ರೈತರೇ ಸದ್ಯದ ಸ್ಥಿತಿಯಲ್ಲಿ ರೈತರು ತುಂಬಾ ಹೈನುಗಾರಿಕೆ ಕಡೆ ಒಲವು ತೋರಿದ್ದಾರೆ. ಅದೇ ರೀತಿ ರೈತರು ಸಹ ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆದು ಹೊಸ ಉದ್ಯಮದ ಕಡೆಗೆ ಹೆಜ್ಜೆ ಹಾಕುತ್ತಾ ರೈತರು ಹಾಲಿನ ಉತ್ಪನ್ನ ಹೆಚ್ಚಿಸಲು ಮುಂದಾಗಿದ್ದಾರೆ. ಆದರೆ ರೈತರು ಹೈನುಗಾರಿಕೆಯಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಕಾಲು ಬಾಯಿ ರೋಗವು ವೈರಸ್ ನಿಂದ ಹರಡುವ ತೀವ್ರ ಸಾಂಕ್ರಾಮಿಕ ರೋಗವಾಗಿದ್ದು, ಹಸು, ಎಮ್ಮೆ. ಕುರಿ, ಮೇಕೆ, ಹಂದಿ ಮತ್ತು ಇತರ ಗೊರಸು ಕಾಲಿನ ಪ್ರಾಣಿಗಳಲ್ಲಿ ಕಂಡುಬರುತ್ತದೆ.
1) ಕಾಲು ಬಾಯಿ ರೋಗ ಕಂಡು ಹಿಡಿಯುವ ವಿಧಾನ –
* ಬಾಯಿ, ಗೊರಸು ಮತ್ತು ಕೆಚ್ಚಲಿನ ತೊಟ್ಟಿನ ಮೇಲೆ ಹುಣ್ಣುಗಳು.
* ಹಾಲಿನ ಇಳುವರಿ ಕುಂಠಿತವಾಗುವುದು.
* ದೇಹದ ತೂಕ ಕಡಿಮೆಯಾಗುವುದು.
* ಮೇವು ತಿನ್ನದಿರುವುದು.
* ಕಂದ ಹಾಕುವ ರೋಗ.
* ಕಾಲು ಕುಂಟುವುದು.
* ಜ್ವರ ಇವು ಈ ರೋಗದ ಲಕ್ಷಣಗಳು ಇವೆ.
ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮ (NADCP)
ಈ ಕಾರ್ಯಕ್ರಮದ ವೈಶಿಷ್ಟ್ಯತೆಗಳು : ಪ್ರತಿ ಆರು ತಿಂಗಳಿಗೊಮ್ಮೆ ಎಲ್ಲಾ ಜಾನುವಾರುಗಳಿಗೆ (ಹಸು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ) ತಪ್ಪದೇ ಲಸಿಕೆ ಹಾಕಿಸುವುದರಿಂದ ಕಾಲು ಬಾಯಿ ರೋಗವನ್ನು ತಡೆಗಟ್ಟಬಹುದು.
# ಹೆಣ್ಣು ಕರುಗಳಿಗೆ (4-8 ತಿಂಗಳು) ಜೀವಿತಾವಧಿಯಲ್ಲಿ ಒಂದು ಬಾರಿ ಲಸಿಕೆ ಹಾಕಿಸುವುದರಿಂದ ಕಂದು ರೋಗವನ್ನು ತಡೆಗಟ್ಟಬಹುದು.
ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮವು ಭಾರತ ಸರ್ಕಾರದ ರೋಗ ನಿಯಂತ್ರಣದ ಹೊಸ ಕಾರ್ಯಕ್ರಮವಾಗಿದ್ದು, ಕೇಂದ್ರ ಸರ್ಕಾರವು 2019 ರಿಂದ 2024ರ ವರೆಗೆ 5 ವರ್ಷಗಳವರೆಗೆ ರೂ. 13,343 ಕೋಟಿಗಳ ಆರ್ಥಿಕ ಬೆಂಬಲವನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ.
# 2025ರ ಹೊತ್ತಿಗೆ ಕಾಲುಬಾಯಿ ರೋಗದ ಸಂಪೂರ್ಣ ಹತೋಟಿ ಹಾಗೂ 2030ರ ಹೊತ್ತಿಗೆ ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ.
ಕಾರ್ಯಕ್ರಮದ ಉದ್ದೇಶಗಳು :
# ಹಸು ಮತ್ತು ಎಮ್ಮೆ ಕರುಗಳಲ್ಲಿ ತೀವ್ರಗತಿಯಲ್ಲಿ ಕಂದು ರೋಗ ನಿಯಂತ್ರಣದಿಂದ, ಜಾನುವಾರು ಹಾಗು ಮನುಷ್ಯರಲ್ಲಿ ರೋಗದ ಪರಿಣಾಮಕಾರಿ ನಿರ್ವಹಣೆ ಮಾಡಲು ಸರ್ಕಾರವು ಮುಂದಾಗಿದೆ.
ಕಾರ್ಯಕ್ರಮದ ರೂಪುರೇಷೆಗಳು :
# ದೇಶಾದ್ಯಂತ ಶೇ. 100ರಷ್ಟು ಹಸು, ಎಮ್ಮೆ, ಕುರಿ, ಆಡು ಹಾಗು ಹಂದಿಗಳಿಗೆ ವರ್ಷಕ್ಕೆರಡು ಬಾರಿ ಕಾಲುಬಾಯಿ ರೋಗಕ್ಕೆ ಲಸಿಕೆ ಕಂದ ಹಾಕುವ ರೋಗ ಜಾನುವಾರುಗಳ ಸಂತಾನೋತ್ಪತ್ತಿಗೆ ಸಂಬಂಧಪಟ್ಟ ರೋಗವಾಗಿದ್ದು, ಇದು ರೈತರಿಗೆ ಅತಿಯಾದ ಆರ್ಥಿಕ ನಷ್ಟ ಉಂಟುಮಾಡುವುದಲ್ಲದೆ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಪ್ರಾಣಿಗಳಿಂದ ಮನುಷ್ಯನಿಗೆ ಹರಡಬಲ್ಲದು. ಮರಣ ಹೊಂದಿದ ಕರುಗಳ ಜನನ ದುರ್ಬಲ ಕರು ಜನನ ಮಾಸ ಬೀಳದಿರುವುದು.
* ಕರುಗಳಿಗೆ ಕಾಲುಬಾಯಿ ರೋಗಕ್ಕೆ ಪ್ರಾಥಮಿಕ ಲಸಿಕೆ(4-5 ತಿಂಗಳ ಕರುಗಳಿಗೆ) # ಕಂದು ರೋಗಕ್ಕೆ ಲಸಿಕೆ-ಶೇ. 100ಷ್ಟು ಹಸು ಹಾಗು ಎಮ್ಮೆಗಳು, ಕುರಿಗಳಿಗೆ (4-8 ತಿಂಗಳ ವಯಸ್ಸಿನ ಎಲ್ಲಾ ಜಾನುವಾರುಗಳಿಗೆ)
• ಕಾಲುಬಾಯಿ ಮತ್ತು ಕಂದ ಹಾಕುವ ರೋಗಗಳು ಜಾನುವಾರುಗಳ ಜೀವಿತಾವಧಿಯಲ್ಲಿ ಶೇ. 30-50ರಷ್ಟು ಹಾಲಿನ ಇಳುವರಿ ನಷ್ಟಕ್ಕೆ ಕಾರಣವಾಗುತ್ತವೆ.
• ಕಾಲುಬಾಯಿ ಮತ್ತು ಕಂದ ಹಾಕುವ ರೋಗಗಳು ರೈತರಿಗೆ ವರ್ಷಕ್ಕೆ 50 ಸಾವಿರ ಕೋಟಿಯಷ್ಟು ನಷ್ಟವನ್ನು ಉಂಟುಮಾಡುತ್ತಿವೆ.
ಆರ್ಥಿಕ ನಷ್ಟ : ಅಂತರರಾಷ್ಟ್ರೀಯ ರಫ್ಟಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತವೆ.
ರೋಗ ಲಕ್ಷಣಗಳು : ಗರ್ಭಪಾತ, ವೃಷಣಗಳು ದಪ್ಪವಾಗುವುದು. ದೇಶದ 51 ಕೋಟಿ ಜಾನುವಾರುಗಳಿಗೆ (ಹಸು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ) ಕಾಲುಬಾಯಿ ರೋಗದ ವಿರುದ್ಧ ವರ್ಷಕ್ಕೆ ಎರಡು ಬಾರಿ ಲಸಿಕೆ ನೀಡುವುದು 03.6 ಕೋಟಿ ಹೆಣ್ಣು ಕರುಗಳಿಗೆ ಕಂದು ರೋಗದ ಲಸಿಕೆ ನೀಡುವುದು.