ಆಸ್ತಿ ನೋಂದಣಿಗೆ(property registration)ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ದರೆ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಅಪ್‌ಡೇಟ್ ಆಗಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲವಾದರೆ ಲಕ್ಷಾಂತರ ರೂ. ಮುದ್ರಾಂಕ ಶುಲ್ಕ ಪಾವತಿಸಿದರೂ ಆಸ್ತಿ ನೋಂದಣಿ ಮಾಡಿಸುವುದು ಅಸಾಧ್ಯ. ಬಂದ ದಾರಿಗೆ ಸುಂಕವಿಲ್ಲದಂತೆ ಮನೆಯ ಹಾದಿ ಹಿಡಿಯಬೇಕಾಗುತ್ತದೆ.
ಈಗಾಗಲೇ ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಆಗಿದ್ದರೆ ಅಪ್ಡೇಟ್ ಮಾಡಿಸಲೇಬೇಕು. ಜಮೀನು ಮಾಲೀಕತ್ವದ ಸುರಕ್ಷತೆ, ವಂಚನೆ ತಡೆಯಲು ಸರ್ಕಾರ ಆಸ್ತಿ ನೋಂದಣಿಗೆ ಆಧಾರ್ ಕಡ್ಡಾಯಗೊಳಿಸಿದೆ. ವ್ಯಾಪ್ತಿಯೊಳಗೆ ರಿಜಿಸ್ಟೇಷನ್ ಎನಿವೇರ್ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ ಆಧಾರ್ ಮಾಡಿಸಿ 10 ವರ್ಷ ಆಗಿರುವವರು ಅಪ್‌ಡೇಟ್ ಮಾಡಿಸದಿದ್ದಲ್ಲಿ ಆನ್‌ಲೈನ್ ಪೇಮೆಂಟ್ ಪಾವತಿಸಿದರೂ ಆಸ್ತಿ ನೋಂದಣಿ ಆಗಲ್ಲ, ಇದು ಜಮೀನಿನ ಮಾಲೀಕರು ಮತ್ತು ಖರೀದಿದಾರರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಆಧಾರ್ ಕಾರ್ಡ್‌ನಲ್ಲಿ ಬಯೋಮೆಟ್ರಿಕ್ ಡೇಟಾ, ವಿಳಾಸ, ಇಮೇಲ್, ಪಿನ್‌ಕೋಡ್ ಇತ್ಯಾದಿ ಮಾಹಿತಿ ಬದಲಾವಣೆ ಆಗಿದ್ದರೆ ಅವುಗಳನ್ನು ಅಧಾರ್‌ನಲ್ಲಿ ಅಪ್ಡೇಟ್ ಮಾಡಿಸಬೇಕು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಗಡುವು ಮುಗಿದ ನಂತರ ಆಧಾರ್ ನವೀಕರಣವಾಗಬೇಕು.
ಇದರ ಬಗ್ಗೆ ಅರಿವಿಲ್ಲದ ಜನರು ಆಸ್ತಿ ನೋಂದಣಿಗೆ ಮುಂದಾಗಿ ಕೆಲಸವಾಗದೆ ಬರಿಗೈಯಲ್ಲಿ ಮರಳುವಂತಾಗಿದೆ. ಆಸ್ತಿ ನೋಂದಣಿಗೆ ಕುಟುಂಬಸ್ಥರ ಆಧಾರ್ ಮಾಹಿತಿ ಬೇಕು. ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವಾಗಲೇ ಖರೀದಿ ಮಾಡುವವರು, ಮಾರಾಟ ಮಾಡುವವರ ಆಧಾರ್ ನಂಬರ್ ಕಡ್ಡಾಯವಾಗಿ ಅಪ್‌ಲೋಡ್ ಮಾಡಲಾಗುತ್ತದೆ. ಆದರೆ ಆನ್‌ಲೈನ್ ಪೇಮೆಂಟ್ ಮಾಡಿ ಸ್ಲಾಟ್ ಮಾಡಲಾಗುತ್ತದೆ. ಆ ಸಮಯದಲ್ಲಿ ಒಬ್ಬರ ಆಧಾರ್ ಅಪ್‌ಡೇಟ್ ಆಗದಿದ್ದರೂ ಆಸ್ತಿ ನೋಂದಣಿ ಆಗುವುದಿಲ್ಲ. ಹಾಗಾಗಿ ಆಧಾರ್ ಅಪ್ ಡೇಟ್ ಮಾಡಿಸಿ ಬಂದ ಮೇಲೆ ಮತ್ತೊಂದು ಸ್ಲಾಟ್ ತೆಗೆದುಕೊಳ್ಳಬೇಕಿರುವುದು ಸಮಸ್ಯೆಗೆ ಕಾರಣವಾಗಿದೆ.
ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಅತ್ಯಂತ ಮುಖ್ಯವಾದ ದಾಖಲೆಯಾಗಿದ್ದು, ಹಲವಾರು ಸ್ಥಳಗಳಲ್ಲಿ ಇದು ಕಡ್ಡಾಯವಾಗಿದೆ. ಆದರೆ ಹಲವರಿಗೆ ತಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಬಗ್ಗೆ ತುಂಬಾ ಬೇಸರವಿರುತ್ತದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನೀಡುವ ಸೇವೆಗಳನ್ನು ಪಡೆಯಲು ನಾಗರಿಕರಿಗೆ ಆಧಾರ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸುವ ಆಯ್ಕೆಗಳಿವೆ. ಹಲವರಿಗೆ ಈ ಬಗ್ಗೆ ತಿಳಿದಿಲ್ಲ ಎಂಬುದು ಸತ್ಯ. ಸರಳ ಹಂತಗಳ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಸುಲಭವಾಗಿ ನವೀಕರಿಸಬಹುದು. ಇದಕ್ಕೆ ರೂ.100 ಶುಲ್ಕ ವಿಧಿಸಲಾಗುತ್ತದೆ. ಸೆಪ್ಟೆಂಬರ್ 14 ರೊಳಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಲು ಅವಕಾಶವಿದೆ. ಆದರೆ, ಫೋಟೋವನ್ನು ಆನ್‌ಲೈನ್‌ನಲ್ಲಿ ನವೀಕರಿಸಲಾಗುವುದಿಲ್ಲ, ಫೋಟೋವನ್ನು ನವೀಕರಿಸಲು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಆದರೆ ನೀವು ನೋಂದಣಿ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ಆಧಾರ್ ಕೇಂದ್ರಕ್ಕೆ ಹೋಗುವ ಮೊದಲು ಅದನ್ನು ಭರ್ತಿ ಮಾಡಬಹುದು.
ಆಧಾರ್ ಕಾರ್ಡ್ ಫೋಟೋವನ್ನು ಬದಲಾಯಿಸುವ ಮತ್ತು ನವೀಕರಿಸುವ ಹಂತಗಳು ಇಲ್ಲಿವೆ.
ನೀವು ಕೂಡ ಕೂಡಲೇ ಹೀಗೆ ಮಾಡಿ.
ಆಧಾರ್ ಕಾರ್ಡ್ ಅಪ್‌ಡೇಟ್ ಆಗದೇ ಇರುವವರು ಪ್ಯಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಇದ್ದರೂ ನೋಂದಣಿ ಮಾಡಿಸಬಹುದು. ಆದರೆ, ಆನ್‌ಲೈನ್‌ನಲ್ಲಿ ವಿವರ ಅಪ್ ಲೋಡ್ ಮಾಡುವಾಗ ಆಧಾರ್ ಬದಲು ಪ್ಯಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಆಯ್ಕೆ ಮಾಡಿಕೊಳ್ಳಬೇಕು.
ನಿಮ್ಮ ಆಧಾರ್ ಬ್ಯಾಂಕ್ ಲಿಂಕ್ ಆಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಇಲ್ಲಿದೆ ನೋಡಿರಿ 👇🏻
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್
https://uidai.gov.in/en/
ನಂತರ ಮುಂದಿನ ಮುಖಪುಟದಲ್ಲಿ ಕಾಣುವ ಹಾಗೆ ಆಧಾರ್ ಸರ್ವಿಸಸ್(Adhaar services) ಅದರ ಮೇಲೆ ಕ್ಲಿಕ್ ಮಾಡಿ.
ನಂತರ ಮುಂದೆ ಕಾಣುವ ಮುಖಪುಟದಲ್ಲಿ ಆಧಾರ್ ಲಿಂಕಿಂಗ್ ಸ್ಟೇಟಸ್ (Adhaar Linking status) ಮೇಲೆ ಕ್ಲಿಕ್ ಮಾಡಿ.
ನಂತರ ಅದೇ ಮುಖಪುಟದಲ್ಲಿ ಕೆಲಗೆ ಕಾಣುವ ಹಾಗೆ ಬ್ಯಾಂಕ್ ಸೀಡಿಂಗ್ ಸ್ಟೇಟಸ್ (bank seeding status ) ಮೇಲೆ ಕ್ಲಿಕ್ ಮಾಡಿ..
ನಂತರ ಅಲ್ಲಿ ಲಾಗಿನ್ ಕೇಳುತ್ತದೆ ನಿಮ್ಮ ಆಧಾರ್ ಸಂಖ್ಯೆ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಮತ್ತು ನಿಮ್ಮ ಮೊಬೈಲ್ ಬಗ್ಗೆ ಬಂದಿರುವ ಓಟಿಪಿಯನ್ನು ಹಾಕಿ ಲಾಗಿನ್ ಆಗಿ.
ನಂತರ ಅದೇ ಬ್ಯಾಂಕ್ ಸಿಡಿಂಗ್ ಸ್ಟೇಟಸ್ ಮೇಲೆ ಇನ್ನೊಮ್ಮೆ ಒತ್ತಿ.ನಂತರ ಅಲ್ಲಿ ನಿಮ್ಮ ಸ್ಟೇಟಸ್ ಆಕ್ಟಿವ್ ಎಂದು ಬಂದರೆ ನಿಮಗೆ ಬರ ಪರಿಹಾರದ ಹಣ ಆಗುತ್ತದೆ.