ಆಧಾರ್ ನಂಬರ್ ಹಾಕಿ ಮೋಬೈಲ್ ನಲ್ಲಿ ನಿಮ್ಮ ಜಮೀನಿನ ಸಂಪೂರ್ಣ ಮಾಹಿತಿ ಪಡೆಯಿರಿ.

ರೈತರೇ ಮುಖ್ಯವಾಗಿ ಇಲ್ಲಿ ಇವತ್ತು ಹೇಳಬೇಕೆಂದರೆ ರೈತರು ತಮ್ಮ ತಮ್ಮ ಜಮೀನನ್ನು ಬಹಳ ದಿನಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಆದರೆ ರೈತರಿಗೆ ಹೊಸ ತಂತ್ರಜ್ಞಾನ ಬಳಸಿ ಹೇಗೆ ನಮ್ಮ ಜಮೀನಿನ ಸಂಪೂರ್ಣ ಮಾಹಿತಿ ಹಾಗೂ ಹಾಗೂ ಬರ ಪರಿಹಾರ ಹಣ ಬರುವುದು ಡೌಟು ಎಂದು ಇಲಾಖೆ ತಿಳಿಸಿದೆ.

ಏನಿದು ಭೂಮಿ ಪೋರ್ಟಲ್?
ಹೌದು ಇದು ಒಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಕಡೆಯಿಂದ ಬಿಡುಗಡೆ ಆದ ವೆಬ್ಸೈಟ್ ಇದೆ. ರೈತರು ಭೂಮಿ( Bhoomi) ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ರೈತರಿಗೆ ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ. ಹಾಗೂ ಅದೇ ರೀತಿ https://landrecords.karnataka.gov.in/. ಈ ಲಿಂಕ್ ಮೂಲಕ ಕೂಡ ಮಾಹಿತಿ ಪಡೆಯಬಹುದು. ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಪಡೆಯಲು ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ಸರ್ವೆ ನಂಬ್ ಹಾಕಿದರೆ ಸಾಕು, ಹಿಸ್ಸಾ ನಂಬರ್ ಸಹಿತ ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು. ಹಾಗೂ ರೈತರಿಗೆ ಇದರಿಂದ ಅವರವರ ಆಸ್ತಿ ಸಂಪೂರ್ಣ ವಿವರ ದೊರೆಯುತ್ತದೆ.

ಅದೇ ರೀತಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಿಮ್ಮ ಹತ್ತಿರ ಒಂದೇ ಪಹನಿಯಲ್ಲಿ ಎಲ್ಲರ ಹೆಸರು ಕೂಡ ಇರುತ್ತದೆ ಸರ್ವೆ ನಂಬರ್ ನಲ್ಲಿರುವ ಹೆಸರು ಪ್ರತ್ಯೇಕವಾಗಿ ಬರಬೇಕೆಂದರೆ ತತ್ಕಾಲ್ ಪೋಡಿಯನ್ನು ಮಾಡಿಸಬಹುದು. ಅದೇ ರೀತಿ ನಿಮ್ಮ ಜಮೀನಿನ ಸುತ್ತ ಇರುವ ಗಡಿಯನ್ನು ನಿರ್ಧರಿಸಿ ಪ್ರತ್ಯೇಕ ಪಹಣಿಗಳನ್ನು ಮಾಡಿಕೊಡುತ್ತದೆ. ಅದಕ್ಕೆ ಉದಾಹರಣೆಯಾಗಿ ಎಂದರೆ ಒಂದು ಸರ್ವೇ ನಂಬರ್ 270 ರಲ್ಲಿ ಇಬ್ಬರು ಜನ ಮಾಲೀಕರಿದ್ದಾರೆ ಎರಡು ಮಾಲೀಕರ ಹೆಸರು ಒಂದೇ ಪಹಣಿ ಪತ್ರಿಕೆಯಲ್ಲಿ ಬರುತ್ತಿರುತ್ತದೆ ಯಾಕಂದ್ರೆ ಒಂದೇ ಸರ್ವೇ ನಂಬರ್ ಆಗಿರುತ್ತದೆ . ಇದನ್ನು ಬೇರೆ ಮಾಡಿಕೊಳ್ಳಬೇಕೆಂದರೆ ಪೋಡಿ ಮಾಡಿಸಿಕೊಳ್ಳಬೇಕು ಅದನ್ನು ಸರ್ವೇ ನಂಬರ್ 270 ಹಿಸ್ಸಾ ಮತ್ತು ಸರ್ವೆ ನಂಬರ್ 270 ಹಿಸ್ಸಾ 2, ಹೀಗೆ ಪ್ರತ್ಯೇಕವಾಗಿ ಪಹಣಿಯನ್ನು ಪಡೆದುಕೊಳ್ಳಬಹುದು. ಅಂದರೆ ಇಲ್ಲಿ ಸರ್ವೆ ನಂಬರ್ ಒಂದೇ ಆಗಿರುತ್ತದೆ ಆದರೆ ಬೇರೆ ಬೇರೆ ಹಿಸ್ಸಾ ನಂಬರ್ಗಳನ್ನು ಕೊಡಲಾಗುತ್ತದೆ ಇದರಿಂದಾಗಿ ಪ್ರತಿ ಹಿಸ್ಸಾ ನಂಬರ್ ಬೇರೆ ಬೇರೆ ಪಹಣಿಯನ್ನು ತತ್ಕಾಲ್ ಪೋಡಿಯ ಮೂಲಕ ಮಾಡಿಕೊಳ್ಳಬಹುದು. ಅಂದರೆ ಏಕ ಮಾಲೀಕತ್ವದ ಪಹಣಿಯನ್ನು ಪಡೆಯಬಹುದು. ಬಹು ಮಾಲೀಕತ್ವದಿಂದ ಏಕಮಾಲಿತ್ವಕ್ಕೆ ಪರಿವರ್ತನೆ ಮಾಡುವುದನ್ನು ಪೋಡಿ ಅನ್ನಬಹುದು. ನೀವು ನಿಮ್ಮ ಜಮೀನನ್ನು ಹತ್ತು ವರ್ಷದಿಂದ ಅನುಭವಿಸುತ್ತಿದ್ದರೆ ಮಾತ್ರ ಪೋಡಿಗಾಗಿ ಅರ್ಜಿಯನ್ನು ಸಲ್ಲಿಸಬಹುದು.

ಆರ್.ಟಿ.ಸಿ – ಆಧಾರ್ ಲಿಂಕ್ ಮಾಡುವ ಸುಲಭ ವಿಧಾನ –
ನಿಮ್ಮ ಜಮೀನಿನ ಪಹಣಿ (RTC) ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ತುಂಬಾ ಸುಲಭ! ಕೆಲವೇ ಕ್ಲಿಕ್ ಗಳಲ್ಲಿ ನೀವು ಈ ಕೆಲಸವನ್ನು ಮನೆಯಿಂದಲೇ ಮಾಡಬಹುದು. 👉
* https://landrecords.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ. ಓಟಿಪಿ ಬೀರುತ್ತದೆ.

• ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಬೇಕು. ನಂತರ ಅಲ್ಲಿ ಆಧಾರ್ ಕಾರ್ಡ್ ಅಲ್ಲಿ ಇರುವ ಹೆಸರನ್ನು ತಪ್ಪದೇ ನಿಖರವಾಗಿ ಹಾಕಬೇಕು.
• ನಂತರ ಅಲ್ಲಿ ನಿಮ್ಮ ಜಮೀನಿನ ಸರ್ವೇ ನಂಬರ್ ಹಾಕಿ ಹಿಸ್ಸಾ ನಂಬರ್ ಹಾಕಿ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಲಿಂಕ್ ಆಗುತ್ತದೆ.

ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನೇನು ಬೇಕು ಎಂಬುದನ್ನು ತಿಳಿಯೋಣ.
• ಜಮೀನಿನ ಮಾಲೀಕನ ಆಧಾರ್ ಕಾರ್ಡ್.
• ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಪೋಡಿ ಮಾಡಿಸುವ ಅರ್ಜಿಯನ್ನು ತುಂಬಬೇಕು.
• ಇದಕ್ಕಿಂತ ಹೆಚ್ಚಿನ ದಾಖಲೆಗಳು ಬೇಕಾಗಿದ್ದಲ್ಲಿ ನೀವು ನಾಡಕಚೇರಿ ಅಥವಾ ತಾಲೂಕು ಆಫೀಸ್ ಸರ್ವೆ ಡಿಪಾರ್ಟೆಂಟ್ನಲ್ಲಿ ವಿಚಾರಿಸಿ ಪೋಡಿ ಅರ್ಜಿ ಕೂಡ ನಾಡಕಚೇರಿಯಲ್ಲಿ ಸಿಗುತ್ತದೆ. ಅದೇ ರೀತಿ ನೀವು ಪೋಡಿಗೆ ಅರ್ಜಿಯನ್ನು ನಾಡಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ ಅಥವಾ ತಹಶೀಲ್ದಾರರಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ತತ್ಕಾಲ್ ಪೋಡಿಯಲ್ಲಿ ನಿಮ್ಮ ಹೆಸರು ಬದಲಾಗುವುದಿಲ್ಲ ನಿಮ್ಮ ಗಡಿಯನ್ನು ಗುರುತಿಸಿ ಆರ್ ಟಿ ಸಿ ಯಲ್ಲಿ ನಿಮ್ಮ ಹೆಸರನ್ನು ಪ್ರತ್ಯೇಕವಾಗಿ ಕೊಡಲಾಗುತ್ತದೆ. ಬಹುಮಾಲಿಕತ್ವದಿಂದ ಏಕಮಾಲಿಕತ್ವಕ್ಕೆ ಬದಲಾಯಿಸಿಕೊಡುತ್ತಾರೆ.

ಭೂಮಿ ಆ್ಯಪ್ ಪಡೆಯಲು ಈ ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
https://play.google.com/store/apps/details?id=app.bmc.com.BHOOMI_MRTC
ಇದರಲ್ಲಿ ನೀವು ಈ ತಂತ್ರಾಂಶ (ಆ್ಯಪ್) ಡೌನ್ಲೋಡ್ ಮಾಡಿ ನಂತರ ಇದರಲ್ಲಿ ನಿಮಗೆ ಬೇಕಾದ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ ನಿಮ್ಮ ಮೊಬೈಲಿನಲ್ಲಿ ಜಮೀನಿನ ಸಂಪೂರ್ಣ ಮಾಹಿತಿ ನೋಡಬಹುದು.

Oplus_131072

Spread positive news

Leave a Reply

Your email address will not be published. Required fields are marked *