ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಇದು ಒಂದು ರೈತರ ಹಿತದೃಷ್ಟಿಯಿಂದ ರೈತರಿಗೆ ನೆರವು ನೀಡಲು ಕೈಗೊಂಡ ಯೋಜನೆಯಾಗಿದೆ. ಅದೇ ರೀತಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ 2016-17ನೇ ಸಾಲಿನಿಂದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯು ಕ್ಷೇತ್ರಾಧಾರಿತ ಮತ್ತು ಇಳುವರಿ ಆಧಾರಿತ ಯೋಜನೆಯಾಗಿರುತ್ತದೆ.
2020-21 ನೇ ಸಾಲಿನ ಮುಂಗಾರು ಹಂಗಾಮಿನಿಂದ ಕೆಲವೊಂದು ಮಾರ್ಪಾಡುಗಳೊಂದಿಗೆ Revamped Pradan Mantri Fasal Bima Yojane ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅದೇ ರೀತಿ ಈಗಾಗಲೇ ಹಿಂಗಾರು ಬೆಳೆ ಬೆಳೆಯಲು ರೈತರು ಬಿತ್ತನೆ ಮಾಡಿದ್ದು ಹಿಂಗಾರು ಬೆಳೆವಿಮೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ ನೀಡುವ ಸರ್ಕಾರವು ಆದೇಶ ಹೊರಡಿಸಿದೆ.
ಉದ್ದೇಶ:
* ಪ್ರಕೃತಿ ವಿಕೋಪಗಳಿಂದ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ಒದಗಿಸುವುದು.
* ವಿಪತ್ತೊದಗಿದ ವರ್ಷಗಳಲ್ಲಿ ಕೃಷಿ ಆದಾಯ ಸ್ಧಿರವಾಗಿರುವಂತೆ ಮಾಡಲು ನೆರವಾಗುವುದು.
* ಸ್ಥಳೀಯ ಪ್ರಕೃತಿ ವಿಕೋಪಗಳಾದ ಅಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘಸ್ಪೋಟ ಮತ್ತು ಗುಡುಗು-ಮಿಂಚುಗಳಿಂದಾಗುವ ಬೆಂಕಿ ಅವಘಡದಿಂದ ಉಂಟಾಗುವ ನಷ್ಠವನ್ನು ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಿ ರೈತರನ್ನು ರಕ್ಷಿಸುವುದು.
ಬೆಳೆ ವಿಮೆ ಪರಿಹಾರ ಮತ್ತು ಬೆಳೆ ಹಾನಿ ಪರಿಹಾರ ಎರಡು ಬೇರೆ ಬೇರೆಯಾಗಿದೆ. ಕೆಲ ರೈತರು ಇವೆರೆಡೂ ಒಂದೇ ಎಂದು ಭಾವಿಸಿದ್ದಾರೆ, ಅದು ತಪ್ಪು ಕಲ್ಪನೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ರೈತರಿಗೆ ದೈನಂದಿನವಾಗಿ ಆಗುವ ಹವಾಮಾನದ ಏರಿಳಿತದಿಂದಾಗಿ, ಮಳೆ ಅಥವಾ ಗಾಳಿಯಿಂದ ಬೆಳೆ ಹಾಳಾದಾಗ ಆರ್ಥಿಕತೆಯ ಸಂಕಷ್ಟವನ್ನು ತಪ್ಪಿಸಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ.
ಬೆಳೆವಿಮೆ ಪಡೆಯಲು ನಿಯಮಗಳು ಏನು? ಇದರಲ್ಲಿ ಸರ್ಕಾರದ ಪಾತ್ರ ಏನು?
1. ವಿಮಾ ಕಂತಿನ ರಿಯಾಯಿತಿಯಲ್ಲಿ Revamped PMFBY ಯೋಜನೆಯಡಿ ಒಟ್ಟು ಪ್ರೀಮಿಯಂ ಮೊತ್ತದಲ್ಲಿ ರೈತರ ವಂತಿಗೆ ಹೊರತು ಪಡಿಸಿದ ನಂತರ ಉಳಿದ ವಿಮಾ ಕಂತಿನ ರಿಯಾಯಿತಿಯನ್ನು, ರಾಜ್ಯ ಮತ್ತು ಕೇಂದ್ರ ಸರ್ಕಾರವು 50:50 ಅನುಪಾತದಲ್ಲಿ ಸಮವಾಗಿ ಭರಿಸುತ್ತದೆ. ಆದರೆ, ಕೇಂದ್ರ ಸರ್ಕಾರವು Premium Capping ನಿಗಧಿಪಡಿಸಿದ್ದು, ನೀರಾವರಿ ಪ್ರದೇಶಗಳಲ್ಲಿನ ಬೆಳೆಗಳಿಗೆ ವಿಮಾ ಕಂತಿನ ಶೇ.25 ರವರೆಗೆ ಹಾಗು ಮಳೆಯಾಶ್ರಿತ ಪ್ರದೇಶಗಳಲ್ಲಿನ ಬೆಳೆಗಳಿಗೆ ವಿಮಾ ಕಂತಿನ ಶೇ. 30 ರವರೆಗೆ ಕೇಂದ್ರ ಸರ್ಕಾರವು ಭರಿಸುತ್ತದೆ. ವಿಮಾ ಕಂತಿನ ಉಳಿದ ಮೊತ್ತವನ್ನು ರಾಜ್ಯ ಸರ್ಕಾರವು ಭರಿಸಬೇಕಾಗಿರುತ್ತದೆ.
2. ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವು ಹಂತದವರೆಗೆ) ಬರ, ಶುಷ್ಕ ಪರಿಸ್ಥಿತಿ, ಆಲಿಕಲ್ಲು ಮಳೆ. ಭೂ ಕುಸಿತ ಮುಂತಾದವುಗಳಿಂದ ಇಳುವರಿ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸಲಾಗುತ್ತದೆ.
ಕಟಾವಿನ ನಂತರ ಬೆಳೆಯನ್ನು ಗುಡ್ಡಗಳಾಗಿ ಕಟ್ಟಿ ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ, 14 ದಿನಗಳೊಳಗೆ ಆಲಿಕಲ್ಲು ಮಳೆ. ಚಂಡಮಾರುತ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟದ ನಿರ್ಧರಣೆಯನ್ನು ವ್ಯಕ್ತಿಗತ ತಾಕು / ಹೊಲದ ಆದಾರದ ಮೇಲೆ ನಿರ್ಧರಿಸಿ. ನಷ್ಟ ಪರಿಹಾರವನ್ನು ಒದಗಿಸಲಾಗುತ್ತದೆ.
3. ಈ ಯೋಜನೆಯಡಿ 2022-23 ರ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ತಾಲ್ಲೂಕುವಾರು ಕೆಲವು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ ಹಾಗೂ ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಲಾಗುವುದು.
4. ಎಲ್ಲಾ ಹಂಗಾಮುಗಳಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಇಚ್ಚೆಯುಳ್ಳ ಬೆಳೆ ಸಾಲ ಪಡೆದ/ಪಡೆಯದ ರೈತರು ಈ ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ ಬ್ಯಾಂಕ್ ಖಾತೆ ಪುಸ್ತಕ ಮತ್ತು ಆಧಾರ್ ಸಂಖ್ಯೆಯನ್ನು ನೀಡಿ ಯೋಜನೆಯಡಿ ನೋಂದಾಯಿಸುವುದು.
5. Revamped PMFBY ಯೋಜನೆಯ ಮಾರ್ಗಸೂಚಿಯನ್ವಯ ಬೆಳೆಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆಯಡಿ ಒಳಪಡುವುದು ಐಚ್ಛಿಕವಾಗಿರುತ್ತದೆ. ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆಯಿಲ್ಲದಿದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೊಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ, ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
6. ರೈತರು ಯೋಜನೆಯಡಿ ಪಾಲ್ಗೊಳ್ಳಲು ಕೊನೆಯ ದಿನಾಂಕವು ಜಿಲ್ಲಾವಾರು, ಬೆಳೆವಾರು ಬೇರೆಯಾಗಿರುತ್ತದೆ. ಈ ಮಾಹಿತಿಯನ್ನು ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಸಂರಕ್ಷಣೆ ಪೋರ್ಟಲ್ ಮೂಲಕ ಪಡೆದುಕೊಳ್ಳಬಹುದು.
7. ಮಾರ್ಗಸೂಚಿಯನುಸಾರ ಹೋಬಳಿ/ಗ್ರಾಮ ಪಂಚಾಯತಿ ಮಟ್ಟದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯವರು ನೀಡುವ ಬೆಳೆ ಕಟಾವು ಪ್ರಯೋಗಗಳಿಂದ ಬಂದಂತಹ ವಾಸ್ತವಿಕ ಇಳುವರಿಯು ನಿಗಧಿಪಡಿಸಲಾದ ಪ್ರಾರಂಭಿಕ ಇಳುವರಿಗಿಂತ ಕಡಿಮೆ ಇದ್ದರೆ, ಇಳುವರಿಯ ಕೊರತೆಗನುಗುಣವಾಗಿ ಹೋಬಳಿ/ಗ್ರಾಮ ಪಂಚಾಯತಿ ವಿಮಾ ಘಟಕದಲ್ಲಿ ಬೆಳೆ ವಿಮೆ ಮಾಡಿದ ಎಲ್ಲಾ ರೈತರು ಬೆಳೆ ವಿಮಾ ನಷ್ಟ ಪಡೆಯಲು ಅರ್ಹರಾಗುತ್ತಾರೆ.
ಅರ್ಜಿಯ ಸ್ಟೇಟಸ ಚೆಕ್ ಮಾಡುವ ವಿಧಾನ –
https://www.samrakshane.karnataka.gov.in/
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.