ನಿನ್ನೆ ಗೃಹ ಲಕ್ಷ್ಮಿ ಹಣ ಜಮೆ. ಇನ್ನೂ ಯಾರಿಗೆ ಬಂದಿಲ್ಲ ಹೀಗೆ ಮಾಡಿ.

ಆತ್ಮೀಯ ಗ್ರಾಹಕರೇ ಕರ್ನಾಟಕದ ಕಾಂಗ್ರೆಸ್ನ ಗ್ಯಾರಂಟಿ ಆಗಿರುವಂತಹ ಗೃಹಲಕ್ಷ್ಮಿ ಹಣ ಪತಿ ತಿಂಗಳು ಹೆಣ್ಣು ಮಕ್ಕಳ ಖಾತೆಗೆ ಜಮಾ ಆಗುತ್ತದೆ. ಯಾರ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆಯೋ ಅವರು ಅರ್ಜಿ ಸಲ್ಲಿಸಿ ನಂತರ ಅವರ ಖಾತೆಗೆ ಪ್ರತಿ ತಿಂಗಳು 2000 ಜಮಾ ಮಾಡುತ್ತಾ ಬಂದಿದ್ದಾರೆ ಈಗಾಗಲೇ 7 ಕಂತುಗಳು ಜಮೆ ಆಗಿದೆ. ನಿನ್ನೆ 24 ತಾರಿಕಿನಿಂದ ಸರ್ಕಾರವು ಬಿಡುಗಡೆ ಮಾಡಿದ್ದು ಎಲ್ಲಾ ಜನರಿಗೆ ತಲುಪಿವೆ ಕೆಲವೊಬ್ಬರಿಗೆ ಕೆಲವೊಂದು ಕಾರಣಾಂತರಗಳಿಂದ ಹಣ ಜಮೆ ಆಗಿರುವುದಲ್ಲ. ಅದೇ ರೀತಿ ಅದರಲ್ಲಿ ಪ್ರಮುಖ ಕಾರಣವಾಗಿರುವಂಥದ್ದು ಎನ್‌ ಪಿಸಿಐ ಸೀಡಿಂಗ್ ಸ್ಟೇಟಸ್, ಇದಲ್ಲದೆ ಇನ್ನೊಂದು ಪ್ರಮುಖ ಕಾರಣ ಏನೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಇಲ್ಲದೆ ಇರುವುದು ಈ ಎರಡು ಕಾರಣಗಳಿಂದಾಗಿ ಮಾತ್ರ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ ಉಳಿದ ಯಾವುದೇ ತೊಂದರೆಗಳು ಇಲ್ಲದವರಿಗೆ ಎಲ್ಲಾ ಹೆಣ್ಣುಮಕ್ಕಳ ಖಾತೆಗೆ ಅಂದರೆ ಅರ್ಜಿ ಸಲ್ಲಿಸಿದವರ ಖಾತೆಗೆ ಹಣ ಜಮೆಯಾಗಿದೆ.

ಗೃಹಲಕ್ಷ್ಮಿ ಯೋಜನೆಯ 7ನೇ ಕಂತು ಕೆಲವು ರೇಷನ್ ಕಾರ್ಡ್ ತಪ್ಪಾಗಿ ಹೊಂದಿರುವಂತಹ ಜನರಿಗೆ ಬರೋದಿಲ್ಲ ಏಕೆಂದರೆ ಅವುಗಳು ಅಧಿಕಾರಿಗಳಿಂದ ವೆರಿಫೈ ಮಾಡಿ ಮತ್ತು ರದ್ದಾಗಿರುತ್ತವೆ. ಆದಕಾರಣ ನಾವು ಕೆಳಗೆ ನೀಡಿರುವ ಎಲ್ಲ ಮಾಹಿತಿಗಳನ್ನು ನೋಡಿಕೊಂಡು ನಿಮಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಈ ತಿಂಗಳಿನ ಹಣ ಬರುತ್ತದೆ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ.

ವಾಟ್ಸ್ಆ್ಯಪ್ನಲ್ಲೂ ‘ಗೃಹಲಕ್ಷ್ಮಿ’ಗೆ ಅರ್ಜಿ ಸಲ್ಲಿಕೆ ಮಾಡುವುದಾದರೂ ಹೇಗೆ?

ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಹೆಚ್ಚಿದ ರಶ್ ಹಾಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಇನ್ನೇನು ಮನೆ ಒಡತಿಯರ ಕೈ ಸೇರುವ ಹಂತದಲ್ಲಿದೆ ಈ ಯೋಜನೆ. ಇದಕ್ಕಾಗಿ ಲಕ್ಷ್ಮಿಯರು ಈಗಾಗಲೇ ನಾ ಮುಂದು ತಾ ಮುಂದು ಅಂತ ಸರತಿ ಸಾಲಿನಲ್ಲಿ, ರಾತ್ರಿ ಹಗಲು ಅನ್ನದೇ ನಿಂತು, ಕೂತು ಅಪ್ಲಿಕೇಶನ್ ಕೂಡ ಹಾಕುತ್ತಿದ್ದಾರೆ. ಆದರೆ ಇನ್ನು ಮುಂದೆ ಇಷ್ಟು ರಿಸ್ಕ್ ಬೇಡ. ಗೃಹಲಕ್ಷ್ಮಿ ಯೋಜನೆಗೆ ವಾಟ್ಸ್ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಬಹುದು.

ಈ ನಡುವೆ ಕೆಲವು ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ಮಾತ್ರ ಗೃಹಲಕ್ಷ್ಮೀ ಯೋಜನೆ 2000 ಹಣ ಜಮಾ ಆಗಿಲ್ಲ. ಅದು ಯಾವಾಗ ಆಗಲಿದೆ ಅನ್ನೋದೇ ಹಲವು ಮಹಿಳೆಯರ ನಿರೀಕ್ಷೆಯಾಗಿದೆ. ಈ ಕುರಿತಂತೆ ಇಂದು ಟ್ವಿಟ್ ಮಾಡಲಾಗಿದ್ದು, ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 86% ಮಹಿಳೆಯರು ಈಗಾಗಲೇ ನೋಂದಣಿ ಮಾಡಿಸಿ ₹2000 ಹಣ ಪಡೆಯುತ್ತಿದ್ದಾರೆ. ಇನ್ನುಳಿದವರ ಬ್ಯಾಂಕ್ ಖಾತೆಗಳ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಅಂತ ತಿಳಿಸಿದೆ. ಈ ಮೂಲಕ ಶೀಘ್ರವೇ ತಾಂತ್ರಿಕ ಸಮಸ್ಯೆ ನಿವಾರಣೆಯಾಗಿ ಗೃಹಲಕ್ಷ್ಮೀ ಹಣ ಜಮಾ ಆಗದೇ ಇರುವಂತ ಯಜಮಾನಿ ಮಹಿಳೆಯರ ಖಾತೆಗೆ 2000 ಹಣ ಜಮಾ ಆಗಲಿದೆ.

ಅದರಂತೆ ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸದಿದ್ದರೆ ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಈಗ ಸರ್ಕಾರವು ಶಾಕಿಂಗ್ ನ್ಯೂಸ್ ಹೊಂದಿರುವವರ ಮಾಹಿತಿ ಬರಲಿದೆ. ಜೊತೆಗೆ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಪಾವತಿ ಮಾಡ್ತಾ ಇರುವವರ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಈ ಮೂಲಕ ಒಂದಷ್ಟು ಬಿಪಿಎಲ್ ಕಾರ್ಡ್ ಗಳಿಗೆ ಕತ್ತರಿ ಬೀಳುವುದಂತೂ ನಿಜ. ಆದ್ದರಿಂದ ಕೂಡಲೇ ಯಾರು ಇನ್ನೂ ಇ ಕೆವೈಸಿ ಮಾಡಿಸಿಲ್ಲ ಕೂಡಲೇ ಕೆವೈಸಿ ಮಾಡಿಸಿ, ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ. ಕೂಡಲೇ ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ನ್ಯಾಯ ಬೆಲೆ ಅಂಗಡಿ ಹೋಗಿ ನಿಮ್ಮ ರೇಷನ್ ಕಾರ್ಡ್ ಕೆವೈಸಿ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://ahara.kar.nic.in/Home/EServices

ಅಲ್ಲಿ ಮೇಲೆ ಕಾಣುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ.

ಮೇಲೆ ತಿಳಿಸಿರುವಂತೆ ನಿಮಗೆ ಡೀಟೇಲ್ಸ್ ಆಪ್ ಗೃಹಲಕ್ಷ್ಮಿ ಸ್ಟೇಟಸ್ ಎಂದು ಹೆಡ್ ಲೈನ್ ಬರೆದಿರುತ್ತದೆ ಅದಾದ ನಂತರ ರೇಷನ್ ಕಾರ್ಡ್ ನಂಬರ್ ಹಾಕಲು ನಿಮಗೆ ಸ್ಥಳವನ್ನು ಬಿಡಲಾಗಿರುತ್ತದೆ ಆ ಸ್ಥಳದಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಫಿಲ್ ಮಾಡಿಕೊಂಡು ಸಬ್ಸಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಕ್ಲಿಕ್ ಮಾಡಿದ ನಂತರ ಮತ್ತೆ ಕೆಳಗಡೆ ವಿವರಗಳು ಕಾಣಿಸುತ್ತವೆ ಅದರಲ್ಲಿ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿ ಅಂದರೆ ಇದು ಬಾಕ್ಸ್ ನಲ್ಲಿ ತೋರಿಸುತ್ತದೆ ಡೀಟೇಲ್ಸ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಯಾವ ಕಂತುಗಳು ಯಾವ ದಿನದಂದು ಯಾವ ತಿಂಗಳ ಕಂತು ಯಾವ ದಿನದಂದು ನಿಮ್ಮ ಖಾತೆಗೆ ಜಮಾ ಆಯಿತು ಜೊತೆಗೆ ಅದರ ನಂಬರ್ ಸಹ ನಿಮಗೆ ಬರುತ್ತದೆ.

ಈ ಲಿಂಕ್ ಹೊಸದಾಗಿದ್ದು ಕರ್ನಾಟಕದ ಜನರು ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬೇಕಾದರೆ ಆಹಾರ ಇಲಾಖೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗಿತ್ತು ಅದು ಸರ್ವರ್ ಡೌನ್ ಆಗಿರುವುದರಿಂದ ಸಾಕಷ್ಟು ಗ್ರಾಹಕರಿಗೆ ತೊಂದರೆಯಾಗುತ್ತಿದ್ದು ಈ ಒಂದು ಲಿಂಕಿನಿಂದ ಸಹ ನೀವು ಗೃಹಲಕ್ಷ್ಮಿ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ಕಣಜದಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದೆ. ಈ ಕೆಲಸವನ್ನು ಕೂಡಲೇ ಮಾಡಿದ್ರೆ ಮುಂದಿನ ಕಂತಿನ ಗೃಹಲಕ್ಷ್ಮೀ ಹಣ ಸುಲಭವಾಗಿ ಪಡೆಯಬಹುದಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ತಲುಪುತ್ತಿಲ್ಲ. ಜೊತೆಗೆ ಅರ್ಜಿ ಸಲ್ಲಿಸಿದ ಸಾವಿರಾರ ಮಹಿಳೆಯರು ಇಂದಿಗೂ ಒಂದೇ ಒಂದು ಕಂತಿನ ಹಣವನ್ನೂ ಪಡೆದುಕೊಂಡಿಲ್ಲ. ಯಾವ ಕಾರಣಕ್ಕೆ ಇಂತಹ ಮಹಿಳೆಯರಿಗೆ ಹಣ ಸಿಗುತ್ತಿಲ್ಲ ಅನ್ನೋದು ಚಿಂತೆಯಾಗಿದೆ.

Spread positive news

Leave a Reply

Your email address will not be published. Required fields are marked *