ಪಂಚ್ ಮಿತ್ರ ಚಾಟ್! ನೀವು ಲಾಭ ಪಡೆಯಿರಿ

ಮಿತ್ರರೇ ಈಗಾಗಲೇ ರಾಜ್ಯದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಅದೇ ರೀತಿ ಈಗ ಸರ್ಕಾರವು ಸಹ ರೈತರು ಹಾಗೂ ಸಾರ್ವಜನಿಕರ ಮನೆ ಬಾಗಿಲಿಗೆ ಬರಲು ತಯಾರಿ ನಡೆಸಿದೆ. ಹೌದು ಏನು ಇವತ್ತಿನ ಈ ಲೇಖನದ ಉದ್ದೇಶ ಎಂದರೆ ಸರ್ಕಾರವು ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀಡುವ ಪ್ರತಿಯೊಂದು ಸೇವೆಗಳು ರೈತರ ಮನೆ ಬಾಗಿಲಿಗೆ ತಲುಪಬೇಕು ಎಂಬ ಹಿತದೃಷ್ಟಿಯಿಂದ ಸರ್ಕಾರವು ಒಂದು ಹೊಸ ಯೋಜನೆಗೆ ಕೈ ಹಾಕುತ್ತಿದೆ. ಅದುವೇ ಪಂಚತಂತ್ರ ಯೋಜನೆ. ಏನಿದು ಪಂಚತಂತ್ರ ಯೋಜನೆ? ಜನರಿಗೆ ಇದರ ಲಾಭ ಏನು? ಎಂದು ಸಂಪೂರ್ಣ ವಿವರವಾದ ಮಾಹಿತಿ ನೋಡೋಣ ಬನ್ನಿ.

ಸಾರ್ವಜನಿಕರು ಗ್ರಾಮ ಪಂಚಾಯಿತಿಗಳಲ್ಲಿ ತಮಗೆ ಅವಶ್ಯವಿರುವ ಮಾಹಿತಿ ಮತ್ತು ವಿವರ ಪಡೆಯಲು ಮತ್ತು ಗ್ರಾಮ ಪಂಚಾಯಿತಿಗಳ ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಲವಾರು ವೆಬ್‌ಸೈಟ್ ಮತ್ತು ಪೋರ್ಟಲ್‌ಗಳನ್ನು ತಡಕಾಡಬೇಕಾಗಿತ್ತು. ಅನೇಕರಿಗೆ ಯಾವ ವೆಬ್‌ಸೈಟ್/ಪೋರ್ಟಲ್‌ನಲ್ಲಿ ಯಾವ ಮಾಹಿತಿ ಸಿಗುತ್ತದೆ ಎಂಬ ಗೊಂದಲ ಉಂಟಾಗಿತ್ತು. ಇದನ್ನು ನಿವಾರಿಸಲು ಸರ್ಕಾರ ಪಂಚಮಿತ್ರ ವಾಟ್ಸ್ಆ್ಯಪ್ ಚಾಟ್ ಆರಂಭಿಸಿದೆ. ಈ ಪೋರ್ಟಲ್‌ನಲ್ಲಿ ಬಳಕೆದಾರರು 2,650ಕ್ಕೂ ಹೆಚ್ಚು ಕುಂದು-ಕೊರತೆ ದಾಖಲು ಮಾಡಿದ್ದಾರೆ. ಅನೇಕ ಸವಲತ್ತು, ಸೇವೆಗಳನ್ನು ಪಡೆದುಕೊಂಡಿದ್ದಾರೆ.

ಈಗಾಗಲೇ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ‘ಪಂಚಮಿತ್ರ’ ವಾಟ್ಸ್ಆ್ಯಪ್ ಚಾಟ್‌ಗೆ ಚಾಲನೆ ನೀಡಿದ್ದು, ರಾಜ್ಯದಲ್ಲಿ ಇದರ ಬಗ್ಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ. ಸೇವೆ ಆರಂಭಿಸಿ 70 ದಿನದಲ್ಲಿ 88,000ಕ್ಕೂ ಹೆಚ್ಚು ಜನ ಬಳಕೆದಾರರಾಗಿದ್ದಾರೆ. ಈಗಾಗಲೇ ವಾಟ್ಸಾಪ್ ಮುಖಾಂತರ ಜನರ ಮನೆ ಬಾಗಿಲಿಗೆ ಸರ್ಕಾರವು ಬರಲು ಸಿದ್ಧವಾಗಿದೆ. ಜನರ ತೊಂದರೆಗಳನ್ನು ಮನೇಲ್ಲಿ ಕುಳಿತು ನಿಮ್ಮ ಊರಿನ ತೊಂದರೆಗಳನ್ನು ಹಂಚಿಕೊಳ್ಳುವ ಹಾಗೂ ಪರಿಹಾರ ಕಂಡುಕೊಳ್ಳುವ ಯೋಜನೆ ಇದಾಗಿದೆ.

ಗ್ರಾಮೀಣ ಜನತೆಗೆ ಗ್ರಾಮ ಪಂಚಾಯ್ತಿಯ ಸೇವೆಗಳನ್ನು ಸುಗಮವಾಗಿ ಒದಗಿಸುವ ಸಲುವಾಗಿ ರೂಪಿಸಿದ ವಿನೂತನವಾದ ಪಂಚಮಿತ್ರ ವಾಟ್ಸಾಪ್ ಚಾಟ್ ಯೋಜನೆಗೆ ಅಭೂತಪೂರ್ವ ಸ್ಪಂದನೆ ದೊರಕಿದೆ.
• 70 ದಿನಗಳಲ್ಲಿ
• 88,000 ಬಳಕೆದಾರರಿಂದ
• 2,650ಕ್ಕೂ ಹೆಚ್ಚು ದೂರು ದಾಖಲು ಜನರ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಆಡಳಿತವನ್ನು ಜನತೆಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಸಚಿವ @PriyankKharge ಅವರ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾರ್ವಜನಿಕರು ಪಂಚಮಿತ್ರ ವಾಟ್ಸಾಪ್ ಚಾಟ್ ಬಳಸಿ ತಮ್ಮ ಕುಂದು ಕೊರತೆಗಳನ್ನು ದಾಖಲಿಸಿ ತಾವಿದ್ದ ಜಾಗದಿಂದಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪಂಚಮಿತ್ರ ವಾಟ್ಸಾಪ್ ಚಾಟ್ ಸಂಖ್ಯೆ- 8277506000

ಈ ಯೋಜನೆಯ ಸೇವೆಗಳು ಏನು? ಯಾವ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ?
ಮುಖ್ಯವಾಗಿ ಸ್ಥಳೀಯ ಮಟ್ಟದಲ್ಲಿ ಎದುರಿಸುತ್ತಿರುವ ಸವಾಲು ಎಂದರೆ ಕಟ್ಟಡ ನಿರ್ಮಾಣ ಲೈಸನ್ಸ್, ಹೊಸ ನೀರು ಸರಬರಾಜು ಸಂಪರ್ಕ, ನೀರು ಸರಬರಾಜಿನ ಸಂಪರ್ಕ ಕಡಿತ, ಕುಡಿಯುವ ನೀರು, ಬೀದಿ ದೀಪದ ನಿರ್ವಹಣೆ, ಗ್ರಾಮ ನೈರ್ಮಲ್ಯ, ವ್ಯಾಪಾರ ಪರವಾನಗಿ, ಸ್ವಾಧೀನ ಪ್ರಮಾಣಪತ್ರ, ರಸ್ತೆ ಅಗೆಯಲು ಅನುಮತಿ, ಕೈಗಾರಿಕೆ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ಹೊಸ/ಅಸ್ಥಿತ್ವದಲ್ಲಿರುವ ದೂರ ಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ, ಕೇಬಲ್/ಭೂಗತ ಸಮಸ್ಯೆಗಳಿಗೆ ಪರಿಹಾರ ಕೇವಲ ನಿಮ್ಮ ವಾಟ್ಸ್ಆ್ಯಪ್ ಮೂಲಕ ಪರಿಹಾರ ಕಂಡುಕೊಳ್ಳಬಹುದು.

Spread positive news

Leave a Reply

Your email address will not be published. Required fields are marked *