ರೈತ ಮಿತ್ರರೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರೈತರ ಮನೆ ಬಾಗಿಲಿಗೆ ತಲುಪುವ ನಿಟ್ಟಿನಲ್ಲಿ ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ. ಅದೇ ರೀತಿ ರೈತರು ಸರ್ಕಾರರ ಯೋಜನೆ ಪಡೆದುಕೊಳ್ಳಲು ಕೆಲವು ನಿಯಮಗಳನ್ನು ಸರ್ಕಾರವು ರೂಪಿಸಿದೆ. ಸರ್ಕಾರವು ಕೃಷಿ ಹಾಗೂ ಹಲವಾರು ಯೋಜನೆಗಳನ್ನು ರೂಪಿಸಿದ್ದು ರೈತರ ಆದಾಯ ದ್ವಿಗುಣಗೊಳಿಸಲು ಸಹಕಾರ ಸಂಘಗಳ, ಹಾಗೂ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಅದೇ ರೀತಿ ರೈತರು ಯಾವುದೇ ಸರ್ಕಾರದ ಸೌಲಭ್ಯ ಅಥವಾ ಸರ್ಕಾರದ ಕಡೆಯಿಂದ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಮುಖ್ಯವಾಗಿ ದಾಖಲೆಗಳ ಅವಶ್ಯಕತೆ ಇದೆ. ಹಾಗೂ ರೈತರು ಕೃಷಿಯಲ್ಲಿ ಉಪಕರಣಗಳ ಸಬ್ಸಿಡಿ ಪಡೆಯಲು ಈಗ ಆಧಾರ್ ಕಾರ್ಡ್ ಹಾಗೂ ಫ್ರುಟ್ಸ್ ಐಡಿ ಬಗ್ಗೆ ತಿಳಿದಿರಬೇಕು.
ರೈತರಿಗೆ ಫ್ರುಟ್ ಐಡಿ ಏಕೆ ಬೇಕು ಎಂಬುದನ್ನು ತಿಳಿಯೋಣ. ಮುಖ್ಯವಾಗಿ ಫ್ರುಟ್ ಐಡಿ ಇದ್ದರೆ ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಹಾಗೂ ರೈತರು ಎಷ್ಟು ಸರ್ಕಾರದ ಯೋಜನೆ ಹಾಗೂ ಸರ್ಕಾರದ ಕಡೆಯಿಂದ ಯಾವ ಯಾವ ಬೀಜ, ಗೊಬ್ಬರ, ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದನ್ನು ಸುಲಭವಾಗಿ ನೋಡಬಹುದು. ಅದೇ ರೀತಿ ಫ್ರುಟ್ ಐಡಿಯಿಂದ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರವು ಸ್ಕಾಲರ್ಶಿಪ್ ಅನ್ನು ಅಂದರೆ ರೈತ ವಿದ್ಯಾನಿಧಿ ಹಣವನ್ನು ರೈತರ ಮಕ್ಕಳಿಗೆ ಅವರ ಫ್ರುಟ್ ಐಡಿ ಮೂಲಕ ಹಾಕುತ್ತಾರೆ.
ಫ್ರುಟ್ಸ ಐಡಿ/FID ಪಡೆಯಲು ಬೇಕಾಗುವ ದಾಖಲೆಗಳು –
• ಅರ್ಜಿ ಫಾರ್ಮ್
• ಆಧಾರ್ ಕಾರ್ಡ್
• ಉತಾರ (ಪಹಣಿ)
• ಇತ್ತೀಚೆಗೆ ತೆಗೆದುಕೊಂಡ ಭಾವಚಿತ್ರ
• ಬ್ಯಾಂಕ್ ಪಾಸ್ ಬುಕ್
ಅದೇ ರೀತಿ ರೈತರು ತಮ್ಮ ಜಮೀನಿಗೆ ಸಬ್ಸಿಡಿ ಹಣ ಪಡೆಯಲು ಹಾಗೂ ಹೊಸ ಹೊಸ ಯಂತ್ರೋಪಕರಣಗಳ ಸಬ್ಸಿಡಿ ಪಡೆಯಲು ಕೆಲವು ರೈತರ ಹತ್ತಿರ ದಾಖಲೆಗಳ ಅವಶ್ಯಕತೆ ಇದೆ. ರೈತರು ತಮ್ಮ ಜಮೀನಿನ ದಾಖಲೆಗಳು ಹೊಂದಿದ್ದರೆ ಮಾತ್ರ ಸಬ್ಸಿಡಿ ಪಡೆಯಲು ಸಾಧ್ಯ ಆಗುತ್ತದೆ. ಅದೇ ರೀತಿ ರೈತರಿಗೆ ಎಲ್ಲ ದಾಖಲೆಗಳ ಅವಶ್ಯಕತೆ ತುಂಬಾ ಇದೆ. ರೈತರು ನಾವು ಕೆಳಗೆ ತಿಳಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕು.
ಮುಖ್ಯವಾಗಿ ಯಾವುದೇ ಸಬ್ಸಿಡಿ ಪಡೆಯಲು ಬೇಕಾಗುವ ದಾಖಲೆಗಳು –
• ಅರ್ಜಿ ಫಾರ್ಮ್
• ಆಧಾರ್ ಕಾರ್ಡ್
• 20 ರೂಪಾಯಿ ಬಾಂಡ್
• ಉತಾರ (ಪಹಣಿ)
• ಇತ್ತೀಚೆಗೆ ತೆಗೆದುಕೊಂಡ ಭಾವಚಿತ್ರ
• ಬ್ಯಾಂಕ್ ಪಾಸ್ ಬುಕ್
• ಎಸಿ ಎಸ್ಟಿ ಸದಸ್ಯರು ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು.
ಹೀಗೆ ರೈತರು ತಾವು ಸರ್ಕಾರದ ಕಡೆಯಿಂದ ಬರುವ ಯಾವುದೇ ಸಬ್ಸಿಡಿ ಪಡೆಯಲು ಎಲ್ಲ ದಾಖಲೆಗಳು ಕಡ್ಡಾಯವಾಗಿ ಹೊಂದಿರಬೇಕು. ರೈತರು ದಾಖಲೆಗಳನ್ನು ತೆಗೆದುಕೊಂಡು ಹತ್ತಿರ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬೇಕು. ರೈತರು ಕೃಷಿಯಲ್ಲಿ ಹೆಚ್ಚಿನ ತಾಂತ್ರಿಕತೆಗೆ ಪ್ರೋತ್ಸಾಹ ನೀಡಿ ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ರೈತರು ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು