ಏನಿದು ನ್ಯಾನೋ ಯೂರಿಯಾ? ಇದರ ಉಪಯೋಗ ಏನು?
ಇದು ಒಂದು ಸಣ್ಣ ಸಣ್ಣ ಕಣಗಳಿಂದ ಕೂಡಿದ ದ್ರವ ರೂಪದ ಗೊಬ್ಬರ. ಇದು ಶೇ.4ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿದೆ. ಸುಮಾರು 50 ಕೆಜಿ ಬ್ಯಾಗ್‍ನ ರಸಗೊಬ್ಬರ ಬಳಕೆ ಮಾಡುವಷ್ಟು ಜಾಗದಲ್ಲಿ ಕೇವಲ 250 ಮಿ. ಲೀ.ನಷ್ಟು ನ್ಯಾನೋ ಯೂರಿಯಾ ಬಳಕೆ ಮಾಡಿದರೆ ಸಾಕು. ಇದರಿಂದ ರೈತರಿಗೆ ಸಾಗಣೆ ವೆಚ್ಚ ಉಳಿಯುತ್ತದೆ. ಉತ್ಪಾದನಾ ವೆಚ್ಚ ಕಡಿಮೆಯಾಗುವ ಕಾರಣ ಹಣವೂ ಉಳಿತಾಯವಾಗುತ್ತದೆ.
ಭೂಮಿಗೆ ಬಳಸುವ ಯೂರಿಯಾ ರಸಗೊಬ್ಬರದಲ್ಲಿ ಬೆಳೆಗಳಿಗೆ ಶೇ.20 ರಿಂದ 25 ಮಾತ್ರವೇ ಲಭ್ಯವಾಗುತ್ತಿದ್ದು, ಉಳಿದ ಪ್ರಮಾಣವು ವಿವಿಧ ರೀತಿಯಲ್ಲಿ ಬೆಳೆಗಳಿಗೆ ದೊರೆಯದೇ ನಷ್ಟವಾಗುತ್ತದೆ. ಆದರೆ ನ್ಯಾನೋ ಯೂರಿಯಾ ಗೊಬ್ಬರವು ಚಿಕ್ಕ ಗಾತ್ರದ ಕಣಗಳನ್ನು ಹೊಂದಿದ್ದು, ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಿ ಶೇ.80 ರಷ್ಟು ಗೊಬ್ಬರವನ್ನು ಉಪಯೋಗಿಸಲ್ಪಡುತ್ತದೆ.
ಬೆಳೆಗಳ ಪೋಷಕಾಂಶಗಳ ಹೆಚ್ಚಳ
ನ್ಯಾನೋ ಯೂರಿಯಾ ಗೊಬ್ಬರ ಬಳಕೆ ಸಸ್ಯದ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಇದು ಸಸ್ಯದೊಳಗಿನ ಸಾರಜನಕನ ಮತ್ತು ಇತರೆ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ಸಂಯೋಜಿಸುವ ಮಾರ್ಗಗಳನ್ನು ಪ್ರಚೋದಿಸಿ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ
ನ್ಯಾನೋ ಯೂರಿಯಾವನ್ನು ಬಳಸುವ ವಿಧಾನ:
ರೈತರು ತಮ್ಮ ಬೆಳೆಗೆ ಕೊಡುವ ಮೂಲ ಗೊಬ್ಬರ ಅಥವಾ ತಳಗೊಬ್ಬರದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಮೇಲು ಗೊಬ್ಬರವಾಗಿ 2 ರಿಂದ 4 ಮಿ. ಲೀ. ನ್ಯಾನೋ ಯೂರಿಯಾವನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬೇಕು. ಉತ್ತಮ ಫಲಿತಾಂಶಕ್ಕಾಗಿ 20 ರಿಂದ 25 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು.
ಮೊಳಕೆ ಒಡೆದ 30 ರಿಂದ 35 ದಿನಗಳ ನಂತರ ಅಥವಾ ನಾಟಿ ಮಾಡಿದ 20 ರಿಂದ 25 ದಿನಗಳ ನಂತರ (ಸಕ್ರಿಯ ಬೆಳವಣಿಗೆ ಅಥವಾ ಕವಲೊಡೆಯುವ ಹಂತ) ಮೊದಲನೇ ಸಿಂಪಡಣೆ ಹಾಗೂ ಹೂ ಬರುವ ಮುಂಚಿತವಾಗಿ ಅಥವಾ 20 ರಿಂದ 25 ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ ಮಾಡಬೇಕು.
ಕೃಷಿಯಲ್ಲಿ ರೈತರು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದಾರೆ, ಅಗತ್ಯ ಪ್ರಮಾಣದಲ್ಲಿ ಬಳಸುವುದಕ್ಕಿಂತ ಹೆಚ್ಚಾಗಿ ರೈತರು ಬಳಸುತ್ತಿದ್ದಾರೆ. ಅದರಲ್ಲಿ ಯೂರಿಯಾ ಗೊಬ್ಬರದ ಬಳಕೆ ಹೆಚ್ಚಾಗಿದೆ. ರೈತರು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯೂರಿಯಾ ಗೊಬ್ಬರದ ಬಳಕೆ ಅವಶ್ಯಕತೆ ಇದ್ದಷ್ಟು ಮಾತ್ರ ಬಳಸಬೇಕು. ಮಿತ ಯೂರಿಯಾ ಬಳಕೆ ಇತ್ತೀಚೆಗೆ ಯೂರಿಯಾ ಗೊಬ್ಬರ ಕೊರತೆಯನ್ನು ನೀಗಿಸಬಹುದು. ಯೂರಿಯಾ ರಸಗೊಬ್ಬರ ಸಸ್ಯಗಳಿಗೆ ಸಾರಜನಕ ಒದಗಿಸಿ ಉತ್ತಮ ಫಸಲು ಬಿಡಲು ನೆರವಾಗುತ್ತದೆ. ಹಾಗೂ ಇದರಿಂದ ಬೆಳೆಗಳ ಅಭಿವೃದ್ಧಿ ಹಾಗೂ ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಯೂರಿಯಾ ಎಂದೊಡನೆ ನಮ್ಮ ಕಣ್ಣಿನ ಮುಂದೆ ಬರುವುದು ಹರಳು ರೂಪದ ಸಣ್ಣ ಬಿಳಿ ಕಾಳಿನ ಕಾಳುಗಳು. ಇದನ್ನು ಬೆಳೆಗಳಿಗೆ ಸಾರಜನಕ ಪೋಷಕಾಂಶ ಒದಗಿಸಲು ಬಳಸುತ್ತೇವೆ. ಈ ಹರಳಿನ ರೂಪದ ಯೂರಿಯಾದಲ್ಲಿ ಶೇ. 46 ರಷ್ಟು ಸಾರಜನಕದ ಅಂಶ ಇರುತ್ತದೆ. ಈ ಹರಳು ರೂಪದ ಗೊಬ್ಬರವನ್ನು ಬಿತ್ತನೆ ಸಮಯದಲ್ಲಿ ಹಾಗೂ ಮೇಲುಗೊಬ್ಬರವಾಗಿ ಬಳಕೆ ಮಾಡಲಾಗುವುದು ರೂಡಿಯಲ್ಲಿದೆ.
ಇತ್ತೀಚೆಗೆ ರೈತರ ಸಹಕಾರಿ ಗೊಬ್ಬರ ಸಂಸ್ಥೆ –
ಇಸ್ರೋ (IFFCO) ಕಂಪನಿಯವರು ಮಾರುಕಟ್ಟೆಗೆ ನ್ಯಾನೋ ಯೂರಿಯಾ ಬಿಡುಗಡೆ ಮಾಡಿದೆ. ಇದು ಬಾಟಲಿ ರೂಪದಲ್ಲಿ 500 ಮಿ.ಲಿ (ಅರ್ಧ ಲೀಟರ್) ಗಾತ್ರದಲ್ಲಿ ದೊರೆಯುತ್ತದೆ. ಇಸ್ರೋ ಕಂಪನಿಯು ನ್ಯಾನೋ ಯೂರಿಯಾಗೆ ಪೇಟೆಂಟ್ ಹೊಂದಿರುತ್ತದೆ ಹಾಗಾಗಿ ಇಸ್ಕೊ ಕಂಪನಿಯು ಏಕೈಕ ಪೂರೈಕೆದಾರರು ಹಾಗೂ ಮಾಲೀಕರು ಆಗಿರುತ್ತಾರೆ. ಭಾರತದಲ್ಲಿ ಒಂದು ಗೊಬ್ಬರ ಅನುಮೋದಿತವಾಗಿ ಮಾರುಕಟ್ಟೆಗೆ ಬರುವ ಮುನ್ನ ಅನೇಕ ಪ್ರಯೋಗಗಳನ್ನು ಮಾಡಿ, ಸಂಶೋಧನಾ ಫಲಿತಾಂಶಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಅವುಗಳನ್ನು ಪರಿಶೀಲಿಸಿ ಭಾರತ ಸರ್ಕಾರದ ಗೊಬ್ಬರ ನಿಯಂತ್ರಣ ಆದೇಶ (FCO) ಅನುಮೋದನೆ ನೀಡುತ್ತದೆ.
ಇಸ್ಕೊ ಕಂಪನಿಯ ಪ್ರಕಾರ ನ್ಯಾನೋ ಯೂರಿಯಾ ಒಂದು ಸಾವಯವ ಪಾಲಿಮರ್ಗಳನ್ನು ಹೊಂದಿದ್ದು, ಶೇ. 4 ರಷ್ಟು ಸಾರಜನಕವನ್ನು ನ್ಯಾನೋ ಕಾಣಗಳ ರೂಪದಲ್ಲಿ ಹೊಂದಿದೆ. ತೆಳು ಹಾಳೆಯ ಅಳತೆ (0.1 ಮಿ.ಮಿ) ಯನ್ನು ಸಾವಿರದಿಂದ ಭಾಗಿಸಿದರೆ ಸಿಗುವ ಅಳತೆಗೂ ಸಣ್ಣದು (20 ರಿಂದ 50 ನ್ಯಾನೋ ಮೀಟರ್). ನ್ಯಾನೋ ಯೂರಿಯಾದಲ್ಲಿರುವ ಶೇ. 4 ರ ಸಾರಜನಕ ಒಂದು ಬ್ಯಾಗ್ ಯೂರಿಯಾ (45 ಕೆ.ಜಿ) ಗೆ ಸಮ ಎಂದು ಹೇಳಲಾಗುತ್ತದೆ. ಅಂದರೆ 20 ಕೆ.ಜಿ ಸಾರಜನಕಕ್ಕೆ ಸಮ. ಅದು ಹೇಗೆ ಎಂಬುದೇ ಎಲ್ಲರ ವಾದ.
ಹರಿಯಾಣ ರಾಜ್ಯದ ಸಿ.ಸಿ.ಎಸ್.ಎಚ್. ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಮ್ಮೆ ತೋಮರ್ ಅವರ ಪ್ರಕಾರ ನ್ಯಾನೋ ಯೂರಿಯಾದಲ್ಲಿರುವ ಸಾರಜನಕದ ಸಂಪೂರ್ಣ ಬಳಕೆ ಆದರೂ ಕೇವಲ 370 ಗ್ರಾಂ ನಷ್ಟು ಗೋಧಿ ಕಾಳು ಪಡೆಯಲು ಸಾಧ್ಯ. ಆದ್ದರಿಂದ ಈ ನ್ಯಾನೋ ಯೂರಿಯಾ ಬಳಕೆಗೆ ಇವರ ವಿರೋಧವಿದೆ.
ಮಣ್ಣಿಗೆ ಹಾಕುವ ಹರಳು ರೂಪದ ಗೊಬ್ಬರದ ಸಂಪೂರ್ಣ ಬಳಕೆಯು ಬೆಳೆಯಿಂದ ಆಗುವುದಿಲ್ಲ. ಈ ಪ್ರಮಾಣ ಯೂರಿಯಾ ಗೊಬ್ಬರ ಬಳಸಿದಾಗ ಶೇ. 60 ರಷ್ಟು ಇದೆ ಎಂದು ಸಂಶೋಧನೆ ಹೇಳುತ್ತದೆ. ಇಸ್ರೋ ಕಂಪನಿಯು ಈ ನ್ಯಾನೋ ಯೂರಿಯಾವನ್ನು ಮೇಲು ಗೊಬ್ಬರವಾಗಿ ಮಣ್ಣಿಗೆ ನೀಡುವ ಬದಲು ಸಿಂಪರಣೆ ಮೂಲಕ ಎಲೆಗಳಿಗೆ (ಕೆಳಭಾಗ) ತಂಪಾದ ಸಮಯದಲ್ಲಿ ನೀಡಬೇಕೆಂದು, ಬೆಳೆಯ ಅವಧಿಯ 35-45 ದಿನಗಳಿದ್ದಾಗ ಎರಡು ಬಾರಿ ಸಿಂಪರಣೆ (4 ಮಿಲಿ, ಪ್ರತಿ ಲೀ. ನೀರಿಗೆ) ಮಾಡಬೇಕೆಂದು ತಿಳಿಸಿದೆ.
ನ್ಯಾನೋ ಯೂರಿಯಾ ಉತ್ಪನ್ನವನ್ನು ಕಂಡುಹಿಡಿದ ಸಂಶೋಧಕ ಡಾ. ರಮೇಶ ರಾಲಿಯಾ ಅವರು ಹೇಳುವಂತೆ ಸಸ್ಯದಲ್ಲಿ ಬೇರೆ ಬೇರೆ ಭಾಗಗಳಲ್ಲಿ ಸಾರಜನಕದ ಅಂಶವು ಬೇರೆ ಬೇರೆ ಪ್ರಮಾಣದಲ್ಲಿ ಇರುತ್ತದೆ. ನ್ಯಾನೋ ಕಣಗಳು ಹೆಚ್ಚಿನ ಮೇಲೆಯನ್ನು ಹೊಂದಿರುವುದರಿಂದ ಎಲೆಗಳ ಮೇಲೆ ಸಿಂಪಡಿಸಿದಾಗ 10000 ಹೆಚ್ಚು ಪಟ್ಟು ಸಮರ್ಥವಾಗಿ ಬಳಕೆಯಾಗುತ್ತದೆ. ಈ ಕಣಗಳು ಎಲೆಗಳ ಕೆಳಭಾಗದಲ್ಲಿರುವ ರಂಧ್ರ (ಸ್ಟೋಮ್ಯಾಟ) ಗಳಿಂದ ಸುಲಭವಾಗಿ ಒಳ ಸೇರಿ ಫ್ಲೋಯಂ ನಾಳದ ಮೂಲಕ ಅವಶ್ಯವಿರುವ ಕೋಶವನ್ನು ಸೇರುತ್ತದೆ (ಸಿಂಕ್), ಬಳಕೆಯ ಸಾಮರ್ಥ್ಯವೂ ಹೆಚ್ಚಿರುತ್ತದೆ. ಎಲೆಯ ಮೇಲೆ ಸಿಂಪಡಿಸಿದಾಗ ಅನೇಕ ಕಿಣ್ವಗಳು (ಎನ್‌ಜೈಮ್) ಉತ್ತೇಜನಗೊಳ್ಳುತ್ತವೆ.
ಮಣ್ಣಿಗೆ ಹಾಕುವ ಯೂರಿಯಾ ಶೇ. 70 ರಷ್ಟು ನಷ್ಟವಾಗಿಯೇ ಹೋಗುವುದರಿಂದ ಕೇವಲ ಶೇ. 30 ರಷ್ಟು ಬೆಳೆಗೆ ಬಳಕೆಯಾಗುತ್ತದೆ. ಆದ್ದರಿಂದ ನ್ಯಾನೋ ರೂಪದ ಸಾರಜನಕ ಬಳಸಿದಾಗ ಉತ್ತಮ ಫಲಿತಾಂಶ ದೊರೆಯುತ್ತದೆ. ಆದರೆ ಅದಕ್ಕೆ ಇರುವ ಕಾರಣಗಳು ಇನ್ನೂ ದೃಢಪಡಬೇಕಿದೆ ಎಂದು ತಿಳಿಸಿದ್ದಾರೆ. ಈ ಮೇಲಿನ ಅಂಶಗಳನ್ನೆಲ್ಲಾ ಗಮನಿಸಿದರೆ ಒಂದಂತೂ ನಿಜ. ನ್ಯಾನೋ ಯೂರಿಯಾ ಉತ್ತಮ ಫಲಿತಾಂಶ ನೀಡುತ್ತದೆ. ಅಲ್ಲದೆ ಸರ್ಕಾರದ ಮೇಲಿನ ಹಣಕಾಸಿನ ಹೊರೆಯನ್ನು ತಗ್ಗಿಸುತ್ತದೆ. ಒಂದು ಕ್ವಿಂಟಲ್ ಯೂರಿಯಾಕ್ಕೆ ಮಾರುಕಟ್ಟೆ ಬೆಲೆ ರೂ. 700 ರಷ್ಟಿದೆ. ಅದರ ಉತ್ಪಾದನೆಗೆ ತಗಲುವ ಖರ್ಚು ಸುಮಾರು ರೂ. 2000 ಕ್ಕೂ ಅಧಿಕ. ಇಲ್ಲಿ ಸರ್ಕಾರ ಸಬ್ಸಿಡಿ ನೀಡುವುದರಿಂದ ರೈತರಿಗೆ ಕಡಿಮೆ ದರದಲ್ಲಿ ದೊರೆಯುತ್ತದೆ.
ಇನ್ನು ಎರಡನೇ ಲಾಭ ಆಡಳಿತಾತ್ಮಕವಾಗಿದೆ. ಯೂರಿಯಾ ಸಾಗಾಟಕ್ಕೆ ಹೆಚ್ಚು ಖರ್ಚು ತಗಲುತ್ತದೆ. ಅದರ ಮೇಲೆ ನಿಗಾ ವಹಿಸುವ ಕೆಲಸವು ಅಧಿಕವಾಗಿದೆ. ಕೃಷಿ ಅಧಿಕಾರಿಗಳು ವರದಿಯನ್ನು ಆಗಿಂದಾಗ್ಗೆ ಸರ್ಕಾರಕ್ಕೆ ಸಲ್ಲಿಸಬೇಕು.
ಇನ್ನು ಮೂರನೇ ಲಾಭ ಪರಿಸರಾತ್ಮಕವಾಗಿದೆ. ಹರಳು ರೂಪದ ಯೂರಿಯಾ ಬಳಸಿದಾಗ ಅದು ವಾತಾವರಣಕ್ಕೆ ಆವಿಯಾಗಿ ಸೇರಿ ನೈಟ್ರಸ್ ಆಕ್ಸೆಡ್ ನಿಂದ ಓರೋನ್ ಪದರಕ್ಕೆ ಧಕ್ಕೆ ಯಾಗುತ್ತದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಯೂರಿಯಾ ಅಂಶವು ಮಳೆ ನೀರಿನಲ್ಲಿ ಕೂಡಿ ಹೋಗಿ ಗುಂಡಿಗಳಲ್ಲಿ ನಿಂತಾಗ ಕೊಳಚೆ ಹೆಚ್ಚಾಗಿ ಶಿಲೀಂಧ್ರ ಬೆಳೆದು ಯೂಟ್ರೋಫಿಕೇಶನ್ ಆಗುವ ಸಾಧ್ಯತೆ ಇದೆ. ಜೊತೆಗೆ ಯೂರಿಯಾದಿಂದ ಸಾರಜನಕವು ಬಿಡುಗಡೆಯಾದಾಗ ನೈಟ್ರೇಟ್ ಆಗಿ ಮಳೆನೀರಾವರಿ ನೀರಿನಿಂದ ಮಣ್ಣಿನಲ್ಲಿ ಬಸಿದು ಅಂತರ್ಜಲ ಸೇರಿ “ಬ್ಲೂ ಬೇಬಿ ಸಿಂಡೋಮ್” – (ಮಕ್ಕಳಲ್ಲಿ ನೀಲಿ ಕಣ್ಣಿನ ರೋಗ) ಬರುವ ಸಾಧ್ಯತೆ ಇದೆ. ಆದರೂ ಸಿಂಪರಣೆ ಮಾಡುವ ಕೆಲಸಗಾರರ ಅವಶ್ಯಕತೆ ಇದ್ದು ಈ ನ್ಯಾನೋ ಯೂರಿಯಾ ಬಳಕೆಗೆ ತಡೆಯಾಗುವ ಸಾಧ್ಯತೆ ಇದೆ. ಡೋನ್ ಬಳಸಿ ಇದರ ಉಪಯೋಗ ಮಾಡುವುದನ್ನು ಸಂಶೋಧನೆ ಮೂಲಕ ಇನ್ನು ಕಂಡುಕೊಳ್ಳಬೇಕು.
ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ಗೊಬ್ಬರ ಒದಗಿಸಬೇಕು, ಅಧಿಕ ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ನೀಡುವುದರಿಂದ ಅನೇಕ ದುಷ್ಪರಿಣಾಮಗಳು ಆಗುತ್ತವೆ. ಯೂರಿಯಾ ಬಳಕೆಯಿಂದ ಅನುಕೂಲಕ ಹಾಗೂ ಅನಾನುಕೂಲ ಇವೆ.
ಯೂರಿಯಾ ಮೀತಿ ಮೀರಿ ಬೆಳೆಸುವುದು ಆಗುವ ದುಷ್ಪರಿಣಾಮಗಳು- ಬಳಕೆಯಿಂದ
• ಇದು ಸಸ್ಯಗಳ ಶಾರೀರಿಕ ಬೆಳವಣಿಗೆಯು ನಿಯಂತ್ರಣವಿಲ್ಲದೆ ಮುಂದುವರಿಯುತ್ತದೆ.
• ಬೆಳೆ ಶಾರೀರಿಕ ಬೆಳವಣಿಗೆ ಹೆಚ್ಚಿಗೆ ಆಗಿ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ.
• ಇದರಿಂದ ಹೂವುಗಳ ಉತ್ಪಾದನೆ ಕಡಿಮೆಯಾಗುತ್ತದೆ.
• ತೆನೆಯ ಗಾತ್ರ ಹಾಗೂ ಕಾಳು ಕಟ್ಟುವಿಕೆ ಕೆಲವು ಮಾತ್ರಕ್ಕೆ ಸೀಮಿತಗೊಂಡು ಉತ್ಪಾದನೆಯಲ್ಲಿ ಬಹಳ ಕಡಿಮೆಯಾಗುತ್ತದೆ.
• ಮುಖ್ಯವಾಗಿ ರೋಗ , ಕೀಟ ಬಾಧೆ ಹೆಚ್ಚಳ
• ಸಸ್ಯದ ಶಾರೀರಿಕ ಬೆಳವಣಿಗೆ ಮಾತ್ರ ಆಗುವುದರಿಂದ ಬೆಳೆಗಳಿಗೆ ರೋಗ ಹಾಗೂ ಕೀಟದ ಬಾಧೆಗೆ ತುತ್ತಾಗುತ್ತವೆ.
• ಶಾರೀರಿಕ ಬೆಳವಣಿಗೆ ಆಗುವುದರಿಂದ ದ್ಯೂತಿಸಂಶ್ಲೇಷಣೆ ಕ್ರಿಯೆ ಕಡಿಮೆ ಆಗಿ ಇಳುವರಿ ಕುಂಠಿತಗೊಳ್ಳುತ್ತದೆ.
ಯೂರಿಯಾ ಪೋಷಕಾಂಶಗಳ ಸಮತೋಲನದಲ್ಲಿ ಏರುಪೇರಿನಿಂದ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತವೆ, ಅದರಲ್ಲಿ ಮುಖ್ಯವಾಗಿ – ಅವೈಜ್ಞಾನಿಕವಾಗಿ(ಹೆಚ್ಚಾಗಿ) ಯೂರಿಯಾ ಬಳಕೆಯಿಂದ ಮಣ್ಣಿನಲ್ಲಿ ಸಾರಜನಕದ ಲಭ್ಯತೆ ಅಧಿಕಗೊಂಡಾಗ ಇನ್ನಿತರ ಬೇರೆ ಪೋಷಕಾಂಶಗಳು ಬೆಳೆಗಳಿಗೆ ದೊರೆಯುವ ಪ್ರಮಾಣ ಕುಂಠಿತವಾಗುತ್ತದೆ.
ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ಅವಶ್ಯಕತೆಗೆ ಪೋಷಕಾಂಶಗಳ ಮಣ್ಣಿನಿಂದ ದೊರೆಯದ ಕೊರತೆಯುಂಟಾಗುತ್ತದೆ. ಅದಕ್ಕಾಗಿ ಮೂರು ಗೊಬ್ಬರ ಬಳಕೆ ಮಿತವಾಗಿ ಬಳಸಬೇಕು. ಇಲ್ಲವಾದರೆ ಉತ್ಪನ್ನದಲ್ಲಿ ಏರುಪೇರಾಗುವ ಸಾಧ್ಯತೆ ಬಹಳ ಇದೆ.
ಹೆಚ್ಚಾಗಿ ಯೂರಿಯಾ ಬಳಕೆಯಿಂದ ಸಾರಜನಕ(ಯೂರಿಯಾ) ಮಣ್ಣಿನಲ್ಲಿ ವ್ಯರ್ಥ ಆಗುವ ಸಂಭವವಿದೆ. ಯೂರಿಯಾವನ್ನು ಮಣ್ಣಿಗೆ ಸೇರಿಸಿದಾಗ ಅದು ರಾಸಾಯನಿಕ ಕ್ರಿಯೆಗೆ ಒಳಪಟ್ಟು ಯೂರಿಯಾ ಗೊಬ್ಬರವು ಅಮೋನಿಯಂ ಬೈಕಾರ್ಬೋನೆಟ್ ಆಗಿ ಬದಲಾವಣೆಯಾಗುತ್ತದೆ. ಹಾಗೂ ಹೆಚ್ಚಾಗಿ ಬಳಸುವುದರಿಂದ ಮಣ್ಣಿನಿಂದ ಸಾರಜನಕದ ಬಸಿಯುವಿಕೆ ಆಗುತ್ತದೆ. ಹೆಚ್ಚು ಯೂರಿಯಾ ಬಳಕೆಯಿಂದ ಹೆಚ್ಚು ನೈಟ್ರೇಟ್ ಬಿಡುಗಡೆಯಾಗುತ್ತದೆ, ಇದು ನೈಟ್ರೇಟ್ ಎಂಬ ರಾಸಾಯನಿಕ ಬೆಳೆಗಳಿಗೆ ಅವಶ್ಯಕತೆಯಿಲ್ಲ. ಹಾಗೂ ಇದು ಸಾರಜನಕ ಸ್ಥಿರಿಕರಣದಲ್ಲಿ ವ್ಯತ್ಯಾಸ ಉಂಟು ಮಾಡುತ್ತದೆ.
ಅಧಿಕ ಪ್ರಮಾಣದಲ್ಲಿ ಯೂರಿಯಾ ಬಳಸಿದಾಗ ಬೇರುಗಳಲ್ಲಿ ಗಂಟು(ಸಾರಜನಕದ ಸ್ಥಿರೀಕರಣ) ಮಾಡುವ ಕ್ರಿಯೆಗೆ ಧಕ್ಕೆಯುಂಟಾಗುತ್ತದೆ. ಈ ಎಲ್ಲ ಕಾರಣಗಳು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುವುದರಿಂದ ಆಗುತ್ತದೆ. ರೈತರು ಕೃಷಿಯಲ್ಲಿ ಅನಗತ್ಯವಾಗಿ ಯೂರಿಯಾ ಬಳಸದೇ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಯೂರಿಯಾ ಬಳಕೆಯಿಂದ ಕೀಟದ ಬಾಧೆ ಹೆಚ್ಚಾಗುತ್ತದೆ ಇದು ರೈತರ ಗಮನದಲ್ಲಿರಿಸಿಕೊಂಡು ಬಳಕೆ ಮಾಡಬೇಕು.