ಶಾಕಿಂಗ್ ನ್ಯೂಸ್! ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲು ದುಪ್ಪಟ್ಟು ಹೆಚ್ಚಾಗಲಿದೆ.

ಈ ವರ್ಷ ಬಿಸಿಲು ಹೆಚ್ಚಾಗಲಿದೆ. ಗರಿಷ್ಠ ತಾಪಮಾನ ಹೆಚ್ಚಳ?

ವಾಯವ್ಯ ಮತ್ತು ಪಶ್ಚಿಮ, ಮಧ್ಯ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ನವೆಂಬರ್‌ನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ. ನವೆಂಬರ್‌ನಲ್ಲಿ ದೇಶದಾದ್ಯಂತ ಮಳೆ ಸಾಮಾನ್ಯವಾಗಿ ದೀರ್ಘಾವಧಿಯ ಸರಾಸರಿಯ 77 ರಿಂದ 123 ಪ್ರತಿಶತದಷ್ಟು ಇರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ. ಎಲ್ ನಿನೋ ಪರಿಸ್ಥಿತಿಗಳು ಈ ಅವಧಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಸಕಾರಾತ್ಮಕ ಹಿಂದೂ ಮಹಾಸಾಗರದ ದ್ವಿಧ್ರುವಿ ಸ್ಥಿತಿ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಪೂರ್ವ ಹಿಂದೂ ಮಹಾಸಾಗರಕ್ಕೆ ಹೋಲಿಸಿದರೆ ಪಶ್ಚಿಮ ಹಿಂದೂ ಮಹಾಸಾಗರದ ಪರ್ಯಾಯ ತಾಪಮಾನ ಮತ್ತು ತಂಪಾಗುವಿಕೆಯನ್ನು ಹಿಂದೂ ಮಹಾಸಾಗರ ದ್ವಿಧ್ರುವಿ ಎಂದು ಕರೆಯಲಾಗುತ್ತದೆ. ಹಿಂದೂ ಮಹಾಸಾಗರದ ದ್ವಿಭುವಿಯನ್ನು ಇಂಡಿಯನ್ ನಿನೋ ಎಂದೂ ಕರೆಯುತ್ತಾರೆ.

 

ದಕ್ಷಿಣಭಾರತ, ಪೂರ್ವ-ಮಧ ಭಾರತ, ವಾಯವ್ಯ ಭಾರತ ಹಾಗೂ ಈಶಾನ್ಯ ಭಾರತದ ಹಲವಾರು ಭಾಗಗಳಲ್ಲಿ ವಾಡಿಕೆಯ ಮಳೆ ಬೀಳಲಿದೆ. ಪಶ್ಚಿಮ ಮಧ್ಯ ಭಾರತ, ವಾಯವ್ಯ ಭಾರತ ಹಾಗೂ ಈಶಾನ್ಯ ಭಾರತದ ಸ್ಥಿತ್ಯಂತರದ ಕೆಲವೆಡೆ ಮಾತ್ರ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಸಂಸ್ಥೆ ಮಹಾ ನಿರ್ದೇಶಕ ಎಂ. ಮೊಹಾಪಾತ್ರ ನುಡಿದರು.

 

ಕರ್ನಾಟಕ ರಾಜ್ಯದಲ್ಲಿ ಪ್ರಕೃತಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಬೇಸಿಗೆ ಕಾಲ, ಮಳೆಗಾಲ, ಎನ್ನದೆ ಹವಾಮಾನ ನಿರಂತರ ಬದಲಾವಣೆಗಳನ್ನು ಕಂಡಿದೆ. ಸದ್ಯದಲ್ಲಿ ಉಸ್ತುವಾರಿ ಕೇಂದ್ರವು ಮುಂದಿನ ದಿನಗಳಲ್ಲಿ ಮುಂಗಾರು ಮಳೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ತಿಳಿಸಿದ್ದು, ಈ ಕುರಿತಂತೆ ವಿವರವಾದ ಮಾಹಿತಿಯನ್ನು ಪ್ರಕಟಿಸಿದೆ.

 

ನೈಋತ್ಯ ಮುಂಗಾರು ಅಂತ್ಯ ಈಶಾನ್ಯ ಮಾನ್ಸೂನ್ ಶುರು

ದೇಶದಲ್ಲಿ ನೈಋತ್ಯ ಮುಂಗಾರು ಗುರುವಾರ ಅಧಿಕೃತವಾಗಿ ಕೊನೆ ಗೊಂಡಿದ್ದು, ಚಳಿಗಾಲದ ಮಳೆಯನ್ನು ತರುವ ಈಶಾನ್ಯ ಮಾನ್ಸೂನ್ ಮುಂದಿನ 3 ದಿನಗಳಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜೂ.1ರಂದು ಕೇರಳದಿಂದ ಆರಂಭವಾಗಿದ್ದ ನೈಋತ್ಯ ಮುಂಗಾರು ಜು.8ರ ವೇಳೆಗೆ ಇಡೀ ದೇಶವನ್ನು ಆವರಿಸಿ ಅ.15ರ ಸುಮಾರಿಗೆ ವಾಯವ್ಯ ಭಾರತದಿಂದ ಕೊನೆಗೊಳ್ಳುತ್ತಾ ಬಂದಿದೆ. ಕಳೆದ 5 ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ನೈಋತ್ಯ ಮುಂಗಾರು ದುರ್ಬಲವಾಗಿತು

Spread positive news

Leave a Reply

Your email address will not be published. Required fields are marked *