ರಾಜ್ಯದಲ್ಲಿ ಕೋವಿಡ್ – 19 ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಶಾಲೆ ಕಾಲೇಜುಗಳು ಆರಂಭವಾಗಲಿದ್ದು, ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನಲೆ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ಆದೇಶ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕೊರೋನಾ ಮಹಾಮಾರಿ ಮತ್ತೆ ವಕ್ಕರಿಸಿದ್ದು, ಇನ್ನೇನು ಶಾಲೆ ಶುರುವಾಯ್ತು ಎನ್ನುವ ಖುಷಿಯಲ್ಲಿದ್ದ ಮಕ್ಕಳಿಗೆ ಬ್ಯಾಡ್ ನ್ಯೂಸ್ ಬಂದಿದೆ. ಶಾಲೆ ತೆರೆಯುವ ಬಗ್ಗೆ ಆರೋಗ್ಯ ಸಚಿವರು ನೀಡಿರುವ ಹೇಳಿಕೆ ಏನು ಇಲ್ಲಿದೆ ವಿವರ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈಗ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾದ ಹಿನ್ನಲೆ ರಾಜ್ಯ ಸರ್ಕಾರವು ಮೂರರಿಂದ ನಾಲ್ಕು ದಿನಗಳ ನಂತರ ಪರಿಸ್ಥಿತಿಯನ್ನು ಪರಿಶೀಲಿಸಿ ಶಾಲೆಗಳು ಮತ್ತು ಕಾಲೇಜುಗಳನ್ನು ಪುನಃ ತೆರೆಯುವ ಬಗ್ಗೆ ನಿರ್ಧರಿಸಲಿದೆ ಎಂದರು.
ಕೋವಿಡ್ ಹೊಸ ರೂಪಂತರ ತಳಿಯು ಅಷ್ಟೇನೂ ಅಪಾಯಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ, ಆದರೆ ಇಂತಹ ಸಮಯದಲ್ಲಿ ಶಾಲೆ – ಕಾಲೇಜುಗಳನ್ನು ಒಂದು ವೇಳೆ ತೆರೆದರೆ ಅಪಾಯ ಎದುರಾಗುವ ಸಾದ್ಯತೆ ಇದೆ.
ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಈಗಾಗಲೇ ಕೊರೋನಾ ಟೆಸ್ಟಿಂಗ್ ಅರಂಭವಾಗಿದೆ. ಎಲ್ಲಾ ಕಡೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈ ನಡುವೆ ಇನ್ನೇನು ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಹೈಸ್ಕೂಲ್ ತರಗತಿಗಳನ್ನು ಆರಂಭಿಸಿವೆ. ಈ ನಡುವೆ ಕೊರೋನಾದಿಂದ ಮತ್ತೆ ಲಾಕ್ ಡೌನ್ ಆಗುತ್ತಾ ಎಂಬ ಆತಂಕ ಜನರಲ್ಲಿದೆ.
ಕೊರೋನಾ ಹೆಚ್ಚಾಗಿ ಹರಡುವ ಸಾಧ್ಯತೆಯಿರುವುದು ಶಾಲೆಗಳಲ್ಲಿ. ಹೀಗಾಗಿ ಶಾಲೆಗಳ ಆರಂಭ ಮುಂದೂಡುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಸುಳಿವು ನೀಡಿದ್ದು, ಸದ್ಯಕ್ಕೆ ಆತಂಕ ಬೇಡ. ಆದರೆ ಮುಂದೆ ಪರಿಸ್ಥಿತಿ ನೋಡಿಕೊಂಡು ಶಾಲೆ ತೆರೆಯಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದ್ದಾರೆ.
ಕೋವಿಡ್ ವಸ್ತುಸ್ಥಿತಿ ಏನಿದೆ ಎಂಬುದರ ಬಗ್ಗೆ ತಜ್ಞರ ಸಲಹಾ ಸಮಿತಿಯೊಂದಿಗೆ ಚರ್ಚೆ ಮಾಡಿದ್ದೇವೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಲಸಿಕೆ ತೆಗೆದುಕೊಳ್ಳಲು ಯಾವುದೇ ಮಾರ್ಗಸೂಚಿಗಳಿಲ್ಲ. ಲಸಿಕೆ ಬಗ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಬೇಕು.
ಶಾಲಾ ಮಕ್ಕಳಿಗೆ ಜ್ವರ ನೆಗಡಿ ಕಂಡು ಬಂದರೆ ರಜೆ ನೀಡಲು ಸೂಚನೆ. ಟೆಸ್ಟ್ ಬಗ್ಗೆ ಹಿಂದಿನ ಮಾರ್ಗ ಸೂಚಿಗಳನ್ನು ಅನುಸರಿಸುತ್ತೇವೆ. ಗರ್ಭಿಣಿ, ವಯಸ್ಸಾದವರು ಮಾಸ್ಕ್ ಧರಿಸುವುದು ಉತ್ತಮ. ಕೋವಿಡ್ ಟೆಸ್ಟ್ ಗಳಿಗೆ ಬೇಕಾದ ವ್ಯವಸ್ಥೆ ಗಳನ್ನು ಸಹಾ ನಾವು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಕೇಂದ್ರದ ಅಭಿಪ್ರಾಯ ಪಡೆದು ವ್ಯಾಕ್ಸಿನ್ ನೀಡಲಾಗುತ್ತದೆ. ಕೊವಿಡ್ ಲಕ್ಷಣ ಇರುವ ಮಕ್ಕಳಿಗೆ ರಜೆ ನೀಡಲು ಸೂಚನೆ ನೀಡಲಾಗಿದೆ. ಶಾಲೆಯ ಆಡಳಿತ ಮಂಡಳಿ ಕೂಡ ಗಮನ ಹರಿಸಬೇಕು. ಟೆಸ್ಟಿಂಗ್ ವಿಚಾರದಲ್ಲಿ ಹಳೆಯೆ ಪದ್ಧತಿ ಅನುಸರಿಸುತ್ತೇವೆ. ಅಗತ್ಯವಿರುವ ಎಲ್ಲ ಕ್ರಮಗಳನ್ನ ನಾವು ತೆಗೆದುಕೊಳ್ಳುತ್ತೇವೆ. ವ್ಯಾಕ್ಸಿನ್ ಕೊಡುವ ಬಗ್ಗೆ ಸಿಎಂ ವರದಿ ನೀಡಿ ಎಂದಿದ್ದು, ಕೇಂದ್ರದ ಅಭಿಪ್ರಾಯ ಪಡೆದು ವರದಿ ನೀಡಲು ಹೇಳಿದ್ದಾರೆ.ಅಲ್ಲದೇ ವೈದ್ಯರು, ಸಿಬ್ಬಂದಿಗೂ ರಜೆ ಮೇಲೆ ಹೋಗದಂತೆ ಸೂಚಿಸಲಾಗಿದೆ.
ಈ ಹಿಂದಿನಂತೆ ಕೋವಿಡ್ ಪರೀಕ್ಷೆಯಲ್ಲಿ ರೆಮಿಡೆಸಿವಿರ್, RTPCR ಪ್ರಕ್ಯೂರ್ ಮಾಡ್ತಿದ್ದೇವೆ. ಯಾರಿಗೂ ಕಡ್ಡಾಯವಾಗಿ ಟೆಸ್ಟಿಂಗ್ ಇಲ್ಲ. ಯಾರಿಗೆ ತೀವ್ರ ಅನಾರೋಗ್ಯ ಇರುತ್ತದೆಯೋ ಅವರು ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು. ಇದು ಕೋವಿಡ್-19 ರೂಪಾಂತರಿ ಹಳೆಯ ಓಮಿಕ್ರಾನ್ ತಳಿ ಆಗಿರುವುದರಿಂದ ಇದರ ದುಷ್ಪರಿಣಾಮ ಹೆಚ್ಚಾಗಿ ಬೀರುವುದಿಲ್ಲ. ಇದೀಗ ಸೋಂಕು ಹರಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಣಾಮವನ್ನು ಕಾದು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ವಿದೇಶದ ದಿಂದ ಬಂದವರಿಗೆ ಕಡ್ಡಾಯ ಟೆಸ್ಟಿಂಗ್ ಇಲ್ಲ ಎಂದು ತಿಳಿಸಿದರು.