ಮೆಣಸಿನಕಾಯಿ & ದಾಳಿಂಬೆ ಬೆಳೆ ವಿಮಾ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭ

ಪ್ರಸ್ತಕ ಸಾಲಿಗೆ ಮುಂಗಾರು ಹಂಗಾಮು ಅವಧಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಹ ರೈತರು ತಮ್ಮ ಬೆಳೆಗಳ ವಿಮೆಗೆ ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತ್‌ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಸಪ್ಪಂಡಿ ತಿಳಿಸಿದ್ದಾರೆ.ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯಾಗಬಹುದು.

ಈ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕ(ಗ್ರಾಮಪಂಚಾಯಿತಿ)ವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರವನ್ನು ನೀಡುವುದರ ಮೂಲಕ ರೈತರಿಗೆ ನೆರವಾಗುವುದು ಮರುವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆವಿಮೆ ಯೋಜನೆ ಮುಖ್ಯ ಉದ್ದೇಶವಾಗಿದೆ. ಹಸಿ ಮೆಣಸಿನಕಾಯಿ ಮತ್ತು ದಾಳಿಂಬೆ ಬೆಳೆಗಳು ವಿಮಾ ಯೋಜನೆಯಡಿ ಒಳಪಡುತ್ತದೆ.

ಬಳ್ಳಾರಿ ಜಿಲ್ಲೆಯಲ್ಲಿ ಹಸಿ ಮೆಣಸಿನಕಾಯಿ ಬೆಳೆ ವಿವರ

ಬಳ್ಳಾರಿ, ಕಂಪ್ಲಿ, ಕುರುಗೋಡು, ಸಿರುಗುಪ್ಪ, ಸಂಡೂರು ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯಿತಿಗಳು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ 71 ಸಾವಿರ ರೂಪಾಯಿ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ 3,550 ರೂಪಾಯಿ ಆಗಿರುತ್ತದೆ.

BPL Card ನಿರೀಕ್ಷೆಯಲ್ಲಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಹೊಸ ಕಾರ್ಡ್

ಬಳ್ಳಾರಿ ಜಿಲ್ಲೆಯಲ್ಲಿ ದಾಳಿಂಬೆ ಬೆಳೆ ವಿವರ

ಬಳ್ಳಾರಿ, ಕಂಪ್ಲಿ, ಕುರುಗೋಡು, ಸಿರುಗುಪ್ಪ, ಸಂಡೂರು ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯಿತಿಗಳು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ 1 ಲಕ್ಷ 27 ಸಾವಿರ ರೂಪಾಯಿ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ 6,350 ರೂಪಾಯಿ ಆಗಿರುತ್ತದೆ.

ರೈತರು ಅಗತ್ಯ ದಾಖಲೆಗಳೊಂದಿಗೆ ಎರಡು ಬೆಳೆಗಳ ವಿಮೆಗೆ ನೊಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮತ್ತು ಕುರುಗೋಡು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿಪಂ) ದೂ: 08392-278177 ಹಾಗೂ ಮೊ.9481305830, ಸಂಡೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿಪಂ) ದೂ:08395-260389 ಹಾಗೂ ಮೊ.9740934208, ಕಂಪ್ಲಿ ಮತ್ತು ಸಿರುಗುಪ್ಪದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಪಂ) ದೂ:08396-222066 ಹಾಗೂ ಮೊ.9916794371 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಹಣಿಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಜುಲೈ ಗೆ ಅಂತ್ಯ: ಕೃಷ್ಣ ಬೈರೇಗೌಡ

ಈ ಯೋಜನೆ ಜಾರಿ ಅದಾಗಿನಿಂದಲೂ ರೈತರಿಗೆ ಬೆನ್ನೆಲುಬಾಗಿ ಈ ಯೋಜನೆಯು ನಿಂತಿದೆ ಹಾಗೂ ಈ ಯೋಜನೆಗಳ ನಿಯಮಗಳು ಬದಲಾಗುತ್ತಾ ಇರುತ್ತದೆ. ಈ ಯೋಜನೆಯಡಿ ರೈತರು ಬೆಳೆ ಹಾನಿ ಅಥವಾ ಬೆಳೆ ಪರಿಹಾರ ಪಡೆಯಲು ತಮ್ಮ ಬೆಳೆಗಳ ವಿಮೆಯನ್ನು ಮಾಡಿಸುವುದು ಕಡ್ಡಾಯವಾಗಿದೆ. ಈ ಉಪಾಯದಿಂದ ತಮ್ಮ ಬೆಳೆಗಳನ್ನು ರೈತರು, ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಹಾಗೂ ಆದಾಯಕ್ಕೂ ಧಕ್ಕೆ ಆಗುವುದಿಲ್ಲ. ಈ ಯೋಜನೆ ಎಲ್ಲಾ ನಿಯಮಗಳು ಹಾಗೂ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಿದ್ದೇವೆ.

ಹವಾಮಾನ ಏರಿಳಿತಗಳಿಂದ ಹಾಗೂ ವೈಪರಿಚಗಳಿಂದ ಹಾಗೂ ಮಳೆಯ ಸಮಸ್ಯೆಯಿಂದ ರೈತರು ಬೆಳೆ ಹಾನಿಯ ಸಮಸ್ಯೆಯನ್ನು ತೀವ್ರವಾಗಿ ದೇಶಾದ್ಯಂತ ಎದುರಿಸುತ್ತಿದ್ದಾರೆ. 2023ರ ಫಸಲ್ ಭೀಮಾ ಯೋಜನೆ ಅಡಿ ರೈತರು ತಮ್ಮ ಬೆಳೆ ವಿಮೆಯನ್ನು ಮಾಡಿಸಿದ್ದಾರೆ ಈ ಸಮಸ್ಯೆಯಿಂದ ಪಾರಾಗಿದ್ದಾರೆ. 2024ರ ಬೆಳೆ ವಿಮೆ ಪಾವತಿಗಾಗಿ ಕೇಂದ್ರ ಸರ್ಕಾರವು ತಮ್ಮ ಬಜೆಟ್ ನಲ್ಲಿ 13625ಕೋಟಿ ರೂಪಾಯಿ ಬೆಳೆ ವಿಮೆಗೆಂದು ಮೀಸಲಿಟ್ಟಿದೆ. ಈ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಸುಮಾರು ನಾಲ್ಕು ಕೋಟಿಗಿಂತ ಅಧಿಕ ರೈತರು ಈ ಬೆಳೆ ವಿಮೆಯನ್ನು ಮಾಡಿಸಿದ್ದಾರೆ. ಈ ಯೋಜನೆ ಅಡಿ ಬೆಳೆ ನಷ್ಟವಾದ ರೈತರಿಗೆ ನೇರವಾಗಿ ಬೆಳೆ ವಿಮೆಯ ಮೂಲಕ ಹಣವನ್ನು ಪಾವತಿಸಲಾಗುತ್ತದೆ. 2023ರಲಾದ ಬೆಳೆ ನಷ್ಟವನ್ನು ಸರ್ಕಾರವು ಫಸಲ್ ಭೀಮಾ ಯೋಜನೆ ಮೂಲಕ ರೈತರಿಗೆ ಪಾವತಿಸಿರುವುದರಿಂದ ರೈತರಿಗೆ ಬೆಳೆಯನ್ನು ಬೆಳೆಯಲು ಪ್ರೋತ್ಸಾಹಸಿಕ್ಕಂತಾಗಿದೆ.

ಫಸಲ್ ಭೀಮಾ ಯೋಜನೆಯಿಂದ ರೈತರು ಹಣಕಾಸಿನ ನೆರವನ್ನು ಕೂಡ ಪಡೆಯಬಹುದು ಹಾಗೂ ಕಟಾವಿನ ನಂತರ ಒಮ್ಮೊಮ್ಮೆ ಆಕಾಲಿಕ ಮಳೆಗಳು ಅಥವಾ ಇತರೆ ಕಾರಣಗಳಿಂದ ಆದ ಹಾನಿಯನ್ನು ಈ ಯೋಜನೆ ಅಡಿ ಕೇಂದ್ರ ಸರ್ಕಾರವು ಬರಿಸುತ್ತದೆ ಈ ರೀತಿ ಭರಿಸುವುದರಿಂದ ರೈತರು ಬೆಳೆಗಳನ್ನು ಬೆಳೆಯಲು ಹಿಂಜರಿಯಲಾರರು ಹಾಗೂ ಆದಾಯದ ಮೂಲವೂ ಕೂಡ ತಗ್ಗುವುದಿಲ್ಲ. ಹಾಗೂ ಸರಕಾರದಿಂದ ಹಣಕಾಸಿನ ನೆರವು ಕೂಡ ಸಿಗುತ್ತದೆ. ವಿವಿಧ ರೀತಿಯ ಪ್ರಕೃತಿಯ ವಿಕೋಪಗಳಿಂದಲೂ ಬೆಳೆ ಹಾನಿ ಆದಾಗ ಬೆಳೆ ಪರಿಹಾರವನ್ನು ಬರಿಸಲಾಗುವುದೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇಂತಹ ವಿವಿಧ ಕಾರಣಗಳಿಂದ ಬೆಳೆ ಹಾನಿಯ ರಕ್ಷಣೆಗಾಗಿ ಸರ್ಕಾರ ಪನತೊಟ್ಟಿದೆ. ಈ ಯೋಜನೆ ಅಡಿ ರೈತರು ತಮ್ಮ ಬೆಳೆಯ ವಿಮೆಗೆ ನಿಗದಿಪಡಿಸಲಾದ ಪ್ರೀಮಿಯಂ ಹಣದ ಮೌಲ್ಯವನ್ನು ಪಾವತಿಸಬೇಕಾಗುತ್ತದೆ. ಸರ್ಕಾರದಿಂದ ಖರೀಫ ಹಾಗೂ ರಬಿ ಬೆಳೆಗಳಿಗೆ ಆರ್ಥಿಕ ನೆರವನ್ನು ನೀಡುತ್ತಿದೆ.

ರೈತರಿಗೆ ಸಿಹಿ ಸುದ್ದಿ..! 19.84 ಲಕ್ಷ ರೈತರಿಗೆ ಖಾತೆಗೆ ಬರ ಪರಿಹಾರ ಹಣ ನೇರ ಜಮಾ!

ಖರಿಪ್ ಬೆಳೆಗಳಿಗೆ 2 ಪ್ರತಿಶತ ಪ್ರೀಮಿಯಂನ್ನು ಹಾಗೂ ರಬಿ ಬೆಳೆಗಳಿಗೆ 1.5% ಪ್ರೀಮಿಯಂಅನ್ನು ಭರಿಸಬೇಕಾಗುತ್ತದೆ. ವಾಣಿಜ್ಯ ಅಥವಾ ತೋಟಗಾರಿಕಾ ಬೆಳೆಗಳಿಗೆ 5% ಪ್ರೀಮಿಯಂ ಅನ್ನು ರೈತರು ಪಾವತಿಸಬೇಕಾಗುತ್ತದೆ. ಈ ವಿಮೆಗಳನ್ನು ರೈತರು ವಿಮೆ ಕಂಪನಿಗಳಿಂದ ಮಾಡಿಕೊಳ್ಳಬೇಕಾಗುತ್ತದೆ. 2023ರ ಸಾಲಿನಲ್ಲಿ ಅನೇಕ ರೈತರು ಬೆಳೆ ನಷ್ಟವನ್ನು ಅನುಭವಿಸಿ ಹಾನಿ ಮಾಡಿಕೊಂಡಿದ್ದಾರೆ ಯಾವ್ಯಾವ ರೈತರು ಬೆಳೆ ವಿಮೆಯನ್ನು ಮಾಡಿಸಿಕೊಂಡಿಲ್ಲವೋ ಅವರು ಆದಾಯವನ್ನು ಕಳೆದುಕೊಂಡಿದ್ದಾರೆ ಹಾಗಾಗಿ ಕೇಂದ್ರ ಸರ್ಕಾರವು ಎಲ್ಲ ರೈತರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿ ಬೆಳೆ ವಿಮೆಗಳನ್ನು ಮಾಡಿಸಿಕೊಂಡು ತಮ್ಮ ಬೆಳೆಯ ಆದಾಯವನ್ನು ರಕ್ಷಿಸಿಕೊಳ್ಳಬೇಕೆಂದು ರೈತರಿಗೆ ವಿನಂತಿಸಿದ್ದಾರೆ. ಈ ಬೆಳೆ ವಿಮೆಯ ಮೊತ್ತವನ್ನು ಬೆಳೆ ಹಾನಿಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ನೇರವಾಗಿ ರೈತರ ಖಾತೆಗೆ ಡಿ ಬಿ ಟಿ ಮೂಲಕ ಹಣವನ್ನು ವರ್ಗಾಯಿಸುತ್ತದೆ ಅಥವಾ ಜಮಾ ಮಾಡುತ್ತದೆ.

ಫಸಲ್ ಭೀಮಾ ಯೋಜನೆಯ ಬೆಳೆ ವಿಮೆಯ ಮೊತ್ತವನ್ನು ಬಿಡುಗಡೆ ಮಾಡುವ ಮೊದಲು ಕೇಂದ್ರ ಸರ್ಕಾರವು ಅಧಿಕೃತ ವೆಬ್ಸೈಟ್ನಿಂದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಈ ಪಟ್ಟಿಯಲ್ಲಿ 2023ರಲ್ಲಿ ಬೆಳೆಗಳು ಹಾನಿಗೊಂಡು, ಯಾರು ವಿಮೆಯನ್ನು ಮಾಡಿಸಿದ್ದಾರೆ ಅವರ ಹೆಸರನ್ನು ಈ ಪಟ್ಟಿಯಲ್ಲಿ ಸಿಗುತ್ತದೆ ಹಾಗೂ ಈ ಪಟ್ಟಿಯಲ್ಲಿರುವ ಎಲ್ಲ ರೈತರಿಗೆ ತಮ್ಮ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ಫಸಲ್ ಭೀಮಾ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿದ ರೈತರಿಗೆ ಹಾಗೂ ಬೆಳೆ ನಷ್ಟದ ಸಂಪೂರ್ಣ ವಿವರವನ್ನು ಬೆಳೆ ವಿಮಾ ಕಂಪನಿಗಳಿಗೆ ತಿಳಿಸಿದ ರೈತರಿಗೆ 2023 ನೇ ಸಾಲಿನ ಬೆಳೆ ಪರಿಹಾರ ರೈತರಿಗೆ ನೀಡಲಾಗುತ್ತಿದೆ.

2024ರ ಹೊಸ ಫಸಲ್ ಭೀಮಾ ಯೋಜನೆಯ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.ನೀವು ಕೂಡ ಬೆಳೆ ಪರಿಹಾರ ಫಲಾನುಭವಿಗಳಾಗಿದ್ದರೆ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಬಹುದು.

ಫಸಲ್ ಭೀಮಾ ಯೋಜನೆ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳುವ ವಿಧಾನ ಕೆಳಗಿನಂತಿದೆ

1.PMFBY ಯ ಅಧಿಕೃತ ವೆಬ್‌ಸೈಟ್‌ಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಭೇಟಿ ನೀಡಬೇಕು https://pmfby.gov.in

2. ಫಸಲ್ ಭೀಮಾ ಯೋಜನೆಯ ಮುಖಪುಟವು ಕಾಣಿಸಿಕೊಳ್ಳುತ್ತದೆ ಮತ್ತು ನೀವು ಅಪ್ಲಿಕೇಶನ್ ಸ್ಥಿತಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

3.ಚೆಕ್ ಅಪ್ಲಿಕೇಶನ್ ಸ್ಥಿತಿ ನಿಮಗೆ ಕಾಣಿಸುತ್ತದೆ.
ಇಲ್ಲಿ ನೀವು ನಿಮ್ಮ ಬೆಳೆ ವಿಮೆಯ ರಶೀದಿ ಸಂಖ್ಯೆ ಮತ್ತು “ಕ್ಯಾಪ್ಚಾ ಕೋಡ್” ಅನ್ನು ನಮೂದಿಸಬೇಕು ಮತ್ತು “ಸ್ಥಿತಿಯನ್ನು ಪರಿಶೀಲಿಸಿ” ಬಟನ್ ಅನ್ನು ಕ್ಲಿಕ್ ಮಾಡಬೇಕು.

4.ಕ್ಲಿಕ್ ಮಾಡಿದ ನಂತರ ನೀವು ಯಶಸ್ವಿಯಾಗಿ PMFBY ಪೋರ್ಟಲ್‌ಗೆ ಲಾಗ್ ಇನ್ ಆಗುತ್ತೀರಿ.

ರೆಡ್‌’ನಿಂದ ‘ಯೆಲ್ಲೋ’ ಅಲರ್ಟ್‌ಗೆ ಮರಳಿದ ಕರ್ನಾಟಕದ 6 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ

ಈ ಪ್ರಕ್ರಿಯೆಯ ಮೂಲಕ, ನೀವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸ್ಥಿತಿಯನ್ನು ಪರಿಶೀಲಿಸಬಹುದು.

ನೀವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಫಲಾನುಭವಿಗಳ ಪಟ್ಟಿ 2023 ರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬೇಕು.

Spread positive news

Leave a Reply

Your email address will not be published. Required fields are marked *