ಹಿಂಗಾರು ಬೆಳೆವಿಮೆ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಸಲ್ಲಿಸಿ ಹಣ ಪಡೆಯಿರಿ.

ಬೆಳೆವಿಮೆ ಮಾಡಿಸಲು ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿಬೆಳೆ ವಿಮೆ ಮಾಡಿಸಿದ ರೈತರಿಗೆ ಗುಡ್ ನ್ಯೂಸ್. ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಹಣ ಜಮೆ ಮಾಡುವ ಪ್ತಕ್ರಿಯೆ ಆರಂಭವಾಗಿದೆ. ರಾಜ್ಯಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿದ್ದು, ಈಗಾಗಲೇ ಹಿಂಗಾರು ಬೆಳೆ ಬೆಳೆಯಲು ರೈತರು ಬಿತ್ತನೆ ಮಾಡಿದ್ದು ಹಿಂಗಾರು ಬೆಳೆವಿಮೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ ನೀಡುವ ಸರ್ಕಾರವು ಆದೇಶ ಹೊರಡಿಸಿದೆ. ಅದೇ ರೀತಿ ರೈತರು ಹಿಂಗಾರು ಬೆಳೆವಿಮೆ ಅರ್ಜಿ ಹೇಗೆ ಸಲ್ಲಿಸುವುದು? ಅರ್ಜಿ ಸಲ್ಲಿಕೆ ಎಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ 👇

ಬೆಳೆವಿಮೆ ಅರ್ಜಿ ಸಲ್ಲಿಸಲು ನಿಯಮಗಳೇನು?
* ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವು ಹಂತದವರೆಗೆ) ಬರ, ಶುಷ್ಕ ಪರಿಸ್ಥಿತಿ, ಆಲಿಕಲ್ಲು ಮಳೆ. ಭೂ ಕುಸಿತ ಮುಂತಾದವುಗಳಿಂದ ಇಳುವರಿ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸಲಾಗುತ್ತದೆ.
* ಕಟಾವಿನ ನಂತರ ಬೆಳೆಯನ್ನು ಗುಡ್ಡಗಳಾಗಿ ಕಟ್ಟಿ ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ, 14 ದಿನಗಳೊಳಗೆ ಆಲಿಕಲ್ಲು ಮಳೆ. ಚಂಡಮಾರುತ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟದ ನಿರ್ಧರಣೆಯನ್ನು ವ್ಯಕ್ತಿಗತ ತಾಕು / ಹೊಲದ ಆದಾರದ ಮೇಲೆ ನಿರ್ಧರಿಸಿ. ನಷ್ಟ ಪರಿಹಾರವನ್ನು ಒದಗಿಸಲಾಗುತ್ತದೆ.
* ಈ ಮೇಲೆ ನೀಡಲಾದ ಎರಡೂ ಪರಿಸ್ಥಿತಿಗಳಲ್ಲೂ ವಿಮೆಗೆ ಒಳಪಟ್ಟ ರೈತರು 72 ತಾಸುಗಳೊಳಗೆ ವಿಮಾ ಕಂಪನಿ, ಬ್ಯಾಂಕ್ ಅಥವಾ ಕೃಷಿ ಇಲಾಖೆ ಮೂಲಕ ದೂರು ದಾಖಲಿಸುವುದು ಕಡ್ಡಾಯವಾಗಿದೆ.
* ವಿಮಾ ಘಟಕದಲ್ಲಿ ಅಧಿ ಸೂಚಿತ ಬೆಳೆಯ ಸರಾಸರಿ ಇಳುವರಿಯು ಪ್ರಾರಂಭಿಕ ಇಳುವರಿಗಿಂತ ಕಡಿಮೆಯಾದರೆ ಇಳುವರಿ ಕೊರತೆ ಅನುಗುಣವಾಗಿ ಸದರಿ ವಿಮಾ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರು ವಿಮಾ ಪರಿಹಾರ ಮೊತ್ತ ಪಡೆಯಲು ಅರ್ಹರಾಗುತ್ತಾರೆ.
* ಯೋಜನೆಯು ಸಾಲ ಪಡೆದ ರೈತರಿಗೆ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದೆ. ಸಾಲ ಪಡೆದ ರೈತರು ತಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಕೊನೆಯ ದಿನಾಂಕದ ಮೊದಲು ತಮ್ಮ ಖಾತೆಯಿಂದ ವಿಮೆಯ ಮೊತ್ತವನ್ನು ಕಡಿತ ಮಾಡಲಾಗಿದೆ ಎಂಬುವುದನ್ನು ಖಚಿತ ಪಡಿಸಿಕೊಳ್ಳಬೇಕು.
* ಒಂದು ವೇಳೆ ಸಾಲ ಪಡೆಯದ ರೈತರು ವಿಮೆ ಮಾಡಿಸಿಕೊಳ್ಳಲು ಕಂಪನಿಯ ಪ್ರತಿನಿಧಿ, ಗ್ರಾಮಒನ್ ಸೆಂಟರ್, ಸಿಎಸ್‌ಸಿ (CSC) ಸೆಂಟರ್ ಅಥವಾ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸತಕ್ಕದ್ದು.

ನಿಮ್ಮ ಆಧಾರ್ ವಿವರಗಳನ್ನು ಬ್ಯಾಂಕ್ ಖಾತೆಗೆ ಅಂಕ್ ಮಾಡಿಸಿ ಮತ್ತು ಅರ್ಹ ಬೆಳೆ ವಿಮಾ ಪರಿಹಾರ ಮೊತ್ತವನ್ನು ಇತ್ಯರ್ಥ ಪಡಿಸಿಕೊಳ್ಳಿ.


ಸೂಚನೆ: ಕೇವಲ ಒಂದು ಬ್ಯಾಂಕ್ ಖಾತೆಯನ್ನು ಮಾತ್ರ ಆಧಾರ್ ನೊಂದಿಗೆ ಅಂಕ್ ಮಾಡಲು ಅವಕಾಶವಿರುತ್ತದೆ. ನಿಮ್ಮ ಆಧಾರ್ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೋಡಣೆ ಆಗಿದ್ದಲ್ಲಿ ಯಾವ ಖಾತೆಗೆ ಹೋಡಣೆಯಾಗಿದೆ ಎಂಬುದನ್ನು ಪರಿಶೀಲಿಸಿ, ವಿಮೆ ಪರಿಹಾರ ಮೊತ್ತವನ್ನು ಸ್ವೀಕರಿಸಲು ನಿಮಗೆ ಅವಶ್ಯವೆನಿಸುವ ಬ್ಯಾಂಕ್ ಖಾತೆಯೊಂದಿಗೆ ಆಧಾರನ್ನು ಜೋಡಣೆ ಮಾಡಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ.
https://samrakshane.karnataka.gov.in/ ಈ ಲಿಂಕ್ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ.

ಅರ್ಜಿಯ ಸ್ಟೇಟಸ ಚೆಕ್ ಮಾಡುವ ವಿಧಾನ –
https://www.samrakshane.karnataka.gov.in/
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.
• ನಂತರ ಅಲ್ಲಿ ವರ್ಷದ ಆಯ್ಕೆ ಮತ್ತು ಹಂಗಾಮು ಆಯ್ಕೆ ಇರುತ್ತದೆ ಅದರಲ್ಲಿ ವರ್ಷ ಮತ್ತು ಹಂಗಾಮು ಹಾಕಬೇಕು.
• ನಂತರ ಅಲ್ಲಿ ಮುಂದೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಬೆಳೆಗೆ ಸಂಪೂರ್ಣ ಬೆಳೆವಿಮೆ ಜಮೆ ಆಗಿದೆ ಎಂದು ತೋರಿಸುತ್ತದೆ.
• ನಂತರ ಅಲ್ಲಿ ಚೆಕ್ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ನಿಮ್ಮ ಬೆಳೆವಿಮೆ ಅಪ್ಲಿಕೇಶನ್ ನಂಬರ್ ಹಾಕಿ ಚೆಕ್ ಮಾಡಬಹುದು.

ರೈತರು ಅರ್ಜಿ ಸಲ್ಲಿಸುವ ಮುನ್ನ ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು –
1) ರೈತರು ಮೊದಲು ಜಮೀನಿನ ಪಹಣಿಗೆ ತಮ್ಮ ಎಪ್.ಐ.ಡಿ ( FID ) ಸಂಖ್ಯೆ ಇದೆಯೋ /ಇಲ್ಲಯೋ ಎಂಬುದನ್ನು ಪರಿಶೀಲಿಸುವುದು.
2) ತಮ್ಮ ಬ್ಯಾಂಕ್ ಖಾತೆಗೆ ಎನ್.ಪಿ.ಸಿ.ಆಯ್ ಲಿಂಕ್ ಇದೆಯೋ /ಇಲ್ಲಯೋ ಎಂಬುದನ್ನು ಪರಿಶೀಲಿಸುವುದು.
3) ಎನ್.ಪಿ.ಸಿ.ಆಯ್ ( NPCI ) ಲಿಂಕ್ ಇದ್ದಲ್ಲಿ ಎಫ್.ಐ.ಡಿ ( FID ) ದಲ್ಲಿ ಇರತಕ್ಕಂತ ಬ್ಯಾಂಕ್ ಖಾತೆ ಸಂಖ್ಯೆಗೂ ಎನ್.ಪಿ.ಸಿ.ಆಯ್ ಲಿಂಕ್ ಇರುವ ಸಂಖ್ಯೆಯು ಒಂದೇ ಯಾಗಿರತಕ್ಕದ್ದು.
4) ಎನ್.ಪಿ.ಸಿ.ಆಯ್ ಲಿಂಕ್ ( NPCI ) ಹಾಗೂ ಎಫ್.ಐ.ಡಿ ( FID ) ದಲ್ಲಿ ಇರತಕ್ಕಂತ ಬ್ಯಾಂಕ್ ಖಾತೆ ಸಂಖ್ಯೆ ಬೇರೆ-ಬೇರೆ ಇದ್ದಲ್ಲಿ ಎಫ್.ಐ.ಡಿ ( FID ) ದಲ್ಲಿ ಇರತಕ್ಕಂತ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬದಲಾವಣೆ ಮಾಡಿಸಿಕೊಳ್ಳುವುದು.
5) ಆಧಾರಕಾರ್ಡದಲ್ಲಿ ಇರತ್ತಕ್ಕಂತ ಹೆಸರಿಗೂ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಒಂದೇ ಯಾಗಿರಬೇಕು.
6) ಅಕೌಂಟ್ ಇನ್ ವ್ಯಾಲಿಡ್, ಕ್ಲೋಸ್, ಬ್ಲಾಕ್ ಆಧಾರ ನಾಟ್ ಸಿಡಿಂಗ್ ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳ್ಳುತ್ತಿದ್ದು ಪರಿಶೀಲಿಸಿಕೊಂಡು ಚಾಲ್ತಿ ಮಾಡಿಸಿಕೊಳ್ಳುವುದು.
7) ಆಧಾರಕಾರ್ಡದಲ್ಲಿ ಹಾಗೂ ಪಹಣಿ ಪತ್ರಿಕೆಯಲ್ಲಿ ಹೆಸರು ಒಂದೇ ಯಾಗಿರಬೇಕು.

Spread positive news

Leave a Reply

Your email address will not be published. Required fields are marked *