ಪಿಎಂ ಕಿಸಾನ್ ಹಣ 15 ನೇ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಪಿಎಂ ಕಿಸಾನ್ ಹಣ ರೈತರ ಅಕೌಂಟಿಗೆ ಜಮೆ ಮಾಡಿದ್ದಾರೆ. ಹಾಗೂ ಕೆಲವರಿಗೆ ಬಂದಿದೆ. ಆದರೆ ಯಾವ ಕಾರಣಗಳಿಂದ ಬಂದಿಲ್ಲ ಎಂದು ತಿಳಿಯುವುದು ಮುಖ್ಯ ವಿಷಯವಾಗಿದೆ.

ಭಾರತದ ರೈತರನ್ನು ಆರ್ಥಿಕವಾಗಿ ಸಮೃದ್ಧರನ್ನಾಗಿ ಮಾಡಲು ಮತ್ತು ಅವರನ್ನು ಸಾಲದಿಂದ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯಡಿ, ದೇಶದ ರೈತರು ತಲಾ 2,000 ರೂ.ಗಳ ಕಂತುಗಳಲ್ಲಿ ತಲಾ 6,000 ರೂ.ಗಳ ಸಹಾಯವನ್ನು ಪಡೆಯುತ್ತಾರೆ.

 

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ 8 ಕೋಟಿಗೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಯೋಜನೆಯ 15ನೇ ಕಂತಾಗಿ 18,000 ಕೋಟಿ ರೂ.ಗಳನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ಜನಜಾತಿಯ ಗೌರವ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಬಟನ್ ಕ್ಲಿಕ್ ಮಾಡುವ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯು ರೈತರಿಗೆ ಅವರ ಕೃಷಿ ಮತ್ತು ಇತರ ಸಾಂದರ್ಭಿಕ ಅಗತ್ಯಗಳನ್ನು ಪೂರೈಸುವಲ್ಲಿ ಬೆಂಬಲ ನೀಡುವ ಗುರಿ ಹೊಂದಿದೆ. ಈ ಯೋಜನೆಯಡಿ ಪ್ರತಿ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ಮೊದಲು 2.62 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ವರ್ಗಾವಣೆ ಮಾಡಲಾಗಿದೆ.

 

ಬೆನಿಫೀಶರಿ ಸ್ಟೇಟಸ್ ಚೆಕ್ ಲಿಂಕ್:

https://pmkisan.gov.in/Rpt_BeneficiaryStatus_puh.aspx.

• ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನಂತರ ಅಲ್ಲಿ ನಿಮ್ಮ ರೆಜಿಸ್ಟರ್ ನಂಬರ್ ಹಾಕಿ.

• ನಂತರ ಅಲ್ಲಿ ಕ್ಯಾಪ್ಚ್ಯಾ ಮೇಲೆ ಕ್ಲಿಕ್ ಮಾಡಿ ಅದನ್ನು ಬರೆಯಿರಿ.

• ನಂತರ ಅಲ್ಲಿ ನಿಮಗೆ ನಿಮ್ಮ ಬ್ಯಾಂಕಿನ ಡೀಟೇಲ್ಸ್ ತೋರಿಸುತ್ತದೆ.

• ನಂತರ ಅಲ್ಲಿ ನಿಮಗೆ ಬೇಕಾದ 15 ನೇ ಕಂತಿನ ವಿವರಗಳನ್ನು ತೋರಿಸುತ್ತದೆ.

 

ಫಲಾನುಭವಿ ಸ್ಥಿತಿ ಲಿಂಕ್:

https://pmkisan.gov.in/BeneficiaryStatus New.aspx

ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಸಹ ನೀವು ಸಂಪೂರ್ಣ ಡೀಟೇಲ್ಸ್ ಪಡೆಯಬಹುದು. ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರೊಂದಿಗೆ ಮಾತನಾಡುವುದನ್ನು ನೋಡಲು ಇಲ್ಲಿ ಕಿಳಗಡೆ ನೀಡಿರುವ ಆ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ನೇರವಾಗಿ ಅವರು ಮಾತನಾಡುವುದನ್ನು ನೋಡಬಹುದು.

 

ಈ ಬಾರಿ ಅಂತಹ ಹೆಚ್ಚಿನ ಸಂಖ್ಯೆಯ ಜನರನ್ನು ಕೇಂದ್ರ ಸರ್ಕಾರವು ಗುರುತಿಸಿದೆ, ಅವರು ಈ ಯೋಜನೆಯ ಲಾಭವನ್ನು ಅನ್ಯಾಯದ ರೀತಿಯಲ್ಲಿ ಪಡೆಯುತ್ತಿದ್ದಾರೆ. ಅವರಿಗೆ ಭೂ ಪರಿಶೀಲನೆ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಯೋಜನೆಯ ಪ್ರಯೋಜನವನ್ನು ಪಡೆಯಲು, ಮೊದಲನೆಯದಾಗಿ, ಭೂ ಪರಿಶೀಲನೆ ಅಂದರೆ ಭೂಮಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಅವಶ್ಯಕ. ಅದೇ ರೀತಿ ಇನ್ನೂ ಹಣ ಬರದೆ ಇರುವವರಿಗೆ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದ್ದು ರೈತರು ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೆವೈಸಿ ಮಾಡಿಸಿಕೊಳ್ಳಿ

Spread positive news

Leave a Reply

Your email address will not be published. Required fields are marked *