ಪ್ರೀಯ ರೈತರೇ ರಾಜ್ಯದಲ್ಲಿ ಸರ್ಕಾರವು ಬಹುದೊಡ್ಡ ಬದಲಾವಣೆಗೆ ತಯಾರಾಗಿ ನಿಂತಿದೆ. ಅದೇ ರೀತಿ ನರೇಗಾ ಯೋಜನೆ ಅಡಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸಿಗುವ ಉದ್ದೇಶಗಳ ಬಗ್ಗೆ ತಿಳಿಯುವುದಾದರೆ 1)ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ `ಕಡಿಮೆ ಇಲ್ಲದಂತೆ ಅಕುಶಲ ದೈಹಿಕ ಉದ್ಯೋಗವನ್ನು ಒದಗಿಸುವುದರ ಮೂಲಕ ನಿಗದಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಉತ್ಪಾದನಾಶೀಲ ಅಸ್ತಿಗಳ ಸೃಜನೆ ಮಾಡುವದು.
2) ಬಡವರ ಜೀವನೋಪಾಯದ ಸಂಪನ್ಮೂಲಗಳನ್ನು ಬಲಪಡಿಸುವುದು.
3) ಸ್ವಯಂ ಪ್ರತೀತವಾಗಿ ಸಾಮಾಜೀಕ ಒಳಗೊಳ್ಳುವಿಕೆಯನ್ನು ಖಾತರಿ ಪಡಿಸುವದು.
4) ಪಂಚಾಯತ ರಾಜ್ಯ ಸಂಸ್ಥೆಗಳನ್ನು ಬಲಪಡಿಸುವದು.
ಅದೇ ರೀತಿ ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಅಲ್ಪಾವಧಿಯ ದುಡಿಯುವ ಬಂಡವಾಳ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಪಡೆಯಬಹುದಾಗಿದ್ದು, 3 ಲಕ್ಷ ರೂ ಗಳವರೆಗೆ ಸಾಲದ ಮೊತ್ತಕ್ಕೆ ಶೇ. 2 ರಷ್ಟು ಬಡ್ಡಿ ಸಹಾಯಧನ ಲಭ್ಯವಿದೆ. ಅಲ್ಲದೇ ಸದರಿ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದಲ್ಲಿ ವಾರ್ಷಿಕ ಶೇ2 ರಷ್ಟು ಹೆಚ್ಚುವರಿ ಬಡ್ಡಿ ಸಹಾಯಧನ (ಒಟ್ಟು ಶೇ ಬಡ್ಡಿ ಸಹಾಯಧನ ಪಡೆಯಬಹುದಾಗಿದೆ).
ವಿವಿಧ ಚಟುವಟಿಕೆಗಳಿಗೆ ನಿಗದಿಪಡಿಸಿದ ನಿರ್ವಹಣಾ ವೆಚ್ಚದ ವಿವರ ಹೀಗಿದೆ ನೋಡಿ.
ಹೈನುಗಾರಿಕೆ ಘಟಕಕ್ಕೆ ಎಷ್ಟು ಹಣ ನೀಡುತ್ತಾರೆ?
ಮಿಶ್ರತಳಿ ಹಸು ಘಟಕ (2ಕ್ಕೆ ಸೀಮಿತ): ಒಂದು ಕರಾವಿನಲ್ಲಿ ಎರಡು ತಿಂಗಳಿಗೆ ಮಾತ್ರ ಪ್ರತಿ ತಿಂಗಳಿಗೆ ಒಂದು ಹಸು ನಿರ್ವಹಣೆಗೆ ಗರಿಷ್ಠ ರೂ. 9000/- ಈ ಕಾರ್ಯಕ್ಕೆ ಸಾಲದ ಪ್ರಮಾಣ 36,000/- ನಿಗದಿ ಮಾಡಲಾಗಿದೆ.
ದೇಸಿ ತಳಿಯ ಹಸು ಘಟಕ – ಒಂದು ಕರಾವಿನಲ್ಲಿ ಎರಡು ತಿಂಗಳಿಗೆ ಮಾತ್ರ ಪ್ರತಿ ತಿಂಗಳಿಗೆ ಒಂದು ಹಸು ನಿರ್ವಹಣೆಗೆ ಗರಿಷ್ಠ ರೂ. 3500/- 14,000 /- ನಿಗದಿ ಮಾಡಲಾಗಿದೆ.
ಸುಧಾರಿತ ತಳಿಯ ಎಮ್ಮೆ ಘಟಕ (2ಕ್ಕೆ ಸೀಮಿತ)– ಗರಿಷ್ಠ ಒಂದು ಕರಾವಿನಲ್ಲಿ ಎರಡು ತಿಂಗಳಿಗೆ ಮಾತ್ರ ಪ್ರತಿ ತಿಂಗಳಿಗೆ ಒಂದು ಎಮ್ಮೆ ನಿರ್ವಹಣೆಗೆ ಗರಿಷ್ಠ ರೂ. 10500/- ಹಾಗೂ ಇದಕ್ಕೆ ಸಾಲದ ಪ್ರಮಾಣ 42,000 /- ನಿಗದಿ ಮಾಡಲಾಗಿದೆ.
ಕೆ.ಸಿ.ಸಿ ಯೋಜನೆಯಡಿ ಅರ್ಹರೈತರಿಗೆ ಆರ್ಥಿಕ ನೆರವು ಒದಗಿಸುವ ಅಭಿಯಾನವು ದಿನಾಂಕ 31-3-2024 ವರೆಗೆ ಮುಂದುವರೆಸಿದೆ.
ಈ ಯೋಜನೆಯ ಲಾಭ ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು:
ಭರ್ತಿಮಾಡಿದ ಅರ್ಜಿ ನಮೂನೆ, ಬ್ಯಾಂಕ್ ಖಾತೆ ವಿವರ, ಆರ್.ಬಿ.ಸಿ. ಆಧಾರ್ ಕಾರ್ಡ್. ಭಾವಚಿತ್ರ
ನರೇಗಾ ಯೋಜನೆ ಅಡಿಯಲ್ಲಿ ಕಾರ್ಮಿಕನ ಹಕ್ಕುಗಳು:
* ಹಕ್ಕು – 1 ಉದ್ಯೋಗ ಚೀಟಿಯ ಹಕ್ಕು
* ಹಕ್ಕು – 2 ಬೇಡಿಕೆ ಮತ್ತು 15 ದಿನದೊಳಗಾಗಿ ಕೆಲಸ ಪಡೆಯುವದು
* ಹಕ್ಕು – 3 ಯೋಜನೆ ಮತ್ತು ಕಾಮಗಾರಿಗಳ ಗುಚ್ಛ ತಯಾರಿಕೆ
* ಹಕ್ಕು – 4 ಐದು ಕಿ.ಮಿ. ವ್ಯಾಪ್ತಿಯಲ್ಲಿ ಕೆಲಸ ಪಡೆಯುವದು
* ಹಕ್ಕು – 5 ಕಾಮಗಾರಿ ಸ್ಥಳದ ಸೌಲಭ್ಯಗಳು