ಉಚಿತ ಗ್ಯಾಸ್ ಪಡೆಯಲು ಕೆವೈಸಿ ಮಾಡಿಸಲು ಡಿಸೆಂಬರ್ 31 ಕೊನೆಯ ದಿನಾಂಕ ಕೂಡಲೇ ಕೆವೈಸಿ ಮಾಡಿಸಿಕೊಳ್ಳಿ.

ಪ್ರೀಯ ಸಾರ್ವಜನಿಕರೇ ನಿಮಗೊಂದು ಉಪಯೋಗದ ಮಾಹಿತಿ. ಕೂಡಲೇ ಇಲ್ಲಿರುವ ಮಾಹಿತಿ ಓದಿ ಸೌಲಭ್ಯ ಪಡೆಯಿರಿ. ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮತ್ತು ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕ ಅಥವಾ ಕಾರ್ಡ್ ಮೂರನ್ನು ತೆಗೆದುಕೊಂಡು ತಮ್ಮ ಗ್ಯಾಸ್ ನೀಡಿರುವ ಏಜೆನ್ಸಿ ಬಳಿ ಹೋಗಿ KYC ಮಾಡಿಸಬೇಕು. ಡಿಸೆಂಬರ್ 31ರೊಳಗೆ ಗ್ಯಾಸ್ ಏಜೆನ್ಸಿ ಬಳಿ KYC ಕಡ್ಡಾಯ. ಇಲ್ಲವಾದಲ್ಲಿ ಸಿಲಿಂಡರ್ ದರ ಕಮರ್ಷಿಯಲ್ ಆಗಿ ಬದಲಾಗಿ 1400 ರೂ ಆಗಲಿದೆ ಎಂಬ ಸುದ್ದಿ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶ ನೋಡುತ್ತಿದ್ದಂತೆ ಗ್ರಾಹಕರು ಕೆವೈಸಿ ಮಾಡಿಸಲು ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.ಗ್ಯಾಸ

ಡಿಸೆಂಬರ್ 31ರೊಳಗೆ ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮತ್ತು ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕ ಅಥವಾ ಕಾರ್ಡ್ ಮೂರನ್ನು ತೆಗೆದುಕೊಂಡು ತಮ್ಮ ಗ್ಯಾಸ್ ನೀಡಿರುವ ಏಜೆನ್ಸಿ ಬಳಿ ಹೋಗಿ KYC ಮಾಡಿಸಬೇಕು. ಆಗ ಮಾತ್ರ ಜನವರಿ 1 ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್ ಗೆ 903ರಿಂದ 500 ರೂಗೆ ಸಿಗುತ್ತದೆ. ಒಂದು ವೇಳೆ KYC ಮಾಡದಿದ್ದರೆ ಸಬ್ಸಿಡಿ ರಹಿತವಾಗಿ ಕಮರ್ಷಿಯಲ್ ಆಗಿ ಮಾರ್ಪಟ್ಟು 1400 ಕ್ಕೆ ಪಡೆದುಕೊಳ್ಳಬೇಕಾಗುತ್ತದೆ ಎಂಬ ಸಂದೇಶ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿ ನಿಜವೇ ಎಂಬುದನ್ನು ಕನ್ನಡ ಫ್ಯಾಕ್ಟ್ ಚೆಕ್ ತಂಡ ಪರಿಶೀಲಿಸಿದ್ದು, ಈ ವೇಳೆ ಇದು ಉಜ್ವಲ ಯೋಜನೆ ಗ್ರಾಹಕರಿಗೆ ಮಾತ್ರ ಅನ್ವಯ ಎಂಬುದು ಗೊತ್ತಾಗಿದೆ.

ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮಾತ್ರ ಡಿಸೆಂಬರ್ 31ರೊಳಗೆ KYC ಮಾಡಿಸಬೇಕು. ಉಳಿದ ಗ್ರಾಹಕರು KYC ಮಾಡಿಸಬೇಕಾದ ಅಗತ್ಯವಿಲ್ಲ. ಒಂದು ವೇಳೆ ಕೆವೈಸಿ ಮಾಡಿಸದಿದ್ದರೆ ಕಮರ್ಷಿಯಲ್ ಆಗಿ ಬದಲಾಗುತ್ತದೆ ಎಂಬುದು ಸುಳ್ಳು. ಅಂತವರು ಗೃಹಬಳಕೆಯ ಗ್ರಾಹಕರಾಗಿಯೇ ಮುಂದುವರೆಯುತ್ತಾರೆ. ಅವರಿಗೆ ಸಿಗುತ್ತಿರುವ ಸಣ್ಣಪುಟ್ಟ ಸಬ್ಸಿಡಿ ನಿಂತುಹೋಗಬಹುದು ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಉಜ್ವಲ ಯೋಜನೆ ಪಡೆಯಲು ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ.

https://www-pmuy-gov-in.translate.goog/ujjwala2.html?_x_tr_sl=en&_x_tr_tl=kn&_x_tr_hl=kn&_x_tr_pto=tc

ಉಜ್ವಲ 2.0 ಅಡಿಯಲ್ಲಿ ಸಂಪರ್ಕವನ್ನು ಪಡೆಯಲು ಅರ್ಹತೆಯ ಮಾನದಂಡಗಳು –

* ಅರ್ಜಿದಾರರು (ಮಹಿಳೆ ಮಾತ್ರ) 18 ವರ್ಷ ವಯಸ್ಸನ್ನು ತಲುಪಿರಬೇಕು.

* ಒಂದೇ ಮನೆಯಲ್ಲಿ ಯಾವುದೇ OMC ಯಿಂದ ಬೇರೆ ಯಾವುದೇ LPG ಸಂಪರ್ಕ ಇರಬಾರದು.

* ಈ ಕೆಳಗಿನ ಯಾವುದೇ ವರ್ಗಗಳಿಗೆ ಸೇರಿದ ವಯಸ್ಕ ಮಹಿಳೆ – SC, ST, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಅತ್ಯಂತ ಹಿಂದುಳಿದ ವರ್ಗಗಳು (MBC), ಅಂತ್ಯೋದಯ ಅನ್ನ ಯೋಜನೆ (AAY), ಚಹಾ ಮತ್ತು ಮಾಜಿ ಚಹಾ ತೋಟದ ಬುಡಕಟ್ಟುಗಳು, ಅರಣ್ಯವಾಸಿಗಳು, ವಾಸಿಸುವ ಜನರು ದ್ವೀಪಗಳು ಮತ್ತು ನದಿ ದ್ವೀಪಗಳು, SECC ಕುಟುಂಬಗಳು (AHL TIN) ಅಥವಾ 14-ಪಾಯಿಂಟ್ ಘೋಷಣೆಯ ಪ್ರಕಾರ ಯಾವುದೇ ಕಳಪೆ ಮನೆಯ ಅಡಿಯಲ್ಲಿ ಸೇರ್ಪಡೆಗೊಂಡಿವೆ.

ಮೇ 2016 ರಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MOPNG), ಗ್ರಾಮೀಣ ಮತ್ತು ವಂಚಿತ ಕುಟುಂಬಗಳಿಗೆ ಎಲ್‌ಪಿಜಿಯಂತಹ ಶುದ್ಧ ಅಡುಗೆ ಇಂಧನವನ್ನು ಲಭ್ಯವಾಗುವಂತೆ ಮಾಡುವ ಉದ್ದೇಶದೊಂದಿಗೆ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ (ಪಿಎಂಯುವೈ) ಅನ್ನು ಪ್ರಮುಖ ಯೋಜನೆಯಾಗಿ ಪರಿಚಯಿಸಿತು. ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಉರುವಲು, ಕಲ್ಲಿದ್ದಲು, ಹಸುವಿನ ಕೇಕ್ ಇತ್ಯಾದಿಗಳನ್ನು ಬಳಸುವುದು. ಸಾಂಪ್ರದಾಯಿಕ ಅಡುಗೆ ಇಂಧನಗಳ ಬಳಕೆಯು ಗ್ರಾಮೀಣ ಮಹಿಳೆಯರ ಆರೋಗ್ಯದ ಮೇಲೆ ಹಾಗೂ ಪರಿಸರದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಿತು.

 

Spread positive news

Leave a Reply

Your email address will not be published. Required fields are marked *