ಬೆಳೆಹಾನಿ ಪರಿಹಾರ ಜಮೆ! ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ.

ಬೆಳೆಹಾನಿ ಪರಿಹಾರ: ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ರೈತರು ಸಾಮಾನ್ಯವಾಗಿ ಮುಂಗಾರು ಬಿತ್ತನೆ ಮಾಡಿ ಉತ್ಪನ್ನ ಅಷ್ಟರಮಟ್ಟಿಗೆ ಬಂದಿದೆ. ಏಕೆಂದರೆ ಮಳೆಯ ಕಾರಣ ಕೆಲವು ಬೆಳೆಗಳು ನಾಶವಾಗಿವೆ. ಅದಕ್ಕಾಗಿ ಸರ್ಕಾರವು ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗಿದೆ. ಹೌದು, ರಾಜ್ಯದ ವಿವಿಧ ಜಿಲ್ಲೆಗಳ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗುತ್ತಿರುವುದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಈಗ ಬೀದರ್ ಜಿಲ್ಲೆಯ ರೈತರ ಖಾತೆಗೂ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗಿದೆ.

ಏನಿದು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ?

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಒಂದು ಬೆಳೆ ವಿಮೆ ಯೋಜನೆಯಾಗಿದ್ದು, ರೈತರಿಗೆ ಬೆಳೆ ನಷ್ಟವಾದಾಗ (ಕೀಟಗಳು, ಹವಾಮಾನ ವೈಪರೀತ್ಯ) ಆರ್ಥಿಕ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ರೈತರು ಕಡಿಮೆ ಪ್ರೀಮಿಯಂ ಪಾವತಿಸಿ ಬೆಳೆ ವಿಮೆ ಪಡೆಯಬಹುದು, ಮತ್ತು ವಿಮಾ ಮೊತ್ತವನ್ನು ಸರ್ಕಾರ ಭರಿಸುತ್ತದೆ. ಇದು ಬೆಳೆ ವಿಫಲವಾದಾಗ ರೈತರಿಗೆ ಆರ್ಥಿಕ ನೆರವು ನೀಡಿ, ಕೃಷಿ ಕ್ಷೇತ್ರವನ್ನು ಸ್ಥಿರಗೊಳಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬೀದರ್ ಜಿಲ್ಲೆಯ 1,86,426 ರೈತರಿಗೆ 261.43 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಮೆ ಮಾಡಿವೆ. ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲಾಗಿದೆ. ಪಿಎಂಎಫ್ಬಿವೈ (PMFBY) ಯೋಜನೆಯಡಿ 36.74 ಕೋಟಿ ರೂಪಾಯಿ ವಿಮಾ ಪರಿಹಾರವನ್ನು ವರ್ಗಾಯಿಸಲಾಗಿದೆ. ಹೀಂಗಾರಿ ಹಂಗಾಮಿನ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.

ಅಫ್ಲಿಕೇಷನ್ ಎಲ್ಲಿ ಹಾಕಬೇಕು?

ನೀವು ನಿಮ್ಮ ಬೆಳೆಯ ಆಧಾರದ ಮೇಲೆ ನಿಮ್ಮ ಹತ್ತಿರದ ತಲಾಟಿ ಆಫಿಸ್ ಅಥವಾ ಗ್ರಾಮ ಒನ್ ಸೆಂಟರ್ ಭೇಟಿ ನೀಡಿ ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅಪ್ಲಿಕೇಶನ್ಗಳನ್ನು ಹಾಕ  ಬೇಕು.

ಯಾವೆಲ್ಲಾ ದಾಖಲೆಗಳು ಬೇಕು?

  • ಆಧಾರ್ ಕಾರ್ಡ್
  • ಪಹಣಿ
  • ಬ್ಯಾಂಕ್ ಖಾತೆ
  • ಫ್ಯಾನ್ ಕಾರ್ಡ್
  • ವೋಟರ್ ಕಾರ್ಡ್
  • ಬೆಳೆಯ ದಾಖಲೆ.

ಹಣ ಬಂದಿದೆ ಎಂದು ಚೆಕ್ ಮಾಡುವುದು ಹೇಗೆ?

ಮೊದಲಿಗೆ ::SAMRAKSHANE-KARNATAKA :: Crop Insurance Application – NIC-Bangalore https://share.google/mLEA7oBD6vuQQsQpl
* ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ವರ್ಷ ಆಯ್ಕೆ ಮಾಡಬೇಕು.
* ನಂತರ ಅಲ್ಲಿ ಮುಂಗಾರು, ಹಿಂಗಾರು ಎಂದು ತೋರುತ್ತದೆ ಅಲ್ಲಿ ಮುಂಗಾರು ಎಂದು ಆಯ್ಕೆ ಮಾಡಬೇಕು.
* ನಂತರ ಅಲ್ಲಿ ಸ್ಟೇಟಸ್ ಚೆಕ್ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ನಂಬರ್ ಹಾಕಿ, ಅಥವಾ ಅಫ್ಲಿಕೇಷನ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಿ.
* ನಿಮಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.

ಯಾವ ಬೆಳೆಗೆ ಎಷ್ಟು ಪರಿಹಾರ ಹಣ ನೀಡಲಾಗಿದೆ?

ಮಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ ರೈತರಿಗೆ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಪ್ರತಿ ಹೆಕ್ಟೇರಿಗೆ ಮಳೆಯಾಶ್ರಿತ 8500 ರೂಪಾಯಿ, ನೀರಾವರಿ ಬೆಳೆಗೆ 17 ಸಾವಿರ ರೂಪಾಯಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ 22500 ರೂಪಾಯಗಳಂತೆ ಒಟ್ಟು ರೈತರಿಗೆ 10 ಹಂತಗಳಲ್ಲಿ ಪರಿಹಾರ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು.

ಸರ್ಕಾರದಿಂದ ಘೋಷಿಸಲಾದ ಹೆಚ್ಚುವರಿ ಪರಿಹಾರ ಮೊತ್ತ 8500 ರೂಪಾಯಿಗಳನ್ನು ಸಹ ಹಂತ ಹಂತವಾಗಿ 7 ಹಂತಗಳಲ್ಲಿ ಒಟ್ಟು 1,86,426 ರೈತರಿಗೆ 134.27 ಕೋಟಿ ರೂಪಾಯಿ ಪರಿಹಾರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
https://pmfby.gov.in/ ಈ ಲಿಂಕ್ ಓಪನ್ ಮಾಡಿದರೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು.

Spread positive news

Leave a Reply

Your email address will not be published. Required fields are marked *