ಆಧಾರ್ ಅಪ್ಡೇಟ್ ಗೆ ಇಂದೇ ಕೊನೆಯ ದಿನ: ಅಪ್ಡೇಟ್ ಮಾಡಿಕೊಳ್ಳುವ ಲಿಂಕ್ ಇಲ್ಲಿದೆ

ಆಧಾರ್ ಜಗತ್ತಿನಾದ್ಯಂತ ಅತಿ ದೊಡ್ಡ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರತಿಯೊಬ್ಬ ಭಾರತೀಯ ನಿವಾಸಿಗೆ 12-ಅಂಕಿಯ ಸಂಖ್ಯೆಯನ್ನು ನೀಡಿದೆ, ಅದು ಮೂಲತಃ ಅವರ ಬಯೋಮೆಟ್ರಿಕ್‌ಗಳಿಗೆ ಲಿಂಕ್ ಆಗಿರುತ್ತದೆ. ಹಲವಾರು ಯೋಜನೆಗಳು ಮತ್ತು ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಒಂದು ಕಡ್ಡಾಯ ಸಂಖ್ಯೆ. ಅದರೊಂದಿಗೆ, ಇದು ದೇಶಾದ್ಯಂತ ಗುರುತು ಮತ್ತು ವಿಳಾಸ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ನೀವು ಆಧಾರ್ ಕಾರ್ಡ್ ನವೀಕರಿಸಿ ಅಥವಾ ಈಗಲೇ ತಿದ್ದುಪಡಿ ಮಾಡಿಕೊಳ್ಳಿ, ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಮೊದಲಿನ ಹಾಗೆ ನೀವು ಸಾಲಿನಲ್ಲಿ ನಿಂತು ಕಾಯಬೇಕಾಗಿಲ್ಲ ಅಥವಾ ಒಂದು ಕಚೇರಿಯಿಂದ ಇನ್ನೊಂದಕ್ಕೆ ಹೋಗಬೇಕಾಗಿಲ್ಲ. ನೀವು ನಿಮ್ಮ ಮೊಬೈಲ್ ನಲ್ಲಿಯೇ ನಿಮ್ಮ ಎಲ್ಲ ದಾಖಲಾತಿಗಳು ಇದ್ದಾರೆ ನೀವು ಸ್ವತಃ ಅಪ್ಡೇಟ್ ಮಾಡಿಕೊಳ್ಳಬಹುದು. UIDAI ಸಂಸ್ಥೆಯು ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಅಥವಾ ಸರಿಪಡಿಸಲು ಸಾಧ್ಯವಾಗಿಸಿದೆ.

ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾ ರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ. ಒಟ್ಟಾರೆ ಇಂದು ಯಾವುದೇ ಒಂದು ಕೆಲಸಕ್ಕೆ ಹೋದ್ರೂ ಆಧಾರ್ ಕಾರ್ಡ್ ಅಗತ್ಯ.ಇನ್ನು ನೀವು ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ಮಾಡಬಹುದಾ? ಹಾಗಾದ್ರೆ ಒಬ್ಬ ವ್ಯಕ್ತಿ ತನ್ನ ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ಬದಲಾವಣೆ ಮಾಡಬಹುದು? ಈ ಪ್ರಕ್ರಿಯೆ ನಡೆಸೋದು ಹೇಗೆ? ಇಲ್ಲಿದೆ ಮಾಹಿತಿ.

ಆಧಾರ್ಕಾರ್ಡ್ನಲ್ಲಿ ಎಷ್ಟು ಬಾರಿ ವಿಳಾಸ ಬದಲಾಯಿಸಬಹುದು?
ಆಧಾರ್ ಕಾರ್ಡ್ ನಲ್ಲಿ ನೀವು ಎಷ್ಟು ಬಾರಿ ಬೇಕಾದರೂ ವಿಳಾಸ ಬದಲಾಯಿಸಬಹುದು. ಈ ತನಕ ವಿಳಾಸ ಬದಲಾವಣೆಗೆ ಸಂಬಂಧಿಸಿ ಯಾವುದೇ ಮಿತಿ ಹೇರಿಲ್ಲ. ಆದರೆ, ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಸಮರ್ಪಕ ಕಾರಣ ನೀಡುವುದು ಅಗತ್ಯ ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.


ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡುವ ಕ್ರಮಗಳು

ಹಂತ ೧:
ಯುಐಡಿಎಐನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: uidai.gov.in/

ಹಂತ ೨:
ಈ ವೆಬ್ಸೈಟ್ನಿಂದ ಮೈ ಆಧಾರ್ ಪೋರ್ಟಲ್ಗೆ ಹೋಗಿ.
ಇಲ್ಲಿ ಆಧಾರ್ ನಂಬರ್ ಮತ್ತು ಒಟಿಪಿ ಮೂಲಕ ಲಾಗಿನ್ ಆಗಿರಿ.

ಹಂತ ೩:
ಅದರಲ್ಲಿ ನಿಮ್ಮ ಪ್ರೊಫೈಲ್ಗೆ ಹೋಗಿ ಮಾಹಿತಿ ವೀಕ್ಷಿಸಬಹುದು. ಎಲ್ಲವೂ ಸರಿ ಇದ್ದರೆ ಒಪ್ಪಿಗೆ ನೀಡಬಹುದು.

ಹಂತ ೪:
ಒಂದು ವೇಳೆ ವಿಳಾಸ ಮತ್ತಿತರ ಮಾಹಿತಿ ಬದಲಿಸಬೇಕೆಂದಿದ್ದರೆ ಅದನ್ನು ಮಾಡಬಹುದು. ಅದರ ದಾಖಲೆಗಳ ಸ್ಕ್ಯಾನ್ಡ್ ಕಾಪಿ ನಿಮ್ಮ ಬಳಿ ಇರಬೇಕು.

ಹಂತ ೫:
ವಿಳಾಸ ಮಾಹಿತಿ ಬದಲಾಯಿಸಬೇಕಿದ್ದರೆ ಹೊಸ ವಿಳಾಸದ ಸಾಕ್ಷ್ಯ ಇರುವ ದಾಖಲೆ ಇರಬೇಕು.

ಹಂತ ೬:
ಹೆಸರು ಬದಲಾಯಿಸಲಾಗಿದ್ದರೆ, ಅದಕ್ಕೆ ಪೂರಕ ದಾಖಲೆ ಇರಬೇಕು.

ಕೃಷಿ ಯಂತ್ರೋಪಕರಣಗಳ ಖರೀದಿಗೆ ಸರ್ಕಾರದಿಂದ ಸಬ್ಸಿಡಿ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಸಲ್ಲಿಸಿ.

ಆಧಾರ್ ಯಾಕೆ ಅಪ್ಡೇಟ್ ಮಾಡಬೇಕು?
ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್ ಅನ್ನು ಅಪ್ಡೇಟ್ ಮಾಡದೇ ಇದ್ದವರು ಅದನ್ನು ಅಪ್ಡೇಟ್ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಬಹಳಷ್ಟು ಜನರು ಒಮ್ಮೆ ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಅದನ್ನು ಅಪ್ಡೇಟ್ ಮಾಡಿಲ್ಲ. ನಿಮ್ಮ ಪ್ರೊಫೈಲ್ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ ಕೂಡ ಅದನ್ನು ನಮೂದಿಸಿ ಅಪ್ಡೇಟ್ ಮಾಡಬಹುದು.

ಮತ್ತೊಮ್ಮೆ ಬೆಳೆ ವಿಮೆ ಹಣ DBT ಮೂಲಕ ಜಮಾ: ಈಗಲೇ ಚೆಕ್ ಮಾಡಿ

ವಯಸ್ಸಾದಂತೆ ಬೆರಳು ಸವೆದು ಬೆರಳಚ್ಚು ಗುರುತು ಮಾಸಬಹುದು. ಮೊದಲಿನಂತೆ ಬೆರಳಚ್ಚು ಸರಿಯಾಗಿ ಮೂಡದೇ ಇರಬಹುದು. ಹೀಗಾಗಿ, ಆಧಾರ್ನಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್ಡೇಟ್ ಮಾಡುವುದು ಅವಶ್ಯಕ ಎಂದು ಹೇಳಲಾಗುತ್ತದೆ.

ವಂಶಾವಳಿ ಪ್ರಮಾಣ ಪತ್ರ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ರೈತರೇ ಮೋಬೈಲ್ ನಲ್ಲಿಯೇ ಪಂಪ್ ಸೆಟ್ ಗಳಿಗೆ ಅರ್ಜಿ ಹಾಕಬಹುದು. ಹೇಗೆ ಎಂದು ನೋಡಿ.

Spread positive news

Leave a Reply

Your email address will not be published. Required fields are marked *