ಮುಂದಿನ 4 ದಿನ ಮಳೆ ಸಾಧ್ಯತೆ. ಈ ಜಿಲ್ಲೆಯಲ್ಲಿ ಭಾರಿ ಮಳೆ.

  • ರಾಜ್ಯದಲ್ಲಿ ಮೂರು ದಿನ ಮಳೆ Chance of rain for ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲೆ ಸುಳಿಗಾಳಿ ಪರಿಣಾಮ ರಾಜ್ಯದ ವಿವಿಧೆಡೆ ಮುಂದಿನ ಮೂರು ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಹಲವು ಭಾಗಗಳಲ್ಲಿ ವರ್ಷಧಾರೆಯಾಗಿದೆ. ಕೇರಳ, ತಮಿಳುನಾಡು ಭಾಗದಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಅ.31 ರಿಂದ ನ.4ರವರೆಗೆ ಗುಡುಗು ಸಹಿತ ಮಳೆ ಸುರಿಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಮುಂದಿನ 24 ಗಂಟೆ ವ್ಯಾಪಕವಾಗಿ ವರ್ಷಧಾರೆಯಾಗಲಿದೆ. ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿಯೂ ತಾಪಮಾನ ತುಸು ಏರಿಕೆಯಾಗಿದೆ. ಗೋಕರ್ಣದಲ್ಲಿ 36.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.ದ.ಕ.ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಉಡುಪಿಯ ಹೆಬ್ರಿ ಮುನಿಯಾಲು ಸಮೀಪದ ಎಳ್ಳಾರೆ ಶ್ರೀ ಜನಾರ್ದನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಹೆಂಚು ಭಾರಿ ಗಾಳಿ ಮಳೆಗೆ ಹಾರಿವೆ. ಸಿಡಿಲು ಬಡಿದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಮೂವರು ಗಾಯಗೊಂಡಿದ್ದಾರೆ.

 

ಮೌಸಮ್ ಆ್ಯಪ್ ವಿಶೇಷತೆಗಳು? 

ಇದರಲ್ಲಿ ಎಲ್ಲಾ ನಗರಗಳ ತಾಪಮಾನ, ಆದ್ರ್ರತೆ, ಗಾಳಿಯ ವೇಗ ಮತ್ತು ಗಾಳಿಯ ದಿಕ್ಕು ಸೇರಿದಂತೆ ಪ್ರಸ್ತುತ ಹವಾಮಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುತ್ತದೆ.

ಮೌಸಮ್ ಇದಲ್ಲದೆ, ಅಪಾಯಕಾರಿ ಹವಾಮಾನ ಸಮೀಪಿಸುವ ಸಂದರ್ಭದಲ್ಲಿ ಎಚ್ಚರಿಕೆಯಂತೆ, ನಾಗರಿಕರಿಗೆ ಎಚ್ಚರಿಕೆ ನೀಡಲು, ಮುಂದಿನ ಐದು ದಿನಗಳ ವರೆಗೆ ಸಂಭವಿಸಬಹುದಾದ ಘಟನೆಗಳ ಬಗ್ಗೆ ಎಲ್ಲಾ ಜಿಲ್ಲೆಗಳಿಗೆ ಅದರ ತೀವ್ರತೆಯ ಆಧಾರದ ಮೇಲೆ ಬೇರೆ ಬೇರೆ ಬಣ್ಣದ (ಕೆಂಪು, ಕಿತ್ತಳೆ ಮತ್ತು ಹಳದಿ) ಕೋಡ್‌ನಲ್ಲಿ ದಿನಕ್ಕೆ ಎರಡು ಬಾರಿ ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಈ ತರಹದ ಮಾಹಿತಿ ಒದಗಿಸುವ ಹವಾಮಾನ ಕೇಂದ್ರಗಳು ಪ್ರತಿ ರಾಜ್ಯದ ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. IMDಯ ಮತ್ತೊಂದು ಆ್ಯಪ್ “ಮೇಘದೂತ್” ಅಪ್ಲಿಕೇಶನ್ ರೈತರಿಗೆ ಮಾತ್ರ ಆದರೆ ಈ “ಮೌಸಮ್” ಅಪ್ಲಿಕೇಶನ್ ಎಲ್ಲರಿಗೂ ಆಗಿದೆ. ಈ ಅಪ್ಲಿಕೇಶನ್‌ದ ಮುಖ್ಯ ವೈಶಿಷ್ಟ್ಯವೇನೆಂದರೆ ಹತ್ತಿರದ ಹವಾಮಾನ ಕೇಂದ್ರದ ಮಾಹಿತಿಯ ಆಧಾರದ ಮೇಲೆ ನಿಮ್ಮ ಪ್ರದೇಶದಲ್ಲಿ ಸಂಭವಿಸಬಹುದಾದ ಮಳೆ, ಗುಡುಗು ಅಥವಾ ಸಂಭವಿಪಿಸಬಹುದಾದ ಇನ್ಯಾವುದೇ ತೀವ್ರ ಹವಾಮಾನದ ಬಗ್ಗೆ ತಳಿಸುತ್ತದೆ. ಇದಲ್ಲದೆ, ನಗರ ಆಧಾರಿತ ಮಾಹಿತಿ ಮತ್ತು ಮುನ್ಸೂಚನೆಗಳು ಮತ್ತು ರಾಡಾರ್ ಉತ್ಪನ್ನಗಳು ಸಹ ಇರುತ್ತವೆ.

 

ಮೌಸಮ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವದು ಹೇಗೆ?

1. ಮೂಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ (Google Play Store) ಅಥವಾ ಆಪಲ್ ಆಪ್ ಸ್ಟೋರಗೆ (Apple App Store) ಹೋಗಿ,

2. ಹುಡುಕಾಟ (Search) ಪೆಟ್ಟಿಗೆಯಲ್ಲಿ “ಮೌಸಮ್” ಅಪ್ಲಿಕೇಶನ್ (Mausam Application) ಎಂದು ಟೈಪ್ ಮಾಡಿ,

3. ಗೋಚರಿಸುವ ಪಟ್ಟಿಯಲ್ಲಿ “ಮೌಸಮ್” ಇಂಡಿಯನ್ ವೇದರ 66 (Mausam Indian Weather App) ಅಪ್ಲಿಕೇಶನ್‌ಗೆ ಹೋಗಿ, ಮತ್ತು

4. ನಂತರ ನೀವು ಅಪ್ಲಿಕೇಶನ್ ಡೌನಲೋಡ್ ಮಾಡಿ ಅಪ್ಲಿಕೇಶನ್ ಬಳಸಲು ಪ್ರಾರಂಭಿಸಬಹುದು.

Spread positive news

Leave a Reply

Your email address will not be published. Required fields are marked *