ಬೆಳೆ ಸಮೀಕ್ಷೆ ಮಾಡಲು ಜುಲೈ 31 ಕೊನೆಯ ದಿನ ಸಮೀಕ್ಷೆ ಲಿಂಕ್ ಇಲ್ಲಿದೆ.

ರೈತರೇ ನೀವು ನೋಡಲೇಬೇಕಾದ ವಿಷಯ ಈಗ ನಿಮ್ಮ‌ಮುಂದೆ. ಇವತ್ತು ನೀವು ಮಾಡಬೇಕಾದ ಮಹತ್ವದ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ರಾಜ್ಯದಲ್ಲಿ ಬೆಳೆವಿಮೆ ಮಾಡಿಸಲು ಜುಲೈ 31 ಕೊನೆಯ ದಿನ
ನಿಗದಿ ಪಡಿಸಿದ ರಾಜ್ಯ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಮುಂಗಾರು ಬಿತ್ತನೆ ಭರದಿಂದ ಸಾಗಿದ್ದು, ಬಿತ್ತನೆ ಕಾರ್ಯ ಕೈಗೊಳ್ಳುವುದರ ಜತೆಗೆ ಬಿತ್ತಿದ ಬೆಳೆಯ ಕ್ಷೇತ್ರವನ್ನು ಪ್ರಧಾನಮಂತ್ರಿ ಫಸಲ್ ಬಿಮಾ (ಬೆಳೆ ವಿಮೆ) ವ್ಯಾಪ್ತಿಗೆ ನೋಂದಾಯಿಸಬೇಕು. ಬೆಳೆ ವಿಮೆ ನೋಂದಣಿಗೆ ಜು.31 ಕೊನೆಯ ದಿನವಾಗಿದೆ.


ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಂತಹ ಪ್ರಕೃತಿ ವಿಕೋಪದಂತಹ ಅವಘಡಗಳು ಯಾವ ಹಂತದಲ್ಲಾದರೂ ಎದುರಾಗಬಹುದು, ಅಲ್ಲದೆ ಬೆಳೆಯೂ ನಾಶವಾಗಬಹುದು. ಹೀಗಾಗಿ ರೈತರು ಕೂಡಲೇ ಸಮೀಪದ ಗ್ರಾಮ ಒನ್, ಸಿಎಸ್‌ಸಿ ಕೇಂದ್ರ, ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್‌ಗೆ ತೆರಳಿ ಬೆಳೆ ವಿಮೆ ನೋಂದಣಿ ಮಾಡಿಸಬೇಕು. ರೈತರು ‘ನನ್ನ ಬೆಳೆ ನನ್ನ ಸಮೀಕ್ಷೆ’ ಧೈಯದೊಂದಿಗೆ ಮುಂಗಾರು ಬೆಳೆ ಸಮೀಕ್ಷೆ ಮಾಡಲು ಗೂಗಲ್ ಪ್ಲೇ ಸ್ಟೋ‌ನಿಂದ ಬೆಳೆ ಸಮೀಕ್ಷೆ 2024-25 ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಹೊಲದಲ್ಲಿ ತಾವು ಬೆಳೆದ ಬೆಳೆಗಳ ಸಮೀಕ್ಷೆ ಕೈಗೊಳ್ಳಬೇಕು. ಇದರಿಂದ ಬೆಳೆ ಮಿಸ್ ಮ್ಯಾಚ್ ಆಗುವ ತೊಂದರೆ ತಡೆದಂತಾಗಲಿದೆ.

ಬೆಳೆ. ರೈತರ ವಂತಿಕೆ ಪ್ರತಿ ಎಕರೆಗೆ
ಹೆಸರು (ಮಳೆಯಾಶ್ರಿತ). 269.13 ರೂ
ಉದ್ದು (ಮಳೆಯಾಶ್ರಿತ). 265. ರೂ
ತೊಗರಿ (ಮಳೆಯಾಶ್ರಿತ) 388 ರೂ
ಹತ್ತಿ (ಮಳೆಯಾಶ್ರಿತ). 1006.69ರೂ
ಹತ್ತಿ (ನೀರಾವರಿ) ‌ 1492.32ರೂ

ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ವಿವರ ದಾಖಲಿಸಲು ಆಂಡ್ರಾಯ್ಡ್ ಆಪ್ ಡೌನ್ಲೋಡ್ ಮಾಡಿಕೊಂಡು ಬೆಳೆ ವಿವರ ತಾವೇ ಸ್ವತಃ ಮೊಬೈಲ್ ತಂತ್ರಾಂಶದ ಮೂಲಕ ದಾಖಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಕೆಳಗೆ ನೀಡಲಾಗಿರುವ ಸ್ಕ್ಯಾನರ್ ಉಪಯೋಗಿಸಿ ಬೆಳೆ ಸಮೀಕ್ಷೆ ಮಾಡಿ.

ಈ ಆಂಡ್ರಾಯ್ಡ್ ಆ್ಯಪ್ ಡೌನ್ಲೋಡ್ ಬಗ್ಗೆ –

• ರೈತರು ಪ್ಲೇ ಸ್ಟೋರ್ ನಲ್ಲಿ ಹೋಗಿ ಬೆಳೆ ಸಮೀಕ್ಷೆ 2024 -25ಎಂದು ಹುಡುಕಿದರೆ ನಿಮಗೆ ಈ ಅಪ್ಲಿಕೇಶನ್ ಸಿಗುತ್ತದೆ.
• ಡೈರೆಕ್ಟ್ ಆಗಿ ಗೂಗಲ್ ನಲ್ಲಿ ಹೋಗಿ https://play.google.com/store/apps/details?id=com.csk.farmer23_24.cropsurvey ಎಂದು ಹುಡುಕಿದರೆ ಅಲ್ಲಿ cropsurvey ಎಂದು ಆಯ್ಕೆ ಬಂದಾಗ ಅದರಲ್ಲಿ ಸಮೀಕ್ಷೆ ಮಾಡಬಹುದು.

• ರೈತರೇ ನಿಮಗೆ ಇದರ ಹೆಚ್ಚಿನ ಮಾಹಿತಿಗಾಗಿ ಬೇಕಾದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕಂದಾಯ ಇಲಾಖೆಯನ್ನು ಸಂಪರ್ಕಿಸಬಹುದು. ಅವರು ಈ ಹೊಸ ತಾಂತ್ರಿಕತೆಯ‌ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ.ಸಮೀಕ್ಷೆ ಮಾಡುವ ವಿಧಾನ –
ಪ್ರೀಯ ರೈತರೇ ನೀವು ನಿಮ್ಮ ಆಂಡ್ರಾಯ್ಡ್ ನಲ್ಲಿ ಸ್ವತಂತ್ರವಾಗಿ ಅಪ್ಲೋಡು ಮಾಡಲು ಸಾಧ್ಯವಾಗದಿದ್ದಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಬೆಳೆಯನ್ನು ಮಾಡಬಹುದಾಗಿದೆ. ಮೊಬೈಲ್‌ ಆ್ಯಪ್‌ ಬಳಸಲು ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯುವುದು.
• ಮೊದಲು ಅಂಡ್ರಾಯ್ಡ್ ಮೊಬೈಲ್ ಮೂಲಕ ಗೂಗಲ್ ಪ್ಲೇ ಸ್ಟೋರ್ ‘ Kharif Farmer Crop 2023 -24 Version 1.0.3 ‘ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.• ನಂತರ ಆ್ಯಪ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ನ QR Code ನ್ನು ಸ್ಕ್ಯಾನ್ ಮಾಡಬೇಕು ಅಥವಾ ಆಧಾರ್ ಸಂಖ್ಯೆ ದಾಖಲಿಸಬೇಕು.

• ನಂತರ ನಿಮ್ಮ ಆಧಾರ್ ಲಿಂಕ್ ಇರುವ ಮೊಬೈಲ್ ಗೆ ಬಂದ ಒ.ಟಿ.ಪಿ.ಯನ್ನು ಹಾಕಬೇಕು.

• ಅದಾದಮೇಲೆ ಜಿಲ್ಲೆ ತಾಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್, ಮಾಲೀಕರ ಹೆಸರು ಆಯ್ಕೆ ಮಾಡಿ ಅಲ್ಲಿ ಕೇಳಿದ ಮಾಹಿತಿಯನ್ನು ತುಂಬಬೇಕು.

• ನಂತರ ಕ್ಷೇತ್ರ ನಮೂದಿಸಿ, ಸರ್ವೇ ನಂಬರ್ ನ ಗಡಿ ರೇಖೆಯ ಒಳಗೆ ನಿಂತು ಬೆಳೆಗಳ ವಿವರ ದಾಖಲಿಸಿ ಛಾಯಾಚಿತ್ರ ತೆಗೆದು ಅಪ್ಲೋಡು ಮಾಡಿದಾಗ ಸಮೀಕ್ಷೆ ಪೂರ್ಣಗೊಳ್ಳುವುದು.ಬೆಳೆ ಸಮೀಕ್ಷೆ ಪ್ರಯೋಜನ –
• ಬೆಳೆ ನಷ್ಟ ಪರಿಹಾರ,
• ಬೆಳೆ ವಿಮೆ,
• ಕನಿಷ್ಠ ಬೆಂಬಲ ಬೆಲೆ
• ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಾತಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಬೆಳೆ ಸಮೀಕ್ಷೆಯ ವಿವರವನ್ನು ಬಳಸಲಾಗುತ್ತದೆ, ಹಾಗೂ ಸರಕಾರದ ನಾನಾ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಬೆಳೆ ಸಮೀಕ್ಷೆ ಬಳಸಲಾಗುತ್ತದೆ.

ರಾಜ್ಯದಲ್ಲಿ ಬೆಳೆವಿಮೆ ಮಾಡಿಸಲು ಜುಲೈ 31 ಕೊನೆಯ ದಿನ
ನಿಗದಿ ಪಡಿಸಿದ ರಾಜ್ಯ ಸರ್ಕಾರ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಿದ್ದು, ರೈತರು ಬೆಳೆದ ಬೆಳೆಗಳ ಬಗ್ಗೆ ನಿಖರವಾಗಿ ಮಾಹಿತಿ ಪಡೆದುಕೊಳ್ಳಲು ಇ-ಆಡಳಿತ ವತಿಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ದಯವಿಟ್ಟು ಸಹಾಯವಾಣಿ ಸಂಖ್ಯೆ 18004253553 ಗೆ ಕರೆ ಮಾಡಿ.

Spread positive news

Leave a Reply

Your email address will not be published. Required fields are marked *