ರೈತರಿಗೆ ಶಾಕಿಂಗ್ ನ್ಯೂಸ್! ಸದ್ಯಕ್ಕಿಲ್ಲ ಬರ ಪರಿಹಾರ ಹಣ. ಕಾರಣ ಇಲ್ಲಿದೆ ನೋಡಿ.

ರೈತರಿಗೆ ಶಾಕಿಂಗ್ ನ್ಯೂಸ್! ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆ ಸದ್ಯಕ್ಕೆ ಡೌಟು, ಅದೇ ರೀತಿ ಸರ್ಕಾರವು ಕೂಡ ರೈತರಿಗೆ ಬರ ಪರಿಹಾರ ಸದ್ಯಕ್ಕೆ ಬಿಡುಗಡೆ ಮಾಡುವುದು ತೊಂದರೆ ಉಂಟಾಗಿದೆ. ಕಾರಣ ಏನು ಎಂದು ತಿಳಿಯೋಣ. ಬೆಳೆ ನಷ್ಟ ಪರಿಹಾರ ಪಾವತಿಗೆ ತಯಾರಿ ರೈತರಿಗೆ ಬೆಳೆ ನಷ್ಟ ಪರಿಹಾರ ಮುಂಗಡ ಪಾವತಿ ಮಾಡಲು ಕಂದಾಯ ಇಲಾಖೆ ಸಜ್ಜಾಗುತ್ತಿದೆ. ಬೆಂಗಳೂರಲ್ಲಿ ಶನಿವಾರ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿರುವ ಕಂದಾಯ ಸಚಿವರು ಮುಂಗಡ ಪಾವತಿಗೆ ಆಗಬೇಕಾದ ತಯಾರಿ ಬಗ್ಗೆ ಚರ್ಚಿಸಿ ಸೂಚನೆಗಳನ್ನು ನೀಡಿದರು. ಕೇಂದ್ರ ಸರ್ಕಾರ ರೈತರಿಗೆ ಪರಿಹಾರ ಕೊಡಲು ಪ್ರಾಥಮಿಕ ಸಭೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ಮೊದಲ ಕಂತು ಜಮಾ ಮಾಡುವುದಾಗಿ ತಿಳಿಸಿದರು.

ಬರಗಾಲ ಬಾಧಿತ ಪ್ರದೇಶದ ರೈತರಿಗೆ ಮೊದಲ ಕಂತಿನಲ್ಲಿ ತಲಾ ಎರಡು ಸಾವಿರ ರೂ. ಪರಿಹಾರ ವಿತರಣೆಗೆ ತಾಂತ್ರಿಕ ವಿಘ್ನ ಎದುರಾಗಿದ್ದು, ರಾಜ್ಯ ಸರ್ಕಾರ ಸಂದಿಗ್ಧಕ್ಕೆ ಸಿಲುಕಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯುತ್ತಿವೆ, ಪರಿಹಾರಕ್ಕೆ ರೈತ ಸಂಘಟನೆಗಳು ಒತ್ತಡ ಹೇರಿದ್ದು, ಹಲವೆಡೆ ನೋಂದ ರೈತರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ರಾಜ್ಯದ ಬೊಕ್ಕಸದಿಂದಲೇ ಸಂತ್ರಸ್ತರಿಗೆ ನೆರವಾಗುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಘೋಷಣೆ ಕಣ್ಮರೆಸುವ ತಂತ್ರವೆಂದು ಪ್ರತಿಪಕ್ಷಗಳು ಶಂಕಿಸಿದ್ದವು. ತ್ವರಿತವಾಗಿ ಪರಿಹಾರ ವಿತರಿಸುವ ಮೂಲಕ ಪ್ರತಿಪಕ್ಷಗಳಿಗೆ ಪ್ರತ್ಯುತ್ತರಿಸಬೇಕೆಂಬ ಸರ್ಕಾರದ ಉತ್ಸಾಹಕ್ಕೆ ತಾಂತ್ರಿಕ ಅಡಚಣೆ ತಣ್ಣೀರೆರಚಿದೆ.

ಬರ ಪರಿಹಾರ ಬಿಡುಗಡೆ ತಡ ಆಗಲು ಕಾರಣ ಏನು?

ಸರ್ಕಾರದ ಸೂಚನೆಯಂತೆ ‘ಫೂಟ್ಸ್ ಆ್ಯಪ್’ನಲ್ಲಿ ರೈತರು ನೋಂದಣಿ ಮಾಡಿಕೊಂಡಿದ್ದು, ಒಂದೇ ಸರ್ವೇ ನಂಬ‌ರ್, ಒಂದೇ ಪಹಣಿ ಪತ್ರದಲ್ಲಿ (ಆರ್‌ಟಿಸಿ) ಬಹು ರೈತರ ಹೆಸರುಗಳಿವೆ. ಅಗತ್ಯವಾದ ಆಧಾ‌ರ್, ಬ್ಯಾಂಕ್ ಖಾತೆ ಸಂಖ್ಯೆ ಜೋಡಿಸಿದ್ದರೂ, ಒಂದೇ ಕುಟುಂಬದ ಸದಸ್ಯರು ಬೇರೆ ಬೇರೆಯಾದ ನಂತರ ಆಯಾ ಹೆಸರಿಗೆ ನಿರ್ದಿಷ್ಟ ಜಮೀನಿನ ಮಾಲೀಕತ್ವ ವಿಂಗಡಣೆಯಾಗಿಲ್ಲ. 

ಸರ್ಕಾರಕ್ಕೆ ಪೇಚು ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಬೆಳೆ ನಷ್ಟಕ್ಕೆ ಇನ್ಸುಟ್ ಸಬ್ಸಿಡಿ ವಿತರಿಸಲು 18,171 ಕೋಟಿ ರೂ. ನೆರವು ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮೊರೆಯಿಟ್ಟಿದೆ. ಹಲವು ಪತ್ರ ಬರೆದು ಬಳಿಕ ಸಿಎಂ ಸಿದ್ದರಾಮಯ್ಯ, ಸಚಿವರ ನಿಯೋಗವು ಪ್ರಧಾನಿ, ಗೃಹ, ಕೃಷಿ ಸಚಿವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿದೆ. ಜತೆಗೆ, ಕೇಂದ್ರ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಹರಿಹಾಯ್ದಿದೆ. ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟ ಅನುಭವಿಸಿದ್ದಾರೆ. ತಾತ್ಸರ್ತಿಕ ಪರಿಹಾರ ಯಾವುದಕ್ಕೂ ಸಾಲದು, ಘೋಷಿಸಿದಂತೆ ನಡೆದುಕೊಂಡಿಲ್ಲವೆಂದು ಪ್ರತಿಪಕ್ಷಗಳು ವಾಗ್ದಾಳಿ ಮಾಡುತ್ತಿದ್ದರೆ, ನೊಂದ ರೈತರ ಅಸಹನೆಯೂ ಹೆಚ್ಚುತ್ತಿದೆ.

ಜಮೀನಿನ ಮಾಹಿತಿ ಅಪೇಟ್ ಮಾಡಲು ರೈತರಿಗೆ ಅವಕಾಶ ನೀಡಲಾಗಿತ್ತು. ಇದೀಗ ಮೊದಲ ಕಂತು ಜಮಾ ಮಾಡಲು ತಯಾರಿ ಮಾಡಿಕೊಳ್ಳುವಂತೆ ಕಂದಾಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಮೊದಲ ಕಂತಿನ ರೂಪದಲ್ಲಿ ಡಿಬಿಟಿ ಮೂಲಕ ಗರಿಷ್ಠ 2 ಸಾವಿರ ರೂ.ವರೆಗೆ ನೀಡಲಾಗುತ್ತದೆ. ಕೇಂದ್ರ ಪರಿಹಾರ ಬಿಡುಗಡೆ ಮಾಡಿದ ಬಳಿಕ ಮೊದಲ ಕಂತಿನ ಪಾವತಿ ಕಳೆದು ಬಾಕಿ ಜಮಾ ಮಾಡಲಾಗುತ್ತದೆ. ಮಳೆಯಾಶ್ರಿತ ಪ್ರದೇಶದ ಪ್ರತಿ ಹೆಕ್ಟೇರ್‌ಗೆ 8,500 ರೂ. ನೀರಾವರಿಯಾದರೆ 17 ಸಾವಿರ ರೂ., ಬಹುವಾರ್ಷಿಕ ಬೆಳೆಯಾದರೆ 22,500 ರೂ. ನಿಗದಿ ಮಾಡಲಾಗಿದೆ. ಇದರಲ್ಲಿ ಗರಿಷ್ಠ ಎರಡು ಸಾವಿರ ರೂ. ಐದು ಎಕರೆಗೆ ಮಾತ್ರ ಪರಿಹಾರ ನೀಡಲಾಗುತ್ತದೆ.

ರಾಜ್ಯದ ಎಷ್ಟು ತಾಲೂಕು ಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದ್ದಾರೆ?

ಪರಿಹಾರ ಬಿಡುಗಡೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ರವಿಕುಮಾರ್ ಸಚಿವರು ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಒಟ್ಟು 4 ಸಾವಿರ ಕೋಟಿ ರೂ. ಪರಿಹಾರ ಕೊಡುವುದಕ್ಕೆ ಚಿಂತಿಸುತ್ತಿದ್ದೇವೆ. ಬರ ನಿರ್ವಹಣೆಗೆ ಕೇಂದ್ರ ಸರ್ಕಾರಕ್ಕೆ 18,200 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದೇವೆ. ಕೇಂದ್ರಕ್ಕೆ ಎನ್‌ಡಿಆರ್‌ಎಫ್ ಅಡಿ ಆರ್ಥಿಕ ನೆರವು ನೀಡುವಂತೆ ಕೇಂದ್ರಕ್ಕೆ ಕೋರಿದ್ದೇವೆ. ಹಣ ಬಿಡುಗಡೆಯಾದರೆ ಅನುಕೂಲವಾಗುತ್ತದೆ ಎಂದರು.

ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು, ಹಳ್ಳಿವಾರು ರೈತರ ಎಫ್.ಐ.ಡಿ ಈಗಾಗಲೇ ಆಗಿದೇ ಇದ್ದವರ ಲಿಸ್ಟ್ ಆಯಾ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ನೋಟಿಸ್ ಬೋರ್ಡ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ನೀವು ಸಹ ನಿಮಗೆ ಎಫ್ ಐಡಿ ಆಗದೆ ಇರುವವರ ಲಿಸ್ಟ್ ಸಿಕ್ಕಿದ್ದರೆ ನಿಮ್ಮ ಹೆಸರು ಚೆಕ್ ಮಾಡಿ ಪರಿಶೀಲನೆ ನಡೆಸಿ. ಒಂದು ವೇಳೆ ನಿಮಗೆ ಸಂಬಂದಿಸಿದ ಎಲ್ಲಾ ಸರ್ವೇ ನಂಬರ್‌ಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಿ, ಜಂಟಿ ಖಾತೆದಾರರಾಗಿದ್ದಲ್ಲಿ ಪ್ರತಿಯೊಬ್ಬ ಖಾತೆದಾರರು ಪ್ರತ್ಯೇಕವಾಗಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು.

Spread positive news

Leave a Reply

Your email address will not be published. Required fields are marked *