ಜನೆವರಿ 21 ರಿಂದ 23 ರವರೆಗೆ ವಿಜಾಪುರದಲ್ಲಿ ಬ್ರಹತ್ ಕೃಷಿ ಮೇಳ ಏನೆಲ್ಲಾ ವಿಶೇಷತೆ ಇದೆ ಎಂದು ನೋಡಿ.

ವಿಜಯಪುರದ ಹಿಟ್ನಳ್ಳಿ ಫಾರ್ಮದಲ್ಲಿ ಜನೇವರಿ 21 ರಿಂದ 23 ರವರೆಗೆ ಮೂರು ದಿವಸ ಬೃಹತ್ ಕೃಷಿ ಮೇಳ

ಹೊರವಲಯದ ವಿಜಯಮರ ಹಿಟ್ನಳ ಫಾರ್ಮದಲ್ಲಿ ದಿನಾಂಕ: 21 Jan 23/01/2024 ප ವರೆಗೆ ಬೃಹತ್ ಕೃಷಿಮೇಳವನ್ನು ಕೃಷಿ ವಿಶ್ವವಿದ್ಯಾಲಯ ವಿಜಯಪುರ ಆವರಣ ಹಾಗೂ ಕೃಷಿ ಮತ್ತು ಕೃಷಿ ಸಂಬಂದಿತ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು, ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿಯ ಜೊತೆಗೆ ಬೃಹತ್ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಈ ಸಲದ ಕೃಷಿ ಮೇಳದ ಘೋಷವಾಕ್ಯವು ‘ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ ‘ ಎಂಬುದರ ಅಡಿಯಲ್ಲಿ ನಡೆಸಲಾಗುವುದು.

 

ರೈತರಿಗೆ ಆಧುನಿಕ ಬೇಸಾಯ ಕ್ರಮಗಳ ಕುರಿತಂತೆ ಕಾಲ ಕಾಲಕ್ಕೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ನಿರಂತರ ತಲುಪಿಸುವಲ್ಲಿ ಕೃಷಿಮೇಳಗಳಂತಹ ಕೃಷಿ ವಿಸ್ತರಣಾ ಕಾರ್ಯಕ್ರಮ ಬಹಳ ಮಹತ್ವವನ್ನು ಪಡೆದಿದೆ. ಈ ಸಲದ ಕೃಷಿಮೇಳವನ್ನು ದಿನಾಂಕ 21-01-2024 ರಂದು ಬೆಳಿಗ್ಗೆ 11 ಗಂಟೆಗೆ ಕೃಷಿ ಸಚಿವ ಎಚ್.ಚೆಲುವರಾಯಸ್ವಾಮಿ ಇವರಿಂದ ಉದ್ಘಾಟನೆಗೊಳ್ಳುವುದು, ನಾಗಠಾಣ ಮತಕ್ಷೇತ್ರದ ಶಾಸಕ ವಿಫಲ ಧೋಂಡಿಬಾ ಕಟಕಗೊಂಡ ವಹಿಸುವರು, ಕೃಷಿ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಬೃಹತ್ ಮಧ್ಯಮ ಕೈಗಾರಿಕೆ ಹಾಗೂ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ನೆರವೇರಿಸಿದರೆ, ಕೃಷಿ ಪ್ರಕಟಣೆಗಳನ್ನು ಜವಳಿ, ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಿಡುಗಡೆಗೊಳಿಸುವರು ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ವಿಧಾನ ಪರಿಷತ್ ಸದಸ್ಯರು, ಸಮಾಜದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ. ಎಲ್. ಪಾಟೀಲ, ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರು ಉಪಸ್ಥಿತರಿರುವರು. ಈ ಸಲದ ಕೃಷಿಮೇಳದಲ್ಲಿ ರೈತರಿಗಾಗಿ ಕೃಷಿ ವಸ್ತು ಪ್ರದರ್ಶನ ಮಳಿಗೆಗಳನ್ನು ಹಾಕಿ ಅದರಲ್ಲಿ ಕೃಷಿ ಪರಿಕರ ಮಾರಾಟ ಮಳಿಗೆ, ಸಿರಿಧಾನ್ಯ, ಕೃಷಿ ತಂತ್ರಜ್ಞಾನ ವರ್ಗಾವಣೆ  ಸಂಶೋಧನಾ ಕೇಂದ್ರಗಳ ಮಳಿಗೆ ಬೃಹತ್ ಜಲಾನಯನ ಅಭಿವೃದ್ಧಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುವದು ಮತ್ತು ಕೃಷಿ ಸಲಹಾ ಕೇಂದ್ರ ಏರ್ಪಡಿಸಿ ಇದರಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು ಲಭ್ಯವಿದ್ದು, ಮೇಳಕ್ಕೆ ಬರುವ ರೈತರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿವಸ ಮದ್ಯಾಹ್ನ ವಿವಿಧ ತಜ್ಞರಿಂದ ಹಾಗೂ ಅನುಭವ ರೈತರಿಂದ ವಿವಿಧ ವಿಷಯಗಳ ಮೇಲೆ ಕೃಷಿ ಗೋಷ್ಠಿ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮಗಳು ಜರುಗಲಿವೆ.

ಇದರ ಜೊತೆಗೆ ತಜ್ಞರೊಂದಿಗೆ ಚರ್ಚೆ, ಪ್ರಯೋಗ ತಾಕುಗಳ ಭೇಟಿ, ಕೃಷಿ ಯಂತ್ರೋಪಕರಣ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ. ಅಧ್ಯಕ್ಷತೆ ಚಾಲಿತ ಮತ್ತು ಕಡಿಮೆ ತೂಕದ ಮತ್ತು ಡಿಸೈಲ್ ಪಂಪಸೆಟ್ಟಿನಿಂದ ನೀರೆತ್ತುವುದು. ಮೂಲ ಡಾ. ಸ್ವಯಂ ಚಾಲಿತ ಸೂಕ್ತ ನೀರಾವರಿ ಪದ್ಧತಿ, ಕೃಷಿ ಹವಾಮಾನ ಶಾಸ್ತ್ರ, ಒಣಬೇಸಾಯ ತಂತ್ರಜ್ಞಾನ, ಹಿಂಗಾರಿ ಕಬ್ಬು ಜೋಳದ ತಳಿಯ ಅಭಿವೃದ್ಧಿ, ಆಗುತ್ತದೆ.

ರೈತರಿಗೆ ಆಶಾಕಿರಣವಾಗಿರುವ ಈ ಸಲದ ಕೃಷಿಮೇಳಕ್ಕೆ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಮಾಹಿತಿ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ರೈತಬಾಂಧವರು ಆಗಮಿಸುವಂತೆ ಕೃಷಿ ಮೇಳ ಸಮಿತಿ ಅಧ್ಯಕ್ಷರು ಹಾಗೂ ಡೀನ್ ಡಾ.ಭೀಮಪ್ಪ ಎ. ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಎಸ್. ಸಜ್ಜನ, ಜಂಟಿ ಕೃಷಿ ನಿರ್ದೇಶಕ ಡಾ.ಡಿ.ಡಬ್ಲ್ಯೂ.ವಿಲಿಯಮ್ ರಾಜಶೇಖರ ಮತ್ತು ಸಹ ವಿಸ್ತರಣಾ ನಿರ್ದೇಶಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷಡಾ.ಆರ್.ಬಿ. ಬೆಳ್ಳಿ ಇವರುಗಳು ಕೋರಿದ್ದಾರೆ.

Spread positive news

Leave a Reply

Your email address will not be published. Required fields are marked *