ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಹರಿದ್ದೀರಾ ಎನ್ನುವುದನ್ನು ತಿಳಿಯುವುದು ಹೇಗೆ..? ಇಲ್ಲಿದೆ ಮಾಹಿತಿ

ಆತ್ಮೀಯ ಗ್ರಾಹಕರೇ ಕರ್ನಾಟಕದ ಕಾಂಗ್ರೆಸ್ನ ಗ್ಯಾರಂಟಿ ಆಗಿರುವಂತಹ ಗೃಹಲಕ್ಷ್ಮಿ ಹಣ ಪತಿ ತಿಂಗಳು ಹೆಣ್ಣು ಮಕ್ಕಳ ಖಾತೆಗೆ ಜಮಾ ಆಗುತ್ತದೆ. ಯಾರ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆಯೋ ಅವರು ಅರ್ಜಿ ಸಲ್ಲಿಸಿ ನಂತರ ಅವರ ಖಾತೆಗೆ ಪ್ರತಿ ತಿಂಗಳು 2000 ಜಮಾ ಮಾಡುತ್ತಾ ಬಂದಿದ್ದಾರೆ ಈಗಾಗಲೇ ಐದು ಕಂತುಗಳು ಎಲ್ಲಾ ಜನರಿಗೆ ತಲುಪಿವೆ ಕೆಲವೊಬ್ಬರಿಗೆ ಕೆಲವೊಂದು ಕಾರಣಾಂತರಗಳಿಂದ ಹಣ ಜಮೆ ಆಗಿರುವುದಲ್ಲ ಅದರಲ್ಲಿ ಪ್ರಮುಖ ಕಾರಣವಾಗಿರುವಂಥದ್ದು ಎನ್‌ ಪಿಸಿಐ ಸೀಡಿಂಗ್ ಸ್ಟೇಟಸ್, ಇದಲ್ಲದೆ ಇನ್ನೊಂದು ಪ್ರಮುಖ ಕಾರಣ ಏನೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಇಲ್ಲದೆ ಇರುವುದು ಈ ಎರಡು ಕಾರಣಗಳಿಂದಾಗಿ ಮಾತ್ರ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ ಉಳಿದ ಯಾವುದೇ ತೊಂದರೆಗಳು ಇಲ್ಲದವರಿಗೆ ಎಲ್ಲಾ ಹೆಣ್ಣುಮಕ್ಕಳ ಖಾತೆಗೆ ಅಂದರೆ ಅರ್ಜಿ ಸಲ್ಲಿಸಿದವರ ಖಾತೆಗೆ ಹಣ ಜಮೆಯಾಗಿದೆ.

ಮೊದಲು ನೀವು https://ahara.kar.nic.in/Home/EServices ವೆಬ್ಸೈಟ್ ಗೆ ಭೇಟಿ ನೀಡಿ.

ನಂತರ ಮುಖಪುಟದ ಎಡಭಾಗದಲ್ಲಿ ಮೂರು ಕೆರೆಗಳು ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗಡೆ e-Ration card ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ show village list ಎಂಬ ಆಯ್ಕೆ ಸಿಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಸೆಲೆಕ್ಟ್ ಮಾಡಿ ಗೋ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಗ್ರಾಮದ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಯಜಮಾನಿಯರ ಸಂಪೂರ್ಣ ಮಾಹಿತಿ ಕಾಣಿಸುತ್ತದೆ. ಪಟ್ಟಿಯಲ್ಲಿರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಿರುತ್ತಾರೆ. ಅವರಿಗೆ ಸರ್ಕಾರ 2000 ರೂ ಹಣ ಹಾಕಲಿದೆ.

ಗೃಹಲಕ್ಷ್ಮಿ ಯೋಜನೆಗೆ ಯಜಮಾನಿಯರು ಅರ್ಜಿ ಸಲ್ಲಿಸಲು ಇನ್ನು ಮುಂದೆ ಸ್ಲಾಟ್ ಬುಕ್ಕಿಂಗ್ ಗಾಗಿ SMS ಅನ್ನು ಕಾಯುವ ಅವಶ್ಯಕತೆ ಇಲ್ಲ. ಬದಲಾಗಿ ನೇರವಾಗಿಯೇ ಹೋಗಿ ಫಲಾನುಭವಿಗಳು ತಮಗೆ ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸೇವಾಸಿಂಧು ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಯಾವ ದಿನಾಂಕದಂದು ನಿಮ್ಮ ಖಾತೆಗೆ ಬಂದಿರುತ್ತದೆ ರೇಷನ್ ಕಾರ್ಡ್ ಮೂಲಕ ತಿಳಿದುಕೊಳ್ಳುವುದು ಹೇಗೆ?

https://mahitikariaja.karnataka.gov.in/Gruhalakshmi/GuhalakshmiStatus? Serviceld-56306Type-SP&Departmentid=31366 ಟೆಂಪ್ಲೇಟು ಪ್ರಕಾರ-TEXT ಗೃಹಲಕ್ಷ್ಮಿ ಸ್ಥಿತಿಯ ವಿವರಗಳೂ ಈ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಸಿಗುತ್ತದೆ.

ಮೇಲೆ ತಿಳಿಸಿರುವಂತೆ ನಿಮಗೆ ಡೀಟೇಲ್ಸ್ ಆಪ್ ಗೃಹಲಕ್ಷ್ಮಿ ಸ್ಟೇಟಸ್ ಎಂದು ಹೆಡ್ ಲೈನ್ ಬರೆದಿರುತ್ತದೆ ಅದಾದ ನಂತರ ರೇಷನ್ ಕಾರ್ಡ್ ನಂಬರ್ ಹಾಕಲು ನಿಮಗೆ ಸ್ಥಳವನ್ನು ಬಿಡಲಾಗಿರುತ್ತದೆ ಆ ಸ್ಥಳದಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಫಿಲ್ ಮಾಡಿಕೊಂಡು ಸಬ್ಸಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಕ್ಲಿಕ್ ಮಾಡಿದ ನಂತರ ಮತ್ತೆ ಕೆಳಗಡೆ ವಿವರಗಳು ಕಾಣಿಸುತ್ತವೆ ಅದರಲ್ಲಿ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿ ಅಂದರೆ ಇದು ಬಾಕ್ಸ್ ನಲ್ಲಿ ತೋರಿಸುತ್ತದೆ ಡೀಟೇಲ್ಸ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಯಾವ ಕಂತುಗಳು ಯಾವ ದಿನದಂದು ಯಾವ ತಿಂಗಳ ಕಂತು ಯಾವ ದಿನದಂದು ನಿಮ್ಮ ಖಾತೆಗೆ ಜಮಾ ಆಯಿತು ಜೊತೆಗೆ ಅದರ ನಂಬರ್ ಸಹ ನಿಮಗೆ ಬರುತ್ತದೆ.

Spread positive news

Leave a Reply

Your email address will not be published. Required fields are marked *