8 ದಿನಗಳ ಮೋದಲೇ ಮುಂಗಾರು ಮಳೆ ಆರಂಭ! ಇದಕ್ಕೆ ಕಾರಣ ಇಲ್ಲಿದೆ ನೋಡಿ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನೈಋತ್ಯ ಮುಂಗಾರು ಶನಿವಾರ ಕೇರಳಕ್ಕೆ ಆಗಮಿಸಿದೆ, ಇದು ಜೂನ್ 1 ರ ನಿರೀಕ್ಷಿತ ಆಗಮನದ ದಿನಾಂಕಕ್ಕಿಂತ ಸುಮಾರು ಒಂದು ವಾರ ಮುಂಚಿತವಾಗಿ ಆಗಮಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, “ಮುಂದಿನ 7 ದಿನಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ (ಕೇರಳ, ಕರ್ನಾಟಕ, ಕರಾವಳಿ ಮಹಾರಾಷ್ಟ್ರ ಮತ್ತು ಗೋವಾ) ಭಾರೀಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಕೇರಳಕ್ಕೆ ಮುಂಗಾರು ಬೇಗ ಪ್ರವೇಶ:
ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ಕೇರಳಕ್ಕೆ ನೈಋತ್ಯ ಮಾನ್ಸೂನ್ ಆಗಮನವನ್ನು ಘೋಷಿಸಿದೆ. ಇದು ತನ್ನ ಸಾಮಾನ್ಯ ವೇಳಾಪಟ್ಟಿಗಿಂತ ಎಂಟು ದಿನಗಳು ಮುಂಚಿತವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ, ಇದು 2009ರ ನಂತರದ ಮೊದಲೇ ಆರಂಭವಾಗಿದೆ ಎಂದು ತಿಳಿಸಿದೆ. ಕೇರಳವು ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಮಾನ್ಸೂನ್ ಮಳೆಯನ್ನು ಸ್ವಾಗತಿಸುತ್ತದೆ.

ಆದಾಗ್ಯೂ, ಈ ವರ್ಷದ ಮೇ 25ರಂದು ಮುಂಗಾರು ಮಳೆಯ ಆರಂಭಿಕ ಆರಂಭವು ಕಳೆದ 16 ವರ್ಷಗಳಲ್ಲಿ ಕೇವಲ ಮೂರನೇ ನಿದರ್ಶನವಾಗಿದೆ, ಹಿಂದಿನ ಆರಂಭಿಕ ಮುಂಗಾಋುಗಳಲ್ಲಿ 2009 ಮತ್ತು 2001 ರಲ್ಲಿ ಇದೇ ರೀತಿ ವಾಡಿಕೆಗಿಂತ ಮುಂಚಿತವಾಗಿ ಮುಂಗಾರು ಮಳೆ ದಾಖಲಾಗಿದ್ದವು.

ರೈತರೇ ರಾಜ್ಯದ ಹಲವೆಡೆ ಶುಕ್ರವಾರ ಹಾಗೂ ಶನಿವಾರ ರಾತ್ರಿ ಭಾರೀ ಮಳೆಯಾಗಿದ್ದು, (Rain) ಹಲವೆಡೆ ಸಾಕಷ್ಟು ಅವಾಂತರವನ್ನೇ ಸೃಷ್ಟಿಸಿದೆ. ನಿನ್ನೆ ಕೂಡ ಹಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ (Yellow Alert) ಘೋಷಿಸಲಾಗಿದೆ.

ನೈಋತ್ಯ ಮಾನ್ಸೂನ್ ಪ್ರವೇಶಿಸಿದ್ದು ಕೇರಳದಾದ್ಯಂತ ಭಾರೀ ಮಳೆಯಾಗುತ್ತಿದೆ. 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೇರಳಕ್ಕೆ ಮುಂಗಾರು ಮಳೆ ಅವಧಿಗೂ ಮುನ್ನವೇ ಆಗಮಿಸಿದೆ. 2009ರ ನಂತರ ಮೊದಲ ಬಾರಿಗೆ, ಮಾನ್ಸೂನ್ ಭಾರತದ ಮುಖ್ಯ ಭೂಭಾಗವನ್ನು ಇಷ್ಟು ಬೇಗ ತಲುಪಿದೆ.

ಮಳೆ ಬೇಗ ಆರಂಭವಾದರೆ ಮಳೆಯ ಪ್ರಮಾಣ ಹೆಚ್ಚಲಿದೆಯೇ?

ಕುತೂಹಲಕಾರಿಯಾಗಿ, ಕೇರಳದಲ್ಲಿ ಮುಂಗಾರು ಬೇಗ ಆರಂಭವಾಗುವುದರಿಂದ ದೇಶಾದ್ಯಂತ ಹೇರಳವಾದ ಮಳೆಯಾಗುತ್ತದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಪ್ರತಿ ವರ್ಷ ಮಳೆಯ ಸಮಯ ಬದಲಾಗಬಹುದಾದರೂ, ಕೇರಳದಲ್ಲಿ ಮಳೆ ಪ್ರಾರಂಭವಾಗುವ ದಿನಾಂಕವು ಒಟ್ಟು ಮಳೆಯ ಮೇಲೆ ಅಥವಾ ಭಾರತದ ಉಳಿದ ಭಾಗಗಳಲ್ಲಿ ಅದರ ಹರಡುವಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ ಎಂದು ಹವಾಮಾನಶಾಸ್ತ್ರಜ್ಞರು ಹೇಳಿದ್ದಾರೆ.

ಅಲ್ಲದೇ, ರಾಜ್ಯದ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕ ಮತ್ತು ಕೇರಳ, ಕೊಂಕಣ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರ ಸೇರಿದಂತೆ ಪ್ರತ್ಯೇಕ ಸ್ಥಳಗಳಲ್ಲಿ ಭಾನುವಾರದವರೆಗೆ ಭಾರೀ ಮಳೆಯಾಗಲಿದೆ ಎಂದು ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ.

ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಕೇರಳವನ್ನು ಪ್ರವೇಶಿಸುತ್ತದೆ. ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಇದು ಸೆಪ್ಟೆಂಬರ್ 17ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸುತ್ತದೆ. ಅಕ್ಟೋಬರ್ 15 ರ ಹೊತ್ತಿಗೆ ಸಂಪೂರ್ಣವಾಗಿ ಹಿಮ್ಮೆಟ್ಟುತ್ತದೆ.

ಕಳೆದ ವರ್ಷಕ್ಕಿಂತ ಈ ವರ್ಷ ವರುಣನ ಆರ್ಭಟ ಜೋರಾಗಿದೆ. ಸದ್ದಿಲ್ಲದೆ ಪೂರ್ವ ಮುಂಗಾರು ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆಗಳಿಗೆ ಆರಂಭ ಮುಂಗಾರು ಪೂರ್ವ ಮಳೆಯಿಂದಾಗಿ ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ರೈತರು ಬಿತ್ತನೆಗೆ ಮುಂದಾಗುವ ನಿರೀಕ್ಷೆಗಳು ಹೆಚ್ಚಾಗಿವೆ.

82.48 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಮುಂಗಾರು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ರಾಜ್ಯದಲ್ಲಿ 82.48 ಲಕ್ಷ ಹೆಕ್ಟೇರ್‌ಗಿಂತ ಅಧಿಕ ಪ್ರದೇಶಗಳಲ್ಲಿ ಬಿತ್ತನೆಯಾಗುವ ಗುರಿ ಇದೆ. ಕಳೆದ ವರ್ಷವೂ ಒಳ್ಳೆಯ ಮಳೆಯಾಗಿದ್ದ ಕಾರಣ 82 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯಾಗಿತ್ತು. 23.99 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶಗಳಾದರೆ, 58.49 ಲಕ್ಷ ಹೆಕ್ಟೇರ್ ಪ್ರದೇಶಗಳು ಮಳೆ ಅವಲಂಬಿಸಿವೆ.

Spread positive news

Leave a Reply

Your email address will not be published. Required fields are marked *