ಜೋಳದಲ್ಲಿ ಈ ಹುಳುವಿನ ಕಾಟ ಹೆಚ್ಚಾಗಿದೆ. ನಿಯಂತ್ರಣ ಹೇಗೆ ಎಂದು ಇಲ್ಲಿದೆ ನೋಡಿ.

ಜೋಳದಲ್ಲಿ ಲದ್ದಿ ಹುಳುವಿನ ನಿಯಂತ್ರಣ ಹೇಗೆ? ಬನ್ನಿ ಕಡಿಮೆ ಖರ್ಚಿನಲ್ಲಿ ನಿಯಂತ್ರಣ ಬಗ್ಗೆ ತಿಳಿಯೋಣ.

 

ಪ್ರೀಯ ರೈತರೇ ಈಗಾಗಲೇ ಮಳೆಯ‌ ಕೊರತೆ ಎದುರಾಗಿದೆ. ಅದರಂತೆ ಕೆಲವೊಂದು ಕಡೆ ಮಾತ್ರ ಮಳೆಯಾಗಿದೆ. ಇನ್ನೂ ಕೆಲವು ಭಾಗಗಳಲ್ಲಿ ಮಳೆ ಕೊರತೆ ಇದೆ. ಆದರೆ ಸ್ವಲ್ಪ ಮಳೆಯಾದ ಪ್ರದೇಶದಲ್ಲಿ ರೈತರು ಜೋಳ ಬಿತ್ತನೆ ಮಾಡಿದ್ದಾರೆ. ಆದರೆ ಈ ಜೋಳ ಬೆಳೆಯಲ್ಲಿ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಏನೆಂದರೆ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಹಲವು ರೀತಿಯ ರೋಗಗಳು ಕಾಣಿಸಿಕೊಳ್ಳುತ್ತದೆ. ಇದರದಲ್ಲಿ ಬಿತ್ತನೆಯಾಗಿರವ ಜೋಳದ ಬೆಳೆಯಲ್ಲಿ ಕಾಂಡಕೊರಕ ಹಾಗೂ ಎಲೆ ತಿನ್ನುವ ಹುಳುಗಳ ಹೊರತಾಗಿ ಎಲೆ ತಿನ್ನುವ ವಿದೇಶಿ ಆಕ್ರಮಣಕಾರಿ ಸೈನಿಕ ಹುಳುವಿನ ಸಮಸ್ಯೆಯೂ ಕಂಡು ಬರುತ್ತಿದೆ.

ಏನಿದು ಲದ್ದಿ ಹುಳುವಿನ ಕಾಟ? ಇದರ ಲಕ್ಷಣಗಳು ಏನು?

ರೈತರೇ ಈ ಹುಳುವು ಬಿತ್ತನೆ ಮಾಡಿದ 25 ದಿನಗಳಲ್ಲಿ ಕಾಣಲು ಪ್ರಾರಂಭಿಸುತ್ತದೆ. ಅದೇ ರೀತಿ ಇದರ ಪ್ರೌಢ ಕೀಟ ಬೆಳೆಗಳಿಗೆ ಹಾನಿ ಮಾಡುವುದಿಲ್ಲ. ಆದರೆ ಇದರ ಮರಿಯು ಜೋಳ ಸಂಪೂರ್ಣ ಬೆಳೆನಾಶ ಮಾಡುತ್ತದೆ. ಇದು ಬೆಳೆಯ 2 ಎಲೆಗಳು ಇರುವ ಸಂದರ್ಭದಲ್ಲಿ ಬೆಳೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕೀಟಗಳಾದ ಕಾಂಡಕೊರಕ ಹಾಗೂ ಎಲೆ ತಿನ್ನುವ ಹುಳುಗಳ ಜೊತೆಗೆ ಆಕ್ರಮಣಕಾರಿ ಸೈನಿಕ ಹುಳುವಿನ ಪ್ರಬೇಧ ಸ್ಪೊಡೋಪ್ಟೆರಾ ಫ್ರೂಜಿಪೆರಡಾ ಕಂಡುಬಂದಿದೆ.

 

ಈ ರೋಗ ಪತ್ತೆ ಮತ್ತು ಹತೋಟಿ ಕ್ರಮ ಹೇಗೆ?

ಈ ಕೀಟವು ಸುಳಿಯಲ್ಲಿದ್ದುಕೊಂಡು ಎಲೆಗಳನ್ನು ತಿಂದು ಅಧಿಕ ಪ್ರಮಾಣದಲ್ಲಿ ಲದ್ದಿಯನ್ನು ಸುಳಿಗಳಲ್ಲಿ ಹಾಕುತ್ತದೆ. ಇದರಿಂದ ಜೋಳದ ಇಳುವರಿ ಕುಂಠಿತವಾಗುತ್ತದೆ. ಆದ್ದರಿಂದ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.

 

ರಾಸಾಯನಿಕ ಮತ್ತು ಜೈವಿಕ ಹತೋಟಿ ಕ್ರಮಗಳು – 

15 ರಿಂದ 20 ದಿನದ ಬೆಳೆಯಲ್ಲಿ ಪ್ರಾರಂಭ ಹಂತದಲ್ಲಿ ಬೇವಿನ ಎಣ್ಣೆ 2 ಮಿ. ಲಿ. ಪ್ರತಿ ಲೀ. ನೀರಿನೊಂದಿಗೆ ಸಿಂಪರಣೆ ಮಾಡುವುದು. ನಂತರದಲ್ಲಿ ಎಮಮೆಕ್ಟಿನ್ ಬೆಂಜೋಯೇಟ್ 5% ಎಸ್‍ಸಿ ಅಥವಾ 0.4 ಮಿ.ಲಿ. ಕ್ಲೋರಂತ್ರ ನಿಲಿಪ್ರೊಲ್ 18.5% ಅಥವಾ 1 ಮಿ.ಲಿ. ಲ್ಯಾಂಬ್ಡಸೈಹಲೋತ್ರಿನ್ 9.5% ಪ್ರತಿ ಲೀ. ನೀರಿಗೆ ಬೆರೆಸಿ 200-250 ಸಿಂಪರಣಾ ದ್ರಾವಣ ಬಳಸಬೇಕು. ಎಕರೆಗೆ 2 ರಂತೆ ಮೋಹಕ ಬಲೆ/ ಬೆಳಕಿನ ಬಲೆಗಳನ್ನು ಬಳಸಬೇಕು.

ವಿಷ ಪಾಷಣ ತಯಾರಿಕೆ 10 ಕೆಜಿ ಭತ್ತದ ತೌಡು, 2 ಕೆಜಿ ಬೆಲ್ಲ, 100 ಗ್ರಾಂ ಥಯೋಡಿಕಾರ್ಬ್ 75% ಡಬ್ಲ್ಯುಪಿ/250 ಎಂಎಲ್ ಮನೋಕ್ರೋಟೋಫಾಸ್ ಕೀಟನಾಶಕವನ್ನು 5 ಲೀ. ನೀರಿನಲ್ಲಿ ಬೆರೆಸಿ 24 ಗಂಟೆಗಳ ಕಾಲ ಗಾಳಿಯಾಡದಂತೆ ಚೀಲದಲ್ಲಿ ಕಟ್ಟಿ ಇಡುವುದು. 24 ಗಂಟೆಗಳ ನಂತರ ಸಂಜೆ ಸಮಯದಲ್ಲಿ ಈ ವಿಷ ಪಾಷಾಣವನ್ನು ಹೊಲದಲ್ಲಿ ಉಂಡೆ ಮಾಡಿ ಅಲ್ಲಲ್ಲಿ ಇಡಬೇಕು ಎಂದು ಸಲಹೆ ಕೊಡಲಾಗಿದೆ.

 

Spread positive news

Leave a Reply

Your email address will not be published. Required fields are marked *