ಕೃಷಿ ಸಾಲ ಪಡೆಯಲು ರೈತರ ಹತ್ತಿರ ಯಾವ ದಾಖಲೆಗಳು ಇರಬೇಕು?

ಸರ್ಕಾರದಿಂದ ಸಾಲ ಪಡೆಯಲು ಬೇಕಾದ ದಾಖಲೆಗಳು ಯಾವುವು? ಬನ್ನಿ ಇದರ ಲಾಭ ಹೇಗೆ ಪಡೆಯಬಹುದು ಎಂದು ತಿಳಿಯೋಣ.

ನನ್ನ ರೈತ ಮಿತ್ರರೇ ರಾಜ್ಯದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದ್ದು, ಈಗಾಗಲೇ ಹೊಸ ಸರ್ಕಾರವು ಕೂಡ ರಚನೆ ಆಗಿದೆ. ಹಾಗೂ ರೈತರು ಸಹ ಕೃಷಿ ಚಟುವಟಿಕೆಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಮಳೆ ಸಮಸ್ಯೆ ಎದುರಾಗಿದ್ದು ಈಗ ಸರ್ಕಾರವು ರೈತರ ಹಿತದೃಷ್ಟಿಯಿಂದ ಹಾಗೂ ರೈತರಿಗೆ ಕೃಷಿಯಲ್ಲಿ ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲಿ, ಹಾಗೂ ರೈತರು ವ್ಯವಸಾಯ ಮಾಡಲು ಯಾವುದೇ ಹಣದ ತೊಂದರೆ ಆಗದಂತೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ರೈತರ ಹಿತದೃಷ್ಟಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ? ಯಾವ ರೈತರಿಗೆ ನೀಡಲಾಗುತ್ತದೆ?

ಮುಖ್ಯವಾಗಿ ಇದು ಒಂದು ಸರ್ಕಾರದ ಮಹತ್ವಾಕಾಂಕ್ಷಿ ನಿರ್ಧಾರ ಆಗಿದೆ. ರೈತರು ಕೃಷಿಯಲ್ಲಿ ಯಾವುದೇ ಆರ್ಥಿಕ ತೊಂದರೆಯಾಗದಂತೆ ಬೆಳೆಸಾಲ ನೀಡಲು ನೂತನ ಕೃಷಿ ಸಚಿವರು ಚೆಲುವನಾರಾಯಣ ಸ್ವಾಮಿ ಅವರು ಹೇಳಿದ್ದಾರೆ. ಅದೇ ರೀತಿ ಸರ್ಕಾರವು ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಲ್ಪಾವಧಿ ಬೆಳೆ ಸಾಲದ ಮೊತ್ತವನ್ನು ಏರಿಕೆ ಮಾಡಿ ರೈತರಿಗೆ ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಕೃಷಿ ಸಾಲಕ್ಕೆ ಬೇಕಾಗುವ ಕಾಗದಪತ್ರಗಳು –

1. ಚಾಲ್ತಿ ಉತಾರ (RTC)
2. ಬ್ಯಾಂಕ ಸೆಟ್’ (ತಲಾಟಿ ಸೆಟ್) ಗ್ರಾಮ ಲೆಕ್ಕಾಧಿಕಾರಿಗಳಿಂದ ( ಖಾತೆ ಉತಾರ, ಹಾಥ ನಕಾಶ, ಪಂಚಮತಿ ಕಿಮ್ಮತ್ತು ಮತ್ತು ಬೇಬಾಕಿ ಪ್ರಮಾಣ ಪತ್ರಗಳು)
3. ಕೈಬರಹ ಉತಾರ 1990-91 ರಿಂದ 2000-01 ರವರೆಗೆ
4. ಕೈಬರಹ ಉತಾರದಲ್ಲಿರುವ ಎಲ್ಲ ಡೈರಿಗಳು
5. ಕಂಪ್ಯೂಟರ ಉತಾರ 2002-03 ರಿಂದ 2022-23 (ಇಲ್ಲಿಯವರೆಗೆ )
6. ಕಂಪ್ಯೂಟರ ಉತಾಗದಲ್ಲಿರುವ ಎಲ್ಲ ಎಮ್.ಆರ್.ಗಳು (M.R) ತಹಶೀಲ್ದಾರ ಆಫೀಸದಿಂದ
7. ಋಣಭಾರ ಪ್ರಮಾಣ ಪತ್ರ E.C (Encumbrance Certificate) 01-04-1990 ರಿಂದ 31-03-2004 ರವರೆಗೆ Sub-Registrar office ಮತ್ತು 01-04-2004 ರಿಂದ 2022-23( ಇಲ್ಲಿಯವರೆಗೆ) ONLINE
8. PKPS ಮತ್ತು ಇತರ ಬ್ಯಾಂಕ್‌ಗಳಿಂದ ಯಾವುದೇ ಬಾಕಿ ಪ್ರಮಾಣಪತ್ರಗಳಿಲ್ಲ.
9, ಖರೀದಿ’ ಪತ್ರ ಮತ್ತು ಅದರ ದೃಢೀಕರಣ ಪತ್ರ (Sale deed and certified copy ) ಅನ್ವಯಿಸಿದರೆ ಮಾತ್ರ
10. Reconveyance deed ಸಾಲ ಫೇಡಿ ಪತ್ರ ಅನ್ವಯಿಸಿದರೆ ಮಾತ್ರ.

Spread positive news

Leave a Reply

Your email address will not be published. Required fields are marked *