತರ ಈ ಕೆಳಗಿನ ಹಂತಗಳನ್ನ ಪೂರ್ಣಗೊಳಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹಂತ 1: ಮೊಬೈಲ್ ಮತ್ತು ಆಧಾರ್ ( Adhar) ಪರಿಶೀಲನೆ ಮಾಡಿ.

ಹಂತ 2: ಕುಶಲಕರ್ಮಿಗಳ ನೋಂದಣಿ ಫಾರ್ಮ್ ಭರ್ತಿ ಮಾಡಿ.

ಹಂತ 3: ಪಿಎಂ ವಿಶ್ವಕರ್ಮ ಯೋಜನೆಯ ಡಿಜಿಟಲ್ ಐಡಿ ( Digital I’d) ಮತ್ತು ಪ್ರಮಾಣಪತ್ರವನ್ನು ( Certificate) ಡೌನ್‌ಲೋಡ್ ಮಾಡಿ.

ಹಂತ 4: ಸ್ಟೀಮ್ ಘಟಕಗಳಿಗೆ ಅನ್ವಯಿಸಿ.

Spread positive news

Leave a Reply

Your email address will not be published. Required fields are marked *