ಬೆಂಬಲ ಬೆಲೆ ಯೋಜನೆಯಲ್ಲಿ ಕುಸುಬಿ ಖರೀದಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗಲಿದ್ದು, ರೈತರು ನೋಂದಣಿ ಮಾಡಿಸಿಕೊಳ್ಳಬೇಕು. ಬೀದರ್, ಧಾರವಾಡ, ದಾವಣಗೆರೆ, ಗದಗ, ವಿಜಯಪುರ, ಕಲಬುರಗಿ, ಚಿತ್ರದುರ್ಗ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಿದ್ದು, ಪ್ರತಿ ಕ್ವಿಂಟಾಲ್ ಗೆ ₹5,940 ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ 5 ಕ್ವಿಂಟಾಲ್ ನಂತೆ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಅವರು ತಿಳಿಸಿದ್ದಾರೆ. ಖರೀದಿ ಪ್ರಕ್ರಿಯೆ ನಂತರ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುವುದು. ರೈತರು ತಮ್ಮ ಸಮೀಪದ ಪ್ರಾಥಮಿಕ ಪತ್ತಿನ ಸಹಕಾರ ಸಂಘ, ರೈತ ಉತ್ಪಾದಕರ ಕಂಪನಿ, ತಾಲೂಕು ಹುಟ್ಟುವಳಿ ಸಹಕಾರ ಸಂಘಗಳಲ್ಲಿ ತಮ್ಮ ಫ್ರೂಟ್ಸ್ ನ ಎಫ್ಐಡಿ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ನೀಡಿರುವ ಹೇಳಿಕೆ:-
ಬೆಂಬಲ ಬೆಲೆ ಯೋಜನೆಯಲ್ಲಿ ಕುಸುಬಿ ಖರೀದಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗಲಿದ್ದು, ರೈತರು ನೋಂದಣಿ ಮಾಡಿಸಿಕೊಳ್ಳಬೇಕು. ಬೀದರ್, ಧಾರವಾಡ, ದಾವಣಗೆರೆ, ಗದಗ, ವಿಜಯಪುರ, ಕಲಬುರಗಿ, ಚಿತ್ರದುರ್ಗ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಿದ್ದು, ಪ್ರತಿ ಕ್ವಿಂಟಾಲ್ ಗೆ ₹5,940 ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ 5 ಕ್ವಿಂಟಾಲ್ ನಂತೆ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿ ಮಾಡಲಾಗುವುದು.”
ಕುಸುಬೆ ಹಿಂಗಾರಿಯಲ್ಲಿ ಬೆಳೆಯುವ ಮುಖ್ಯವಾದ ಎಣ್ಣೆಕಾಳು ಬೆಳೆಯಾಗಿದೆ. ಕುಸುಬೆಯನ್ನು ಉತ್ತರ ಕರ್ನಾಟಕದ ಜಿಲ್ಲೆಗಳ ಕಪ್ಪು ಮಣ್ಣಿನಲ್ಲಿ ವಿಶೇಷವಾಗಿ ಮಳೆಯಾಶ್ರಯದಲ್ಲಿ ಬೆಳೆಯಲಾಗುತ್ತಿದೆ. ಇದನ್ನು ನೀರಾವರಿಯಲ್ಲಿಯೂ ಬೆಳೆಯಬಹುದು. ಆದರೆ ಕೀಟ ಮತ್ತು ರೋಗ ನಿರೋಧಕ ತಳಿಗಳ ಕೊರತೆಯಿಂದ ನೀರಾವರಿಯಲ್ಲಿ ಕ್ಷೇತ್ರ ಕಡಿಮೆ ಇರುವುದು. ಈ ಬೆಳೆಯನ್ನು ರಾಜ್ಯದಲ್ಲಿ ೦.೩೪ ಲಕ್ಷ ಹೆಕ್ಟೇರಗಳಲ್ಲಿ ಬೆಳೆಯುತ್ತಿದ್ದು ೦.೩೦ ಲಕ್ಷ ಟನ್ ಉತ್ಪಾದನೆಯಾಗುತ್ತಿದ್ದು, ಸರಾಸರಿ ಉತ್ಪಾದನೆ ಪ್ರತಿ ಎಕರೆಗೆ ೩.೬೦ ಕ್ವಿಂಟಾಲ್ ಇರುವುದು.
ಬಿತ್ತನೆ ಮತ್ತು ನೀರಾವರಿ
ಮಳೆಯಾಶ್ರಯದಲ್ಲಿ ಕುಸುಬೆ ಬಿತ್ತನೆಗೆ ಭೂಮಿ ಸಿದ್ಧವಾದ ಕೂಡಲೇ ಪೂರ್ತಿ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನಲ್ಲಿ ಬೆರಸಿ, ಕೂರಿಗೆ ಸಹಾಯದಿಂದ ೬೦ ಸೆಂ. ಮೀ. ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ ೩೦ ಸೆಂ. ಮೀ. ಅಂತರವಿಟ್ಟು ಬಿತ್ತನೆ ಮಾಡಬೇಕು. ಬಿತ್ತುವ ಪೂರ್ವದಲ್ಲಿ ಬೀಜವನ್ನು ಶೆ. ೨ರ ಕ್ಯಾಲ್ಸಿಯಂ ಕ್ಲೋರೈಡ ದ್ರಾವಣದಲ್ಲಿ (೧.೦ ಲೀ ನೀರಿನಲ್ಲಿ ೨೦ ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್) ೧೨ ಘಂಟೆಗಳ ಕಾಲ ನೆನೆಸಿ ನಂತರ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಬೀಜ ಮೊಳಕೆ ಪ್ರಮಾಣ
ಅಧಿಕವಾಗುವುದು. ನಂತರ ಪ್ರತಿ ಎಕರೆಗೆ ಬೇಕಾಗುವ ಬಿತ್ತನೆ ಬೀಜವನ್ನು ೨೦೦ ಗ್ರಾಂ ಅಜೋಸ್ಪಿರಿಲಮ್ ಜೀವಾಣುವಿನಿಂದ ಉಪಚರಿಸಿ ಬಿತ್ತುವುದರಿಂದ ಶಿಫಾರಸು ಮಾಡಿದ ಸಾರಜನಕದ ಪ್ರಮಾಣವನ್ನು ಶೇ. ೨೫ ರಷ್ಟು ಕಡಿಮೆ ಮಾಡಬಹುದು. ನೀರಾವರಿಯಲ್ಲಿ ಬಿತ್ತನೆಗೆ ಮೊದಲು ನೀರು ಹಾಯಿಸಿ, ನಂತರ ಕಪ್ಪು ಮಣ್ಣಿನಲ್ಲಿ ೨೦ ರಿಂದ ೨೫ ದಿವಸಗಳಿಗೊಮ್ಮೆ, ಕೆಂಪು ಮಣ್ಣಿನಲ್ಲಿ ೮ ರಿಂದ ೧೦ ದಿವಸಗಳಿಗೊಮ್ಮೆ ಹವಾಗುಣವನ್ನನುಸರಿಸಿ ನೀರು ಹಾಯಿಸಬೇಕು. ಬೆಳೆಯುವ ಹಂತದಲ್ಲಿ ನೀರು ನಿಂತರೆ ಬೆಳೆ ಸಿಡಿರೋಗಕ್ಕೆ ತುತ್ತಾಗುತ್ತದೆ. ವಲಯ ೩ ರಲ್ಲಿ ಶಿಫಾರಿತ ಪ್ರಮಾಣದ ಬೀಜಗಳನ್ನು ಜೋಡು ಸಾಲು ಬಿತ್ತನೆ ಪದ್ಧತಿ ಅನುಸರಿಸಿ ಬಿತ್ತಬೇಕು. (ಸಾಲಿನಿಂದ ಸಾಲಿಗೆ ೪೫ ಸೆಂ. ಮೀ. ಬೀಜದಿಂದ ಬೀಜಕ್ಕೆ ೩೦ ಸೆಂ. ಮೀ. ಹಾಗೂ ಎರಡು ಸಾಲು ಬಿತ್ತನೆ ನಂತರ ಒಂದು ಸಾಲು
ಹುಸಿ ಬಿಡಬೇಕು). ಬಿತ್ತನೆಯಾದ ೨೫ ರಿಂದ ೩೦ ದಿನಗಳ ನಂತರ ಹುಸಿ ಸಾಲಿನಲ್ಲಿ ರೆಂಟೆಯಿಂದ ಹರಿಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ನೀರು ಸಂಗ್ರಹವಾಗಿ ಹೆಚ್ಚು ಇಳುವರಿ ಪಡೆಯಬಹುದು.
ಗೊಬ್ಬರಗಳ ಬಳಕೆಯ ಮಾಹಿತಿ:
ಸತುವಿನ ಸಲ್ಪೇಟ್ ೬ ಕಿ.ಗ್ರಾಂನ್ನು ಬಿತ್ತುವಾಗ ಪುಡಿ ಮಾಡಿದ ಕೊಟ್ಟಿಗೆ ಗೊಬ್ಬರದ ಜೊತೆಗೆ ಸಮ ಪ್ರಮಾಣದಲ್ಲಿ ಬೆರೆಸಿ ಪ್ರತ್ಯೇಕವಾದ ಬುಕ್ಕಾದ (ಎಳೆಶೆಡ್ಡಿ) ಮುಖಾಂತರ ಮಣ್ಣಿನಲ್ಲಿ ಬೆರೆಸಬೇಕು.
ವಲಯ ೩ ರಲ್ಲಿ ಅಜೋಸ್ಪಿರಿಲಮ್ (ಎಸಿಡಿ ೨೦ + ಎಸಿಡಿ ೧೫) ಹಾಗೂ ವಲಯ ೧ ಹಾಗೂ ೨ ರಲ್ಲಿ ಅಜೋಸ್ಪಿರಿಲಮ್ (ಎಸಿಡಿ-೨೦)ರಿಂದ ಬೀಜೋಪಚಾರ ಮಾಡುವುದು ಸೂಕ್ತ.
ಗಂಧಕವನ್ನು ಸೂಫರ ಫಾಸ್ಫೇಟ್ ರೂಪದಲ್ಲಿ ಬೆಳೆಗೆ ಕೊಡುವುದು ಲಾಭದಾಯಕ.
ಸೂಪರ್ ಫಾಸ್ಫೇಟ್ ಸಿಗದಿದ್ದಲ್ಲಿ ಮೇಲ್ಕಾಣಿಸಿದ ರಾಸಾಯನಿಕ ಗೊಬ್ಬರಗಳ ಜೊತೆಗೆ ೮೦ ಕಿ. ಗ್ರಾಂ ಜಿಪ್ಸಂನ್ನು ಬಳಸುವುದು ಸೂಕ್ತ. ಇದರಿಂದ ಗಂಧಕ ಪೋಷಕಾಂಶವನ್ನು ಬೆಳೆಗೆ ಒದಗಿಸಿದಂತಾಗುವುದು.