ಉಚಿತ ಅಕ್ಕಿ ವಿತರಣೆ ಮಾಡುವ ಯೋಜನೆಯನ್ನು ಎಷ್ಟು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಯೋಣ.

ಪ್ರೀಯ ರೈತರೇ ಕೇಂದ್ರ ಸರ್ಕಾರವು ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದೆ. ಅದೇ ರೀತಿ ಕಳೆದ ವರ್ಷ ಕೋವಿಡ್ ಬಂದಾಗಿನಿಂದ ಕೇಂದ್ರ ಸರ್ಕಾರವು ದೇಶದ ಜನರಿಗೆ ಆಹಾರ ಉಚಿತ ಪಡಿತರ ನೀಡುತ್ತಾ ಬಂದಿದೆ. ಅದೇ ರೀತಿ ಪಡಿತರ ವಿಸ್ತರಣೆ ಕರೋನಾ ಸಾಂಕ್ರಾಮಿಕತೆ ಕಾಲದಲ್ಲಿ ಜಾರಿ ಮಾಡಲಾಗಿದ್ದ ಉಚಿತ ಪಡಿತರ ವ್ಯವಸ್ಥೆಯನ್ನು 2023 ಡಿಸೆಂಬರ್‌ವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ಸಭೆ ನಿರ್ಧರಿಸಿದೆ. ಅದೇ ರೀತಿ ನಮ್ಮ ರಾಜ್ಯ ಸರ್ಕಾರವು ಕೂಡ ರಾಜ್ಯದ ಜನರಿಗೆ 5, ಕೆಜಿ ವಿತರಣೆ ಬದಲು ಇನ್ನೂ ಮುಂದೆ 6 ಕೆಜಿ ಅಕ್ಕಿ ವಿತರಣೆ ಮಾಡಲು ಮುಂದಾಗಿದ್ದು ಸಾರ್ವಜನಿಕರಿಗೆ ಇದೊಂದು ಮಹತ್ವವಾದ ಬೆಳವಣಿಗೆ ಆಗಿದೆ.

 

ಏನಿದು ಉಚಿತ ಪಡಿತರ ವ್ಯವಸ್ಥೆ?

ಕೋವಿಡ್ ವೇಳೆ ಆರಂಭಿಸಲಾಗಿದ್ದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅನ್ವಯ ಬಡಕುಟುಂಬಗಳ ಪ್ರತಿಯೊಬ್ಬರಿಗೆ ಮಾಸಿಕ ಐದು ಕೆ.ಜಿ. ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಉಚಿತ ಪಡಿತರ ಯೋಜನೆಯ ವಿಸ್ತರಣೆಯಿಂದ ಕೋಟ್ಯಂತರ ಜನರಿಗೆ ಹಬ್ಬದ ಸೀಸನ್‌ನಲ್ಲಿ ಅನುಕೂಲವಾಗುತ್ತದೆ . ನರೇಂದ್ರ ಮೋದಿ ಪ್ರಧಾನ ಮಂತ್ರಿಯವರು 2022ಡಿಸೆಂಬರ್ ರಂದು ಮುಗಿಯಲಿದ್ದ ಯೋಜನೆಯನ್ನು ಮತ್ತೆ ಕರೋನಾ ಅಲೆ ಬರುವ ಸಂಭವವಿದ್ದು ಡಿಸೆಂಬರ್ 2024 ರ ವರೆಗೆ ವಿಸ್ತರಿಸಲಾಗುತ್ತಿದೆ.

 

ಎಷ್ಟು ವರ್ಷದವರೆಗೆ ವಿಸ್ತರಿಸಲಾಗಿದೆ?

ಮುಖ್ಯವಾಗಿ ಹೇಳಬೇಕೆಂದರೆ ಸರ್ಕಾರವು ಬಡರೇಖೆಗಿಂತ ಕೆಳಗೆ ಇರುವ ರೈತರಿಗೆ ಹಾಗೂ ಬಡ ಜನರ ಪರವಾಗಿ ನಿಂತು ಪಡಿತರ ಉಚಿತ ನೀಡಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ಸರ್ಕಾರವು ಅಕ್ಕಿ ಉಚಿತ ನೀಡಲು 2022 ಡಿಸೆಂಬರ್ ತಿಂಗಳು ವರೆಗೆ ಇದ್ದ ನಿಯಮವನ್ನು 2024 ಡಿಸೆಂಬರ್ ತಿಂಗಳಿಗೆ ವಿಸ್ತರಿಸಲಾಗಿದೆ. ಅದಕ್ಕಾಗಿ ಇದು ಬಡವರ ಪಾಲಿಗೆ ಇದೊಂದು ಒಳ್ಳೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗೂ ಆರ್ಥಿಕ ಉತ್ತೇಜನ ನೀಡಲು ಸಹಾಯವಾಗುತ್ತದೆ.

 

ರೇಷನ್ ಕಾರ್ಡ್ ಆನ್ಲೈನ್ ನಲ್ಲಿ ಹೇಗೆ ಪಡೆಯಬೇಕು?

ಮೊದಲಿಗೆ ಹೊಸ ಪಡಿತರ ಚೀಟಿಯನ್ನು ಆನ್ಲೈನ್ ನಲ್ಲಿ ಪಡೆಯಲು ನೀವು ಈ ಕೆಳಗಿನ ahara.kar.nic.in  ಮೂಲಕ ಪಡೆಯಬಹುದಾಗಿದೆ.

• ಮೊದಲು ಈ ಮೇಲಿನ ಲಿಂಕ್‌ ಮೇಲೆ ಕ್ಲಿಕ್ ಮಾಡಿ ನಿಮಗೆ ಒಂದು ಹೊಸ ಮುಖಪುಟ ಕಂಡು ಬರುತ್ತದೆ ಅಲ್ಲಿ ಈ ಸೇವೆ ಎಂಬ ಮೆನುವು ಕಾಣಿಸುತ್ತದೆ.

• ನಂತರ ಅಲ್ಲಿ ಹೊಸ ರೇಷನ್ ಕಾರ್ಡ್ ಎಂಬ option ಬರುತ್ತದೆ,

• ಅದಾದ ನಂತರ ಹೊಸ ಕಾರ್ಡ್ ಪಡೆಯಲು ಅರ್ಜಿಗಾಗಿ ಕನ್ನಡ ಅಥವಾ ಇಂಗ್ಲೀಷನ್ನು ಆಯ್ಕೆ ಮಾಡಿಕೊಳ್ಳಬೇಕು.

• ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ಆಗ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ OTP ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ಅಲ್ಲಿ ನೀಡುವ ಕ್ಯಾಪ್ಟರ್ ಸರಿಯಾಗಿ ಟೈಪ ಮಾಡಿ Go ಮೇಲೆ ಕ್ಲಿಕ್ ಮಾಡಿ ನಂತರ ಹೆಸರು, ಜನನ ದಿನಾಂಕ, ಲಿಂಗ, ಛಾಯಾಚಿತ್ರ ಮೊದಲಾದವುಗಳು ಕಾಣುತ್ತವೆ.

• ನಂತರ ಅಲ್ಲಿ ನೀವು ಹಾಕಿರುವ ಆಧಾರ್ ಮಾಹಿತಿ ಸರಿಯಾಗಿ ಇದ್ದರೆ Add ಒತ್ತಿ , ಅಲ್ಲಿ ಕುಟುಂಬ ಸದಸ್ಯರ ಮಾಹಿತಿ ಹಾಗೂ ಕುಟುಂಬದ ಯಜಮಾನನಿಗೆ ಇರುವ ಸಂಬಂಧಗಳನ್ನು ಅಲ್ಲಿ ನಮೂದಿಸಿದ ನಂತರ ಅಪ್ಲಿಕೇಶನ್ ನಂಬರ್ ಜನರೇಟ್ ಆಗುತ್ತದೆ.

• ನಂತರ ನೀವು 70 ರೂಪಾಯಿ ಪಾವತಿಸಿ ಪಡೆಯಬೇಕು. ಇದು ಪೋಸ್ಟ್ ಮೂಲಕ ನಿಮ್ಮ ಮನೆಗೆ ಬರುತ್ತದೆ

Spread positive news

Leave a Reply

Your email address will not be published. Required fields are marked *