ರೈತರಿಗೆ ಒಂದು ಸಂತಸದ ಸುದ್ದಿ ಹೊರಡಿಸಿದ ರಾಜ್ಯ ಸರ್ಕಾರ. ಕೇಂದ್ರ ಸರ್ಕಾರ ಆರ್ಥಿಕ ನೆರವನ್ನು ರೈತರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. (NDRF)ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಅದೇ ರೀತಿ ರೈತರು ಸಹ ಈ ಹಣ ಪಡೆಯಬೇಕಾದರೆ ಕೆಲವು ಮಾಹಿತಿ ಪಡೆಯುವ ಅವಶ್ಯಕತೆ ಇದೆ. ರೈತರು ಬರ ಪರಿಹಾರ ಹಣ ಬರದೇ ಇದ್ದರೆ ಏನು ಮಾಡಬೇಕು? ಎಲ್ಲಿ ಸಂಪರ್ಕಿಸಬೇಕು? ಹಾಗೂ ಕೆವೈಸಿ ಎಲ್ಲಿ ಮಾಡಿಸಬೇಕು ಎಂದು ಕೂಡಲೇ ನೋಡಿ.
ರಾಜ್ಯದಲ್ಲಿ ಈಗಾಗಲೇ ಸರ್ಕಾರವು ಮುಂದಿನ ಎರಡು ದಿನಗಳಲ್ಲಿ 27.38 ಲಕ್ಷ ರೈತರ ಖಾತೆಗೆ ಪರಿಹಾರ ಮೊತ್ತ ಪಾವತಿಯಾಗಲಿದೆ. ಕಂದಾಯ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ, 27,38,911 ರೈತರಿಗೆ ಅರ್ಹತೆಯನುಸಾರ ಒಟ್ಟು 2,425.13 ಕೋಟಿ ರೂ.ವನ್ನು ಡಿಬಿಟಿ ಮುಖಾಂತರ ನೇರ ವರ್ಗಾವಣೆ ಮಾಡಲು ಕಳೆದ ವಾರಾಂತ್ಯವೇ ಕ್ರಮವಹಿಸಲಾಗಿದೆ. ರಾಜ್ಯ ಸರ್ಕಾರದ ಕ್ರಮದ ನಂತರ ಆರ್‌ಬಿಐ(RBI)ನಿಂದ ರೈತರ ಖಾತೆಗೆ ಹಣ ವರ್ಗಾಯಿಸಲು 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ.
ಬರ ಪರಿಹಾರ ಹಣ ಬರದೇ ಇರುವುದಕ್ಕೆ ಕಾರಣ ಏನು?
• ಆಧಾರ್ ಕಾರ್ಡ್ ಲಿಂಕ್ ಕೆವೈಸಿ ಆಗಿದೆ ಇರುವುದು.
• ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಕೆವೈಸಿ ಮಾಡದೇ ಇರುವುದಕ್ಕೆ.
• ಮುಖ್ಯವಾಗಿ ಹೇಳಬೇಕೆಂದರೆ ರೈತರು ಪೂರ್ವಜರ ಆಸ್ತಿ ತಮ್ಮ ಹೆಸರು ನೊಂದಾಯಿಸದೆ ಇರುವುದು.
• ಹಲವಾರು ರೈತರ ಆಸ್ತಿ ದಾಖಲೆ ಸಮಸ್ಯೆ ಇದೆ. ರಾಜ್ಯದಲ್ಲಿ ಭಾರಿ ಮಳೆ ಕೊರತೆ ಉಂಟಾಗಿದೆ.
• ಎರಡು ಮೂರು ಹೊಲದ ಸರ್ವೇ ನಂಬರ್ ಬೇರೆ ಆಗಿದ್ದು ಉತಾರ್ ಲಿಂಕ್ ಸಮಸ್ಯೆ ಸಹ ಆಗಿದೆ.
* ಬಹುತೇಕ ಕುಟುಂಬಗಳ ಆಸ್ತಿಯ ಮಾಲೀಕರು ಎಂದೋ ಮೃತರಾಗಿದ್ದಾರೆ.
* ಮುಂದಿನ ವಾರಸುದಾರರಿಗೆ ಆಸ್ತಿ ಹಂಚಿಕೆಯಲ್ಲಿ ಎಫ್ ಐಡಿ ಮಾಡಿಸದೇ ಇರುವುದು.
* ಪಹಣಿ (ಉತಾರ್) ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇರುವುದು.
ಬರ ಪರಿಹಾರ ಸ್ಟೇಟಸ್ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ.
http://www.samrakshane.karnataka. gov ಇಲ್ಲಿ ಕ್ಲಿಕ್ ಮಾಡಿ.
• ನಂತರ ಅಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಿ.
• ನಂತರ ಅಲ್ಲಿ ಹಣ ಬರುವ ವಿವಿಧ ಯೋಜನೆಗಳ ಮಾಹಿತಿ ಇರುತ್ತದೆ.
• ನೀವು ಅಲ್ಲಿ ಬರ ಪರಿಹಾರ 2024 ಎಂಬುದರ ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ಕೇಳಲಾದ ಕ್ಯಾಪ್ಚ್ಯಾ ಹಾಕಬೇಕು.
• ನಂತರ ಅಲ್ಲಿ ನಿಮ್ಮ ಸಂಪೂರ್ಣ ಬರ ಪರಿಹಾರ ಯಾವ ವರ್ಷದ ಬೇಕಾಗಿದೆ ಅದರ ಮಾಹಿತಿ ದೊರೆಯುತ್ತದೆ.
ಬರ ಪರಿಹಾರ ಹಣ ಪಡೆಯಬೇಕಾದರೆ ಎಲ್ಲಿ ಸಂಪರ್ಕಿಸಬೇಕು?
ರೈತರೇ ಮೊದಲು ನೀವು ನಿಮ್ಮ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಲಿಂಕ್ ಕೆವೈಸಿ ಆಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಿ. ನಂತರ ಬರ ಪರಿಹಾರ ಹಣ ಬರದೇ ಇದ್ದರೆ ನಿಮ್ಮ ಊರಿನ ತಲಾಟಿ ಅಥವಾ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ನಿಮ್ಮ ಜಮೀನಿನ ಬರ ಪರಿಹಾರ ಬರೆದೇ ಇರುವುದಕ್ಕೆ ಕಾರಣ ಏನು ಎಂದು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ಮಳೆಯಾಶ್ರಿತ (rainfed)ಬೆಳೆಗೆ 8,500 ರೂ., ನೀರಾವರಿ (irrigation)ಪ್ರದೇಶದ ಬೆಳೆಗೆ 17,000 ರೂ., ತೋಟಗಾರಿಕೆ (Horticulture)ಬೆಳೆಗೆ 22,500 ರೂ. ಪರಿಹಾರ ನಿಗದಿಪಡಿಸಲಾಗಿದೆ.
ರೈತರ ಖಾತೆಗೆ ಮೊದಲ ಕಂತಿನ ಪರಿಹಾರ ಹಣ ಬಿಡುಗಡೆ ಆಗಿದೆಯೇ?
ಹೌದು ಅರ್ಹ ರೈತರಿಗೆ 5/1/2024 ರಂದು ಸರ್ಕಾರ ಎರಡು ಸಾವಿರ ರು.ವರೆಗೆ ಪರಿಹಾರ ನೀಡಲು ರಾಜ್ಯ ಸರಕಾರ ನಿರ್ಧಾರ ಮಾಡಿದೆ. ಮುಂದಿನ ವಾರ ಅಂದರೆ 15 ಡಿಸೆಂಬರ್ ಒಳಗಡೆ ಪ್ರತಿಯೊಬ್ಬ ರೈತರಿಗೆ ಒಂದು ಹೆಕ್ಟೇರಿಗೆ 2000 ರೂಪಾಯಿ ಹಣ ಡಿಬಿಟಿ ಮೂಲಕ ರೈತರ ಅಕೌಂಟಿಗೆ ಜಮೆ ಮಾಡಲು ಸರ್ಕಾರವು ಒಪ್ಪಿಗೆ ನೀಡಿದೆ. ಅದೇ ರೀತಿ ರೈತರು ಯಾರು ಎಫ್ ಐಡಿ ಮಾಡಿಸಿದವರಿಗೆ ಈ ಹಣ ದೊರೆಯಲಿದೆ.
ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರದ ನೆರವಿಗಾಗಿ ಕಾಯುತ್ತಿದ್ದ ರಾಜ್ಯ ಸರಕಾರ, ಈವರೆಗೆ ನೆರವು ಬಾರದೇ ಇರುವುದರಿಂದ ರಾಜ್ಯದ ವತಿಯಿಂದಲೇ 2,000 ರು. ವರೆಗೆ ಬೆಳೆ ಪರಿಹಾರ ವಿತರಿಸಲು ಮುಂದಾಗಿದೆ.