ಪ್ರೀಯ ರೈತರೇ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರೈತರ ಪರವಾಗಿ ಹಲವಾರು ವರ್ಷಗಳಿಂದ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಕೃಷಿ ಹೆಚ್ಚಿನ ಆದಾಯ ಪಡೆಯಲು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವ ಸರ್ಕಾರಗಳು ಈಗ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ರೈತರಿಗೆ ಸಬ್ಸಿಡಿ ರೂಪದಲ್ಲಿ ಪೈಪ್ ವಿತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ರೈತರು ಅರ್ಜಿ ಸಲ್ಲಿಸಿ.
ಇದರಲ್ಲಿ ಒಟ್ಟು 30 ಪೈಪ್ ಗಳು ಬರುತ್ತಿದ್ದು, ಇವುಗಳು 20ಫೀಟ್ ಅಥವಾ 6 ಮೀ ಉದ್ದವಾಗಿರುತ್ತವೆ. ಹಾಗೂ ಇದರೊಂದಿಗೆ 5 ಬ್ರಾಸ್ ನಾಸೆಲ್ ಗಳು ಬರುತ್ತವೆ. ಕರ್ನಾಟಕ ಸರ್ಕಾರವು ಕೃಷಿ ಇಲಾಖೆಯ ಅಡಿಯಲ್ಲಿ 2023-24ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ (ಸ್ಪಿಂಕ್ಲರ್) ಘಟಕವನ್ನು ಅಳವಡಿಸಿಕೊಳ್ಳಲು 90% ರಷ್ಟು ಸಹಾಯಧನದ ಅಡಿ ನೀರಾವರಿ ಘಟಕ ವಿತರಣೆಗಾಗಿ ರೈತ- ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಆಸಕ್ತ ನೀರಾವರಿ ಮುಂಡರಗಿ ತಾಲೂಕಿನ ರೈತರು ಅರ್ಜಿ ಸಲ್ಲಿಸಬೇಕು.ಎಂದು ಮುಂಡರಗಿ ಸಹಾಯಕ ಕೃಷಿ ನಿರ್ದೇಶಕರು ಪ್ರಮೋದ ತುಂಬಳ ಪ್ರಕಟಿಸಿದ್ದಾರೆ. ಅರ್ಜಿಯೊಂದಿಗೆ ರೈತರು ಲಗತ್ತಿಸಬೇಕಾದ ದಾಖಲಾತಿಗಳು, ನಿಗದಿತ ಅರ್ಜಿ ನಮೂನೆ ಜೊತೆ ರೈತರ ಆಧಾರ ಕಾರ್ಡ ನಕಲು ಪ್ರತಿ, ಖಾತೆ ಉತಾರ, ಬ್ಯಾಂಕ್ ಪಾಸ್ ಪುಸ್ತಕ ನಕಲು ಪ್ರತಿ ನೀರಾವರಿ ದೃಡಿಕರಣ ಪತ್ರ, ತೋಟಗಾರಿಕೆ/ ರೇಷ್ಮೆ ಇಲಾಖೆಗಳಿಂದ ಓಡಿಅ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಅರ್ಜಿ ಸಲ್ಲಿಸುವಾಗ ಇತ್ತೀಚಿನ ಜಾತಿ ಪ್ರಮಾಣ ಪತ್ರದ ನಕಲು ಹೆಚ್ಚಿನ ಮಾಹಿತಿಗಾಗಿ ಮುಂಡರಗಿ ಕೃಷಿ ಇಲಾಖೆ, ಕೃಷಿ ಕೇಂದ್ರ ಹಾಗೂ ಡಂಬಳದ ಕೃಷಿ ಕೇಂದ್ರಗಳಿಗೆ ಬೇಟಿ ನೀಡಿ ಮಾಹಿತಿ ಪಡೆಯಬಹುದು ಮುಂಡರಗಿ ಸಹಾಯಕ ಕೃಷಿ ನಿರ್ದೇಶಕರು ಪ್ರಮೋದ ತುಂಬಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರತಿಯನ್ನು ಅರ್ಜಿಜೊತೆಗೆ ಸಲ್ಲಿಸಬೇಕು. ರೈತರು ಈ ಯೋಜನೆಯ ಲಾಭವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ರೈತರಿಂದ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ (ಸ್ಪಿಂಕ್ಲರ್) ಘಟಕವನ್ನು ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ.
ಸ್ಪಿಂಕ್ಲರ್ ಪೈಪ್ ಪಡೆಯುವುದು ಹೇಗೆ?
ಇದನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರತಿ ವರ್ಷವೂ ಯೋಜನೆಯನ್ನು ಬಿಡಲಾಗುತ್ತದೆ. ಹಾಗೂ ಇದನ್ನು ರೈತರು ಸಣ್ಣ ಬೆಳೆಗಳು ಇದ್ದಾಗ ನೀರು ನಿರ್ವಹಣೆ ಮಾಡಲು ಬಹಳ ಉಪಯುಕ್ತ ವಸ್ತುವಾಗಿದೆ. ಕೂಡಲೇ ನಿಮಗೆ ಈ ಉಪಕರಣಗಳನ್ನು ಪಡೆಯಲು ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಜಿ೯ ಸಲ್ಲಿಸಬಹುದಾಗಿದೆ. ಮುಖ್ಯವಾಗಿ ಹೇಳಬೇಕೆಂದರೆ ಇಲ್ಲಿ ನೀವು ಗಮನಿಸಿರಬೇಕಾದ ಅಂಶ ಎಂದರೆ ನೀವು ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಯಾವ ತಿಂಗಳಿನಲ್ಲಿ ನಿಮ್ಮ ತಾಲೂಕಿನಲ್ಲಿ ಯೋಜನೆ ಬರ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. ನಂತರ ಅರ್ಜಿ ಸಲ್ಲಿಸಿ. ಅದೇ ರೀತಿ ರೈತರು ಸಹ ಇದರ ಬಗ್ಗೆ ಮಾಹಿತಿ ಪಡೆದು ರಾಜ್ಯದಲ್ಲಿ ಹೊಸ ಕೃಷಿ ಪದ್ದತಿಗಳ ಬಗ್ಗೆ ಅರಿವು ಮೂಡಿಸಿಕೊಂಡು ರೈತರು ಸಂಪೂರ್ಣ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು.
ಅಜಿ೯ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
• ಭರ್ತಿ ಮಾಡಿದ ಅರ್ಜಿ ನಮೂನೆ.
• ಉತಾರ/ಪಹಣಿ.
• 20 ರೂ ನೋಟರಿ ಬಾಂಡ್(ಪಾರ್ಟಿ 1 ಅರ್ಜಿದಾರರು, ಪಾರ್ಟಿ 2 ಇಲಾಖೆ)
• ಬೆಳೆ ಪ್ರಮಾಣ ಪತ್ರ, ನೀರಾವರಿ ಮೂಲ ಪ್ರಮಾನ ಪತ್ರ
• ಬ್ಯಾಂಕ್ ಪಾಸ್ ಬುಕ್
• 2 ಪಾಸ್ಪೋರ್ಟ್ ಸೈಜ್ ಫೋಟೋ ಅಥವಾ ಎಫ್. ಐ. ಡಿ ಇದ್ದರೆ ನೀವೇ ಸ್ವತಃ ಆನ್ ನಲ್ಲಿ ಅರ್ಜಿ ಹಾಕಬಹುದು!
ಎಫ್ ಐಡಿ ಮೂಲಕ ಅರ್ಜಿ ಹಾಕುವುದು ಹೇಗೆ?
ಮೊದಲಿಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
•👇 https://kkisan.karnataka.gov.in/Citizen/ApplicationEntryMI.aspx
• ನಂತರ ರೈತರ ರಿಜಿಸ್ಟರ್ ಮೊಬೈಲ್ ನಂಬರಿಗೆ ಓಟಿಪಿ ಹೋಗಿರುತ್ತದೆ. ಅದನ್ನು ಎಂಟರ್ ಮಾಡಿ.
• ಆಗ ನಿಮ್ಮ ವಿವರಗಳು ಓಪನ್ ಆಗುತ್ತವೆ.
• ಅಜಿ೯ ಸಲ್ಲಿಸಲು ಕೆಳಗೆ ಫೈನಾನ್ಶಿಯಲ್ ಇಯರ್(ಆರ್ಥಿಕ ವರ್ಷ) ಸೆಲೆಕ್ಟ್ ಮಾಡಿ 2023-24 ಹಾಕಿ, ನಂತರ ರೈತರ ವಂತಿಗೆ ಎಂದು ಆಯ್ಕೆ ಮಾಡಿ.
• ಹನಿ ನೀರಾವರಿ, ಸ್ಪಿಂಕ್ಲರ್ ಅಥವಾ ಡ್ರಿಪ್ ಇರಿಗೇಷನ್ ಆಯ್ಕೆ ಮಾಡಿ.
• ನಂತರ ನಿಮ್ಮ ಹೊಲದಲ್ಲಿರುವ ಬೆಳೆ ಮೇಲೆ ಕ್ಲಿಕ್ ಮಾಡಿ.
• ನಂತರ 75ಎಂಎಂ ಅಥವಾ 63 ಇದ್ದರೆ ಆ ಸೈಜ್ ಮೇಲೆ ಕ್ಲಿಕ್ ಮಾಡಿ ನಂತರ ಏರಿಯಾವನ್ನು 2.5 ಹೆಕ್ಟೇರ್ ಸೆಲೆಕ್ಟ್ ಮಾಡಿ.
• ನಿಮ್ಮ ಹೊಲದಲ್ಲಿರುವ ಬೆಳೆ ಹಾಗೂ ನೀರಿನ ಮೂಲವನ್ನು ಹಾಕಬೇಕು. ಆಗ ಅದು ಆಟೋಮ್ಯಾಟಿಕ್ ಆಗಿ ಸಹಾಯಧನ ತೆಗೆದುಕೊಳ್ಳುತ್ತದೆ.
• ಇಲ್ಲಿ ನೀವು ಸ್ಪಿಂಕ್ಲರ್ ತಯಾರಕರ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಆಯ್ಕೆ ಮೈಡಿದ ನಂತರ ಸಮ್ಮಿಟ್ ಮಾಡಿ.
• ಆಗ ಅಕ್ನಾಲೆಡ್ನಮೆಂಟ್ ಕಾಪಿ ಬರುತ್ತದೆ. ಅದನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಕೊಟ್ಟರೆ ಅನುದಾನವಿದ್ದರೆ ಕಾರ್ಯಾದೇಶವನ್ನು ನೀಡುತ್ತಾರೆ. ಆಗ ನಿಮಗೆ ಸ್ಪಿಂಕ್ಲರ್ ಸಿಗುತ್ತದೆ.
ರೈತರಿಗೆ ಸಿಗುವ ಸಬ್ಸಿಡಿ ಎಷ್ಟು?
ಸರ್ಕಾರದಿಂದ ಎಸ್ ಸಿ/ಎಸ್ ಟಿ ಯವರಿಗೆ ಶೇ 90 ರಷ್ಟು ಸಬ್ಸಿಡಿ ಹಾಗೂ ಸಾಮಾನ್ಯ ವರ್ಗದವರಿಗೆ ಶೇ. 75 ರಷ್ಟು ಸಬ್ಸಿಡಿ ಸಿಗುತ್ತದೆ. ಉಳಿದ ಮೊತ್ತಕ್ಕೆ ರೈತರು ತಮ್ಮ ವಂತಿಗೆಯನ್ನು ಕಟ್ಟಬೇಕಾಗುತ್ತದೆ. ನೀರಿನ ಕೊರತೆ ಹೆಚ್ಚಾಗಿರುವ ಈ ಸಮಯದಲ್ಲಿ ಇಂತಹ ಸಹಾಯಧನ ಬಳಸಿಕೊಂಡು ಉತ್ತಮ ಸುಧಾರಿತ ಕೃಷಿ ಮಾಡಿದರೆ ರೈತರಿಗೂ ಹಾಗೂ ಪರಿಸರಕ್ಕೂ ಒಳ್ಳೆಯದಾಗುತ್ತದೆ. ಆದ್ದರಿಂದ ಕೂಡಲೇ ರೈತರು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಿರಿ.