ಬೆಳೆವಿಮೆ ಹಣದಲ್ಲಿ ಭಾರಿ ಗೊಂದಲ. ಬೆಳೆವಿಮೆ ಹಣ ಬರುವುದು ಡೌಟು.

ರೈತರೇ ಸರ್ಕಾರವು ರೈತರ ವಿಷಯದಲ್ಲಿ ಹಲವಾರು ತೊಂದರೆಗೆ ಸಿಲುಕಿಸುತ್ತಿದೆ. ಬೆಳೆ ವಿಮೆ ಸರಿಯಾಗಿ ಪಾವತಿಯಾಗದೆ ರೈತರಿಗೆ ಅನ್ಯಾಯವಾಗುತ್ತಿದ್ದು, ವಿಮೆ ಕಂಪನಿಗಳಿಗೆ ಲಾಭವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮುಂದೇನು ಎಂಬ ಗೊಂದಲಕ್ಕೆ ರಾಜ್ಯ ಸರ್ಕಾರ ಸಿಲುಕಿದೆ. ಸರ್ಕಾರದಿಂದಲೇ ಸ್ವಂತ ಕಂಪನಿ ಮಾಡುವುದೋ, ಇರುವ ವ್ಯವಸ್ಥೆಯಲ್ಲಿಯೇ ಮುಂದುವರಿಯುವುದೋ ಅಥವಾ ಕಪ್ ಆ್ಯಂಡ್ ಕ್ಯಾಪ್ ಎಂಬ ನಿಯಮಕ್ಕೆ ಪರಿವರ್ತನೆಯಾಗುವುದೋ ಎಂಬ ಚರ್ಚೆ ಇದ್ದು ಸದ್ಯ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ಸರ್ಕಾರದ ಕಾಂಗ್ರೆಸ್‌ನಲ್ಲಿಯೇ ಅನೇಕ ಶಾಸಕರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿಯಿಂದ ಹಿಂದಕ್ಕೆ ಬರುವಂತೆ ಒತ್ತಾಯಿಸುತ್ತಿರುವುದು ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಸರ್ಕಾರದಿಂದಲೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಸಲಹೆಯನ್ನೂ ನೀಡುತ್ತಿದ್ದಾರೆ. ವಿಮೆ ಸರಿಯಾಗಿ ಸಿಗದೆ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ವಿಮೆ ಸಿಕ್ಕರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ರೈತರ ವಲಯದಲ್ಲಿದೆ. ಇದುವರೆಗೂ ಕಂಪನಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ವಿಮೆ ಪರಿಹಾರ ಶೇ.60 ರಿಂದ 70 ಸಿಗುತ್ತಿಲ್ಲ. ಒಂದು ವರ್ಷ ಮಾತ್ರ ಹೆಚ್ಚಿನ ಮೊತ್ತದ ವಿಮೆ ಸಿಕ್ಕಿದೆ.

ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಸೇರಿ 37 ಬೆಳೆಗಳನ್ನು ವಿಮಾ ವ್ಯಾಪ್ತಿಯಲ್ಲಿವೆ. ರೈತರು ಶೇ.2 ವಿಮಾ ಕಂತು ಪಾವತಿಸಿದರೆ, ಉಳಿದ ಮೊತ್ತವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಾವತಿಸುತ್ತಿವೆ. ಕಪ್ ಆ್ಯಂಡ್ ಕ್ಯಾಪ್ ಮಾದರಿ ಕೃಷಿ ವಿಮೆಯಲ್ಲಿ ಹೊಸ ವ್ಯವಸ್ಥೆ ಬರುತ್ತಿದೆ. ಕಪ್ ಆ್ಯಂಡ್ ಕ್ಯಾಪ್ ಅಥವಾ ಅಶ್ಯುರೆನ್ಸ್ ಮಾದರಿ ಎಂದು ಕರೆಯಲಾಗುತ್ತದೆ.

 

ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಬರ ಪರಿಹಾರ ಹಣ ಬರುತ್ತದೆ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿhttps://parihara.karnataka.gov.in/service87/

* ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ.

* ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಪರಿಹಾರ ಹಣ ಬರುತ್ತದೆ.. ಹಾಗೂ ನಿಮಗೆ ಬಂದಿರುವ ಹಣದ ಬಗ್ಗೆ ಸಂಪೂರ್ಣ ಮಾಹಿತಿಯೂ ನಿಮಗೆ ಸಿಗುತ್ತದೆ..

 

ಯಾವಾಗ ರೈತರ ಖಾತೆಗೆ ಮೊದಲ ಕಂತಿನ ಪರಿಹಾರ ಹಣ ಬರುತ್ತದೆ??

ಅರ್ಹ ರೈತರಿಗೆ ಇದೇ ವಾರದ ಒಳಗೆ ಎರಡು ಸಾವಿರ ರು.ವರೆಗೆ ಪರಿಹಾರ ನೀಡಲು ರಾಜ್ಯ ಸರಕಾರ ನಿರ್ಧಾರ ಮಾಡಿದೆ. ಮುಂದಿನ ವಾರ ಅಂದರೆ 15 ಡಿಸೆಂಬರ್ ಒಳಗಡೆ ಪ್ರತಿಯೊಬ್ಬ ರೈತರಿಗೆ ಒಂದು ಹೆಕ್ಟೇರಿಗೆ 2000 ರೂಪಾಯಿ ಹಣ ಡಿಬಿಟಿ ಮೂಲಕ ರೈತರ ಅಕೌಂಟಿಗೆ ಜಮೆ ಮಾಡಲು ಸರ್ಕಾರವು ಒಪ್ಪಿಗೆ ನೀಡಿದೆ. ಅದೇ ರೀತಿ ರೈತರು ಯಾರು ಎಫ್ ಐಡಿ ಮಾಡಿಸಿದವರಿಗೆ ಈ ಹಣ ದೊರೆಯಲಿದೆ.

ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರದ ನೆರವಿಗಾಗಿ ಕಾಯುತ್ತಿದ್ದ ರಾಜ್ಯ ಸರಕಾರ, ಈವರೆಗೆ ನೆರವು ಬಾರದೇ ಇರುವುದರಿಂದ ರಾಜ್ಯದ ವತಿಯಿಂದಲೇ 2,000 ರು. ವರೆಗೆ ಬೆಳೆ ಪರಿಹಾರ ವಿತರಿಸಲು ಮುಂದಾಗಿದೆ.

Spread positive news

Leave a Reply

Your email address will not be published. Required fields are marked *