ಬೋರ್ಡೋ ದ್ರಾವಣ : ಪ್ರೀಯ ರೈತರೇ ಇವತ್ತು ನಿಮಗೆ ಒಂದು ಉಪಯುಕ್ತ ಮಾಹಿತಿ ನೀಡುತ್ತೇನೆ. ಅದೇ ಬೋರ್ಡೋ ದ್ರಾವಣ (Bordeaux mixture). ಎಂದರೆ ತಾಮ್ರದ ಸಲ್ಫೇಟ್ ಮತ್ತು ಸುಣ್ಣವನ್ನು ನೀರಿನಲ್ಲಿ ಬೆರೆಸಿ ತಯಾರಿಸುವ ಒಂದು ಪರಿಣಾಮಕಾರಿ ನೈಸರ್ಗಿಕ ಶಿಲೀಂಧ್ರನಾಶಕ, ಇದನ್ನು ಮುಖ್ಯವಾಗಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಫಿ, ಕಾಳುಮೆಣಸು ಮತ್ತು ಹಣ್ಣು-ತರಕಾರಿಗಳಿಗೆ ಬರುವ ಶಿಲೀಂಧ್ರ ರೋಗಗಳನ್ನು ತಡೆಗಟ್ಟಲು ಬಳಸುತ್ತಾರೆ; ಇದನ್ನು ಮುಂಜಾಗ್ರತಾ ಕ್ರಮವಾಗಿ ಸಿಂಪಡಿಸಬೇಕು ಮತ್ತು ಸರಿಯಾದ ರೀತಿಯಲ್ಲಿ (ಮೈಲುತುತ್ತು, ಸುಣ್ಣವನ್ನು ಪ್ರತ್ಯೇಕವಾಗಿ ಕರಗಿಸಿ, ನಂತರ ಬೆರೆಸಿ) ತಯಾರಿಸುವುದು ಮುಖ್ಯ, ಇಲ್ಲದಿದ್ದರೆ ಬೆಳೆಗಳಿಗೆ ಹಾನಿಯಾಗಬಹುದು.
ಬೋರ್ಡೋ ಮಿಶ್ರಣ ತಯಾರಿಸುವ ವಿಧಾನ –
ಬೋರ್ಡೋ ದ್ರಾವಣವನ್ನು ತಯಾರಿಸಲು ಬೇಕಾಗುವ ಸಾಮಾನುಗಳು –
ಮೈಲುತುತ್ತ
ಸುಣ್ಣದ ಹರಳು
ಸಿಮೆಂಟಿನ ಅಥವಾ ಮಣ್ಣಿನ ಪಾತ್ರೆ
ಲಿಟ್ಕಸ್ ಪೇಪರ್
ಸ್ವಚ್ಛವಾದ ಸ್ಟೀಲಿನ ಚಾಕು
ಶೇಕಡ 1 ರ ಬೋರ್ಡೋ ಮಿಶ್ರಣ ತಯಾರಿಕೆ :
ಒಂದು ಕಿ.ಗ್ರಾಂ. ಮೈಲುತುತ್ತೆಯನ್ನು 50 ಲೀಟರ್ ನೀರಿನಲ್ಲಿ ಕರಗಿಸಬೇಕು.
ಅದರಂತೆ ಇನ್ನೊಂದು ಪಾತ್ರೆಯಲ್ಲಿ 1 ಕಿ.ಗ್ರಾಂ. ಸುಣ್ಣದ ಹರಳನ್ನು 50 ಲೀಟರ್ ನೀರಿನಲ್ಲಿ ಕರಗಿಸಬೇಕು.
ನಂತರ ಮೈಲುತುತ್ತೆ ದ್ರಾವಣ ಹಾಗೂ ಸುಣ್ಣದ ತಿಳಿ ನೀರನ್ನು ಮೂರನೆಯ ಪಾತ್ರೆಯಲ್ಲಿ ಸುರಿಯಬೇಕು. ಎರಡೂ ದ್ರಾವಣಗಳನ್ನು ಒಟ್ಟಿಗೆ ಸುರಿಯಬೇಕು.
ಈಗ ಈ ಮಿಶ್ರಣವು ಶೇಕಡ 1 ರಷ್ಟು ಆಗುತ್ತದೆ. ಎರಡೂ ಕೂಡಿ ಒಟ್ಟು ದ್ರಾವಣ 100 ಲೀಟರ್ ಆಗುತ್ತದೆ.
ಈ ಮಿಶ್ರಣವು ಸರಿಯಾಗಿ ತಯಾರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬೇಡನ್ನು ದ್ರಾವಣದಲ್ಲಿ ಅದ್ದಬೇಕು.
ಒಂದು ವೇಳೆ ಚಾಕು ಅಥವಾ ಬ್ಲಡ್‌ನ ಮೇಲೆ ಕೆಂಪು ಬಣ್ಣ ಕಂಡು ಬಂದರೆ ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ಇಂತಹ ಮಿಶ್ರಣವು ತಿಳಿ ನೀಲಿ ಬಣ್ಣದ್ದಾಗಿರಬೇಕು.
ಲಿಟ್ನಸ್ ಸಹಾಯದಿಂದ ಪಿ.ಎಚ್. 7.00 ಇರುವಂತೆ ನೊಡಿಕೊಳ್ಳಬೇಕು. ಬೋರ್ಡೋ ಮಿಶ್ರಣ ತಯಾರಿಸಲು ಯಾವಾಗಲೂ ಮಣ್ಣಿನ ಪೇಪನ ಅಥವಾ ಕಟ್ಟಿಗೆ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು.
ಬೋರ್ಡೋ ಮೊಲಾಮು ತಯಾರಿಸುವ ವಿಧಾನ : ನೂರು ಗ್ರಾಂ ಮೈಲು ತುತ್ತೆಯನ್ನು ಹಾಗೂ 100 ಗ್ರಾಂ ಸುಣ್ಣವನ್ನು 500 ಮಿ.ಲೀ. ನೀರಿನಲ್ಲಿ ಬೇರೆ ಬೇರೆಯಾಗಿ ಬೆರೆಸಬೇಕು. ನಂತರ ಇವೆರಡನ್ನು ಒಟ್ಟಿಗೆ ಕೂಡಿಸಿ 1 ಲೀಟರ್ ಬೋರ್ಡೋ ಮುಲಾಮನ್ನು ತಯಾರಿಸಬೇಕು.
ಇದರ ಉಪಯೋಗಗಳು :
ಇದನ್ನು ಕೆಳಗೆ ನಮೂದಿಸಿದ ರೋಗಗಳ ಹತೋಟಿಗೆ ಸಿಂಪಡಿಸಬೇಕು.
ದ್ರಾಕ್ಷಿಯ ಬೂಜು ಮತ್ತು ಚಿಬ್ಬು ರೋಗ
ಅಡಿಕೆಯ ಕೊಳೆ ರೋಗ
ಕರಿಮೆಣಸಿನ ಸೊರಗು ರೋಗ
ಎಲಕ್ಕಿ ಸಸಿಯ ಚುಕ್ಕೆ ರೋಗ
ನಿಂಬೆ ಹಣ್ಣಿನ ಕಜ್ಜಿ ರೋಗ
ಮಾವಿನ ಚಿಬ್ಬು ರೋಗ
ಬಾಳೆ ಎಲೆ ಚುಕ್ಕೆ ರೋಗ
ಕಾಫಿ ಎಲೆ ಚುಕ್ಕೆ ರೋಗ
ದಾಳಿಂಬೆ ಹಣ್ಣಿನ ಚುಕ್ಕೆ ಅಥವಾ ಕೊಳೆ ರೋಗ
ತೆಂಗಿನಕಾಯಿ ಕೊಳೆ ಮತ್ತು ಉದುರುವ ರೋಗ
ಮುಖ್ಯ ಸಲಹೆಗಳು:
ಈ ದ್ರಾವಣವನ್ನು ತಯಾರಿಸಿದ ತಕ್ಷಣವೇ ಬಳಸಬೇಕು, ಇಲ್ಲದಿದ್ದರೆ ಅದರ ಪರಿಣಾಮ ಕಡಿಮೆಯಾಗುತ್ತದೆ.
ತಾಮ್ರದ ಸಲ್ಫೇಟ್ ಮತ್ತು ಸುಣ್ಣವನ್ನು ಪ್ರತ್ಯೇಕವಾಗಿ ಕರಗಿಸುವುದರಿಂದ, ರಸಸಾರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನು ಮುಖ್ಯವಾಗಿ ದ್ರಾಕ್ಷಿ, ಕಾಫಿ, ಅಡಿಕೆ, ಕಾಳುಮೆಣಸು ಮುಂತಾದ ಬೆಳೆಗಳಲ್ಲಿ ಶಿಲೀಂದ್ರ ರೋಗಗಳನ್ನು ತಡೆಯಲು ಮಳೆಗಾಲದಲ್ಲಿ ಬಳಸಲಾಗುತ್ತದೆ.

