ಪ್ರೀಯ ರೈತರೇ ಈಗಾಗಲೇ ರಾಜ್ಯದಲ್ಲಿ ಬರ ಪರಿಹಾರ ಹಣ ಸರ್ಕಾರವು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ಕಡೆಯಿಂದ 2000 ಸಾವಿರ ಬರ ಪರಿಹಾರ ಹಣ ಬಿಡುಗಡೆ ಆಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಗರಿಷ್ಠ ಎರಡು ಹೆಕ್ಟರ್ ಪ್ರದೇಶದ ಮಿತಿಗೊಳಪಟ್ಟು ಬೆಳೆ ನಷ್ಟ ಪರಿಹಾರ ನಿಗದಿಪಡಿಸಲಾಗಿದೆ. ಮಳೆಯಾಶ್ರಿತ (rainfed)ಬೆಳೆಗೆ 8,500 ರೂ., ನೀರಾವರಿ (irrigation)ಪ್ರದೇಶದ ಬೆಳೆಗೆ 17,000 ರೂ., ತೋಟಗಾರಿಕೆ (Horticulture)ಬೆಳೆಗೆ 22,500 ರೂ. ಪರಿಹಾರ ನಿಗದಿಪಡಿಸಲಾಗಿದೆ. ಅದಕ್ಕಾಗಿ ಇನ್ನೂ ಕೆಲವು ರೈತರಿಗೆ ಹಣ ವರ್ಗಾವಣೆ ಸಮಸ್ಯೆ ಇದೆ. ಹಾಗೂ ಸರ್ಕಾರವು ಸಹ ಹಣ ವರ್ಗಾವಣೆ ಆಗದೆ ಇರುವ ರೈತರಿಗೆ ಸಹಾಯವಾಣಿ ಆರಂಭಿಸಿದೆ.
ರಾಜ್ಯಾದ್ಯಂತ ಬೆಳೆ ಹಾನಿ ಪರಿಹಾರದ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಲು ಜಿಲ್ಲಾಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗಿದೆ. ಈ ಮೂಲಕ ಸರಿಯಾದ ಮಾಹಿತಿಯನ್ನು ರೈತರಿಗೆ ತಲುಪಿಸಲು ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಈ ಮೂಲಕ ರೈತರಿಗೆ ನೆರವಾಗಲು ಜಿಲ್ಲಾಡಳಿತ ಮುಂದಾಗಿದೆ.
2023 ನೇ ಸಾಲಿನ ಮುಂಗಾರಿನ ಹಂಗಾಮಿನ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ರೈತರಿಗೆ ಬೆಳೆ ಪರಿಹಾರದ ಮೊದಲನೇ ಕಂತಾಗಿ 2000ರೂ. ಪಾವತಿಸಲಾಗಿದೆ. ಇದೀಗ ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧಾರದಲ್ಲಿ ಫ್ರೂಟ್ಸ್ ಐಡಿ ಹೊಂದಿರುವ. ಪಹಣಿ ಜೋಡಣೆಯಾಗಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಪರಿಹಾರ ಪಾವತಿಸಲಾಗುತ್ತಿದೆ. ಈಗಾಗಲೇ ಬೆಂಗಳೂರು ಜಿಲ್ಲಾವಾರು ಸಹಾಯವಾಣಿ ಪ್ರಾರಂಭವಾಗಿದ್ದು, ಬರುವ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ರೀತಿಯ ಸಹಾಯವಾಣಿ ಪ್ರಾರಂಭವಾಗುವ ಸಾದ್ಯತೆ ಇದೆ.
ಸಹಾಯವಾಣಿವಿವರ
ಕಚೇರಿಯ ಹೆಸರು ಸಹಾಯವಾಣಿ ನಂಬರ್
ಜಿಲ್ಲಾಧಿಕಾರಿ ಕಾರ್ಯಾಲಯ 080- 26676143
ದೇವನಹಳ್ಳಿ ತಹಸೀಲ್ದಾರ್ ಕಚೇರಿ 9916975739
ದೇವನಹಳ್ಳಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 080- 27682383
ದೊಡ್ಡಬಳ್ಳಾಪುರ ತಹಸೀಲ್ದಾರ್ ಕಾರ್ಯಾಲಯ 8867586873
ದೊಡ್ಡಬಳ್ಳಾಪುರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 82779299761
ಹೊಸಕೋಟೆ ತಹಸೀಲ್ದಾರ್ ಕಾರ್ಯಾಲಯ 8861869657
ಹೊಸಕೋಟೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 080- 27931235
ನೆಲಮಂಗಲ ತಹಸೀಲ್ದಾರ್ ಕಾರ್ಯಾಲಯ 973135873
ನೆಲಮಂಗಲ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 8277934015
ಸಹಾಯವಾಣಿಗೆ ಸಂಪರ್ಕಿಸುವ ರೈತರ ವೈಯಕ್ತಿಕ ಮಾಹಿತಿ ಪಡೆದು ವೆಬ್‌ಸೈಟ್‌ನಲ್ಲಿ ಬರ ಪರಿಹಾರ ನೀಡಿರುವ ಕುರಿತು ಕಾರ್ಯಾಲಯದ ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ರವರೆಗೆ ಮಾಹಿತಿ ನೀಡುವುದು. ಸರಕಾರ ಬೆಳೆ ಹಾನಿ ಪರಿಹಾರವನ್ನು ಹಂತ ಹಂತವಾಗಿ ನೀಡುತ್ತಿರುವುದರಿಂದ ಬೆಂಗಳೂರು ಭೂಮಿ ಉಸ್ತುವಾರಿ ಕೋಶದ ಎಕ್ಸೆಲ್ ಶೀಟ್‌ನಲ್ಲಿ ರೈತರಿಗೆ ಹಂತವಾಗಿ ಸಲ್ಲಿಸಿರುವ ಮಾಹಿತಿಯಲ್ಲಿನ ಎಫ್‌ಐಡಿ ನಂಬರ್ ಮೂಲಕ ಬೆಳೆ ಪರಿಹಾರ ಪಾವತಿಯಾಗಿರುವ ಅಥವಾ ಪಾವತಿಯಾಗದಿರುವ ಬಗ್ಗೆ ಮಾಹಿತಿ ನೀಡಬೇಕು.
ಬೆಳೆ ಪರಿಹಾರ ನೀಡಿರುವ ಕುರಿತು ನಾಡ ಕಚೇರಿ, ಗ್ರಾಮ ಪಂಚಾಯಿತಿ ರೈತ ಸಂಪರ್ಕ ಕೇಂದ್ರದ ಸೂಚನಾ ಫಲಕದಲ್ಲಿ ಅಥವಾ ತಹಸೀಲ್ದಾರ್ ಕಾರ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಬೇಕು. ರೈತರು ಬೆಳೆ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆಗೂ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳದ ರೈತರು ನಿಗದಿತ ಅವಧಿಯಲ್ಲಿ ತಮ್ಮ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳುವಂತೆ ಸಲಹೆ ನೀಡುವುದು. ಮತ್ತು ಪ್ರಸ್ತುತ ಅಂತಹ ರೈತರು ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ ಎನ್ನುವುದನ್ನು ತಿಳಿಸುವುದು ಅವರ ಜವಾಬ್ದಾರಿಗಳಾಗಿರುತ್ತದೆ.
ಮೊದಲ ಹಂತದ ಬೆಳೆ ಹಾನಿ ಪರಿಹಾರ ನೀಡಿ ಇನ್ನುಳಿದ ಬಾಕಿ ಮೊತ್ತಕ್ಕೆ SDRF ಮಾರ್ಗಸೂಚಿಗಳ ಪ್ರಕಾರ ಅರ್ಹತೆ ಅನುಸಾರ ಎಲ್ಲ ಅರ್ಹ ರೈತರಿಗೆ ಪಾವತಿ ಮಾಡಲು ಆಯುಕ್ತರು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇವರಿಗೆ ರೂ. 3,454.22 ಕೋಟಿಗಳನ್ನು ಬಿಡುಗಡೆಗೊಳಿಸಲು ಮೇ 2 ರಂದು ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದ್ದಾರೆ.ಮೇ 6 ರಂತೆ ಒಟ್ಟು 27,38,911 ರೈತರಿಗೆ ಅರ್ಹತೆಯನುಸಾರ ಒಟ್ಟು ರೂ.2,425.13 ಕೋಟಿಗಳನ್ನು ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗಳಿಗೆ DBT ಮುಖಾಂತರ ನೇರ ವರ್ಗಾವಣೆ ಮಾಡಲು ಕಳೆದ ವಾರಂತ್ಯವೇ ಕ್ರಮ ವಹಿಸಲಾಗಿದೆ. ರಾಜ್ಯ ಸರ್ಕಾರದ ಕ್ರಮದ ನಂತರ ಆರ್.ಬಿ.ಐ ನಿಂದ ರೈತರ ಖಾತೆಗೆ ಹಣ ವರ್ಗಾಯಿಸಲು 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಇದೇ ಸೋಮವಾರದಿಂದ ಅನ್ವಯವಾಗುವಂತೆ ರೈತರ ಖಾತೆಗೆ ನೇರವಾಗಿ ಜಮಾವಾಗಲಿದೆ. ಎಲ್ಲ ರೈತರ ಖಾತೆಗಳಿಗೆ ಮುಂದಿನ 2-3 ದಿನಗಳೊಳಗಾಗಿ ಬರಪರಿಹಾರ ಮೊತ್ತವು ಜಮೆಯಾಗಲಿದೆ ಎಂದಿದ್ದಾರೆ.