- ಪ್ರೀಯ ರೈತರೇ ಇವತ್ತು ನಾವು ಒಂದು ಪ್ರಯೋಜನಕಾರಿ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ಹೌದು ಸರ್ಕಾರದ ಹೊಸ ಯೋಜನೆ ಬಗ್ಗೆ ಇಲ್ಲಿದೆ ನೋಡಿ. 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ವೃತ್ತಿನಿರತ ಗ್ರಾಮೀಣ ಕುಶಲಕರ್ಮಿ/ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡಿರುವ ಅರ್ಹ ಅಭ್ಯರ್ಥಿಗಳು ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸೌಲಭ್ಯವನ್ನು ಪಡೆಯಲು ಇಚ್ಛಿಸುವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಉಚಿತ ಹೊಲಿಗೆ ಯಂತ್ರ ಪಡೆಯಲು ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಹೊರತುಪಡಿಸಿ ಹೊಲಿಗೆ (ಟೈಲರಿಂಗ್) ವೃತ್ತಿ ಮಾಡುತ್ತಿರುವವರು ಆನ್ಸೆನ್ ಮೂಲಕ ಅರ್ಜಿ ಸಲ್ಲಿಸಬವುದು.
ಹೊಲಿಗೆ ಯಂತ್ರ ಪಡೆಯಲು ಇರಬೇಕಾದ ದಾಖಲಾತಿಗಳು:
(1) ಪಾಸ್ಪೋರ್ಟ್ ಗಾತ್ರದ ಭಾವಚಿತ್ರ.
(2) ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ವರ್ಗಾವಣೆ ಪ್ರಮಾಣಪತ್ರ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿ)
(3) ಶೈಕ್ಷಣಿಕ ಅರ್ಹತೆ ಜಾತಿ ಪ್ರಮಾಣ ಪತ್ರ (ಪ.ಜಾ, ಪ.ಪಂ) ಲೇಬರ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಒಂದು ಕಾರ್ಡ ಅನೇಕ ಪ್ರಯೋಜನಗಳು.
ಆಯಾ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ (ಟೈಲರಿಂಗ್) ವೃತ್ತಿ ಮಾಡುತ್ತಿರುವ ಬಗ್ಗೆ ಧೃಢೀಕರಣ ಪ್ರಮಾಣಪತ್ರ.
ಉಚಿತ ಹೊಲಿಗೆ ಯಂತ್ರ ಪಡೆಯಲು ಬೇಕಾಗಿರುವ ಅರ್ಹತೆಗಳು (Qualification) –
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ನೀಡಲಾಗುವ ಉಚಿತ ಹೋಲಿಕೆ ಯಂತ್ರ ಪಡೆದುಕೊಳ್ಳಲು, ಗ್ರಾಮ ಪಂಚಾಯತ್ ಅಡಿಯಲ್ಲಿ ಅಥವಾ ಇತರ ಸಂಸ್ಥೆಗಳಲ್ಲಿ ಹೊಲಿಗೆ ತರಬೇತಿ ಪಡೆದು, ಹೊಲಿಗೆ ವೃತ್ತಿ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು. ಯಾವುದೇ ಸರ್ಕಾರಿ ನೌಕರಿಯಲ್ಲಿ ಇರುವವರು ಅರ್ಜಿ ಸಲ್ಲಿಸಬಾರದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 15, 2024.
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಉಪಯೋಗಿಸಿ ಅರ್ಜಿ ಸಲ್ಲಿಸಬಹುದು.
https://sevasindhuservices.karnataka.gov.in/login.do?
ಅಥವಾ ನಿಮಗೆ ಅರ್ಜಿ ಸಲ್ಲಿಸಲು ನೀವು ಗ್ರಾಮ ಒನ್ ಅಥವಾ ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು