ಈ ಕಾರ್ಡ್ ಪಡೆಯುವುದರಿಂದ ಮಾಸಿಕ 3 ಸಾವಿರ ಹಣ ಸಿಗುತ್ತದೆ ಕೂಡಲೇ ಅರ್ಜಿ ಸಲ್ಲಿಸಿ

ಕೇಂದ್ರ ಸರಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶವನ್ನು ಸಂಗ್ರಹಿಸಲುವ ಉದ್ದೇಶದಿಂದ 379 ವರ್ಗಗಳ ಎಲ್ಲ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್ ಮೂಲಕ ನೋಂದಣಿಯಾಗಿ ಸದರಿ ಅವಧಿಯಲ್ಲಿ ಅಪಘಾತಗೊಂಡ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಸುರಕ್ಷಾ ಭೀಮಾಯೋಜನೆಯಡಿ 2 ಲಕ್ಷ ರೂ.ಗಳ ಅಪಘಾತ ಪರಿಹಾರಕ್ಕಾಗಿ ಏಪ್ರಿಲ್ ರೊಳಗಾಗಿ ಜಿಲ್ಲೆಯ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟೆ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಈ ಶ್ರಮ್(E-Shram) ಕಾರ್ಡ್ ಡೌನ್ಲೋಡ್(Download )ಮಾಡುವುದು ಹೇಗೆ?
* ಮೊದಲಿಗೆ ನೀವು https://eshram.gov.in/ ಈ ವೆಬ್ಸೈಟ್ ಭೇಟಿ ನೀಡಿ.
* ನಂತರ ರೇಪಿಸ್ಟ್ ರೇಷನ್ ಮಾಡಿ.

* ಹುಟ್ಟಿದ ದಿನಾಂಕ, UAN ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಒದಗಿಸಿ ಮತ್ತು ‘OTP ರಚಿಸಿ’ ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್‌ನಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು ‘ಮೌಲ್ಯೀಕರಿಸು’ ಕ್ಲಿಕ್ ಮಾಡಿ.

* ಪ್ರದರ್ಶಿಸಲಾದ ವೈಯಕ್ತಿಕ ವಿವರಗಳನ್ನು ದೃಢೀಕರಿಸಿ.
ನಮೂದಿಸಿದ ವಿವರಗಳನ್ನು ಪರಿಶೀಲಿಸಲು *’ಪೂರ್ವವೀಕ್ಷಣೆ’ ಮೇಲೆ ಕ್ಲಿಕ್ ಮಾಡಿ, ತದನಂತರ ‘ಸಲ್ಲಿಸು’ ಕ್ಲಿಕ್ ಮಾಡಿ.
* ಮತ್ತೊಂದು OTP ಸ್ವೀಕರಿಸಿ, ಅದನ್ನು ನಮೂದಿಸಿ ಮತ್ತು ‘ಪರಿಶೀಲಿಸು’ ಕ್ಲಿಕ್ ಮಾಡಿ.
* ಇ-ಶ್ರಮ್ ಕಾರ್ಡ್ ಅನ್ನು ರಚಿಸಲಾಗಿದೆ ಮತ್ತು ಪರದೆಯ ಮೇಲೆ ತೋರಿಸಲಾಗುತ್ತದೆ.
* ಈ ಸಮಯದಲ್ಲಿ, ನೀವು ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಇ-ಶ್ರಮ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
* ಬ್ಯಾಂಕ್ ವಿವರಗಳನ್ನು ನಮೂದಿಸಿ ಮತ್ತು ಸ್ವಯಂ ಘೋಷಣೆ ಆಯ್ಕೆಮಾಡಿ.
* ನಮೂದಿಸಿದ ವಿವರಗಳನ್ನು ಪರಿಶೀಲಿಸಲು ‘ಪೂರ್ವವೀಕ್ಷಣೆ’ ಕ್ಲಿಕ್ ಮಾಡಿ, ನಂತರ ‘ಸಲ್ಲಿಸು’ ಕ್ಲಿಕ್ ಮಾಡಿ.
* ಮತ್ತೊಂದು OTP ಸ್ವೀಕರಿಸಿ, ಅದನ್ನು ನಮೂದಿಸಿ ಮತ್ತು ‘ಪರಿಶೀಲಿಸು’ ಕ್ಲಿಕ್ ಮಾಡಿ.
* ಇ-ಶ್ರಮ್ ಕಾರ್ಡ್ ಅನ್ನು ರಚಿಸಲಾಗಿದೆ ಮತ್ತು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಐಚ್ಛಿಕವಾಗಿ, ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಇ-ಶ್ರಮ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ.

ಇ-ಶ್ರಮ್ (E-Shram) ಕಾರ್ಡ್‌ಗೆ ಅಗತ್ಯವಿರುವ ದಾಖಲೆಗಳು ಯಾವುವು?
* ಆಧಾರ್ ಕಾರ್ಡ್
* ಬ್ಯಾಂಕ್ ಖಾತೆ
* ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆ

ಈ ಕಾರ್ಡ್ ಪಡೆಯುವುದರಿಂದ ಆಗುವ ಲಾಭವೇನು?
* ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ): ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ರೂ.3೦೦/- ರಿಂದ ರೂ.1೦,೦೦೦/-ವರೆಗೆ

* ಅಪಘಾತ ಪರಿಹಾರ: ಮರಣ ಹೊಂದಿದ್ದಲ್ಲಿ ರೂ.5,೦೦,೦೦೦/-, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ರೂ.2,೦೦,೦೦೦/- ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ರೂ.1,೦೦,೦೦೦/-

ಪಿಂಚಣಿ ಸೌಲಭ್ಯ:
ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ.3,೦೦೦/- ಒಂದು ವೇಳೆ ಇವರು ಮರಣ ಹೊಂದಿದರೆ ಹಣ ಅವರ ಪತಿ ಅಥವಾ ಪತ್ನಿ ಅಕೌಂಟಿಗೆ ಜಮೆ ಆಗುತ್ತದೆ.

ಪ್ರತಿಭಾವಂತ ಮಕ್ಕಳಿಗಾಗಿ:
* ಎಸ್.ಎಸ್‌ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5,೦೦೦
* ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ. 75 ಅಂಕ ಪಡೆದವರಿಗೆ ರೂ.7,೦೦೦/-
* ಪದವಿ ಅಥವಾ ತತ್ಸಮಾನ ಕೋರ್ಸ್ನಲ್ಲಿ ಶೇ. 75 ಅಂಕ ಪಡೆದವರಿಗೆ ರೂ.1೦,೦೦೦/-
* ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ ನಲ್ಲಿ ಶೇ. 75 ಅಂಕ ಪಡೆದವರಿಗೆ ರೂ.15,೦೦೦/-

Spread positive news

Leave a Reply

Your email address will not be published. Required fields are marked *