ಪ್ರೀಯ ರೈತರೇ ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ನೀವು ನಿಮ್ಮ ಜಮೀನಿನ ಮಾಹಿತಿ ಪಡೆಯಲು ಸರ್ಕಾರದಿಂದ ಒಂದು ಕೆಲಸ ಮಾಡಬೇಕಾಗಿದೆ. ಅದೇನೆಂದರೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. How to Check Aadhaar Bank Linked Status :- ಬರ ಪರಿಹಾರ ಪಡೆಯಲು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಪ್ರೋಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ನಿಮ್ಮ ಆಧಾರ್ ಬ್ಯಾಂಕ್ ಲಿಂಕ್ ಆಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಇಲ್ಲಿದೆ ನೋಡಿರಿ 👇🏻
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್
https://uidai.gov.in/en/
ನಂತರ ಮುಂದಿನ ಮುಖಪುಟದಲ್ಲಿ ಕಾಣುವ ಹಾಗೆ ಆಧಾರ್ ಸರ್ವಿಸಸ್(Adhaar services) ಅದರ ಮೇಲೆ ಕ್ಲಿಕ್ ಮಾಡಿ.
ನಂತರ ಮುಂದೆ ಕಾಣುವ ಮುಖಪುಟದಲ್ಲಿ ಆಧಾರ್ ಲಿಂಕಿಂಗ್ ಸ್ಟೇಟಸ್ (Adhaar Linking status) ಮೇಲೆ ಕ್ಲಿಕ್ ಮಾಡಿ.
ನಂತರ ಅದೇ ಮುಖಪುಟದಲ್ಲಿ ಕೆಲಗೆ ಕಾಣುವ ಹಾಗೆ ಬ್ಯಾಂಕ್ ಸೀಡಿಂಗ್ ಸ್ಟೇಟಸ್ (bank seeding status ) ಮೇಲೆ ಕ್ಲಿಕ್ ಮಾಡಿ..
ನಂತರ ಅಲ್ಲಿ ಲಾಗಿನ್ ಕೇಳುತ್ತದೆ ನಿಮ್ಮ ಆಧಾರ್ ಸಂಖ್ಯೆ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಮತ್ತು ನಿಮ್ಮ ಮೊಬೈಲ್ ಬಗ್ಗೆ ಬಂದಿರುವ ಓಟಿಪಿಯನ್ನು ಹಾಕಿ ಲಾಗಿನ್ ಆಗಿ.
ನಂತರ ಅದೇ ಬ್ಯಾಂಕ್ ಸಿಡಿಂಗ್ ಸ್ಟೇಟಸ್ ಮೇಲೆ ಇನ್ನೊಮ್ಮೆ ಒತ್ತಿ.. ನಂತರ ಅಲ್ಲಿ ನಿಮ್ಮ ಸ್ಟೇಟಸ್ ಆಕ್ಟಿವ್ ಎಂದು ಬಂದರೆ ನಿಮಗೆ ಬರ ಪರಿಹಾರದ ಹಣ ಆಗುತ್ತದೆ.
ಬರ ಪರಿಹಾರದ ಹಣ ಇನ್ನೂ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://play.google.com/store/apps/details?id=com.dbtkarnataka
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಡಿಬಿಟಿ(DBT Karnataka application)ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಹಾಗೂ ಇನ್ಸ್ಟಾಲ್(Install) ಮಾಡಿಕೊಳ್ಳಿ.
ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ get otp ಮೇಲೆ ಒತ್ತಬೇಕು.
ಓಟಿಪಿಯನ್ನು(OTP) ಹಾಕಿ ವೆರಿಫೈ (Verify OTP )ಓಟಿಪಿ ಮೇಲೆ ಒತ್ತಬೇಕು.
ನಂತರ ನಿಮಗೆ ಬೇಕಾಗಿರುವ ನಾಲ್ಕು ಅಂಕಿಯmPIN create ಮಾಡಿಕೊಂಡು, ನಂತರ confirm mPIN ಹಾಕಿ,Submit ಬಟನ್ ಮೇಲೆ ಒತ್ತಿರಿ..
ನಂತರ ಅಲ್ಲಿ ಕಾಣಿಸುವ Payment status ಮೇಲೆ ಕ್ಲಿಕ್ ಮಾಡಿ. ತದನಂತರ ನಿಮಗೆ ಇಲ್ಲಿಯವರೆಗೂ ಸರ್ಕಾರದಿಂದ ಬಂದಿರುವ ಸಹಾಯಧನದ ಮಾಹಿತಿಯು ದೊರೆಯುತ್ತದೆ.
ಆಧಾರ್ ಕಾರ್ಡ್ ಲಿಂಕ್ ಏಕೆ ಮಾಡಬೇಕು?
ಹೌದು ರೈತರೇ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಹಲವಾರು ಲಾಭಗಳು ಇವೆ. ಅದೇ ರೀತಿ ರೈತರಿಗೆ ಸವಲತ್ತುಗಳು ಸಹ ಸಂಪೂರ್ಣ ದೊರೆಯುತ್ತದೆ. ಭೂ ವಂಚನೆ ತಡೆಯುವ ಉದ್ದೇಶದಿಂದ ಈ ನಿಯಮ ಕಡ್ಡಾಯ ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಜಮೀನು ಮಾಲೀಕರ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಕಂದಾಯ ಇಲಾಖೆ ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ ಆರಂಭಿಸಿದೆ.
ನಿಮ್ಮ NPCI ಸ್ಥಿತಿಯನ್ನು ಹೀಗೆ ಪರಿಶೀಲಿಸಬಹುದು:
* https://fruits.karnataka.gov.in/ ಗೆ ಭೇಟಿ ನೀಡಿ.
* ಸಿಟಿಜನ್ ರಿಜಿಸ್ಟ್ರೇಷನ್(Citizen Registration ” ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ.
* ಮುಂದುವರಿಯಿರಿ” ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನಮೂದಿಸಿ.
* OTP ಯನ್ನು ನಮೂದಿಸಿ ಮತ್ತು “ಸಲ್ಲಿಸಿ” ಕ್ಲಿಕ್ ಮಾಡಿ.
* ಪಾಸ್ವರ್ಡ್ ರಚಿಸಿ (Create password) ಮತ್ತು ಲಾಗಿನ್ ಮಾಡಿ.
ಇಷ್ಟು ಮಾಡಿದರೆ ನಿಮ್ಮ ಆರ್.ಟಿ.ಸಿ ಗೆ ಆಧಾರ್ ಲಿಂಕ್ ಆಗಿದೆ ಎಂದು ಖಚಿತ. ಈ ಪ್ರಕ್ರಿಯೆ ಉಚಿತ, ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ಪಹಣಿ ಯಲ್ಲಿರುವ ಹೆಸರು ಒಂದೇ ಆಗಿರಬೇಕು.