ಪ್ರೀಯ ಸಾರ್ವಜನಿಕರೇ ನಿಮಗೊಂದು ಮಹತ್ವದ ಸುದ್ದಿ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. ಇವತ್ತು ರಾಜ್ಯ ಸರ್ಕಾರ ಸಾರ್ವಜನಿಕರ ಪರವಾಗಿ ನಿಂತು ಕೆಲಸ ಮಾಡುತ್ತಿದೆ ಹಾಗೂ ಈಗ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಆ ಯೋಜನೆ ಅಡಿಯಲ್ಲಿ ಸಾರ್ವಜನಿಕರಿಗೆ 10 ಕೆಜಿ ಅಕ್ಕಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಅದೇ ರೀತಿ ಅಕ್ಕಿ ಪೂರೈಕೆ ಕಡಿಮೆ ಇರುವುದರಿಂದ ಅಕ್ಕಿಯ ಬದಲು ಸರ್ಕಾರವು ಹಣ ನೀಡಲು ಮುಂದಾಗಿದೆ. ಅದೇ ರೀತಿ ನಿರಂತರವಾಗಿ ರೇಷನ್ ಪಡೆಯದೇ ಇದ್ದರೆ ಅಂತಹವರಿಗೆ ರೇಷನ್ ಬಂದ್ ಮಾಡುವ ಸಾಧ್ಯತೆ ಬಹಳಷ್ಟು ಇದೆ. ಲೋಕಸಭೆ ಚುನಾವಣೆ ಅಷ್ಟರಲ್ಲಿ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ರೇಷನ್ ಕಾರ್ಡ್ ನೀಡುವ ಗುರಿಯನ್ನು ಸರ್ಕಾರವು ಹೊಂದಿದೆ.
ಅದೇ ರೀತಿ ತಹಸಿಲ್ದಾರ್ ಪ್ರತಿ ಫಲಾನುಭವಿಗಳ ಮನೆಗೆ ಭೇಟಿ ರದ್ದಾದ ರೇಷನ್ ಕಾರ್ಡ್ ಬಗ್ಗೆ ಖುದ್ದು ಪರಿಶೀಲನೆ ಮಾಡಿ ಸತತ 6 ತಿಂಗಳಿಂದ ಯಾರು ರೇಷನ್ ಪಡೆದಿಲ್ಲ ಅಂತವರ ರೇಷನ್ ಒಮ್ಮೆಲೇ ಬಂದ್ ಆಗಿದ್ದರೆ ಅಂತವರು ಸರ್ಕಾರಕ್ಕೆ ಅಂದರೆ ತಹಸಿಲ್ದಾರ್ ಆಫಿಸಿಗೆ ರೇಷನ್ ಮರುಪರಿಶೀಲನೆ ನಡೆಸುವಂತೆ ಅರ್ಜಿ ಸಲ್ಲಿಸಬಹುದು. ಅದೇ ಅಂತಹ ಸಂದರ್ಭದಲ್ಲಿ ತಾಲೂಕಿನ ತಹಸಿಲ್ದಾರ್ ಆಫಿಸರ್ ಖುದ್ದು ಅವರ ಮನೆಗೆ ಭೇಟಿ ನೀಡಿ ರೇಷನ್ ಕಾರ್ಡ್ ಪರೀಶೀಲನೆ ನಡೆಸಿ ಅದರ ಬಗ್ಗೆ ಮಾಹಿತಿ ತಿಳಿದು ಸಮಸ್ಯೆ ನಿವಾರಣೆ ಮಾಡಬೇಕು.
ಸರ್ವರ್ ಡೌನ್ ಸೇರಿ ಇತರ ಸಮಸ್ಯೆಗಳಿಂದ ರೇಷನ್ ಕಾರ್ಡ್ ಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಗೆ ಆಹಾರ ಇಲಾಖೆ ಅಧಿಕಾರಿಗಳು ಹೆಣಕಾಡುವಂತಾಗಿದೆ. ಅಲ್ಲದೆ ಅರ್ಜಿದಾರರು ಪ್ರತಿನಿತ್ಯ ಇಲಾಖೆ ಕಚೇರಿಗಳಿಗೆ ಅಲಿದಾಡುವಂತಿ ಆಗಿದೆ. ಕರೋನಾ ಸಂದರ್ಭದಲ್ಲಿ ಒಂದು ವರ್ಷ ರೇಷನ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ನಂತರ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಅರ್ಜಿಗಳ ವಿಲೇಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು ಅದರಂತೆ ಪ್ರತಿ ತಿಂಗಳು ಒಂದರಂತೆ 14ನೇ ತಾರೀಖಿನವರೆಗೆ ಅರ್ಜಿಗಳ ವಿಲೇ ಪ್ರಕ್ರಿಯೆ ನಡೆಯುತ್ತಿದ್ದರು ಹೇಳಿಕೊಳ್ಳುವಷ್ಟು ಆಗುತ್ತಿಲ್ಲ ಇದರಿಂದ ಸಾವಿರಾರು ಅರ್ಜಿದಾರರು ಸಂಕಷ್ಟ ಅನುಭವಿಸುವಂತಾಗಿದೆ.
ಹೊಸ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ ಎರಡು ಮೂರು ವರ್ಷ ಕಳೆದರೂ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 2021 22 ನೇ ಸಾಲಿನಿಂದ ಈವರೆಗೆ ಪೂರ್ವ ಭಾಗದಲ್ಲಿ 6558, ಉತ್ತರದಲ್ಲಿ 6976, ದಕ್ಷಿಣದಲ್ಲಿ 5,706, ಪಶ್ಚಿಮದಲ್ಲಿ 10738 ಹಾಗೂ ನಗರ ವಿಭಾಗದಲ್ಲಿ 21005 ಸೇರಿ ಒಟ್ಟು 50,983 ಅರ್ಜಿಗಳು ಬಾಕಿ ಉಳಿದಿವೆ. ಆದರೆ ಇದೇ ಲೋಕಸಭಾ ಚುನಾವಣೆ ಅಷ್ಟರಲ್ಲಿ ರಾಜ್ಯದಲ್ಲಿ ಹೊಸ ಬಿಪಿಎಲ್ ಕಾರ್ಡ್ ನೀಡುವ ನಿಟ್ಟಿನಲ್ಲಿ ಸರ್ಕಾರವು ಓಡಾಡುತ್ತಿದೆ. ಹೊಸ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ ಸಿಗುವ ಸಾಧ್ಯತೆ ಬಹಳಷ್ಟಿದೆ.
ಏನು ಬದಲಾವಣೆ? ಏನು ಈ ಮೇರಾ ರೇಷನ್ ಆ್ಯಪ್ ?
ಹೌದು ಇದೊಂದು ಕೇಂದ್ರ ಸರ್ಕಾರ ರಚಿಸಿರುವ ಆ್ಯಪ್ ಆಗಿದೆ. ಅದೇ ರೀತಿ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುವ ಅಕ್ರಮ ಹಾಗೂ ಅನಾಮಿಕ ವ್ಯಕ್ತಿಗಳ ಹೆಸರಿನಲ್ಲಿ ಕಾನೂನುಬಾಹಿರವಾಗಿ ಪಡಿತರ ಎತ್ತುವಳಿ ತಡೆಗೆ ಕೇಂದ್ರ ಸರ್ಕಾರ ‘ ಮೇರಾ ರೇಷನ್ ‘ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶದ ಮೂಲಕ ಪಡಿತರ ಪಡೆಯಬಹುದು.